ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನಷ್ಟು ಕಠಿಣ ನಿಯಮ; ಏನೇನು ಹೊಸ ರೂಲ್ಸ್‌

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನಷ್ಟು ಕಠಿಣ ನಿಯಮ; ಏನೇನು ಹೊಸ ರೂಲ್ಸ್‌

 ರಾಜ್ಯದಲ್ಲಿಎಸ್ಸೆಸ್ಸೆಲ್ಸಿ ಪರೀಕ್ಷಾ ಮಾರ್ಗಸೂಚಿ ಬದಲಾವಣೆಗಳೊಂದಿಗೆ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಒಂದಷ್ಟು ಹೊಸ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.



ಇದರಿಂದ ಪರೀಕ್ಷಾ ಪಾವಿತ್ರ್ಯತೆ ಉಳಿಯಲಿದೆ ಎಂಬುದು ಒಂದಡೆಯಾದರೆ, ಇನ್ನೊಂದೆಡೆ ಪೊಲೀಸರನ್ನಿಟ್ಟು ಪರೀಕ್ಷೆ ನಡೆಸುವುದು, ಬಿಗಿ ಬಂದೋಬಸ್ತ್ ಹತ್ತಾರು ನಿಯಮಗಳನ್ನು ಹೇರಿ ಪರೀಕ್ಷೆ ನಡೆಸಲು ಮುಂದಾಗಿರುವ ಕ್ರಮಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

ಬದಲಾವಣೆ ಏಕೆ?

ಗ್ರಾಮೀಣ ಭಾಗದಲ್ಲಿ ನಕಲು, ಉತ್ತರ ಕರ್ನಾಟಕದ ಕೆಲವೆಡೆ ಸಾಮೂಹಿಕ ನಕಲು ಅಕ್ರಮ ಜತೆಗೆ, ಶಿಕ್ಷಕರೇ ಉತ್ತರಗಳನ್ನು ಹೇಳಿ ಕೊಡುತ್ತಿದ್ದಾರೆಂಬ ಆರೋಪ ಮುತ್ತಿಕೊಂಡಿವೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಫಲಿತಾಂಶವು ವರ್ಷದಿಂದ ವರ್ಷಕ್ಕೆ ಬದಲಾವಣೆಯಾಗುತ್ತಿದೆ. ಕಾಲೇಜು ಶಿಕ್ಷಣ ಇಲಾಖೆಗೂ ಇದರಿಂದ ಸಮಸ್ಯೆಯಾಗುತ್ತಿದೆ ಎಂಬೆಲ್ಲ ಕಾರಣಕ್ಕೆ ಪರೀಕ್ಷೆಯ ಕಟ್ಟುಪಾಡುಗಳನ್ನು ಬದಲಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ.


ಎಸ್ಸೆಸ್ಸೆಲ್ಸಿ ಪರೀಕ್ಷೆ ನಕಲು ಸಂಬಂಧ ಈಗಾಗಲೇ 38 ಶಿಕ್ಷಕರು ಅಮಾನತುಗೊಂಡಿದ್ದಾರೆ. ವಿಜಯಪುರ, ಯಾದಗಿರಿ, ಬೆಳಗಾವಿ, ಬೀದರ್‌, ಚಿಕ್ಕೋಡಿ ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ನಕಲು ನಡೆಯುತ್ತಿದೆ ಎಂಬೆಲ್ಲಅಂಶ ಇಲಾಖೆಯ ಸಭೆಯಲ್ಲಿ ಬಹಿರಂಗೊಂಡಿವೆ.

ಏನೇನು ಹೊಸ ರೂಲ್ಸ್‌?

ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ13, ಶಾಲೆ ಮುಖ್ಯೋಪಾಧ್ಯಯರ ಹಂತದಲ್ಲಿ4 ಹಾಗೂ ಡಯಟ್‌ ಹಂತದಲ್ಲಿ2 ನಿಯಮ ಜಾರಿಗೆ ಶಿಕ್ಷಣ ಇಲಾಖೆ ಮುಂದಾಗಿದೆ. ಇದಕ್ಕಾಗಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ‍್ಯದರ್ಶಿಗಳ ಅಧ್ಯಕ್ಷತೆಯಲ್ಲಿಇತ್ತಿಚೆಗೆ ಸಭೆಯು ನಡೆದಿದೆ.


ಮುಂದಿನ ವರ್ಷದಿಂದ ಜಾರಿಗೆ ಬರುವಂತೆ (23-24ನೇ ಸಾಲಿಗೆ) ರಾಜ್ಯದಲ್ಲಿನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳನ್ನು ನೆಲಮಹಡಿಯಿಂದ ಮೊದಲನೆ ಮಹಡಿಗೆ ಸ್ಥಳಾಂತರ ಮಾಡುವುದು, ವಿದ್ಯಾರ್ಥಿಗಳ ಪೋಷಕರು ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಕೆಲಸದಲ್ಲಿ ಭಾಗಿಯಾಗದಂತೆ ನೋಡಿಕೊಳ್ಳುವುದು, ಮಾರ್ಗದರ್ಶನಕ್ಕಾಗಿ ತಾಲೂಕು ಹಂತದಲ್ಲಿ ಸಹಾಯವಾಣಿ ತೆರೆಯುವುದು, ಶಿಕ್ಷಕರ ಬದಲಿಗೆ ಪಿಡಿಒಗಳನ್ನು ಪರೀಕ್ಷಾ ಕೇಂದ್ರಗಳ ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನಾಗಿ ನೇಮಿಸುವುದು, ಪೊಲೀಸ್‌ ಇಲಾಖೆಯ ಸಿಬ್ಬಂದಿಗಳು ಮಫ್ತಿಯಲ್ಲಿ ಪರೀಕ್ಷೆಯ ವಿಡಿಯೋ ರೆರ್ಕಾಡ್‌ ಮಾಡುವುದು, ಪರೀಕ್ಷೆ ದಿನಗಳಂದು ಹೈಸ್ಕೂಲ್‌ ಶಿಕ್ಷಕರನ್ನು ಡೆಯಟ್‌ ಹಂತದಲ್ಲಿತರಬೇತಿಗೆ ನಿಯೋಜಿಸಿ, ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕನ್ನಾಗಿ ನೇಮಿಸುವುದು, ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿಯಲ್ಲಿನ ಸಿಸಿ ಟಿವಿ ಮತ್ತು ಡಿವಿಆರ್‌ಗಳನ್ನು ಡಯಟ್‌ ಅಧಿಕಾರಿಗಳು ಪರೀಶಿಲಿಸಬೇಕು. ಪರೀಕ್ಷಾ ಬಂಡಲ್‌ಗಳನ್ನು ತೆರೆಯುವುದು, ಕೊನೆಯಲ್ಲಿಸೀಲ್‌ ಮಾಡುವುದನ್ನು ವೆಬ್‌ ಕಾಸ್ಟಿಂಗ್‌ ಮಾಡುವುದು, ಪರೀಕ್ಷಾ ಕೇಂದ್ರಗಳ ಅದೇ ಶಾಲೆಯ ಯಾರೊಬ್ಬರನ್ನು ಕರ್ತವ್ಯಕ್ಕೆ ನಿಯೋಜಿಸಿಕೊಳ್ಳದಿರುವುದು , ಡ್ರೋನ್‌ ಕ್ಯಾಮಾರಾ ಹಾರಾಟ ನಡೆಸುವುದು ಸೇರಿದಂತೆ ಬಿಗಿ ಬಂದೋಬಸ್ತ್‌ನಲ್ಲಿಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ.

ವಿರೋಧಗಳೇನು?

ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಗನ್‌ ಪಾಯಿಂಟ್‌ನಲ್ಲಿಟ್ಟು ಪರೀಕ್ಷೆ ಬರೆಸುವುದು ಎಷ್ಟು ಸರಿ?ಅಷ್ಟು ಸೆಕ್ಯೂರಿಟಿಯಲ್ಲಿ ಪರೀಕ್ಷೆ ಬರೆಸುವ ಅವಶ್ಯಕತೆಯಾದರೂ ಏನಿದೆ? ಎಂಬ ಅಸಮಾಧಾನ ಕೆಲವರಿಂದ ವ್ಯಕ್ತವಾಗಿದೆ

ಎಂಬಿಬಿಎಸ್‌, ಎಂಜಿನಿಯರಿಂಗ್‌ ಪರೀಕ್ಷೆಗಳನ್ನೆ ಆಯಾ ಕಾಲೇಜು, ಆಯಾ ಬೋಧಕರ ನೇತೃತ್ವದಲ್ಲೇ ನಡೆಸಲಾಗುತ್ತದೆ. ಹೀಗಿರುವಾಗ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಏಕೆ ಇಷ್ಟೊಂದು ನಿಯಮ. ಸರಕಾರದ ದಾಖಲೆಗಳಿಗೆ, ಕ್ಲೆರಿಕಲ್‌ ಪೋಸ್ಟ್‌ಗಳಿಗೆ ಏಳನೇ ತರಗತಿಯೇ ಸಾಕು. ಇನ್ನು ಪೊಲೀಸು, ಎಸ್‌ಡಿಎ ಕೆಲಸಕ್ಕೆ ದ್ವಿತಿಯ ಪಿಯುಸಿ ಪಾಸಾಗಿದ್ದರೆ ಸಾಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವ ಕೆಲಸಕ್ಕೂ ಮಾನದಂಡವೇ ಅಲ್ಲ. ಹೀಗಿರುವಾಗ ವಿದ್ಯಾರ್ಥಿಗಳಿಗೆ ಭಯ ಹುಟ್ಟಿಸಿ ಪರೀಕ್ಷೆ ನಡೆಸುವ ಉದ್ದೇಶವಾದರೂ ಏನು ಎಂಬುದು ಕೆಲವರ ವಾದ

ಇದು ಶಿಕ್ಷಣ ನೀತಿಗಳಿಗೆ ವಿರುದ್ಧವಾಗಿದೆ. ಶಿಕ್ಷಣ ಕಲಿಕಾ ಕೇಂದ್ರಿತವಾಗಿರಬೇಕು. ಆದರೆ, ಇದು ಪರೀಕ್ಷಾ ಕೇಂದ್ರಿತವಾಗಿದೆ. ಮಕ್ಕಳನ್ನು ಕಳ್ಳರ ರೀತಿ ನೋಡುವಂತಾಗಿದೆ. ಮೊದಲು ಖಾಲಿ ಇರುವ ಶಿಕ್ಷಕರ ನೇಮಕ, ಕುಸಿದು ಬೀಳುವ ಹಂತದಲ್ಲಿನ ಕಟ್ಟಡಗಳನ್ನು ನವೀಕರಿಸಲಿ. ಸಿಸಿ ಕ್ಯಾಮರಾ ಖರೀದಿ, ಟ್ರೋನ್‌ ಖರೀದಿ ನೆಪದಲ್ಲಿಹಣ ಪೋಲು ಮಾಡಲಾಗುತ್ತಿದೆ. ಮಕ್ಕಳಿಗೆ ಪರೀಕ್ಷೆ ಬಗ್ಗೆ ಆತ್ಮಸ್ಥೈರ್ಯ ತುಂಬಲಿ. ವಿದೇಶದಲ್ಲಿಓಪನ್‌ ಬುಕ್‌ ಪರೀಕ್ಷೆ ನಡೆಯುತ್ತಿದೆ.

ಇದು ಶಿಕ್ಷಣ ನೀತಿಗಳಿಗೆ ವಿರುದ್ಧವಾಗಿದೆ. ಶಿಕ್ಷಣ ಕಲಿಕಾ ಕೇಂದ್ರಿತವಾಗಿರಬೇಕು. ಆದರೆ, ಇದು ಪರೀಕ್ಷಾ ಕೇಂದ್ರಿತವಾಗಿದೆ. ಮಕ್ಕಳನ್ನು ಕಳ್ಳರ ರೀತಿ ನೋಡುವಂತಾಗಿದೆ. ಮೊದಲು ಖಾಲಿ ಇರುವ ಶಿಕ್ಷಕರ ನೇಮಕ, ಕುಸಿದು ಬೀಳುವ ಹಂತದಲ್ಲಿನ ಕಟ್ಟಡಗಳನ್ನು ನವೀಕರಿಸಲಿ. ಸಿಸಿ ಕ್ಯಾಮರಾ ಖರೀದಿ, ಟ್ರೋನ್‌ ಖರೀದಿ ನೆಪದಲ್ಲಿಹಣ ಪೋಲು ಮಾಡಲಾಗುತ್ತಿದೆ. ಮಕ್ಕಳಿಗೆ ಪರೀಕ್ಷೆ ಬಗ್ಗೆ ಆತ್ಮಸ್ಥೈರ್ಯ ತುಂಬಲಿ. ವಿದೇಶದಲ್ಲಿಓಪನ್‌ ಬುಕ್‌ ಪರೀಕ್ಷೆ ನಡೆಯುತ್ತಿದೆ.

ಎಸ್ಸೆಸ್ಸೆಲ್ಸಿಗೆ ಸಿಸಿ ಕ್ಯಾಮಾರಾ, ಡ್ರೋನ್‌ ಅಳವಡಿಕೆ ಬದಲು, ಸ್ಪರ್ಧಾತ್ಮಕ ಪರೀಕ್ಷೆ ನಡೆಯುವ ಸ್ಥಳ, ಅವ್ಯವಹಾರ ನಡೆಯುವ ಸರಕಾರಿ ಕಚೇರಿಗಳಲ್ಲಿಅಳವಡಿಕೆ ಮಾಡಲಿ.

-ಅಶೋಕ್‌, ಶಾಲಾ ಸಮನ್ವಯ ಸಮಿತಿ ಅಧ್ಯಕ್ಷ, ಮಾಗಡಿ


ಎಷ್ಟೋ ಪ್ರೌಢಶಾಲೆಗಳಲ್ಲಿಶಿಕ್ಷಕರುಗಳೇ ಇಲ್ಲ. ಮೊದಲು ಕನಿಷ್ಠ ಕಲಿಕೆ ಕಲಿಸುವ ಹಾಗೂ ಶಿಕ್ಷಕರ ನೇಮಕದ ಕೆಲಸ ಮೊದಲು ನಡೆಯಲಿ.

-ಸಂಪತ್‌ ಕೃಷ್ಣ, ಶಿಕ್ಷಣ ತಜ್ಞ, ತುಮಕೂರು


ನಕಲು ಪತ್ತೆ ಮಾಡಲು ಇಂತಹ ಕ್ರಮಗಳ ಅಗತ್ಯವಿದೆ. ವ್ಯವಸ್ಥೆ ಗಟ್ಟಿಗೊಳಿಸುವ ಕೆಲಸಕ್ಕೆ ಇವೆಲ್ಲಸೂಕ್ತವಾಗಿದೆ. ಈ ವ್ಯವಸ್ಥೆ ಮಕ್ಕಳು ಹೊಂದಿಕೊಳ್ಳುವ ಪರಿಸರ ಸೃಷ್ಟಿಸಬೇಕಿದೆ.


Post a Comment

Previous Post Next Post
CLOSE ADS
CLOSE ADS
×