ಈ ಯೋಜನೆ ಮೂಲಕ ಒಂದರಿಂದ ಐದು ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ (loan facility) ಪಡೆದುಕೊಳ್ಳಬಹುದು.
Loan Scheme: ಮಹಿಳಾ ಸಬಲೀಕರಣ (women empowerment) ಎನ್ನುವ ಪರಿಕಲ್ಪನೆಯನ್ನು ಇಟ್ಟುಕೊಂಡು ಸರ್ಕಾರ ಮಹಿಳೆಯರಿಗಾಗಿ ಪ್ರಮುಖ ಯೋಜನೆ ಜಾರಿಗೆ ತರುತ್ತದೆ. ಇದರಲ್ಲಿ ಮಹಿಳೆಯರು ಸ್ವತಂತ್ರವಾಗಿ ಜೀವನ ನಡೆಸುವುದಕ್ಕೆ ಆರ್ಥಿಕ ನೆರವನ್ನು ನೀಡುವುದು ಕೂಡ ಸೇರ್ಪಡೆಗೊಂಡಿದೆ.
ಕೇಂದ್ರ ಸರ್ಕಾರದ ಹೊಸ ಹೊಸ ಯೋಜನೆಗಳು ಇತ್ತೀಚಿಗೆ ಹೆಣ್ಣು ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತಿದ್ದು, ತಮ್ಮ ಸ್ವಂತ ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತದೆ.
ಮಹಿಳೆಯರಿಗಾಗಿಯೇ ವಿಶೇಷ ಯೋಜನೆ
ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ 2023 24ನೇ ಸಾಲಿನ ಮಧ್ಯಂತರ ಬಜೆಟ್ ನಲ್ಲಿ ಲಕ್ಪತಿ ದೀದಿ ಯೋಜನೆಯನ್ನು ಪರಿಚಯಿಸಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಈ ಯೋಜನೆಯ ಬಗ್ಗೆ ಸರ್ಕಾರ ವಿಶೇಷ ಹಣವನ್ನು ಮೀಸಲಿಟ್ಟಿರೋದಾಗಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಲಕ್ಪತಿ ದೀದಿ ಯೋಜನೆ! (Pradhanmantri lakhpati didi Yojana)
ದೇಶದಲ್ಲಿ ಸುಮಾರು 83 ಸ್ವಸಹಾಯ ಸಂಘ (self help group) ಗಳು ಇವೆ ಅದರಲ್ಲಿ 9 ಕೋಟಿ ಅಧಿಕ ಮಹಿಳೆಯರು ಸದಸ್ಯರಾಗಿದ್ದಾರೆ. ಈ ರೀತಿ ಸ್ವಸಹಾಯ ಸಂಘದಲ್ಲಿ ಮೆಂಬರ್ ಆಗಿರುವ ಮಹಿಳೆಯರು ಸ್ವಂತ ಉದ್ಯಮ ಮಾಡಲು ಸರ್ಕಾರ ಸಾಲ ಸೌಲಭ್ಯ ಒದಗಿಸುತ್ತದೆ. ಅಷ್ಟೇ ಅಲ್ಲ ಯೋಜನೆ ಅಡಿಯಲ್ಲಿ ಉಚಿತ ತರಬೇತಿಯನ್ನು ಕೂಡ ಮಹಿಳೆಯರಿಗೆ ಕೊಡಲಾಗುವುದು.
ಪ್ರಧಾನ ಮಂತ್ರಿ ಲಕ್ಪತಿ ದೀದಿ ಯೋಜನೆಯ ಪ್ರಯೋಜನಗಳು!
ಒಂದರಿಂದ ಐದು ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ (loan facility) ಪಡೆದುಕೊಳ್ಳಬಹುದು. ಸ್ವಸಹಾಯ ಗುಂಪುಗಳು ತರಬೇತಿ (training) ಪಡೆದುಕೊಂಡು ಬಲ್ಬ್ ತಯಾರಿಕೆ, ಡ್ರೋನ್ ಕಾರ್ಯಾಚರಣೆ ಮೊದಲಾದವುಗಳ ಬಗ್ಗೆ ತರಬೇತಿಯನ್ನು ಪಡೆದು ಅದನ್ನ ತಯಾರಿಸಿ ಯಾವುದೇ ಪ್ರದರ್ಶನಗಳಲ್ಲಿ ಪಾಲ್ಗೊಳ್ಳಬಹುದು.
ಉತ್ಪನ್ನವನ್ನು ತಯಾರಿಸಿ ಡಿಪಾರ್ಟ್ಮೆಂಟಲ್ ಸ್ಟೋರ್ ಹಾಗೂ ಮಾಲ್ ಗಳಲ್ಲಿ ಮಾರಾಟಕ್ಕೆ ಇಡಬಹುದು. ಇದರಿಂದಾಗಿ ಮಹಿಳೆಯರು, ಲಕ್ಷ ರೂಪಾಯಿ ಆದಾಯ ಗಳಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
- ಸ್ವ ಸಹಾಯ ಗುಂಪಿಗೆ ಸೇರಿರುವ ಸದಸ್ಯರ ಸಂಖ್ಯೆ ಮತ್ತು ದಾಖಲೆ
- ಆಧಾರ್ ಕಾರ್ಡ್
- ವಿಳಾಸದ ಪುರಾವೆ
- ಮೊಬೈಲ್ ಸಂಖ್ಯೆ
- ಪಾಸ್ ಪೋರ್ಟ್ ಅಳತೆಯ ಫೋಟೋ
- ಬ್ಯಾಂಕ್ ಖಾತೆಯ ವಿವರ
ಯೋಜನೆಗೆ ಅರ್ಜಿ ಸಲ್ಲಿಸಲು ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಹೋಗಿ ಪ್ರಧಾನ ಮಂತ್ರಿ ಯೋಜನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಿ, ಅಲ್ಲಿಯೇ ನೀವು ಅರ್ಜಿ ಸಲ್ಲಿಸಬಹುದು.