Labour Card: ಇಂತಹವರ ಲೇಬರ್ ಕಾರ್ಡ್ ಶೀಘ್ರದಲ್ಲೇ ರದ್ದು! ಯಾವ ಸೌಲಭವ್ಯೂ ಸಿಗೋದಿಲ್ಲ

Labour Card: ಇಂತಹವರ ಲೇಬರ್ ಕಾರ್ಡ್ ಶೀಘ್ರದಲ್ಲೇ ರದ್ದು! ಯಾವ ಸೌಲಭವ್ಯೂ ಸಿಗೋದಿಲ್ಲ

ಸರಕಾರವು ಕಟ್ಟಡ ಕಾರ್ಮಿಕರು ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ಲೇಬರ್ ಕಾರ್ಡ್ (Labour Card) ಅನ್ನು ನೀಡಿ ಅದರ ಮೂಲಕ ಸರಕಾರಿ ಸೌಲಭ್ಯ ನೀಡುವ ಬಗ್ಗೆ ಚಿಂತನೆ ನಡೆಸಿದೆ. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಈ ಲೇಬರ್ ಕಾರ್ಡ್ ಅನ್ನು ಅನೇಕ ಉದ್ದೇಶಕ್ಕಾಗಿ ನೀಡಿದ್ದು ಈ ಕಾರ್ಡ್ ಅನ್ನು ಸರಕಾರ ರದ್ದು ಮಾಡಲಿದೆ ಎಂಬ ಶಾಕಿಂಗ್ ಮಾಹಿತಿಯೊಂದು ವೈರಲ್ ಆಗುತ್ತಿದೆ. ಹಾಗಾದರೆ ನಿಜಕ್ಕೂ ಲೇಬರ್ ಕಾರ್ಡ್ ರದ್ದಾಗುತ್ತಾ ಎಂಬ ಅನುಮಾನ ಕಾಡುತ್ತಿದೆ. ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ (Santosh Lad) ಅವರು ಲೇಬರ್ ಕಾರ್ಡ್ ಕ್ಯಾನ್ಸಲ್ ಆಗುತ್ತೆ ಎಂಬ ಬಗ್ಗೆ ಮಾಹಿತಿ ನೀಡಿದ್ದು ಈ ಕುರಿತು ಸಂಪೂರ್ಣ ವಿವರಣೆ ಇಲ್ಲಿದೆ.



ಯಾವೆಲ್ಲ ಸೌಲಭ್ಯ ಸಿಗುತ್ತೆ

ಲೇಬರ್ ಕಾರ್ಡ್ ಹೊಂದಿದ್ದವರಿಗೆ ಯಾವೆಲ್ಲ ಸೌಲಭ್ಯ ಸಿಗಲಿದೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಈ ಬಗ್ಗೆ ತಿಳಿದುಕೊಳ್ಳುವುದು ಸಹ ಬಹಳ ಮುಖ್ಯ. ಮೊದಲನೇಯದ್ದಾಗಿ ಲೇಬರ್ ಕಾರ್ಡ್ ಇದ್ದವರಿಗೆ ಅಪಘಾತ ಪರಿಹಾರ ಸಹಾಯಧನ ಸಿಗಲಿದೆ. ಲೇಬರ್ ಕಾರ್ಡ್ ಹೊಂದಿದ್ದರೆ ಅವರ ಮಕ್ಕಳಿಗೆ ಸಬ್ಸಿಡಿ ಮೊತ್ತ, ವಿದ್ಯಾರ್ಥಿ ವೇತನ, ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ, ಮದುವೆ ಸಹಾಯಧನ, ಶೈಕ್ಷಣಿಕ ಸಹಾಯಧನ, ಉಚಿತ ಸಾರಿಗೆ ಬಸ್ ಪಾಸ್ ಇತರ ಸೌಲಭ್ಯ ಸಿಗಲಿದೆ.

Labour Card ಅರ್ಹತೆ:

ಶ್ರಮಿಕ ವರ್ಗಕ್ಕೆ ಲೇಬರ್ ಕಾರ್ಡ್ ಪಡೆಯಬೇಕಾದರೆ ಅರ್ಹತೆ ಎಂಬುದು ಇರಬೇಕಾಗುತ್ತದೆ. ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಯಲ್ಲಿ ಒಂದು ವರ್ಷಕ್ಕೆ ಕನಿಷ್ಠ 90 ದಿನ ಮಾಡಿರಬೇಕಾಗಿದೆ. ಅಂತವರು ಮಾತ್ರವೇ ಈ ಲೇಬರ್ ಕಾರ್ಡ್ ಪಡೆಯಲು ಅರ್ಹ ಸ್ಥಾನ ಪಡೆದಿರುತ್ತಾರೆ ಎಂದು ಕಾರ್ಮಿಕ ಇಲಾಖೆ ಮೂಲಕ ಸರಕಾರ ಈ ಘೋಷಣೆ ಮಾಡಿದೆ.

ಯಾರ Labour Card ರದ್ದಾಗಲಿದೆ?

ಕಟ್ಟಡ ಕಾರ್ಮಿಕರಿಗೆ ಲೇಬರ್ ಕಾರ್ಡ್ ನಿಂದಾಗಿ ಅನೇಕ ಪ್ರಯೋಜನ ಸಿಗಲಿದೆ ಹಾಗಾಗಿ ಫೇಕ್ ಡಾಕ್ಯುಮೆಂಟ್ ನೀಡಿ ಸರಕಾರದ ಪ್ರಯೋಜನ ಪಡೆಯಲಾಗುತ್ತಿದೆ ಇದನ್ನು ಮನಗಂಡ ರಾಜ್ಯ ಸರಕಾರವು ಹೊಸ ವ್ಯವಸ್ಥೆ ಜಾರಿಗೆ ತರುತ್ತಿದೆ. ಹಾಗಾಗಿ ಅಂತಹ ಪ್ರಕರಣ ಕಡಿಮೆ ಮಾಡಲು ಸುಳ್ಳು ಮಾಹಿತಿ ನೀಡಿ ಕಾರ್ಡ್ ಪಡೆದವರ ವಿರುದ್ಧ ನೂತನ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ.

ಕಾರ್ಮಿಕ ಸಚಿವರಿಂದ ಮಾಹಿತಿ

ನಕಲಿ ದಾಖಲಾತಿ‌ ನೀಡಿ ಲೇಬರ್ ಕಾರ್ಡ್ ಅನ್ನು ಪಡೆದವರನ್ನು ಪತ್ತೆ ಹಚ್ಚಿ ಅಂತವರ ಕಾರ್ಡ್ ರದ್ದು ಗೊಳಿಸಿ ಶಿಸ್ತಿನ ಕ್ರಮ ಜರುಗಿಸಲಾಗುತ್ತದೆ ಎಂದು ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ್ ಲಾಡ್ ಅವರು ಮಾಧ್ಯಮದ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಾರಿ ಲೇಬರ್ ಕಾರ್ಡ್ ಗಾಗಿ ಬಂದ ಅರ್ಜಿಯಲ್ಲಿ 42ಲಕ್ಷ ಜನರಿಗೆ ಲೇಬರ್ ಕಾರ್ಡ್ ನೀಡಲಾಗಿದ್ದು, 7ಲಕ್ಷ ಲೇಬರ್ ಕಾರ್ಡ್ ಅನ್ನು ನಿಷೇಧ ಮಾಡಲಾಗಿದೆ. ಮುಂದಿನ ದಿನದಲ್ಲಿ 90 ದಿನ ಕಡ್ಡಾಯವಾಗಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರಬೇಕು ಎಂಬ ನಿಯಮ ಬರಲಿದ್ದು, ಅನರ್ಹರ ಲೇಬರ್ ಕಾರ್ಡ್ ರದ್ದು ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಹಾಗಾಗಿ ಅನರ್ಹರಿಗೆ ಈ ವಿಚಾರ ದೊಡ್ಡ ಆಘಾತ ನೀಡಲಿದೆ ಎನ್ನಬಹುದು.

Post a Comment

Previous Post Next Post
CLOSE ADS
CLOSE ADS
×