Horticulture subsidy-ತೋಟಗಾರಿಕೆ ಇಲಾಖೆಯಲ್ಲಿರುವ ಸಬ್ಸಿಡಿ ಯೋಜನೆಗಳು

Horticulture subsidy-ತೋಟಗಾರಿಕೆ ಇಲಾಖೆಯಲ್ಲಿರುವ ಸಬ್ಸಿಡಿ ಯೋಜನೆಗಳು

 ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಪ್ರತಿಹನಿಗೆ ಅಧಿಕ ಬೆಳೆ



ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ 2023-24ನೇ ಸಾಲಿನಲ್ಲಿ ಅಡಿಕೆ ಬೆಳೆ ಹೊರತುಪಡಿಸಿ ಹೊಸದಾಗಿ ಪ್ರದೇಶ ವಿಸ್ತರಣೆ ಕೈಗೊಂಡ ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

 ಆಸಕ್ತ ರೈತರು ನಿಗದಿತ ಅರ್ಜಿ ನಮೂನೆಗಳನ್ನು ತೋಟಗಾರಿಕೆ ಇಲಾಖೆ ಕಚೇರಿಯಿಂದ ಪಡೆದುಕೊಳ್ಳಬಹುದು. ಯೋಜನೆಯಡಿ ಪ್ರತಿ ಅರ್ಜಿದಾರರಿಗೆ ಗರಿಷ್ಠ ಐದು ಹೆಕ್ಟರ್ ಪ್ರದೇಶದವರೆಗೆ ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಮೊದಲ ಎರಡು ಹೆಕ್ಟರ್ ಪ್ರದೇಶದವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇಕಡ 90ರಷ್ಟು ಇತರೆ ಹಾಗೂ ಸಾಮಾನ್ಯ ರೈತರಿಗೆ ಶೇಕಡ 75 ರಷ್ಟು, ಉಳಿದಂತೆ ಎರಡು ಹೆಕ್ಟರ್ ಮೇಲ್ಪಟ್ಟು 5 ಹೆಕ್ಟೇರ್ವರೆಗೆ ಶೇಕಡ 45ರ ಸಹಾಯಧನ ಪಡೆಯಲು ಅವಕಾಶವಿರುತ್ತದೆ ಇತರೆ ಹಾಗೂ ಸಾಮಾನ್ಯ ವರ್ಗದವರಿಗೆ ಒಮ್ಮೆ ಹಾಗೂ ಪರಿಶಿಷ್ಟ ಜಾತಿ ಪಂಗಡದ ರೈತರಿಗೆ ಈ ಹಿಂದೆ ಅಳವಡಿಸಿಕೊಂಡಿದ್ದ ಸೂಕ್ಷ್ಮ ನೀರಾವರಿ ಪದ್ಧತಿ ಹಾಳಾಗಿದ್ದಲ್ಲಿ ಘಟಕ ಕಾರ್ಯ ನಿರ್ವಹಿಸದೆ ಇದ್ದಲ್ಲಿ ಏಳು ವರ್ಷಗಳ ನಂತರ ಅದೇ ಜಮೀನಿಗೆ ಮತ್ತೊಮ್ಮೆ ಇಲಾಖೆ ಮಾರ್ಗಸೂಚಿ ಅನ್ವಯ ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ನೀರು ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಅತ್ಯಗತ್ಯವಾಗಿರುವ ಸಂಪನ್ಮೂಲಗಳಲ್ಲಿ ಒಂದು. ಆಧುನಿಕ ತೋಟಗಾರಿಕೆಯಲ್ಲಿ ನೀರಿನ ಮಿತ ಬಳಕೆ ಮತ್ತು ಸಂರಕ್ಷಣೆ ಅತ್ಯಂತ ಮಹತ್ವವನ್ನು ಪಡೆದಿದ್ದು ಈ ನಿಟ್ಟಿನಲ್ಲಿ ಸೂಕ್ಷ್ಮ ನೀರಾವರಿಯ ಬಳಕೆ ಅವಶ್ಯಕವಾಗಿದೆ. ಸೂಕ್ಷ್ಮ ನೀರಾವರಿ ಪದ್ಧತಿ ಬಳಕೆಯಿಂದ ನಾಡಿನ ಜಲ ಸಂಪನ್ಮೂಲವನ್ನು ಸಂರಕ್ಷಣೆ ಹಾಗೂ ಮಿತವೆಯ ಮಾಡಬಹುದಲ್ಲದೆ ಬೆಳೆಗಳಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು.


ಸೂಕ್ಷ್ಮ ನೀರಾವರಿಯ ಮಹತ್ವವನ್ನು ಮನಗಂಡು ರಾಜ್ಯ ಸರ್ಕಾರವು 1991-92ನೇ ಸಾಲಿನಿಂದ ಕೇಂದ್ರ ಪುರಸ್ಕೃತ ಯೋಜನೆಗಳ ಅಡಿ ತೋಟಗಾರಿಕಾ ಬೆಳೆಗಳಿಗೆ ಸೂಕ್ಷ್ಮ (ಹನಿ/ತಂತುರು) ನೀರಾವರಿಯನ್ನು ಪ್ರೋತ್ಸಾಹಿಸುತ್ತಿದೆ. ಕೇಂದ್ರ ಸರ್ಕಾರವು ಸೂಕ್ಷ್ಮ ನೀರಾವರಿಯ ಮಹತ್ವವನ್ನು ಗುರುತಿಸಿ 2005-06ನೇ ಸಾಲಿನಿಂದ ಕೇಂದ್ರ ಪುರಸ್ಕೃತ ಸೂಕ್ಷ್ಮ ನೀರಾವರಿ ಯೋಜನೆಯನ್ನು ಪ್ರಾರಂಭಿಸಿರುತ್ತದೆ ತದನಂತರ ಇದನ್ನು ರಾಷ್ಟ್ರೀಯ ಸೂಕ್ಷ್ಮ ನೀರಾವರಿ ಮಿಷನ್ ಆಗಿ ಮರುನಾಮಕರಣ ಮಾಡಲಾಗಿದೆ 2014 15ನೇ ಸಾಲಿನ ಸೂಕ್ಷ್ಮ ನೀರಾವರಿ ಕಾರ್ಯಕ್ರಮವನ್ನು ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ ( National mission sustainable agriculture on farm water management (NMSA-OFWM) ದಡಿ ಅನುಷ್ಠಾನಗೊಳಿಸಲಾಗುತ್ತಿದ್ದು 2015-16 ನೇ ಸಾಲಿನಿಂದ ಈ ಕಾರ್ಯಕ್ರಮವನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಪ್ರತಿ ಹನಿ ಗೆ ಅಧಿಕ ಇಳುವರಿ (Micro irrigation) ದಡಿ ಅನುಷ್ಠಾನಗೊಳಿಸಲಾಗುತ್ತಿದೆ.


ಈ ಯೋಜನೆಯಲ್ಲಿ 2023-24ನೇ ಸಾಲಿನಲ್ಲಿ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ತೋಟಗಾರಿಕಾ ಬೆಳೆಗಳಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಅಳವಡಿಸುವ ಎಲ್ಲಾ ವರ್ಗದ ರೈತರಿಗೆ ನಿಯಮಾನುಸಾರ ಗರಿಷ್ಠ ಮಿತಿಗೆ ಒಳಪಟ್ಟು ನೀಡಲಾಗುವುದು

ಈ ಯೋಜನೆಯಲ್ಲಿ ಹನಿ ನೀರಾವರಿ ಮತ್ತು ವಿವಿಧ ರೀತಿಯ ತುಂತುರು ನೀರಾವರಿ ಘಟಕಗಳಿಗೆ ಸಹಾಯಧನ ಲಭ್ಯವಿದ್ದು ಕಾಫಿ ಟೀ ಹಾಗೂ ರಬ್ಬರ್ ಬೆಳೆಗಳನ್ನು ಹೊರತುಪಡಿಸಿ ಎಲ್ಲಾ ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಲಭ್ಯವಿರುತ್ತದೆ.

ಹೆಚ್ಚುವರಿ ನೀರಿನ ಬೇಡಿಕೆ ಇರುವ ಬೆಳೆಗಳಾದ ಬಾಳೆ ತೆಂಗು ಅಡಿಕೆ ಪಪ್ಪಾಯ ತಾಳೆ ಬೆಳೆ ತರಕಾರಿ ಮತ್ತು ಹೂವಿನ ಬೆಳೆಗಳಿಗೆ ಆದ್ಯತೆ ಮೇರೆಗೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಕ್ರಮವಹಿಸಿ ವೆಚ್ಚ ಭರಿಸುವುದು.

ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅಳವಡಿಕೆಗೆ ಪ್ರತಿ ಫಲಾನುಭವಿಗೆ ಗರಿಷ್ಠ ಐದು ಹೆಕ್ಟರ್ ಪ್ರದೇಶದವರೆಗೆ ಸಹಾಯಧನ ಲಭ್ಯವಿರುತ್ತದೆ.ಮತ್ತು ವಾಣಿಜ್ಯ ಹೂ ಬೆಳೆಗಳಿಗೆ ಗರಿಷ್ಠ 2 ಹೆಕ್ಟರ್ ವರೆಗೆ ಸಹಾಯಧನ ನೀಡಲಾಗುವುದು.

ಅಡಿಕೆ ತೆಂಗು ತೋಟಗಳಲ್ಲಿ ಮಿಶ್ರ ಬೆಳೆಗಳನ್ನು ಬೆಳೆದು ಮಿಶ್ರ ಬೆಳೆಗೆ ಹನಿ ನೀರಾವರಿ ಅಳವಡಿಸಿದ್ದಲ್ಲಿ ಅಂತಹ ರೈತರಿಗೆ ಆದ್ಯತೆ ನೀಡಲಾಗುವುದು

ಯೋಜನೆಯ ಉದ್ದೇಶ

ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಬಳಸಿ ಜಲ ಸಂಪನ್ಮೂಲವನ್ನು ಮಿತವ್ಯಯ ಮಾಡುವುದು

ರೈತರಿಗೆ ಸಹಾಯಧನ ನೀಡುವುದರ ಮೂಲಕ ಸೂಕ್ಷ್ಮ ನೀರಾವರಿಯ ಪದ್ಧತಿಯನ್ನು ರೈತರ ಜಮೀನುಗಳಲ್ಲಿ ಪ್ರೋತ್ಸಾಹಿಸಿ ಶೇಕಡ 50-70 ರಷ್ಟು ನೀರಿನ ಮಿತವೆಯ ಸಾಧಿಸುವುದಲ್ಲದೆ ವಿದ್ಯುಚ್ಛಕ್ತಿ ಮತ್ತು ಕೂಲಿ ವೆಚ್ಚವನ್ನು ಮಿತವೆಯ ಸಾಧಿಸುವುದು.

ಸೂಕ್ಷ್ಮ ನಿರಾವರಿಯಲ್ಲಿ ರಸ್ತಾವರಿ ಪದ್ಧತಿಯ ಮೂಲಕ ರಾಸಾಯನಿಕ ಗೊಬ್ಬರಗಳನ್ನು ಬೆಳೆಗಳಿಗೆ ನೀಡುವುದರ ಮೂಲಕ ಶೇಕಡ 30- 40 ರಷ್ಟು ರಾಸಾಯನಿಕ ಗೊಬ್ಬರಗಳ ಮಿತವ್ಯಯ ಸಾಧಿಸುವುದು

ಬೆಳೆಗಳಲ್ಲಿ ಶೇಕಡ 30-100ರಷ್ಟು ಹೆಚ್ಚು ಇಳುವರಿ ಹಾಗೂ ಉತ್ಪಾದಕತೆ ಸಾಧಿಸುವುದು .


ಯೋಜನೆಯ ಮುಖ್ಯ ಘಟಕ ಕಾರ್ಯಕ್ರಮಗಳು

ಹನಿ ನೀರಾವರಿ/ತುಂತುರು ನೀರಾವರಿ

ರಾಜ್ಯದ್ಯಂತ ಎಲ್ಲಾ ವರ್ಗದ ರೈತರಿಗೆ ಹನಿ ನೀರಾವರಿ ಪ್ರತಿ ಫಲಾನುಭವಿಗೆ ಗರಿಷ್ಠ ಐದು ಹೆಕ್ಟರ್ ಪ್ರದೇಶದ ವರೆಗೆ ಸಹಾಯಧನ ನೀಡಲಾಗುವುದು ಹಾಗೂ ತರಕಾರಿ ಮತ್ತು ಹೂ ಬೆಳೆಗಳಿಗೆ ಗರಿಷ್ಠ ಎರಡು ಹೆಕ್ಟರ್ ಪ್ರದೇಶಕ್ಕೆ ಸಹಾಯಧನ ನೀಡಲಾಗುವುದು.


ಅನುದಾನ ಮತ್ತು ಸಹಾಯಧನ

2022 23ನೇ ಸಾಲಿನ ಭಾರತ ಸರ್ಕಾರದ ಮಾರ್ಗಸೂಚಿ ಪ್ರಕಾರ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ರಾಜ್ಯದ ವಿವಿಧ ವರ್ಗದ ರೈತರಿಗೆ ಅಂದರೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಶೇಕಡ 55 ರಷ್ಟು ಹಾಗೂ ಇತರೆ ರೈತರಿಗೆ ಶೇಕಡ 45ರಷ್ಟು ಸಹಾಯಧನದ ಮಾದರಿಯಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಈಗಾಗಲೇ ನೀಡುತ್ತಿರುವ ಅನುಪಾತದಲ್ಲಿ 60-40 ನೀಡಲಾಗುತ್ತದೆ ಆದ್ದರಿಂದ ಭಾರತ ಸರ್ಕಾರದ ಮಾರ್ಗಸೂಚಿ ಅನ್ವಯ ಕೇಂದ್ರ ಹಾಗೂ ರಾಜ್ಯ ಪಾಲಿನ ಅನುಪಾತದ ವಿವರ ಈ ಕೆಳಗಿನಂತಿದೆ


ಸಣ್ಣ ಅತಿ ಸಣ್ಣ

ಕೇಂದ್ರದ ಪಾಲು -33%

ರಾಜ್ಯದ ಪಾಲು -22%

ಒಟ್ಟು -55%


ಇತರೆ ರೈತರು

ಕೇಂದ್ರದ ಪಾಲು-27%

ರಾಜ್ಯದ ಪಾಲು -27%

ಒಟ್ಟು -45%


ಎರಡು ಹೆಕ್ಟೇರುವರೆಗಿನ ಸಹಾಯಧನ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ

ಕೇಂದ್ರದ ಪಾಲು -33%

ರಾಜ್ಯದ ಪಾಲು-57%

ಒಟ್ಟು -90%

ಇತರೆ

ಕೇಂದ್ರದ ಪಾಲು -33%

ರಾಜ್ಯದ ಪಾಲು-42%

ಒಟ್ಟು -75%


ಎರಡು ಹೆಕ್ಟರ್ ಮೇಲ್ಪಟ್ಟ ಸಹಾಯಧನ

ಎಲ್ಲಾ ವರ್ಗದ ರೈತರಿಗೆ

ಕೇಂದ್ರದ ಪಾಲು-27%

ರಾಜ್ಯದ ಪಾಲು-18%

ಒಟ್ಟು -45%


ಫಲಾನುಭವಿಗಳ ಅರ್ಹತೆ

ಫಲಾನುಭವಿಗಳು ರೈತರಾಗಿದ್ದು ಜಮೀನು ಅವರ ಹೆಸರಿನಲ್ಲಿರಬೇಕು ಜಂಟಿ ಖಾತೆಯಾಗಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು (ತಂದೆ ಅಥವಾ ತಾಯಿಯ ಹೆಸರಿನಲ್ಲಿ ಜಮೀನಿದ್ದು ಅವರು ಮರಣ ಹೊಂದಿದ್ದಲ್ಲಿ ಮಾತ್ರ ಗ್ರಾಮದ ದೃಢೀಕರಿಸಿ ಕುಟುಂಬದ ಇತರೆ ಸದಸ್ಯರು ಒಪ್ಪಿಗೆ ಪಡೆದು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸಬಹುದು)

ಮಹಿಳೆಯರ ಹೆಸರಿನಲ್ಲಿ ಖಾತೆ ಹೊಂದಿದ್ದಲ್ಲಿ ಮಹಿಳಾ ಖಾತೆದಾರರೇ ಅರ್ಜಿ ಸಲ್ಲಿಸಬೇಕು (ಕುಟುಂಬದ ಇತರೆ ಸದಸ್ಯರ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಯಾವುದೇ ಕಾರಣಕ್ಕೂ ಮಾನ್ಯ ಮಾಡಲಾಗುವುದಿಲ್ಲ )

ಫಲಾನುಭವಿಗಳು ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಾಗಿರಬೇಕು ಅಥವಾ ತೋಟಗಾರಿಕೆ ಬೆಳೆ ಬೆಳೆಯುವ ಆಸಕ್ತಿ ಹೊಂದಿರಬೇಕು ಹಾಗೂ ಸೂಕ್ಷ್ಮ ನೀರಾವರಿ ಅಳವಡಿಸಿದ ನಂತರ ತೋಟಗಾರಿಕೆ ಬೆಳೆಗಳನ್ನೇ ಬೆಳೆಯಬೇಕು

ಫಲಾನುಭವಿಗಳು ನೀರಾವರಿ ಮೂಲವನ್ನು ಹೊಂದಿರಬೇಕು ಹಾಗೂ ಸೂಕ್ಷ್ಮ ನೀರಾವರಿಗೆ ಯೋಗ್ಯವಿರುವಂತಹ ನೀರನ್ನು ಹೊಂದಿರಬೇಕು ಜೊತೆಗೆ ಸೂಕ್ಷ್ಮ ನೀರಾವರಿ ಘಟಕಗಳು ಕಾರ್ಯನಿರ್ವಹಿಸಲು ಅವಶ್ಯ ಇರುವ ವಿದ್ಯುತ್ ಶಕ್ತಿ ಅಥವಾ ಇತರೆ ಶಕ್ತಿ ಮೂಲಗಳನ್ನು ಹೊಂದಿರಬೇಕು (ತನ್ನ ಸ್ವಂತ ನಿರಾವರಿ ಮೂಲ ಇಲ್ಲದಿದ್ದಲ್ಲಿ ಬೇರೆ ರೈತರಿಂದ ಈ ಸಂಬಂಧ ಒಪ್ಪಿಗೆ ಪತ್ರ ಪಡೆದು ಸಲ್ಲಿಸಬೇಕು )

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ಈ ಮೇಲೆ ತಿಳಿಸಿರುವಂತೆ ಗರಿಷ್ಠ ಎರಡು ಹೆಟ್ಟಿರುವರೆಗೆ ಶೇಕಡ 90ರಷ್ಟು ಸಹಾಯಧನ ನೀಡಲು ಅವಕಾಶವಿರುವುದರಿಂದ ಸದರಿ ಪಂಗಡಗಳಿಗೆ ಸೇರಿರುವ ಬಗ್ಗೆ ಆರ್‌ಡಿ ಸಂಖ್ಯೆ ಇರುವಂತಹ ಜಾತಿ ಪ್ರಮಾಣ ಪತ್ರವನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ಕಡ್ಡಾಯವಾಗಿ ಸಲ್ಲಿಸಬೇಕು.

ಇತರೆ ರೈತರಿಗೆ ಈ ಮೇಲೆ ತಿಳಿಸಿರುವಂತೆ ಗರಿಷ್ಠ ಎರಡು ಹೆಕ್ಟರ್ ವರೆಗೆ ಶೇಕಡ 75 ರಷ್ಟು ಸಹಾಯಧನ ನೀಡಲು ಅವಕಾಶವಿರುತ್ತದೆ

ಎಲ್ಲಾ ವರ್ಗದ ರೈತರಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನ್ವಯ ಎರಡು ಹೆಕ್ಟರ್ ಮೇಲ್ಪಟ್ಟು 5 ಹೆಕ್ಟರ್ ಇರುವರೆಗೂ ಶೇಕಡ 45ರಷ್ಟು ಸಹಾಯಧನವನ್ನು ಪಡೆಯಬಹುದು


ಅರ್ಜಿ ಸಲ್ಲಿಸುವ ವಿಧಾನ

ರೈತರು ಸೂಕ್ಷ್ಮ ನೀರಾವರಿ ಯೋಜನೆಯ ಸಹಾಯಕ್ಕಾಗಿ farmers registration and unified beneficiary information system (FRUITS) ತಂತ್ರಾಂಶದಲ್ಲಿ ಕಡ್ಡಾಯವಾಗಿ ನೋಂದಣಿ ಹೊಂದಿರಬೇಕಾಗಿರುತ್ತದೆ ಹಾಗೂ Horticulture management application for scheme implementation for regulating utilisation of benefits(HASIRU) ತಂತ್ರಾಂಶದ ಮೂಲಕ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಪಡೆಯುವುದು

20223 ನೇ ಸಾಲಿನ ಮಾರ್ಗಸೂಚಿ ಹಾಗೂ ಅರ್ಜಿ ಇತರೆ ನಮೂನೆಗಳನ್ನು ತೋಟಗಾರಿಕಾ ಇಲಾಖೆ ವೆಬ್ಸೈಟ್ http://horticulturedir.karnataka.gov in/ ನಲ್ಲಿ ನೀಡಲಾಗಿದೆ. ಆದ್ದರಿಂದ ಅರ್ಜಿಗಳನ್ನು ಡೌನ್ ಲೋಡ್ ಮಾಡಿಕೊಂಡು ಸಹಾಯಧನ ಪಡೆದುಕೊಳ್ಳಲು ಸಲ್ಲಿಸಬಹುದು.

ಅರ್ಜಿದಾರರು ಈ ಕೆಳಕಂಡ ವಿವರ ಹಾಗೂ ದಾಖಲಾತಿಗಳನ್ನು ಅರ್ಜಿಯೊಂದಿಗೆ ತಾಲೂಕು ಕಚೇರಿಗಳಲ್ಲಿ ಸಲ್ಲಿಸಬೇಕು

ನಿಗದಿತ ನಮೂನೆಯಲ್ಲಿ ನೋಂದಣಿ ಅರ್ಜಿ( ಆನ್ಲೈನ್ ಅಥವಾ ಇಲಾಖೆಯಲ್ಲಿ ಲಭ್ಯವಿರುವ ಅರ್ಜಿ )

ವೈಯಕ್ತಿಕ ವಿವರ ಹಾಗೂ ಮೊಬೈಲ್ ಅಥವಾ ದೂರವಾಣಿ ಸಂಖ್ಯೆ

ಪಹಣಿ

ಪಹಣಿಯಲ್ಲಿ ಬೆಳೆಯನ್ನು ನಮೂದಿಸದೆ ಇದ್ದಲ್ಲಿ ಕಂದಾಯ ಇಲಾಖೆಯಿಂದ ಡಿಜಿಟಲ್ ಬೆಳೆ ದೃಢೀಕರಣ ಪತ್ರ ಪಡೆಯುವುದು ( ಕಂದಾಯ ಇಲಾಖೆಯಿಂದ ನೀಡಲಾದ ಬೆಳೆ ದೃಢೀಕರಣ ಪತ್ರವನ್ನು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು crop survey ವರದಿಯಿಂದ ಖಾತರಿಪಡಿಸಿಕೊಳ್ಳಬೇಕು )

ನೀರಿನ ಮೂಲದ ವಿವರ ( ಸ್ವತಹ ನೀರಿನ ಮೂಲ ಹೊಂದದೇ ಇದ್ದಲ್ಲಿ ಇತರರಿಂದ ನೀರು ಪಡೆಯುವ ಬಗ್ಗೆ ಒಪ್ಪಿಗೆ ಪತ್ರ ಸಲ್ಲಿಸುವುದು )

ನೀರು ಅಥವಾ ವಿದ್ಯುತ್ ಶಕ್ತಿ ಹಾಗೂ ಇತರೆ ಶಕ್ತಿಗಳ ಮೂಲಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಾತರಿಪಡಿಸಿಕೊಳ್ಳಬೇಕಾಗಿರುತ್ತದೆ

ಮಣ್ಣು ಮತ್ತು ನೀರು ವಿಶ್ಲೇಷಣೆ ಪ್ರಮಾಣ ಪತ್ರ ಸಲ್ಲಿಸುವುದು ( ಇಲಾಖೆಯ ಜೈವಿಕ ಕೇಂದ್ರಗಳಿಂದ ಪಡೆಯುವುದು ಅಥವಾ ಸರ್ಕಾರಿ ಸೌಮ್ಯ ಅಥವಾ ಸರ್ಕಾರಿ ಅಂಗೀಕೃತ ಸಂಸ್ಥೆಗಳಿಂದ )

ಆಧಾರ್ ಕಾರ್ಡ್ ಪ್ರತಿ

ಇಲಾಖಾ ನೊಂದಾಯಿತ ಕಂಪನಿಯ ಇಂಜಿನಿಯರ್ ಅವರಿಂದ ದೃಢೀಕರಿಸಲ್ಪಟ್ಟ ವಿನ್ಯಾಸ ನೀಡುವುದು

ದರ ಪಟ್ಟಿಯನ್ನು ಹನಿ ಅಥವಾ ತುಂತುರು ನೀರಾವರಿ ಘಟಕ ಅಳವಡಿಸಿದ ಇಲಾಖೆ ಅನುಮೋದಿತ ಕಂಪನಿಯವರಿಂದ ಮಾತ್ರ ಪಡೆಯುವುದು.

Pre sanction order ನಲ್ಲಿ ನಮೂದಿಸಿರುವಂತೆ ರೈತರವಂತಿಕೆಯನ್ನು ಸಂಬಂಧಿತ ಸೂಕ್ಷ್ಮ ನೀರಾವರಿ ಕಂಪನಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಿರುವ ಬಗ್ಗೆ ಆನ್ಲೈನ್ ಪೇಮೆಂಟ್ ಡೀಟೇಲ್ಸ್ ಅನ್ನು ತಂತ್ರಾಂಶದಲ್ಲಿ ನಮೂದಿಸಿ ಪ್ರತಿಯನ್ನು ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅವರ ಕಚೇರಿಗೆ ಸಲ್ಲಿಸುವುದು

ಫಲಾನುಭವಿಯ ಬ್ಯಾಂಕ್ ಸಂಖ್ಯೆ ಐಎಫ್ಎಸ್ ಸಿ ಕೋಡ್ ಇತ್ಯಾದಿಗಳನ್ನು ಸಲ್ಲಿಸುವುದು ಸದರಿ ಖಾತೆಯೊಂದಿಗೆ ಆಧಾರ್ ಸಂಖ್ಯೆ ಲಿಂಕ್ ಆಗಿರಬೇಕು

ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅಳವಡಿಸಿ ತಾವು ಆಗಲಿ ಅಥವಾ ತಮ್ಮ ಕುಟುಂಬದ ಸದಸ್ಯರಾಗಲಿ ಈ ಹಿಂದೆ ಸರ್ಕಾರದಿಂದ ಸೌಲಭ್ಯಗಳನ್ನು ಪಡೆದಿರುವ ಅಥವಾ ಪಡೆಯದೆ ಇರುವ ಬಗ್ಗೆ ಘೋಷಣೆ ಪತ್ರ ಸಲ್ಲಿಸುವುದು

ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಫಲಾನುಭವಿಗಳು ಮೇಲಿನ ಎಲ್ಲಾ ದಾಖಲಾತಿಗಳೊಂದಿಗೆ ಆರ್ ಡಿ ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರವನ್ನು ಸಹ ಕಡ್ಡಾಯವಾಗಿ ನೀಡುವುದು 


ಅಣಬೆ ಕೃಷಿ


 ಅಣಬೆ ಕೃಷಿಯನ್ನು ಉತ್ತೇಜಿಸಲು ಹಣಬೆ ಉತ್ಪಾದನಾ ಘಟಕಗಳನ್ನು ಖಾಸಗಿ ವಲಯದಲ್ಲಿ ಸ್ಥಾಪಿಸಲು ಒಟ್ಟು ವೆಚ್ಚದ ಶೇಕಡ 40ರ ಗರಿಷ್ಠ 8 ಲಕ್ಷ ರೂಗಳ ವರೆಗೆ ಸಹಾಯಧನ ನೀಡಲು ಅವಕಾಶವಿದೆ.

 ಸಂರಕ್ಷಿತ ಬೇಸಾಯ

 ಸಂರಕ್ಷಿತ ಬೇಸಾಯ ಪದ್ಧತಿಗಳನ್ನು ಅಳವಡಿಸಿ ಉತ್ಕೃಷ್ಟ ಗುಣಮಟ್ಟದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ವಿವಿಧ ವಿನ್ಯಾಸಗಳ ಗರಿಷ್ಠ ನಾಲ್ಕು ಸಾವಿರ ಚದರ ಮೀಟರ್ ಹಸಿರು ಮನೆ ಘಟಕಗಳ ನಿರ್ಮಾಣಕ್ಕಾಗಿ ಶೇಕಡ 50ರಂತೆ ಗರಿಷ್ಠ 447 ಪ್ರತಿ ಚದರ ಮೀಟರ್ ವರೆಗೆ ಸಹಾಯಧನ ನೀಡಲು ಅವಕಾಶವಿದೆ.

 ಸಮಗ್ರ ಪೋಷಕಾಂಶ ಕೀಟ ರೋಗಗಳ ನಿರ್ವಹಣೆ

 ತೋಟಗಾರಿಕೆ ಬೆಳೆಗಳಿಗಾಗಿ ಸಮಗ್ರ ಪೋಷಕಾಂಶ ಹಾಗೂ ಕೀಟ ರೋಗಗಳ ನಿರ್ವಹಣೆಗೆ ಅಗತ್ಯವಾದ ಪರಿಕರಗಳನ್ನು ಖರೀದಿಸಿದ ರೈತರಿಗೆ ಶೇಕಡ 30ರಂತೆ ಪ್ರತಿ ಹೆಕ್ಟರಿಗೆ 1700 ರಂತೆ ಕನಿಷ್ಠ ನಾಲ್ಕು ಹೆಕ್ಟರ್ ಪ್ರದೇಶಕ್ಕೆ 4800 ಗಳ ವರೆಗೆ ಸಹಾಯಧನ ನೀಡಲು ಅವಕಾಶವಿದೆ 


 ಜೇನು ಸಾಕಾಣಿಕೆ

ತೋಟಗಾರಿಕೆ ಬೆಳೆಗಳಲ್ಲಿ ಪರಾಗ ಸ್ಪರ್ಶವನ್ನು ಹೆಚ್ಚಿಸಲು ಜೇನುಕಲ್ಲು ಜೇನುಪೆಟ್ಟಿಗೆ ಹಾಗೂ ಜೇನುಗಾರಿಕೆಗೆ ಅಗತ್ಯವಿರುವ ಜೇನು ಸಲಕರಣೆಗಳನ್ನು ಖರೀದಿಸಲು ರೈತರಿಗೆ ಶೇಕಡ 40ರಂತೆ 1600 ಜೇನು ಕಾಲೋನಿ ಮತ್ತು ಜೇನುಪೆಟ್ಟಿಗೆ ಹಾಗೂ ಜೇನು ಸಲಕರಣೆಗೆ 8000 ರೂ ವರೆಗೆ ಸಹಾಯಧನ ನೀಡಲಾಗುತ್ತದೆ.

 ತೋಟಗಾರಿಕೆಯಲ್ಲಿ ಯಾಂತ್ರಿಕೀಕರಣ

 ತೋಟಗಾರಿಕೆ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರ ಕೊರತೆ ನಿವಾರಿಸಿ ಕಡಿಮೆ ಸಮಯದಲ್ಲಿ ಹೆಚ್ಚಿನ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅಗತ್ಯವಾದ ಕೃಷಿ ಉಪಕರಣಗಳು ಸ್ವಯಂ ಚಾಲಿತ ಯಂತ್ರೋಪಕರಣಗಳು 20 ಎಚ್‌ಪಿ ಗಿಂತ ಕಡಿಮೆ ಸಾಮರ್ಥ್ಯದ ಟ್ರ್ಯಾಕ್ಟರ್ ಹಾಗೂ ಪವರ್ ಟಿಲ್ಲರ್ ಗಳನ್ನು ಖರೀದಿಸಲು ರೈತರಿಗೆ ಶೇಕಡ 75,000 ವರೆಗೆ ಸಹಾಯಧನ ನೀಡಲು ಅವಕಾಶವಿದೆ.

 ಕೊಯ್ಲು ತರ ನಿರ್ವಹಣೆ

 ಹಣ್ಣು ತರಕಾರಿ ಹಾಗೂ ಹೂವಿನ ಬೆಳೆಗಳು ಬಹುಬೇಗನೆ ಹಾಳಾಗುವ ಉತ್ಪನ್ನಗಳಾಗಿದ್ದು ಇವುಗಳ ಸಮರ್ಪಕ ನಿರ್ವಹಣೆಗಾಗಿ ವಿವಿಧ ಮೂಲ ಸೌಕರ್ಯಗಳನ್ನು ಸ್ಥಾಪಿಸಿ ತೋಟಗಾರಿಕೆ ಉತ್ಪನ್ನಗಳ ನಿರ್ವಹಣೆ ವಿಂಗಡಣೆ ಶೇಖರಣೆ ಮತ್ತು ಮೌಲ್ಯವರ್ಧನೆ ಮಾಡುವುದರೊಂದಿಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸಲು ರೈತರು ತಮ್ಮ ಜಮೀನಿನಲ್ಲಿ ಪ್ಯಾಕ್ ಹೌಸ್ ನಿರ್ಮಾಣ ಮಾಡಲು ಪ್ರತಿ ಘಟಕಕ್ಕೆ ಗರಿಷ್ಠ 2 ಲಕ್ಷ ರೂ ವರೆಗೆ ಸಹಾಯಧನ ನೀಡಲಾಗುತ್ತದೆ.

 ಮಾರುಕಟ್ಟೆಗಳಲ್ಲಿ ಮೂಲಸೌಕರ್ಯಗಳ ಸ್ಥಾಪನೆ

ರೈತರು ಬೆಳೆದ ತೋಟಗಾರಿಕೆ ಉತ್ಪನ್ನಗಳಿಗೆ ಸೂಕ್ತ ರೀತಿಯ ಮಾರಾಟದ ವ್ಯವಸ್ಥೆ ಕಲ್ಪಿಸಿ ಉತ್ತಮ ಬೆಲೆ ದೊರಕಿಸಿಕೊಡಲು ಅಗತ್ಯವಾದ ವಿವಿಧ ಮಾದರಿಯ ಗ್ರಾಮೀಣ ಮಾರುಕಟ್ಟೆ ನಿರ್ಮಾಣಕ್ಕಾಗಿ ಶೇಕಡ 40ರಂತೆ ಗರಿಷ್ಠ 10 ಲಕ್ಷ ರೂಗಳ ಸಹಾಯದ ನೀಡಲಾಗುತ್ತದೆ.

Horticulture subsidy-ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ಯೋಜನೆಗೆ ಅರ್ಜಿ ಆಹ್ವಾನ

ತೋಟಗಾರಿಕೆ ಬೆಳೆಗಳ ಉತ್ಪಾದನೆ, ಉತ್ಪಾದಕತೆಯನ್ನು ಹೆಚ್ಚಿಸಿ, ಸಂಸ್ಕರಣೆ, ಶೇಖರಣೆ, ಸಾಗಾಣಿಕೆ ಹಾಗೂ ಮಾರುಕಟ್ಟೆ ವ್ಯವಸೆಯನ್ನು ಉತ್ತಮಗೊಳಿಸಿ ತೋಟಗಾರಿಕೆ ಉದ್ಯಮದ ಸಮಗ್ರ ಅಭಿವೃದ್ಧಿಯನ್ನು ಸುಧಾರಿಸುವ ಉದ್ದೇಶದಿಂದ ರಾಷ್ಟ್ರೀಯ ತೋಟಗಾರಿಕೆ ಮಂಡಳಿಯು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ.

2 ಹೆಕ್ಟೇರ್ (5.00 ಎಕ್ರೆ) ಗಿಂತ ಹೆಚ್ಚು ಪ್ರದೇಶದಲ್ಲಿ ಹೊಸ ತೋಟಗಳ ರಚನೆಗಾಗಿ ವಿವಿಧ ಘಟಕಗಳಾದ ಸಸ್ಯ ಉತ್ಪಾದನೆ, ಪ್ರದೇಶ ವಿಸ್ತರಣೆ, ನೀರಾವರಿ, ರಸಾವರಿ, ನಿಖರ ಬೇಸಾಯ ಮುಂತಾದವುಗಳನ್ನು ಒಳಗೊಂಡ ತೋಟ ಆಭಿವೃದ್ಧಿಗಾಗಿ ಶೆ.40 ರಂತೆ ಗರಿಷ್ಠ ರೂ. 30.00 ಲಕ್ಷ ಪ್ರತಿ ಯೋಜನೆಗೆ ಸಾಲ ಆಧಾರಿತ ಸಹಾಯಧನ ಹಾಗೂ ಸಂರಕ್ಷಿತ ಬೇಸಾಯದಡಿ 2500 ಚ.ಮೀ.ಗೂ ಹೆಚ್ಚಿನ ಆಧುನಿಕ ರೀತಿಯ ಹಸಿರು ಮನೆ ನಿರ್ಮಾಣಕ್ಕೆ, ಶೇ. 50 ರ ದರದಲ್ಲಿ ಗರಿಷ್ಠ ರೂ. 56.00 ಲಕ್ಷ ಪ್ರತಿ ಯೋಜನೆಗೆ ಸಾಲ ಆಧಾರಿತ ಸಹಾಯಧನ ಸೌಲಭ್ಯ ಲಭ್ಯವಿದೆ.

ಸಮಗ್ರ ಕೊಯ್ಲೋತ್ತರ ನಿರ್ವಹಣೆಗಾಗಿ ಪ್ಯಾಕ್ ಹೌಸ್, ಹಣ್ಣು ಮಾಗಿಸುವ ಘಟಕ, ಶೀತಲ ವಾಹನ ಖರೀದಿ, ಚಿಲ್ಲರೆ ಮಾರಾಟ ಮಳಿಗೆ, ಶೀತಲ ಘಟಕ, ಪ್ರಾಥಮಿಕ ಸಂಸ್ಕರಣೆ ಘಟಕಗಳ ನಿರ್ಮಾಣಕ್ಕೆ ಗರಿಷ್ಠ ರೂ. 50.75 ಲಕ್ಷ ಸಾಲ ಆಧಾರಿತ ಪ್ರತಿ ಘಟಕಗಳಿಗೆ ಶೇ. 35 ರ ದರದಲ್ಲಿ ಹಾಗೂ ತೋಟಗಾರಿಕೆ ಉತ್ಪನ್ನಗಳನ್ನು ಶೇಖರಿಸಲು ವಿವಿಧ ಸಾಮರ್ಥ್ಯದ ಶೀತಲ, ಉಗ್ರಾಣಗಳ ನಿರ್ಮಾಣ, ವಿಸ್ತರಣೆ ಹಾಗೂ ಆಧುನೀಕರಣಗೊಳಿಸಲು ಸಹ ಶೇ. 35ರ ಸಹಾಯಧನ ಸೌಲಭ್ಯವಿದ್ದು, ಈ ಯೋಜನೆಗಳನ್ನು ವೈಯುಕ್ತಿಕ ಅಥವಾ ಸಂಸ್ಥೆಗಳು ಪಡೆಯಬಹುದಾಗಿದೆ.


ಸರ್ಕಾರಿ ಸಂಸ್ಥೆಗಳಲ್ಲಿ, ಉತ್ತಮ ಜಾತಿಯ ಗುಣಮಟ್ಟದ ಸಸಿಗಳ ಉತ್ಪಾದನೆಯಲ್ಲಿ ತಾಯಿ ಮರಗಳ ಘಟಕ, ಹಸಿರುಮನೆ, ಅಂಗಾಂಶ ಕೃಷಿ ಪ್ರಯೋಗಾಲಯ, ವೈರಸ್ ಇಂಡೆಕ್ಸಿಂಗ್ ಅನುಕೂಲ, ಗುಣಮಟ್ಟ ಧೃಢೀಕರಣ ಪ್ರಯೋಗಾಲಯ ಮುಂತಾದವುಗಳ ಸ್ಥಾಪನೆಗಾಗಿ ಶೇ.100 ರಷ್ಟು ಸಹಾಯಧನ ಸೌಲಭ್ಯವಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Post a Comment

Previous Post Next Post
CLOSE ADS
CLOSE ADS
×