ಶಾಲಾ ವಿದ್ಯಾರ್ಥಿಗಳಿಗೆ ಕೋಟಕ್ ಸುರಕ್ಷಾ ಸ್ಕಾಲರ್‌ಶಿಪ್‌: ಅರ್ಜಿ ಹಾಕಿ ವರ್ಷಕ್ಕೆ ರೂ.50,000 ಪಡೆಯಿರಿ

ಶಾಲಾ ವಿದ್ಯಾರ್ಥಿಗಳಿಗೆ ಕೋಟಕ್ ಸುರಕ್ಷಾ ಸ್ಕಾಲರ್‌ಶಿಪ್‌: ಅರ್ಜಿ ಹಾಕಿ ವರ್ಷಕ್ಕೆ ರೂ.50,000 ಪಡೆಯಿರಿ

Scholarship For School Students : ಕೋಟಕ್‌ ಸೆಕ್ಯೂರಿಟೀಸ್‌ 2024-25 ಸಾಲಿಗೆ ಶಾಲಾ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ಒಂದನ್ನು ಪ್ರಕಟಿಸಿದೆ. ಅರ್ಹರು ಅರ್ಜಿ ಸಲ್ಲಿಸಿ ತಮ್ಮ ಶಿಕ್ಷಣಕ್ಕಾಗಿ ಪ್ರೋತ್ಸಾಹಧನ ಪಡೆಯಬಹುದಾಗಿದೆ.



ಕೋಟಕ್ ಸೆಕ್ಯೂರಿಟೀಸ್ ಶಾಲಾ ವಿದ್ಯಾರ್ಥಿಗಳಿಗಾಗಿ ಕೋಟಕ್ ಸುರಕ್ಷಾ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ 2024-25 ಅನ್ನು ಘೋಷಣೆ ಮಾಡಿದೆ. ಶಾಲಾ ವಿದ್ಯಾರ್ಥಿಗಳು ಹಣಕಾಸಿನ ನೆರವು ಪಡೆದು ತಮ್ಮ ಶೈಕ್ಷಣಿಕ ಗುರಿಗಳನ್ನು ತಲುಪಿ ಸಾಧನೆ ಮಾಡಲು ಈ ಸ್ಕಾಲರ್‌ಶಿಪ್‌ನ ಸದುಪಯೋಗ ಪಡೆದುಕೊಳ್ಳಲು ಕೋಟಕ್ ಸೆಕ್ಯೂರಿಟೀಸ್‌ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸ್ಕಾಲರ್‌ಶಿಪ್‌ ಅನ್ನು ಪಡೆಯಲು ಅರ್ಹತೆಗಳೇನು, ಪ್ರಮುಖ ದಿನಾಂಕಗಳು ಯಾವುವು, ಅರ್ಜಿ ವಿಧಾನ ಹೇಗೆ ಎಂಬುದನ್ನು ಈ ಕೆಳಗಿನಂತೆ ತಿಳಿಸಲಾಗಿದೆ.

  • ಸ್ಕಾಲರ್‌ಶಿಪ್‌ ನೀಡುವ ಕಂಪನಿ: ಕೋಟಕ್ ಸೆಕ್ಯೂರಿಟೀಸ್‌.
  • ಸ್ಕಾಲರ್‌ಶಿಪ್‌ ಹೆಸರು : ಕೋಟಕ್ ಸುರಕ್ಷಾ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ ( ಸ್ಕೂಲ್‌ ಸ್ಟೂಡೆಂಟ್‌ಗಳಿಗಾಗಿ)
  • ವಿದ್ಯಾರ್ಥಿವೇತನ ಮೊತ್ತ: ಶಾಲಾ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.50,000.

ಅರ್ಹತೆಗಳು

- 9 ರಿಂದ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

- ವಿಕಲಚೇತನ ವಿದ್ಯಾರ್ಥಿಗಳಾಗಿರಬೇಕು. ಅವರು ಮಾತ್ರ ಅರ್ಜಿ ಸಲ್ಲಿಸಬಹುದು.

- ಹಿಂದಿನ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಕನಿಷ್ಠ ಶೇಕಡ.55 ಅಂಕಗಳನ್ನು ಗಳಿಸಿರಬೇಕು.

- ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.3,20,000 ಮೀರಿರಬಾರದು.

- ದೇಶದಾದ್ಯಂತದ ಯಾವುದೇ ಪಿಡಬ್ಲ್ಯೂಡಿ ವಿದ್ಯಾರ್ಥಿ ಅರ್ಜಿ ಸಲ್ಲಿಸಬಹುದು.

- ಕೋಟಕ್ ಸೆಕ್ಯೂರಿಟೀಸ್‌ ಸಿಬ್ಬಂದಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಲ್ಲ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಆಧಾರ್ ಕಾರ್ಡ್‌ / ರೇಷನ್‌ ಕಾರ್ಡ್‌ / ವೋಟರ್‌ ಐಡಿ ಯಾವುದಾದರೊಂದು ಗುರುತಿನ ಚೀಟಿ ಹೊಂದಿರಬೇಕು.
  • ಪ್ರಸ್ತುತ ಓದುತ್ತಿರುವ ಶಿಕ್ಷಣದ ಪ್ರವೇಶ ದಾಖಲೆ ಇರಬೇಕು.
  • ಹಿಂದಿನ ವರ್ಷ ಶಿಕ್ಷಣದ ಅಂಕಪಟ್ಟಿ.
  • ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ.
  • ವಿಕಲಚೇತನ ವಿದ್ಯಾರ್ಥಿ ಎಂಬ ಪ್ರಮಾಣ ಪತ್ರ.

ಅರ್ಜಿ ಸಲ್ಲಿಸುವುದು ಹೇಗೆ?

- ಶಾಲಾ ವಿದ್ಯಾರ್ಥಿಗಳು (9 ರಿಂದ 12ನೇ ತರಗತಿ ವಿದ್ಯಾರ್ಥಿಗಳು) ಈ ಸ್ಕಾಲರ್‌ಶಿಪ್‌ ಪಡೆಯಲು 'Apply Online' ಲಿಂಕ್ ಕ್ಲಿಕ್ ಮಾಡಿ.

- ತೆರೆದ ವೆಬ್‌ಪೇಜ್‌ನಲ್ಲಿ 'Kotak Suraksha Scholarship Program for School Students 2024-25' ಎಂದಿರುವ ಕಾಲಂ ಅಡಿಯಲ್ಲಿ 'Apply Now' ಬಟನ್‌ ಕ್ಲಿಕ್ ಮಾಡಿ.

- ನಂತರ ಮೊಬೈಲ್‌ ನಂಬರ್, ಇ-ಮೇಲ್‌ ವಿಳಾಸ, ಜಿಮೇಲ್‌ ಮೂಲಕ ರಿಜಿಸ್ಟ್ರೇಷನ್‌ ಪಡೆಯಲು ವಿಂಡೋ ಓಪನ್‌ ಆಗುತ್ತದೆ.

- ನೀವು ಇಚ್ಚಿಸುವ ಮಾದರಿಯಲ್ಲಿ ರಿಜಿಸ್ಟ್ರೇಷನ್‌ ಪಡೆದು, ನಂತರ ಅರ್ಜಿ ಸಲ್ಲಿಸಿ.

- ಅಗತ್ಯ ದಾಖಲೆಗಳ ಸ್ಕ್ಯಾನ್‌ ಕಾಪಿ ಅಪ್‌ಲೋಡ್‌ ಮಾಡಿ.

- ಅರ್ಜಿ ಪೂರ್ಣಗೊಳಿಸಿ ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್‌ ತೆಗೆದುಕೊಳ್ಳಿ.

ಅರ್ಜಿ ಸಲ್ಲಿಸಿದವರನ್ನು ಅವರ ಶೈಕ್ಷಣಿಕ ಅಂಕಗಳು ಹಾಗೂ ವಾರ್ಷಿಕ ಆದಾಯದ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಹಾಕಲು ಅವಕಾಶ ಇರುತ್ತದೆ.

Post a Comment

Previous Post Next Post
CLOSE ADS
CLOSE ADS
×