ಇತ್ತೀಚಿಗಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ರೂ.2000 ಗುಲಾಬಿ ನೋಟನ್ನು ಬ್ಯಾನ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಕೆಲವೊಂದು ಕಡೆಗಳಲ್ಲಿ ಹೊಸ 500 ರೂಪಾಯಿ ನೋಟು ಕೂಡ ಅದೇ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ ಕಾರಣದಿಂದಾಗಿ ಅದು ಕೂಡ ಬ್ಯಾನ್ ಆಗಲಿದೆ ಎಂಬುದಾಗಿ ಸುದ್ದಿ ಕೇಳಿ ಬರುತ್ತಿದ್ದರೆ ಇನ್ನೊಂದು ಕಡೆ ಹಳೆಯ ಸಾವಿರ ಹಾಗೂ 500 ರೂಪಾಯಿ ನೋಟುಗಳು ಮತ್ತೆ ಲಾಂಚ್ ಆಗಲಿವೆ ಎನ್ನುವಂತಹ ಗಾಳಿ ಸುದ್ದಿಗಳು ಕೂಡ ಕೇಳಿ ಬರುತ್ತಿವೆ.
RBI ಜಾರಿಗೆ ತಂದಿರುವಂತಹ ಹೊಸ ನಿಯಮದ ಪ್ರಕಾರ ಪ್ರತಿಯೊಂದು ಬ್ಯಾಂಕುಗಳು ಕೂಡ ನೋಟು ಎಷ್ಟು ಹಳೆಯದಾಗಿರಲಿ ಹಾಗೂ ಹಾಳಾಗಿರಲಿ ಅದನ್ನು ಬ್ಯಾಂಕುಗಳು ಬದಲಾಯಿಸಿಕೊಡಬೇಕು ಎನ್ನುವಂತಹ ನಿಯಮವನ್ನು ಜಾರಿಗೆ ತಂದಿದ್ದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಅದಾಗಲೇ ಈ ರೀತಿಯ ನಿಯಮವನ್ನು ಗ್ರಾಹಕರ ಜೊತೆಗೆ ಪಾಲಿಸುವಂತಹ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆದರೆ ನೀವು ತಿಳಿದುಕೊಳ್ಳಬೇಕಾಗಿರುವ ಒಂದು ಮಾಹಿತಿ ಏನೆಂದರೆ, ನೋಟು ಎಷ್ಟು ಹರಿದು ಹೋಗಿರುತ್ತದೆಯೋ ಅಷ್ಟರ ಮಟ್ಟಿಗೆ ಅದರ ಮೌಲ್ಯ ಕಡಿಮೆಯಾಗುತ್ತಾ ಬರುತ್ತದೆ. ಒಂದು ವೇಳೆ ಈ ಸಂದರ್ಭದಲ್ಲಿ ಬ್ಯಾಂಕಿನವರು ಹಳೆಯ ನೋಟುಗಳನ್ನು ಬದಲಾಯಿಸಿಕೊಡುವುದಕ್ಕೆ ಒಪ್ಪಿಕೊಳ್ಳದಿದ್ದರೆ ನೀವು ಅವರ ವಿರುದ್ಧ ಆರ್ ಬಿ ಐ ವೆಬ್ಸೈಟ್ ನಲ್ಲಿ ದೂರನ್ನು ಕೂಡ ದಾಖಲಿಸಬಹುದಾಗಿದೆ. ಈ ರೀತಿಯ ಸೌಲಭ್ಯಗಳನ್ನು ಅಧಿಕೃತವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾನೇ ನೀಡಿರುವ ಕಾರಣದಿಂದಾಗಿ ಯಾವುದೇ ಬ್ಯಾಂಕಿನವರು ಕೂಡ ಇದನ್ನು ಅಲ್ಲಗಳೆಯುವಂತಿಲ್ಲ.
RBI ಅಧಿಕೃತವಾಗಿ ಹೇಳಿರುವ ಪ್ರಕಾರ ಯಾವ ಸಂದರ್ಭದಲ್ಲಿ 100 200 ಅಥವಾ 500 ರೂಪಾಯಿ ನೋಟುಗಳನ್ನು ಬ್ಯಾಂಕ್ ಒಪ್ಪಿಕೊಳ್ಳುವುದಿಲ್ಲ ಎಂದರೆ ಆ ಹಳೆಯ ನೋಟಿನಲ್ಲಿ ಪ್ರಮುಖ ಅಂಶಗಳಾಗಿರುವ Authority ಯ ಹೆಸರು, Promise Clause, ಸಿಗ್ನೇಚರ್ ಅಶೋಕ ಸ್ತಂಭ ಮಹಾತ್ಮ ಗಾಂಧಿಯ ಫೋಟೋ ಅಧಿಕೃತ ವಾಟರ್ ಮಾರ್ಕ್ ಗಳು ಈ ರೀತಿಯ ಪ್ರಮುಖ ಅಂಶಗಳು ಒಂದುವೇಳೆ ನೋಟಿನಲ್ಲಿ ಮಿಸ್ಸಿಂಗ್ ಆಗಿದ್ದರೆ ಅಥವಾ ಹರಿದು ಹೋಗಿದ್ದರೆ ಅವುಗಳನ್ನು ಬ್ಯಾಂಕುಗಳಲ್ಲಿ ಎಕ್ಸ್ಚೇಂಜ್ ಮಾಡಲು ಸಾಧ್ಯವಿಲ್ಲ. ಸಾಕಷ್ಟು ಕೆಟ್ಟು ಹೋಗಿರುವಂತಹ ನೋಟುಗಳು ಕೂಡ ಸಾಕಷ್ಟು ಸಮಯಗಳಿಂದ ಮಾರುಕಟ್ಟೆಯಲ್ಲಿ ಓಡಾಡುತ್ತಿದ್ದರೆ ಅವುಗಳನ್ನು ಕೂಡ ಬ್ಯಾಂಕುಗಳಲ್ಲಿ ಎಕ್ಸ್ಚೇಂಜ್ ಮಾಡಬಹುದು ಎಂಬುದಾಗಿ RBI ಹೇಳಿಕೊಂಡಿದೆ. ಈ ನಿಯಮಗಳ ಅಡಿಯಲ್ಲಿ ನೀವು ಕೂಡ ನೋಟುಗಳ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.