ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡುವ ಮಹಿಳೆಯರು eKYC ಮಾಡಿಸದೆ ಇದ್ದರೆ, 2000 ಹಣ ಅರ್ಜಿ ಸಲ್ಲಿಸಿದ್ದರು ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ.
ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಎಲ್ಲಾ ಹೆಣ್ಣುಮಕ್ಕಳು ಉತ್ಸಾಹದಿಂದ ಅರ್ಜಿ ಸಲ್ಲಿಸುತ್ತಿದ್ದಾರೆ. ಈಗಾಗಲೇ ಸುಮಾರು ಒಂದು ಕೋಟಿ ಮಹಿಳೆಯರವರೆಗು ಅರ್ಜಿ ಸಲ್ಲಿಸಿದ್ದು, ಈ ತಿಂಗಳು ಯೋಜನೆ ಲಾಂಚ್ ಆಗುವುದರ ಜೊತೆಗೆ, ಹೆಣ್ಣುಮಕ್ಕಳ ಖಾತೆಗೆ ಹಣ ಬರಲಿದೆ ಎಂದು ಸರ್ಕಾರ ತಿಳಿಸಿದೆ.
ಆದರೆ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Yojana) ಸಂಬಂಧಿಸಿದ ಹಾಗೆ ಹಲವು ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಇದೀಗ ಹೊಸದೊಂದು ನಿಯಮವನ್ನು ಜಾರಿಗೆ ತಂದಿದ್ದು, ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡುವ ಮಹಿಳೆಯರು eKYC ಮಾಡಿಸದೆ ಇದ್ದರೆ, 2000 ಹಣ ಅರ್ಜಿ ಸಲ್ಲಿಸಿದ್ದರು ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ..
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರ ಮೊಬೈಲ್ ನಂಬರ್ ಗೆ ಒಂದು ಮೆಸೇಜ್ ಬರುತ್ತದೆ, ಅದರಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದ ದಿನಾಂಕ, ಸಮಯ ಮತ್ತು ಸ್ಥಳದ ಬಗ್ಗೆ ಮಾಹಿತಿ ನೀಡಿರುತ್ತಾರೆ. ಆ ದಿನ, ಆ ಸ್ಥಳದಲ್ಲಿ ಅರ್ಜಿ ಹಾಕಬೇಕು.
ಆದರೆ ಕೆಲವರಿಗೆ ತಾಂತ್ರಿಕ ದೋಷಗಳ ಕಾರಣ ಮೆಸೇಜ್ (Message) ಬರದೆ ಇದ್ದವರು, ಅರ್ಜಿ ಸಲ್ಲಿಕೆ ಹೇಗೆ ಎಂದು ತಲೆಕೆಡಿಸಿಕೊಂಡಿದ್ದರು. ಸರ್ಕಾರ ಕೊಟ್ಟ 2 ನಂಬರ್ ಇಂದಲೂ ಮೆಸೇಜ್ ಬರದೆ ಇರುವವಗೆ ಸರ್ಕಾರ ಒಂದು ಗುಡ್ ನ್ಯೂಸ್ ಕೊಟ್ಟಿದೆ. ನಿಮ್ಮ ಹತ್ತಿರದ ಗ್ರಾಮ 1, ಸರ್ಕಾರಿ ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ 1ಇಲ್ಲಿ ಹೋಗಿ ಅರ್ಜಿ (Scheme Application) ಸಲ್ಲಿಸಬಹುದು ಎಂದು ತಿಳಿಸಲಾಗಿದೆ. ಅಂದರೆ ಮೊಬೈಲ್ ಸಂದೇಶ ಕಡ್ಡಾಯವಲ್ಲ
ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ekyc ಪೆಂಡಿಂಗ್ ಇದೆ ಎಂದು ಹೇಳಬಹುದು, ಇದರ ಅರ್ಥ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಎಂದು ಅರ್ಥವಲ್ಲ. ಬ್ಯಾಂಕ್ ಅಕೌಂಟ್ ಗು ಸಹ ekyc ಇದೆ, ಗೃಹಲಕ್ಷ್ಮಿ ಯೋಜನೆಯ ekyc ಎಂದರೆ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಗೆ OTP ಬರುವುದು , ಬಳಿಕ ಥಂಬ್ ಇಂಪ್ರೆಷನ್ ಮೂಲಕ ಸಹ ekyc ಮಾಡಿಸಬಹುದು.
ಒಂದು ವೇಳೆ ಈ ಎರಡು ರೀತಿ ಮಾಡಿಯು ಕೂಡ OTP ಬರಲಿಲ್ಲ ಎಂದರೆ, ಹಳೆ ರೇಷನ್ ಕಾರ್ಡ್ ಮತ್ತು ಹೊಸ ರೇಶನ್ ಕಾರ್ಡ್ ಬದಲಾಗಿರಬಹುದು. ಇಲ್ಲಿ ನಿಮಗೆ ನಿಮ್ಮ ಹೊಸ ರೇಷನ್ ಕಾರ್ಡ್ ನಂಬರ್ ಗೊತ್ತಿರಬೇಕು. ಹಲವರು ತಮ್ಮ ಹಳೆಯ ರೇಷನ್ ಕಾರ್ಡ್ ನಂಬರ್ ಇಟ್ಟುಕೊಂಡೆ ಪಜೀತಿ ಪಡುತ್ತಿದ್ದಾರೆ, ಈ ವೇಳೆ ನಿಮಗೆ ಅರ್ಜಿ ಸಲ್ಲಿಕೆ ಆಗದೆ ಇರಬಹುದು ಅಂತಹವರು ಸಂಬಂಧ ಪಟ್ಟ ಕಚೇರಿಯಿಂದ ತಮ್ಮ ಹೊಸ ರೇಷನ್ ಕಾರ್ಡ್ ನಂಬರ್ ಪಡೆಯಿರಿ.