ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯವೆಂದರೆ ಸರ್ಕಾರದಿಂದ ಉಚಿತ ತರಬೇತಿ ಪಡೆದು ತಮ್ಮದೇ ಆದಂತಹ ಒಂದು ಸ್ವಂತ ಉದ್ಯೋಗವನ್ನು ಅಂದರೆ ಸ್ವಂತ ಹೊಲಿಗೆ ಯಂತ್ರವನ್ನು ಇಟ್ಟುಕೊಂಡು ಕೈ ತುಂಬಾ ಸಂಪಾದನೆಯನ್ನು ಪ್ರತಿ ತಿಂಗಳು ಮಾಡಬಹುದಾಗಿದೆ.
ಯಾವುದಾದರೂ ಒಂದು ಸ್ವಂತ ಉದ್ಯಮವನ್ನು ಮನೆಯಲ್ಲಿಯೇ ಕುಳಿತು ಪ್ರಾರಂಭಿಸಬೇಕೆಂದು ಅಂದುಕೊಂಡಿದ್ದರೆ ಅಥವಾ ತನ್ನದೇ ಆದ ಒಂದು ಸ್ವಂತ ಉದ್ಯಮದ ಮೂಲಕ ಹಣ ಸಂಪಾದಿಸಬೇಕೆಂದು ಅಂದುಕೊಂಡಿದ್ದರೆ ಅಂತಹ ಮಹಿಳೆಯರಿಗೆ ಇವತ್ತಿನ ಲೇಖನದಲ್ಲಿ ಸಿಹಿ ಸುದ್ದಿ ತಿಳಿಸಲಾಗುತ್ತಿದೆ.
ಉಚಿತವಾಗಿ ಸರ್ಕಾರದಿಂದ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು ಇದೀಗ ಹಲವಾರು ಯೋಜನೆಗಳನ್ನು ಪರಿಚಯಿಸಲಾಗಿದೆ. ಮಹಿಳೆಯರು ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯ ಅಡಿಯಲ್ಲಿ ಇದೀಗ ಹೊಲಿಗೆ ತರಬೇತಿಯನ್ನು ಕೂಡ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಉಚಿತ ತರಬೇತಿಯನ್ನು ಪಡೆದುಕೊಂಡು ಇದರಲ್ಲಿ ಸ್ವಂತ ಹೊಲಿಗೆ ಯಂತ್ರವನ್ನು ಇಟ್ಟುಕೊಂಡು ಕೈ ತುಂಬಾ ಸಂಪಾದನೆಯನ್ನು ಪ್ರತಿ ತಿಂಗಳು ಮಾಡಬಹುದಾಗಿದೆ. ಅದರಂತೆ ಇದೀಗ ಮಹಿಳೆಯರು ಉಚಿತ ಹೊಲಿಗೆ ತರಬೇತಿಯನ್ನು ಹೇಗೆ ಪಡೆಯಬೇಕು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ದಾಖಲೆಗಳೆನಿರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಉಚಿತ ಹೊಲಿಗೆ ತರಬೇತಿ :
ಮಹಿಳೆಯರಿಗಾಗಿಯೇ ಉಚಿತ ಹೊಲಿಗೆ ತರಬೇತಿಯನ್ನು ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಪ್ರಾರಂಭಿಸಿದ್ದು ಈ ಉಚಿತ ತರಬೇತಿಯು ಒಂದು ತಿಂಗಳ ಕಾಲ ನಡೆಯುತ್ತದೆ. ಯಾರೆಲ್ಲ ನೀವು ಉಚಿತ ಹೊಲಿಗೆ ತರಬೇತಿಯನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಕೆಲವೊಂದು ಅರ್ಹತೆಗಳನ್ನು ನಿಗದಿಪಡಿಸಲಾಗಿದ್ದು ಅವುಗಳ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಬಹುದು.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯು 18 ಮಾರ್ಚ್ 2024 ರಿಂದ 18 ಏಪ್ರಿಲ್ 2024 ರವರೆಗೆ ಉಚಿತ ಹೊಲಿಗೆ ತರಬೇತಿಯನ್ನು ನಡೆಸಲಿದ್ದು ಮಹಿಳೆಯರು ವಿಶೇಷವಾಗಿ ಈ ತರಬೇತಿಗೆ ಅರ್ಜಿ ಸಲ್ಲಿಸಿ ಉಚಿತವಾಗಿ ತರಬೇತಿಯನ್ನು ಪಡೆದುಕೊಳ್ಳಬಹುದು.
ಯಾರೆಲ್ಲ ಅರ್ಹರು :
ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯು ಆರಂಭಿಸಿರುವ ಉಚಿತ ಹೊಲಿಗೆ ತರಬೇತಿಗೆ ಕೆಲವೊಂದು ಅರ್ಹತೆಗಳನ್ನು ಹೊಂದುವುದರ ಮೂಲಕ ಮಹಿಳಾ ಅಭ್ಯರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.
- 18 ರಿಂದ 40 ವರ್ಷದ ಮಹಿಳೆಯರು ಉಚಿತ ಹೊಲಿಗೆ ತರಬೇತಿಯಲ್ಲಿ ಪಾಲ್ಗೊಳ್ಳಬಹುದು.
- ಕನ್ನಡ ಭಾಷೆ ಓದಲು ಮತ್ತು ಬರೆಯಲು ಮಹಿಳೆಯರಿಗೆ ತಿಳಿದಿರಬೇಕು.
- ಮಹಿಳೆಯರು ಸ್ವಉದ್ಯೋಗ ಮಾಡುವುದರಲ್ಲಿ ಆಸಕ್ತಿಯನ್ನು ಹೊಂದಿರಬೇಕು.
- ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಮೊದಲ ಆದ್ಯತೆಯಾಗಿ ನೀಡಲಾಗುತ್ತದೆ.
- ತರಬೇತಿಯ ಸಮಯದಲ್ಲಿ ಊಟ ವಸತಿ ಉಚಿತವಾಗಿ ನೀಡಲಾಗುತ್ತದೆ.
ಹೀಗೆ ಕೆಲವೊಂದು ಅರ್ಹತೆಗಳನ್ನು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ನಿಗದಿಪಡಿಸಿದ್ದು ಈ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತವಾಗಿ ಹೊಲಿಗೆ ತರಬೇತಿಯನ್ನು ಪಡೆಯಬಹುದು.
ಪ್ರಮುಖ ದಾಖಲೆಗಳು :
ಮಹಿಳೆಯರು ಉಚಿತವಾಗಿ ಹೊಲಿಗೆ ತರಬೇತಿಯನ್ನು ಪಡೆಯಬೇಕಾದರೆ ಕೆಲವೊಂದು ಪ್ರಮುಖ ದಾಖಲೆಗಳನ್ನು ಮುಖ್ಯವಾಗಿ ಹೊಂದಿರಬೇಕು ಅವುಗಳೆಂದರೆ,
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ರೇಷನ್ ಕಾರ್ಡ್
- ಪಾಸ್ಪೋರ್ಟ್ ಸೈಜ್ ಫೋಟೋ
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
ಹೀಗೆ ಕೆಲವೊಂದು ದಾಖಲೆಗಳನ್ನು ಹೊಂದುವುದರ ಮೂಲಕ ಉಚಿತ ತರಬೇತಿಗೆ ಅರ್ಜಿ ಸಲ್ಲಿಸಿ ಒಂದು ತಿಂಗಳುಗಳ ಕಾಲ ಉಚಿತವಾಗಿ ಹೋಲಿಗೆ ತರಬೇತಿಯನ್ನು ಪಡೆಯಬಹುದು.
ಹೊಲಿಗೆ ತರಬೇತಿ ನಡೆಯುವ ಸ್ಥಳ :
ಮಹಿಳೆಯರು ಕೆನರಾ ಬ್ಯಾಂಕ್, ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯಿಂದ ಪ್ರಾರಂಭಿಸಿರುವ ಉಚಿತ ಹೊಲಿಗೆ ತರಬೇತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ನಂತರ ಮಹಿಳೆಯರು ತರಬೇತಿಗಾಗಿ ನಿಗದಿತ ಸ್ಥಳಕ್ಕೆ ಭೇಟಿ ನೀಡಬೇಕಾಗುತ್ತದೆ ಅದರಂತೆ ತರಬೇತಿ ನಡೆಯುವ ಸ್ಥಳ ಯಾವುದೆಂದರೆ,
ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ,
ಇಂಡಸ್ಟ್ರಿಯಲ್ ಏರಿಯಾ
ಹೆಗಡೆ ರಸ್ತೆ
ಕುಮಟಾ
ಉತ್ತರ ಕನ್ನಡ ಜಿಲ್ಲೆ 581343.
ಅರ್ಜಿ ಸಲ್ಲಿಸುವ ವಿಧಾನ :
ಮಹಿಳೆಯರು ಉಚಿತ ಹೊಲಿಗೆ ತರಬೇತಿ ಗಾಗಿ ಅರ್ಜಿಯನ್ನು ಸಲ್ಲಿಸಬೇಕಾದರೆ ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವಿರುವುದಿಲ್ಲ ಆದರೆ ಅಭ್ಯರ್ಥಿಗಳು ಕೆಳಗೆ ತಿಳಿಸಲಾದ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಉಚಿತ ಹೋಲಿಗೆ ತರಬೇತಿಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
9449860007
9538281989
9916783825
8880444612
ಹೀಗೆ ಈ ಸಂಖ್ಯೆಗಳಿಗೆ ಕರೆ ಮಾಡಿ ಉಚಿತ ಹೊಲಿಗೆ ತರಬೇತಿಗಾಗಿ ಅರ್ಜಿಯನ್ನು ಸಲ್ಲಿಸಿ, ಮನೆಯಲ್ಲೇ ಕುಳಿತು ಒಂದು ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದಾಗಿದೆ.
ಒಟ್ಟಾರೆ ಮಹಿಳೆಯರಿಗೆ ಸಹಾಯವಾಗಬೇಕೆನ್ನುವ ಉದ್ದೇಶದಿಂದ ಉಚಿತವಾಗಿ ಸರ್ಕಾರದಿಂದ ಹೊಲಿಗೆ ಯಂತ್ರ ಪಡೆದುಕೊಳ್ಳಲು ಕೆಲವು ಯೋಜನೆಗಳನ್ನು ಪರಿಚಯಿಸಿರುವುದನ್ನು ನಾವು ನೋಡಬಹುದು ಅದರಂತೆ ಇದೀಗ ಮಹಿಳೆಯರು ಹೊಲಿಗೆ ತರಬೇತಿಯನ್ನು ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯ ಅಡಿಯಲ್ಲಿ ಉಚಿತವಾಗಿ ಪಡೆಯಬಹುದಾಗಿದ್ದು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಉಚಿತ ತರಬೇತಿಗಾಗಿ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ
ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ತಿಳಿಸುವ ಮೂಲಕ ಅವರು ಕೂಡ ಉಚಿತ ಹೊಲಿಗೆ ತರಬೇತಿಯನ್ನು ಪಡೆದು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಇದೊಂದು ರೀತಿಯಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಬಹುದು ಧನ್ಯವಾದಗಳು.
15,000 ಹಣ ಜೊತೆಗೆ ವಿದ್ಯುತ್ ಚಾಲಿತ ಹೊಲಿಗೆ ಬೇಕಾದರೆ ಪ್ರಧಾನ ಮಂತ್ರಿ ವಿಶ್ವ ಕರ್ಮಾ ಯೋಜನೆಗೆ ಅರ್ಜಿ ಸಲ್ಲಿಸಿ ಈ ಲಿಂಕ್ ಬಳಸಿ : https://nsdcindia.org/pmvishwakarma.html