ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ಪಡೆಯುತ್ತಿರುವವರಿಗೆ ಹೊಸ ಅಪ್ಡೇಟ್

ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ಪಡೆಯುತ್ತಿರುವವರಿಗೆ ಹೊಸ ಅಪ್ಡೇಟ್

ಈ ಯೋಜನೆಗೆ ಅರ್ಜಿ ಸಲ್ಲಿಸಿ ತಮ್ಮ ಮನೆಯ ವಿದ್ಯುತ್ ಬಿಲ್ (Electricity Bill) ಪ್ರತಿ ತಿಂಗಳು 0 ಆಗುವಂತೆ ಮಾಡಿಕೊಳ್ಳಬಹುದು.



ಸರ್ಕಾರ, ಗ್ಯಾರಂಟಿ ಯೋಚನೆಗಳಲ್ಲಿ ಸಾಕಷ್ಟು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಅದರಲ್ಲೂ 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ನೀಡುವ ಗೃಹ ಜ್ಯೋತಿ (Gruha jyothi Yojana) ಯೋಜನೆ ಬಗ್ಗೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಕೇವಲ ಮನೆಯ ಓನರ್ ಗಳು ಮಾತ್ರವಲ್ಲದೆ ಬಾಡಿಗೆದಾರರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ತಮ್ಮ ಮನೆಯ ವಿದ್ಯುತ್ ಬಿಲ್ (Electricity Bill) ಪ್ರತಿ ತಿಂಗಳು 0 ಆಗುವಂತೆ ಮಾಡಿಕೊಳ್ಳಬಹುದು.

200 ಯೂನಿಟ್ ಗಳವರೆಗೆ ವಿದ್ಯುತ್ ಬಳಕೆ (free electricity up to 200 unit usage) ಮಾಡುವವರಿಗೆ ಕಳೆದ ಆರು ತಿಂಗಳುಗಳಿಂದ ಶೂನ್ಯ ವಿದ್ಯುತ್ ಬಿಲ್ ನೀಡಲಾಗುತ್ತಿದೆ. ಒಂದು ಸಾಮಾನ್ಯ ಕುಟುಂಬ ಪ್ರತಿ ತಿಂಗಳು ಸುಮಾರು 1500 ಉಚಿತ ವಿದ್ಯುತ್ ನಿಂದಲೇ ಉಳಿಸಲು ಸಾಧ್ಯವಾಗುತ್ತಿದೆ.

ಇನ್ನು ಇಂತಹ ಪರಿಸ್ಥಿತಿಯಲ್ಲಿ ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿರುವ ಜನರಿಗೆ ಸಂಕಷ್ಟ ಎದುರಾಗಿದೆ, ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, 200 ಯೂನಿಟ್ ಗಿಂತ ಹೆಚ್ಚಿಗೆ ಬಳಕೆ ಮಾಡುವವರ ಮೇಲೆ ಇದು ಹೆಚ್ಚಿನ ಪರಿಣಾಮ ಬೀರಬಹುದು.

ಸರ್ಕಾರವು ಮಾಡಿದೆ ಸಾಲ! (Government Loan)

ಕರ್ನಾಟಕ ವಿದ್ಯುತ್ ನಿಗಮ ನೀಡಿರುವ ಮಾಹಿತಿಯ ಪ್ರಕಾರ ಸರ್ಕಾರ ಈಗಾಗಲೇ ಉಚಿತ ವಿದ್ಯುತ್ ವಿತರಣೆ ಮಾಡಿರುವ ಹಿನ್ನೆಲೆಯಲ್ಲಿ ವಿದ್ಯುತ್ ನಿಗಮ ಬಾರಿ ನಷ್ಟವನ್ನು ಅನುಭವಿಸುತ್ತದೆ, ಸರ್ಕಾರ ಒಪ್ಪಂದ ಮಾಡಿಕೊಂಡಷ್ಟು ಮೊತ್ತವನ್ನು ಪಾವತಿ ಮಾಡುತ್ತಿಲ್ಲ ಇದರಿಂದಾಗಿ ವಿದ್ಯುತ್ ನಿಗಮಕ್ಕೆ ಭಾರಿ ಪ್ರಮಾಣದಲ್ಲಿ ನಷ್ಟ ಆಗಿದೆ ಎಂದು ವರದಿಯಾಗಿದೆ.

ಕರ್ನಾಟಕ ವಿದ್ಯುತ್ ನಿಗಮ (Karnataka power Corporation) ನಷ್ಟದಲ್ಲಿ ಇದೆ ಎನ್ನುವ ಸುದ್ದಿ ವೈರಲ್ ಆಗ್ತಿರುವ ಹಾಗೆ ಮತ್ತೊಂದು ಆಘಾತಕರ ವಿಷಯ ಕೇಳಿ ಬರುತ್ತಿದೆ. ಸರ್ಕಾರ ಯಂತ್ರೋಪಕರಣಗಳನ್ನು ಅಡವಿಟ್ಟು, ಗ್ಯಾರಂಟಿ ಯೋಜನೆಯ ಖರ್ಚು ವೆಚ್ಚ ನಿಭಾಯಿಸುವ ಸಲುವಾಗಿ ಕೋಟಿ ಕೋಟಿ ಹಣವನ್ನು ಸಾಲ ಪಡೆದುಕೊಳ್ಳುತ್ತಿದೆ ಎನ್ನಲಾಗಿದೆ.

ಹೌದು, ಸರ್ಕಾರ ತಮ್ಮ ಖರ್ಚು ವೆಚ್ಚ ನಿರ್ವಹಣೆಗಾಗಿ ಸಾಲ (Loan) ಪಡೆದುಕೊಳ್ಳುವುದು ಇದೇ ಮೊದಲು ಅಲ್ಲ ಆದರೆ ಅಡಮಾನವಿಟ್ಟು ಕೋಟಿ ಗಟ್ಟಲೆ ಸಾಲವನ್ನು ಉಚಿತ ಯೋಜನೆಗಳಿಂದಾಗಿ ಪಡೆದುಕೊಳ್ಳಬೇಕಾಗಿದೆ ಎನ್ನುವ ಪ್ರಶ್ನೆ ಮೂಡುತ್ತದೆ. PFC, RFC ಹಾಗೂ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಸಾಲ (Bank Loan) ಮಾಡಿದ್ದಾರೆ ಎನ್ನಲಾಗಿದೆ.

ಬಾಕಿ ಇರುವ ಸಾಲದ ಮೊತ್ತ ಎಷ್ಟು?

ಕರ್ನಾಟಕ ವಿದ್ಯುತ್ ನಿಗಮ, ಬಾರಿ ನಾಷ್ಟವನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಹಳೆಯ ಸಾಲದ ಮೊತ್ತವನ್ನು ಕೂಡ ಇನ್ನು ಮರುಪಾವತಿ ಮಾಡಿಲ್ಲ.

2018 ರಲ್ಲಿ ಪಡೆದ ಸಾಲ – 21,821 ಕೋಟಿ ರೂಪಾಯಿ

2019- 20 ರಲ್ಲಿ – 26,460 ಕೋಟಿ ರೂಪಾಯಿ

2020-21ರಲ್ಲಿ – 26,090ರೂಪಾಯಿ

ಪ್ರಸ್ತುತ 2023 -24ರಲ್ಲಿ 33,345ಕೋಟಿ ಸಾಲ ಪಡೆದಿದ್ದು ನಿಗಮದ ಬಂಡವಾಳ ಮತ್ತು ವೆಚ್ಚ ನಿರ್ವಹಣೆಗಾಗಿ ಇಷ್ಟು ದೊಡ್ಡ ಮೊತ್ತದ ಸಾಲ ಪಡೆದುಕೊಳ್ಳಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಲೋಡ್ ಶೆಡ್ಡಿಂಗ್ ಭೀತಿ! (Load shedding)

ಕರ್ನಾಟಕ ವಿದ್ಯುತ್ ನಿಗಮ ಕೆಲವು ಕಾರಣಾಂತರಗಳಿಂದ ಜನರ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಜನರಿಗೆ ವಿದ್ಯುತ್ ಸರಬರಾಜು ಮಾಡುವಲ್ಲಿ ಸಮಸ್ಯೆ ಉಂಟಾಗಿದ್ದು ಎಲ್ಲವನ್ನು ಸರಿದೂಗಿಸುವ ಸಲುವಾಗಿ ರಾಜ್ಯ ಸರ್ಕಾರ ಲೋಡ್ ಶೆಡ್ಡಿಂಗ್ ಆರಂಭಿಸುವ ಸಾಧ್ಯತೆ ಇದೆ.

ಈ ರೀತಿ ಮಾಡಿದರೆ ಉಚಿತ ವಿದ್ಯುತ್ ನೀಡಿದರು ಕೂಡ ವಿದ್ಯುತ್ ಜನರ ಬಳಕೆಗೆ ಲಭ್ಯ ಇರುವುದಿಲ್ಲ. ಅದರಲ್ಲೂ ರೈತರು ಕೃಷಿ ಭೂಮಿಗೆ ನೀರಾವರಿ ಒದಗಿಸಲು ಕಷ್ಟವಾಗುತ್ತದೆ

ಹಾಗಾಗಿ ಲೋಡ್ ಶೆಡ್ಡಿಂಗ್ ಅಥವಾ ಪೂರ್ವ ನಿರ್ಧಾರಿತ ಅಲ್ಲದ ವಿದ್ಯುತ್ ಕಡಿತ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಉಂಟುಮಾಡಲಿದೆ. ಇದಕ್ಕೆಲ್ಲ ಸರ್ಕಾರವೇ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಾದ ಅಗತ್ಯ ಇದೆ.

Post a Comment

Previous Post Next Post
CLOSE ADS
CLOSE ADS
×