Free Electricity: ಫ್ರಿ ಕರೆಂಟ್ ಅಂತ ಖುಷಿ ಪಡಬೇಡಿ! ಬಂತು ಕೇಂದ್ರ ಸರ್ಕಾರದ ಹೊಸ ರೂಲ್ಸ್, ಇಂತ ಸಮಯದಲ್ಲಿ ಕನೆಕ್ಷನ್ ಕಟ್

Free Electricity: ಫ್ರಿ ಕರೆಂಟ್ ಅಂತ ಖುಷಿ ಪಡಬೇಡಿ! ಬಂತು ಕೇಂದ್ರ ಸರ್ಕಾರದ ಹೊಸ ರೂಲ್ಸ್, ಇಂತ ಸಮಯದಲ್ಲಿ ಕನೆಕ್ಷನ್ ಕಟ್

 ವಿದ್ಯುತ್ ಇಲ್ಲದೆ ಯಾವ ಕೆಲಸವು ನಡೆಯುವುದಿಲ್ಲ. ಪ್ರತಿಯೊಂದು ಮನೆಯಲ್ಲಿ, ಕಂಪನಿಯಲ್ಲಿ ಎಲ್ಲಾದರೂ ಸರಿ ವಿದ್ಯುತ್ ಸಂಪರ್ಕ ಬೇಕೇ ಬೇಕು. ಆದರೆ ಕೆಲವೊಮ್ಮೆ ನಮಗೆ ಗೊತ್ತಿಲ್ಲದೆ ನಮ್ಮ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳ್ಳಬಹುದು. ವಿದ್ಯುತ್ ಬಿಲ್ ಸರಿಯಾದ ಸಮಯಕ್ಕೆ ಪಾವತಿ ಮಾಡದೆ ಇದ್ದರೆ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಲಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತು.



ಆದರೆ ಈ ಕಾರಣವನ್ನು ಹೊರತುಪಡಿಸಿ ವಿದ್ಯುತ್ ಸರಬರಾಜು ಕಂಪನಿಗಳು ಇನ್ನೂ ಕೆಲವು ಸಂದರ್ಭದಲ್ಲಿ ಗ್ರಾಹಕರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬಹುದು. ವಿದ್ಯುತ್ ಸರಬರಾಜು ಕಂಪನಿಗಳು ತಮ್ಮದೇ ಆಗಿರುವ ನೀತಿ ನಿಯಮಗಳನ್ನು ಹೊಂದಿವೆ. ಅದನ್ನು ಗ್ರಾಹಕರು ಸರಿಯಾಗಿ ಪೂರೈಸದೆ ಇದ್ದಾಗ ವಿದ್ಯುತ್ ಸರಬರಾಜು ಕಂಪನಿ ಗ್ರಾಹಕರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬಹುದು. ಯಾವೆಲ್ಲಾ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಬಹುದು ನೋಡೋಣ

ಒಂದು ಮನೆಯ ಅಥವಾ ವಿದ್ಯುತ್ ಸಂಪರ್ಕ ಹೊಂದಿರುವ ಯಾವುದೇ ಕಂಪನಿಯ ವಿದ್ಯುತ್ ಸಂಪರ್ಕವನ್ನು ವಿದ್ಯುತ್ ಸರಬರಾಜು ಕಂಪನಿ ಕಡಿತಗೊಳಿಸುತ್ತದೆ ಎಂದರೆ ಅದಕ್ಕೆ ಸರಿಯಾದ ಕಾರಣ ಇದ್ದೇ ಇರುತ್ತದೆ. ವಿದ್ಯುತ್ ಸಂಪರ್ಕ ಕಂಪನಿ, ಸುಖಾ ಸುಮ್ಮನೆ ಯಾವ ಗ್ರಾಹಕರ ವಿದ್ಯುತ್ ಸಂಪರ್ಕವನ್ನು ಕೂಡ ಕಡಿತಗೊಳಿಸುವುದಿಲ್ಲ. ಇದನ್ನು ಕಾನೂನು ಬದ್ಧವಾಗಿ ಮಾಡಲಾಗುತ್ತಿದೆ. ನಿಯಮಗಳನ್ನು ಹೇಳಲಾಗಿದೆ. ಯಾವೆಲ್ಲ ಸಂದರ್ಭದಲ್ಲಿ ಗ್ರಾಹಕರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬಹುದು ನೋಡೋಣ.


ಗ್ರಾಹಕರು ವಿದ್ಯುತ್ ಸಂಪರ್ಕ ಕಡಿತಕ್ಕೆ ವಿದ್ಯುತ್ ಸಂಪರ್ಕ ಇಲಾಖೆಗೆ ಅರ್ಜಿ ಸಲ್ಲಿಸಿದರೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ.

ಸರ್ಕಾರ ಸೂಚನೆ ಆಧಾರದ ಮೇಲೆ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಬಹುದು.

ವಿದ್ಯುತ್ ಸರಬರಾಜು ಕಂಪನಿ ಹಾಗೂ ಗ್ರಾಹಕರ ನಡುವೆ ಒಪ್ಪಂದವಿದ್ದು ಅದರ ಉಲ್ಲಂಘನೆ ಆದಾಗಲೂ ಕೂಡ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ವಿದ್ಯುತ್ ಸಂಪರ್ಕ ಇಲಾಖೆ ಹೊಂದಿರುತ್ತದೆ.

ವಿದ್ಯುತ್ ಸಂಪರ್ಕದಿಂದ ಯಾವುದೇ ಭದ್ರತಾ ಆಸ್ತಿ ಅಥವಾ ವ್ಯಕ್ತಿಗೆ ಹಾನಿ ಉಂಟಾಗುವಂತೆ ಇದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಆದರೆ ಇದಕ್ಕೆ ಆ ಸ್ಥಳದ ಗ್ರಾಹಕರ ಬರವಣಿಗೆ ಕೂಡ ಬೇಕಾಗಿರುತ್ತದೆ.

ಗ್ರಾಹಕರು ವಿದ್ಯುತ್ ಕಂಪನಿಗಳು ನಿಗದಿಪಡಿಸಿದ ನಿಯಮಗಳನ್ನು ಉಲ್ಲಂಘಿಸಿದರೆ ವಿದ್ಯುತ್ ಸರಬರಾಜು ಕಡಿತಗೊಳ್ಳುತ್ತದೆ.

ಸರಿಯಾದ ಸಮಯಕ್ಕೆ ವಿದ್ಯುತ್ ಪಾವತಿ ಮಾಡದೇ ಇದ್ದಲ್ಲಿ ಗ್ರಾಹಕರ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸುವ ಹಕ್ಕು ವಿದ್ಯುತ್ ಸರಬರಾಜು ಕಂಪನಿಗಳಿಗೆ ಇರುತ್ತದೆ.

ಇನ್ನು ಮನೆಯಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಿರುತ್ತಾರೆ. ಈ ಸಂದರ್ಭದಲ್ಲಿ ಟೆಂಪರಿಂಗ್ ಮಾಡುವುದು ಕಂಡು ಬಂದರೆ ಆ ಸ್ಥಳದ ವಿದ್ಯುತ್ ಸ್ಥಾಪಕ ಕಡಿತಗೊಳ್ಳುತ್ತದೆ.

ಯಾವುದೇ ವಿದ್ಯುತ್ ಸರಬರಾಜು ಕಂಪನಿ ಕಾರಣವಿಲ್ಲದೆ ತಮಷ್ಟಕ್ಕೆ ತಾವು ಬಂದು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಹಾಗಿಲ್ಲ. ವಿದ್ಯುತ್ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಮೊದಲು ವಿಷಯ ತಿಳಿಸಬೇಕು. ಗ್ರಾಹಕರಿಗೆ ನೋಟಿಸ್ ನೀಡಬೇಕು. ಯಾವ ಕಾರಣಕ್ಕಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತಿದೆ ಎಂಬುದರ ಬಗ್ಗೆ ಕಾರಣಗಳನ್ನು ಕೂಡ ಉಲ್ಲೇಖಿಸಿದ ನೋಟಿಸ್ ನೀಡಬೇಕು. ಈ ಮೇಲಿನ ಕಾರಣಗಳಲ್ಲಿ ಯಾವುದೇ ಒಂದು ತಪ್ಪನ್ನು ಗ್ರಾಹಕರು ಮಾಡಿದರೆ ವಿದ್ಯುತ್ ಸರಬರಾಜು ಕಂಪನಿಗಳು ಗ್ರಾಹಕರ ವಿದ್ಯುತ್ ಅನ್ನು ಸ್ಥಗಿತಗೊಳಿಸುವ ಹಕ್ಕನ್ನು ಪಡೆದಿರುತ್ತಾರೆ

Post a Comment

Previous Post Next Post
CLOSE ADS
CLOSE ADS
×