ಬಾಕಿ ಉಳಿದಿರುವ ರಾಜಿ ಆಗಬಹುದಾದಂಥ ಕ್ರಿಮಿನಲ್ ಕೇಸ್ ಗಳು, ಚೆಕ್ ಬೌನ್ಸ್ ಕೇಸ್ ಗಳು ಹಾಗೂ ಇನ್ನಿತರ ಕೇಸ್ ಗಳನ್ನಿ ರಾಜಿಯಾಗುವುದಕ್ಕೆ ಪರಿಗಣಿಸಿ, ಬೇಗ ಕೇಸ್ ಗಳನ್ನು ಕ್ಲಿಯರ್ ಮಾಡಲು ಸೂಚನೆ ನೀಡಲಾಗಿದೆ.
ಒಂದಷ್ಟು ವರ್ಷಗಳಿಂದ ಕೋರ್ಟ್ ನಲ್ಲಿ ಕೇಸ್ ಉಳಿಸಿಕೊಂಡಿರುವವರಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. 2023ರ ಸೆಪ್ಟೆಂಬರ್ 9ರಂದು ನಮ್ಮ ರಾಜ್ಯದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ (National Lok Adalat) ನಡೆಯಲಿದೆ.
ಹಾಗಾಗಿ ಬಾಕಿ ಉಳಿದಿರುವ ರಾಜಿ ಆಗಬಹುದಾದಂಥ ಕ್ರಿಮಿನಲ್ ಕೇಸ್ ಗಳು, ಚೆಕ್ ಬೌನ್ಸ್ ಕೇಸ್ ಗಳು (Cheque Bounce) ಹಾಗೂ ಇನ್ನಿತರ ಕೇಸ್ ಗಳನ್ನಿ ರಾಜಿಯಾಗುವುದಕ್ಕೆ ಪರಿಗಣಿಸಿ, ಬೇಗ ಕೇಸ್ ಗಳನ್ನು ಕ್ಲಿಯರ್ ಮಾಡಲು ಸೂಚನೆ ನೀಡಲಾಗಿದೆ.
ಲೋಕ್ ಅದಾಲತ್ ಕಾರಣದಿಂದ ಕೋರ್ಟ್ ಕೇಸ್ ಉಳಿಸಿಕೊಂಡಿರುವವರು, ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಬಹುದು. ಲೋಕ್ ಅದಾಲತ್ ನಡೆಯಲಿರುವುದರಿಂದ ಜನರು ಚೆಕ್ ಬೌನ್ಸ್ ಕೇಸ್, ಬ್ಯಾಂಕ್ ವಸೂಲಿ ಕೇಸ್, ಕರೆಂಟ್ ಬಿಲ್, ನೀರಿನ ಬಿಲ್ ಕೇಸ್, ಕ್ರಿಮಿನಲ್ ಕೇಸ್, ದಾಂಪತ್ಯದ ಕುರಿತ ಕೇಸ್ ಗಳು, ರಿಯಲ್ ಎಸ್ಟೇಟ್ ಕೇಸ್, ಕೆಲಸದ ಕುರಿತ ಕೇಸ್, ಜಿಲ್ಲಾ ಗ್ರಾಹಕರ ವೇದಿಕೆ ಕೇಸ್ ಗಳು, ಆಕ್ಸಿಡೆಂಟ್ ಕೇಸ್, ಕಾರ್ಮಿಕರ ವಿವಾದ, ಭೂಮಿಗೆ ಸಂಬಂಧಿಸಿದ ಪ್ರಕರಣ, ತೆರಿಗೆ ಪ್ರಕರಣ ಹಾಗೂ ರಾಜಿ ಅಗುವಂಥ ಇನ್ನೆಲ್ಲಾ ಸಿವಿಲ್ ಕೇಸ್ ಮತ್ತು ಕ್ರಿಮಿನಲ್ ಕೇಸ್ ಗಳನ್ನು ಲೋಕ್ ಅದಾಲತ್ ವೇಳೆ ಇತ್ಯರ್ಥ ಮಾಡಿಕೊಳ್ಳಬಹುದು.
ಅಷ್ಟೇ ಅಲ್ಲದೆ, ಕೋರ್ಟ್ ನಲ್ಲಿ ದಾಖಲಿಸದ ಕೇಸ್ ಗಳನ್ನು ಕೂಡ ರಾಜಿ ಸಂಧಾನ ಮಾಡಿಕೊಳ್ಳುವ ಮೂಲಕ, ಕೇಸ್ ಗಳನ್ನು ಕ್ಲಿಯರ್ ಮಾಡಿಕೊಂಡರೆ, ಕೋರ್ಟ್ ಗೆ ಕಟ್ಟಿರುವ ಹಣವನ್ನು ವಾಪಸ್ ನೀಡಲಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.
ಜಡ್ಜ್ ಗಳು ನೀಡುವ ತೀರ್ಪು ಸರಿಹೋದರೆ ಮಾತ್ರ, ಕೇಸ್ ಹಾಕಿರುವವರು ರಾಜಿ ಮಾಡಿಕೊಳ್ಳಬಹುದು. ಕಡಿಮೆ ವೆಚ್ಚ ಭರಿಸಿ ಕೇಸ್ ಇತ್ಯರ್ಥಪಡಿಸಿಕೊಳ್ಳುವುದಕ್ಕೆ ಇದು ಒಳ್ಳೆಯ ಅವಕಾಶ ಆಗಿದೆ.
ಹಿಂದಿನ ಸಾರಿ ನಡೆದ ಲೋಕ್ ಅದಾಲತ್ ನಲ್ಲಿ ಸುಮಾರು 31,009 ಕೇಸ್ ಗಳು ರಾಜಿಯಾಗಿದೆ. ಈ ಒಟ್ಟು ಕೇಸ್ ನಲ್ಲಿ ಕೋರ್ಟ್ ನಲ್ಲಿ ಉಳಿದಿದ್ದ ಕೇಸ್ ಗಳ ಸಂಖ್ಯೆ 3837 ಕೇಸ್ ಆಗಿದೆ. ಇನ್ನುಳಿದ 26,331 ವ್ಯಾಜ್ಯ ಪೂರ್ವ ಕೇಸ್ ಗಳನ್ನು ಲಾಯರ್ ಗಳು ( lawyer), ಪಕ್ಷದವರು, ಪೊಲೀಸರ ಸಹಾಯದಿಂದ ಕ್ಲಿಯರ್ ಮಾಡಲಾಗಿದೆ.
ಈ ಬಗ್ಗೆ ಪೂರ್ತಿ ಮಾಹಿತಿ ಪಡೆಯಲು, 1800-425-90900 ಈ ಟೋಲ್ ಫ್ರೀ ನಂಬರ್ ಗೆ ಕಾಲ್ ಮಾಡಿ. ಅಥವಾ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಈ ನಂಬರ್ ಗೆ ಕರೆಮಾಡಿ 080-22111875, 080-22111730. ಅಥವಾ ಈ ವೆಬ್ಸೈಟ್
www.kslsa.kar.nic.in ಗೆ ಭೇಟಿ ನೀಡಿ.