ಸಾಮಾನ್ಯವಾಗಿ ನಮಗೆ ಹಣದ ಅಗತ್ಯ ಇದ್ದಾಗ ಬ್ಯಾಂಕ್ ನಲ್ಲಿ ಸಾಲ (Loan) ಸೌಲಭ್ಯ ಪಡೆದುಕೊಳ್ಳುತ್ತೇವೆ. ಆದರೆ ವೈಯಕ್ತಿಕ ಸಾಲ (Personal Loan)ವನ್ನು ಬ್ಯಾಂಕ್ ನಲ್ಲಿ ತೆಗೆದುಕೊಳ್ಳುವುದಕ್ಕೆ ಸಿಬಿಲ್ ಸ್ಕೋರ್ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಇದು ಒಬ್ಬ ವ್ಯಕ್ತಿಯ ಸಾಲ ತೀರಿಸಬಹುದಾದ ಸಾಮರ್ಥ್ಯವನ್ನು ನಿರೂಪಿಸುತ್ತದೆ. ಹೀಗಾಗಿ ನಿಮ್ಮ ಸಿಬಿಲ್ ಸ್ಕೋರ್ (CIBIL Score) ಚೆನ್ನಾಗಿದ್ರೆ ಸುಲಭವಾಗಿ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದು.
ಆದರೆ ಇತ್ತೀಚಿನ ಡಿಜಿಟಲ್ ಯುಗದಲ್ಲಿ ಸಿಬಿಲ್ ಸ್ಕೋರ್ (CIBIL Score) ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಸಾಕಷ್ಟು NBFC ಗಳು ಜನರಿಗೆ ವೈಯಕ್ತಿಕ ಸಾಲ (Personal Loan) ವನ್ನು ನೀಡುತ್ತವೆ. ಇದಕ್ಕಾಗಿಯೇ ಸಾಕಷ್ಟು ಬೇರೆ ಬೇರೆ ಸಾಲ ನೀಡುವ ಅಪ್ಲಿಕೇಶನ್ಗಳು ಕೂಡ ಆರಂಭವಾಗಿದೆ. ನೀವು ಸಾಲ ತೆಗೆದುಕೊಳ್ಳುವುದಕ್ಕೆ ಬ್ಯಾಂಕ್ ವರೆಗೆ ಹೋಗುವ ಅಗತ್ಯವೇ ಇಲ್ಲ. ಮನೆಯಲ್ಲಿಯೇ ಕುಳಿತು ಸ್ಮಾರ್ಟ್ ಫೋನ್ ಒಂದು ಇದ್ರೆ ಸಾಕು, ಸುಲಭವಾಗಿ ಸಾಲ ಸೌಲಭ್ಯ ಪಡೆಯಬಹುದು. ಅದರಲ್ಲೂ ವಿಶೇಷ ಅಂದ್ರೆ ನೀವು ಸಾಲಕ್ಕಾಗಿ ಅಪ್ಲೈ ಮಾಡಿದ ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಸಾಲದ ಹಣ ಜಮಾ ಆಗುತ್ತೆ.
ಸುಲಭ ಸಾಲ ನೀಡುವ ಅಪ್ಲಿಕೇಶನ್ಗಳು ಇವು:
RapiPay ಅಪ್ಲಿಕೇಶನ್:
ಅತ್ಯಂತ ತ್ವರಿತವಾಗಿ ಸಾಲ ಸೌಲಭ್ಯ ಒದಗಿಸುವ ಪ್ರಖ್ಯಾತ ಪೇಮೆಂಟ್ ಅಪ್ಲಿಕೇಶನ್ ಗಳಲ್ಲಿ ಈ ಅಪ್ಲಿಕೇಶನ್ ಕೂಡ ಒಂದು. ಯಾವುದೇ ಕ್ರೆಡಿಟ್ ಇತಿಹಾಸ ಹೊಂದಿಲ್ಲದೆ ಇದ್ದರು ಕೇವಲ ನಿಮ್ಮ KYC ದಾಖಲೆ ಆಧಾರದ ಮೇಲೆ 60 ಸಾವಿರ ರೂಪಾಯಿಗಳವರೆಗೆ ಸುಲಭವಾಗಿ ಪಡೆಯಬಹುದು.
Money Tap ಅಪ್ಲಿಕೇಶನ್:
ವಿಶ್ವಾಸಾರ್ಹ ಸಾಲ ನೀಡುವ ಅಪ್ಲಿಕೇಶನ್ಗಳಲ್ಲಿ ಮನಿಟ್ಯಾಪ್ ಅಪ್ಲಿಕೇಶನ್ ಕೂಡ ಒಂದು. 3,000 ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಪಡೆಯಬಹುದು. ಇಲ್ಲಿ ವಾರ್ಷಿಕ ಬಡ್ಡಿ ದರವನ್ನು 12% ನಿಂದ 36% ವರೆಗೆ ವಿಧಿಸಲಾಗುತ್ತದೆ.
PaySense ಅಪ್ಲಿಕೇಶನ್:
ಈ ಅಪ್ಲಿಕೇಶನ್ ಅನ್ನು ಸಾಕಷ್ಟು ಜನ ಬಳಕೆ ಮಾಡುತ್ತಿದ್ದಾರೆ. ಇದರಲ್ಲಿ 16% ನಿಂದ 36% ವರೆಗೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು 5 ಲಕ್ಷಗಳ ವರೆಗೆ ಸಾಲ ಸೌಲಭ್ಯ ಒದಗಿಸುತ್ತದೆ.
Navi Loan ಅಪ್ಲಿಕೇಶನ್:
ಇದರಲ್ಲಿ 20 ಲಕ್ಷ ರೂಪಾಯಿಗಳ ವರೆಗೂ ವೈಯಕ್ತಿಕ ಸಾಲ ಪಡೆದುಕೊಳ್ಳಲು ಅವಕಾಶವಿದೆ. ಬಡ್ಡಿದರ 10% ನಿಂದ 45% ವರೆಗೆ ಇರುತ್ತದೆ. ದೇಶದಲ್ಲಿ ಸಾಕಷ್ಟು ಜನ ಈ ಅಪ್ಲಿಕೇಶನ್ ಮೂಲಕ ವೈಯಕ್ತಿಕ ಸಾಲ ತೆಗೆದುಕೊಂಡಿರುವುದು ದಾಖಲಾಗಿದೆ.
Flexipay ಅಪ್ಲಿಕೇಶನ್:
ಕೇವಲ 500 ರೂಪಾಯಿಗಳಿಂದ 2 ಲಕ್ಷ ರೂಪಾಯಿಗಳವರೆಗೂ ಸಾಲ (Loan) ಪಡೆಯಬಹುದು. ಇದರಲ್ಲಿ ವಾರ್ಷಿಕವಾಗಿ 19% ನಿಂದ 55% ವರೆಗೆ ಬಡ್ಡಿ ವಿಧಿಸಲಾಗುವುದು. ದೊಡ್ಡ ಬಳಕೆದಾರರ ಗುಂಪನ್ನೇ ಹೊಂದಿದ್ದು ಹೆಚ್ಚು ವಿಶ್ವಾಸಾರ್ಹ app ಎನಿಸಿಕೊಂಡಿದೆ.
ಈ ಅಪ್ಲಿಕೇಶನ್ ಗಳನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ನಿಮಗೆ ಬೇಕಾದ ಮೊತ್ತದ ಸಾಲವನ್ನು ಅತಿ ಕಡಿಮೆ ಸಮಯದಲ್ಲಿ ಪಡೆದುಕೊಳ್ಳಬಹುದು ಇವುಗಳಿಗೆ KYC ದೃಢೀಕರಣ ಮಾತ್ರ ಮುಖ್ಯವಾಗಿರುವುದರಿಂದ ನೀವು ಬೇರೆ ಯಾವುದೇ ದಾಖಲೆಯನ್ನು ಕೊಡುವ ಅಗತ್ಯ ಇರುವುದಿಲ್ಲ.