ಮೂರು ತಿಂಗಳು ಸೂರ್ಯ ಉದಯಿಸದ ಊರಿಗೆ, ಸೂರ್ಯನನ್ನು ತಂದ ಕಥೆ

ಮೂರು ತಿಂಗಳು ಸೂರ್ಯ ಉದಯಿಸದ ಊರಿಗೆ, ಸೂರ್ಯನನ್ನು ತಂದ ಕಥೆ

 ಒಂದು ದಿನ ಸೂರ್ಯನೇ (Sun) ಉದಯಿಸುವುದಿಲ್ಲ. ನಿಮ್ಮ ಊರಿನಲ್ಲಿ ಹೀಗಾದರೆ ಒಮ್ಮೆ ಊಹಿಸಿ. ಈ ರೀತಿಯ ಒಂದು ಊರಿದೆ, ಅಲ್ಲಿ ವರ್ಷದ ಮೂರು ತಿಂಗಳು ಸೂರ್ಯನೇ ಉದಯಿಸುವುದಿಲ್ಲ. ಆದರೂ ಅವರು ಹರಸಾಹಸಪಟ್ಟು ಸೂರ್ಯನನ್ನು ಎಳೆದು ತಮ್ಮೂರಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿ ಗೆದ್ದಿದ್ದಾರೆ. ಹೌದು!


ವಿಗಾನೆಲ್ಲಾ (Viganella) ಇದು ಇಟಲಿಯ (Italy) ಒಂದು ಹಳ್ಳಿ. ಈ ಹಳ್ಳಿ ಮೂರು ತಿಂಗಳು ಸೂರ್ಯನನ್ನು ನೊಡುತ್ತಲೇ ಇರಲಿಲ್ಲ. ಯಾಕೆ ಗೊತ್ತಾ? ಈ ಗ್ರಾಮ ಆಳವಾದ ಕಣಿವೆಯ ಕೆಳಭಾಗದಲ್ಲಿದೆ. ಅಲ್ಲದೇ ಸೂರ್ಯ ತನ್ನ ಪಥವನ್ನು ಬದಲಿಸುವುದರಿಂದ ಚಳಿಗಾಲದಲ್ಲಿ ಸೂರ್ಯನ ಬೆಳಕು ಇಲ್ಲಿ ಬೀಳುತ್ತಲೇ ಇರಲಿಲ್ಲ. ಹೀಗಾಗಿ ಮೂರು ತಿಂಗಳು ಇಲ್ಲಿನ ಜನ ಕತ್ತಲೆಯಲ್ಲೇ ಕಳೆಯುತ್ತಿದ್ದರು.


ಆದರೆ ಈಗ ಕೆಲವು ಬುದ್ದಿವಂತ ಎಂಜಿನಿಯರ್‌ಗಳು ಮತ್ತು ವಾಸ್ತುಶಿಲ್ಪಿಗಳು ಸೂರ್ಯನನ್ನು ತಮ್ಮೂರಿಗೆ ಕೊಂಡೊಯ್ಯುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ಅದು ಹೇಗೆ ಗೊತ್ತಾ? ಅವರೆಲ್ಲ ಸೇರಿ ದೊಡ್ಡ ಕನ್ನಡಿಯನ್ನು ಬೆಟ್ಟದ ಮೇಲೆ ಇರಿಸಿ ಪ್ರತಿಫಲನದ ಮೂಲಕ ತಮ್ಮ ಹಳ್ಳಿಗೆ ಸೂರ್ಯನ ಬೆಳಕನ್ನು ಪಡೆದುಕೊಳ್ಳುತ್ತಿದ್ದಾರೆ. ಇದೇ ವಿಚಾರದಿಂದ ಈ ಪುಟ್ಟ ಹಳ್ಳಿ ಜಗತ್ತಿಗೆ ಪರಿಚಯವಾಗಿದೆ.

ಇತಿಹಾಸದ ದಾಖಲೆಗಳ ಪ್ರಕಾರ ಈ ಪ್ರದೇಶದಲ್ಲಿ 13 ನೇ ಶತಮಾನದಷ್ಟು ಹಿಂದೆಯೇ ಜನ ಇಲ್ಲಿ ನೆಲೆಸಿದ್ದಾರೆ. ಅಂದರೆ ಸ್ಥಳೀಯ ತಲೆಮಾರುಗಳು 800 ಕ್ಕೂ ಹೆಚ್ಚು ಚಳಿಗಾಲವನ್ನು ಕತ್ತಲೆಯಲ್ಲಿ ಕಳೆದಿವೆ. ಪ್ರತಿ ವರ್ಷ ಈ ಊರು ನವೆಂಬರ್ 11 ರಂದು ತನ್ನ ಕೊನೆಯ ಸೂರ್ಯಾಸ್ತವನ್ನು ನೋಡುತ್ತದೆ ಮತ್ತು ಫೆಬ್ರವರಿ 2 ರಂದು ಮತ್ತೆ ಸೂರ್ಯನ ಕಿರಣಗಳನ್ನು ಪಡೆದುಕೊಳಗ್ಳುತ್ತದೆ. ಆ ದಿನ ಅಲ್ಲಿನ ನಿವಾಸಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸುತ್ತಾರೆ. ಸೂರ್ಯನ ಆಗಮನವನ್ನು ಹಬ್ಬದಂತೆ ಆಚರಿಸುತ್ತಾರೆ.

1999 ರಲ್ಲಿ ಸ್ಥಳೀಯ ವಾಸ್ತುಶಿಲ್ಪಿ ಜಿಯಾಕೊಮೊ ಬೊಂಜಾನಿ ಚರ್ಚ್ ಮುಂಭಾಗದಲ್ಲಿ ಕನ್ನಡಿಯನ್ನು ಸ್ಥಾಪಿಸಲು ಪ್ರಸ್ತಾಪಿಸಿದ್ದರು. ಆದರೆ ಆಗಿನ ಮೇಯರ್ ಫ್ರಾಂಕೊ ಮಿಡಾಲಿ ಈ ಕಲ್ಪನೆಯನ್ನು ತಳ್ಳಿಹಾಕಿದ್ದರು. ಆದರೆ ಇದನ್ನು ಕಾರ್ಯರೂಪಕ್ಕೆ ತರಲು ಸಹಾಯಕ್ಕೆ ನಿಂತರು. ಬಳಿಕ ಕಲ್ಪನೆ 2006 ರ ಡಿಸೆಂಬರ್ 17 ರಂದು ರಂದು ವಾಸ್ತವವಾಗಿ ಎದುರು ನಿಂತಿತು. ಇಂಜಿನಿಯರ್ ಗಿಯಾನಿ ಫೆರಾರಿಯ ಸಹಾಯದಿಂದ ಕನ್ನಡಿಯನ್ನು ಬೋಜಾನಿ ಎಂಬುವವರು ವಿನ್ಯಾಸಗೊಳಿಸಿದ್ದಾರೆ. ಈ ಯೋಜನೆಗೆ ಸುಮಾರು 82 ಲಕ್ಷ ರೂ.ಗಳಷ್ಟು ವೆಚ್ಚ ತಗುಲಿದೆ. ಎಂಟು ಮೀಟರ್ ಅಗಲ ಮತ್ತು ಐದು ಮೀಟರ್ ಎತ್ತರ ಇರುವ ಇದು ದಿನಕ್ಕೆ ಆರು ಗಂಟೆಗಳ ಕಾಲ ಸೂರ್ಯನ ಬೆಳಕನ್ನು ನೀಡುತ್ತದೆ. ಪ್ರತಿಫಲಿತ ಬೆಳಕು ಸಹಜವಾಗಿ, ನೇರ ಸೂರ್ಯನ ಬೆಳಕಿನಂತೆ ಶಕ್ತಿಯುತವಾಗಿಲ್ಲ. ಆದರೆ ಊರನ್ನು ಬೆಚ್ಚಗಿಡಲು ಮತ್ತು ಮನೆಗಳಿಗೆ ನೈಸರ್ಗಿಕ ಸೂರ್ಯನ ಬೆಳಕನ್ನು ನೀಡಲು ಇದು ಸಾಕಾಗಿದೆ. ಈ ಕನ್ನಡಿಯನ್ನು ಚಳಿಗಾಲದಲ್ಲಿ ಮಾತ್ರ ಬಳಸಲಾಗುತ್ತದೆ. ಬಳಿಕ ವರ್ಷದ ಉಳಿದ ದಿನಗಳಲ್ಲಿ ಮುಚ್ಚಲಾಗುತ್ತದೆ.

ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದ ನಾರ್ವೆಯ ರ್ಜುಕಾನ್ ಪಟ್ಟಣಕ್ಕೂ ಇದು ಮಾದರಿಯಾಗಿದೆ. 2013 ರಲ್ಲಿ ಇಂಜಿನಿಯರ್‌ಗಳ ಗುಂಪು ಇದನ್ನು ಅಧ್ಯಯನ ಮಾಡಲು ವಿಗಾನೆಲ್ಲಾಗೆ ಭೇಟಿ ನೀಡಿತ್ತು. ನಂತರ ಇದೇ ರೀತಿಯ ಕನ್ನಡಿಯನ್ನು ರ್ಜುಕಾನ್‌ನಲ್ಲಿ ಸ್ಥಾಪಿಸಲಾಗಿದೆ

Post a Comment

Previous Post Next Post
CLOSE ADS
CLOSE ADS
×