ರಿಲಯನ್ಸ್ ಜಿಯೋ ಬಳಕೆದಾರರು ಈಗ 7 ಡೇಟಾ ಬೂಸ್ಟರ್ ಯೋಜನೆಗಳನ್ನು ಹೊಂದಿದ್ದಾರೆ. ಹಾಗಾದರೆ ನೂತನವಾದ 19 ರೂ. ಮತ್ತು 29 ರೂ. ವಿನ ಪ್ಲಾನ್ನಲ್ಲಿ ಎಷ್ಟು ಜಿಬಿ ಡೇಟಾ ಸೌಲಭ್ಯವಿದೆ?, ಇಲ್ಲಿದೆ ನೋಡಿ ಎಲ್ಲ ಮಾಹಿತಿ
ಟೆಲಿಕಾಂ (Telecom) ಕಂಪನಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ (Reliance Jio) ಇದೀಗ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಎರಡು ಹೊಸ ಡೇಟಾ ಬೂಸ್ಟರ್ ಯೋಜನೆಗಳನ್ನು ಪರಿಚಯಿಸಿದೆ. ಜಿಯೋ ಹೊಸದಾಗಿ 19 ರೂ. ಮತ್ತು 29 ರೂಪಾಯಿಯ ಡೇಟಾ ಬೂಸ್ಟರ್ (Data Booster) ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ರಿಲಯನ್ಸ್ ಜಿಯೋ ಬಳಕೆದಾರರು ಈಗ 7 ಡೇಟಾ ಬೂಸ್ಟರ್ ಯೋಜನೆಗಳನ್ನು ಹೊಂದಿದ್ದಾರೆ. ಹಾಗಾದರೆ ನೂತನವಾದ 19 ರೂ. ಮತ್ತು 29 ರೂ. ವಿನ ಪ್ಲಾನ್ನಲ್ಲಿ ಎಷ್ಟು ಜಿಬಿ ಡೇಟಾ ಸೌಲಭ್ಯವಿದೆ?, ಇಲ್ಲಿದೆ ನೋಡಿ ಎಲ್ಲ ಮಾಹಿತಿ.
19 ರೂ. ಡೇಟಾ ಬೂಸ್ಟರ್ ಯೋಜನೆ ಅಡಿಯಲ್ಲಿ, ರಿಲಯನ್ಸ್ ಜಿಯೋ ಬಳಕೆದಾರರು ಹೈ-ಸ್ಪೀಡ್ 1.5GB ಡೇಟಾವನ್ನು ಪಡೆಯುತ್ತಾರೆ. ಅಂತೆಯೆ 29 ರೂ. ವಿನ ಡೇಟಾ ಬೂಸ್ಟರ್ ಯೋಜನೆಯು 2.5GB ಡೇಟಾ ಆಯ್ಕೆಯನ್ನು ಹೊಂದಿದೆ.
ಈ ಎರಡೂ ಯೋಜನೆಗಳು ಹೈ-ಸ್ಪೀಡ್ ಡೇಟಾವನ್ನು ಒದಗಿಸುತ್ತವೆ. ಆದರೆ ಒಮ್ಮೆ ನಿಗದಿಪಡಿಸಿದ ಡೇಟಾ ಮಿತಿಯನ್ನು ಮೀರಿದರೆ ಈ ಡೇಟಾ ವೇಗವು 64 Kbps ಗೆ ಕಡಿಮೆಯಾಗುತ್ತದೆ. ಅಲ್ಲದೆ, ಇವು ಡೇಟಾ ಬೂಸ್ಟರ್ ಯೋಜನೆಗಳಾಗಿರುವ ಕಾರಣ ಬಳಕೆದಾರರು ಡೇಟಾ ಪ್ರಯೋಜನಗಳನ್ನು ಮಾತ್ರ ಪಡೆಯುತ್ತಾರೆ ಯಾವುದೇ ಎಸ್ಎಮ್ಎಸ್ ಅಥವಾ ಅನಿಯಮಿತ ಕರೆ ಸೌಲಭ್ಯವಿಲ್ಲ.