ಅನ್ನಭಾಗ್ಯದ ಅಕ್ಕಿಯ ಹಣ ಒಂದೇ ದಿನ ಈ ಎಲ್ಲ ಜಿಲ್ಲೆಯ ಪಡಿತರ ಖಾತೆಗೆ ಜಮಾ, ಅನ್ನಭಾಗ್ಯ ಹಣ ಬಂದಿದ್ಯಾ..?, ಪರಿಶೀಲಿಸಲು ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್.

ಅನ್ನಭಾಗ್ಯದ ಅಕ್ಕಿಯ ಹಣ ಒಂದೇ ದಿನ ಈ ಎಲ್ಲ ಜಿಲ್ಲೆಯ ಪಡಿತರ ಖಾತೆಗೆ ಜಮಾ, ಅನ್ನಭಾಗ್ಯ ಹಣ ಬಂದಿದ್ಯಾ..?, ಪರಿಶೀಲಿಸಲು ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್.

 ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅಕ್ಕಿಭಾಗ್ಯ ಯೋಜನೆಗೆ ಅಕ್ಕಿ ಸಿಗದ ಕಾರಣ ಐದು ಕೆಜಿ ಅಕ್ಕಿಯ ಹಣವನ್ನು ನೇರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಆದರೆ ನಿಮ್ಮಗಳ ಖಾತೆಗೆ ಹಣ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.




ಬಾಗಲಕೋಟೆ, ಧಾರವಾಡ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಾರ್ಡ್ ಹೊಂದಿರುವವರ ಖಾತೆಗಳಿಗೆ ಸರ್ಕಾರ ಈಗಾಗಲೇ ಹಣವನ್ನು ವರ್ಗಾವಣೆ ಮಾಡಿದೆ. ಮಾಮೂಲಿಯಂತೆ ಐದು ಕೆಜಿ ಅಕ್ಕಿಯನ್ನು ನೀಡಲಿದೆ. ಮುಂದಿನ ದಿನಗಳಲ್ಲಿ ಇನ್ನುಳೊದ ಜಿಲ್ಲೆಯ ಕಾರ್ಡುದಾರರಿಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಅನ್ನಭಾಗ್ಯ ಯೋಜನೆಗೆ ಅಕ್ಕಿ ಒದಗಿಸಲು ಕಷ್ಟವಾದ ಕಾರಣ ಕಾಂಗ್ರೆಸ್ ಸರ್ಕಾರ ಈ ನಿರ್ಧಾರಕ್ಕೆ ಬಂದಿತ್ತು. ಒಬ್ಬರಿಗೆ 170 ರೂಪಾಗಿ ನೀಡಲು ನಿರ್ಧಾರ ಮಾಡಿದೆ.

ಹಣ ಅಕೌಂಟ್‌ಗೆ ಬಂದಿದೆಯಾ ಎಂಬುದನ್ನು ಪರಿಶೀಲಿಸಲು ವೆಬ್‌ಸೈಟ್‌ಗೆ ಭೇಟಿ ನೀಡಬಹುದು. https://ahara.kar.nic.in/status1/status_of_dbt.aspx ಈ ಲಿಂಕ್‌ಗೆ ಕ್ಲಿಕ್‌ ಮಾಡುವ ಮೂಲಕ ಕಾರ್ಡ್‌ ಹೊಂದಿರುವವರು ತಮ್ಮ ಬ್ಯಾಂಕ್‌ ಖಾತೆಗೆ ವರ್ಗಾವಣೆಯಾದ ಹಣದ ಸ್ಥಿತಿಯನ್ನು ಪರಿಶೀಲಿಸಬಹುದು. ಇದಕ್ಕಾಗಿ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.


ಅನ್ನಭಾಗ್ಯ ಯೋಜನೆಯಡಿ 5ಕೆ.ಜಿ ಅಕ್ಕಿ ಬದಲಿಗೆ ಹಣ ನೀಡಲು ಸರ್ಕಾರ ಮುಂದಾಗಿದೆ. ಇದೀಗ ಕೆಲ ಜಿಲ್ಲೆಗಳ ಪಡಿತರ ಕಾರ್ಡ್‌ ದಾರರಿಗೆ ಹಣ ಜಮಾ ಆಗಿದೆ. ಈಗ ನಿಮ್ಮ ಅಕೌಂಟ್‌ಗೆ ಹಣ ಬಂದಿದೆಯೇ.? ಎಂದು ತಿಳಿಯಲು ಈ ಕೆಳಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಬಳಿಕ ವರ್ಷ ಆಯ್ಕೆ ಮಾಡಿ. ತಿಂಗಳಲ್ಲಿ ಜುಲೈ ಎಂದು ನಮೂದಿಸಿ.

ಇದಾದ ಬಳಿಕ ನಿಮ್ಮ ಪಡಿತರ ಚೀಟಿಯಲ್ಲಿರುವ ಆರ್‌ಸಿ ನಂಬರ್ ಅನ್ನು ಹಾಕಿ ಗೋ ಬಟನ್ ಪ್ರೆಸ್ ಮಾಡಿ. ಹೀಗೆ ಮಾಡಿದಾಗ ನಿಮ್ಮ ಪಡಿತರ ಚೀಟಿಗೆ ಹಣ ಸಂದಾಯವಾಗಿದ್ದರೆ ಎಷ್ಟು ಸದಸ್ಯರಿಗೆ ಎಷ್ಟು ಹಣ ಎಂಬುದು ಟೇಬಲ್ ಮೂಲಕ ಕಾಣಿಸುತ್ತದೆ.

Post a Comment

Previous Post Next Post
CLOSE ADS
CLOSE ADS
×