PM Kisan Status: ಪಿಎಂ ಕಿಸಾನ್: ಹಣ ಬಂದಿಲ್ಲವಾ? ಫಲಾನುಭವಿ ಸ್ಟೇಟಸ್ ಏನಿದೆ ತಿಳಿಯಿರಿ

PM Kisan Status: ಪಿಎಂ ಕಿಸಾನ್: ಹಣ ಬಂದಿಲ್ಲವಾ? ಫಲಾನುಭವಿ ಸ್ಟೇಟಸ್ ಏನಿದೆ ತಿಳಿಯಿರಿ

 

How To Check Beneficiary Status in PM Kisan Scheme: ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಯೋಜನೆಯಲ್ಲಿ 8.5 ಕೋಟಿಗೂ ಹೆಚ್ಚು ಫಲಾನುಭವಿಗಳಿದ್ದಾರೆ. ನೀವು ಯೋಜನೆಗೆ ನೊಂದಾಯಿಸಿದ್ದರೆ ಬೆನಿಫಿಷಿಯರಿ ಸ್ಟೇಟಸ್ ಏನಿದೆ ತಿಳಿಯುವ ಕ್ರಮ ಇಲ್ಲಿದೆ...


ಕೇಂದ್ರ ಸರ್ಕಾರ 2019ರಲ್ಲಿ ಆರಂಭಿಸಿರುವ ಪಿಎಂ ಕಿಸಾನ್ ಯೋಜನೆಯ (PM Kisan Scheme) 14ನೇ ಕಂತಿನ ಹಣ ಇಂದು ಜುಲೈ 27ರಂದು ಬಿಡುಗಡೆ ಆಗಿದೆ. ರಾಜಸ್ಥಾನದ ಸೀಕರ್​ನಲ್ಲಿ ಪಿಎಂ ನರೇಂದ್ರ ಮೋದಿ 14ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. ಇಂದು 8.5 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ಹಣ ನೇರವಾಗಿ ವರ್ಗಾವಣೆ ಆಗಲಿದೆ. ಯೋಜನೆಗೆ ನೊಂದಾಯಿಸಿದ್ದರೂ ಇಕೆವೈಸಿ ಮಾಡಿಸದಿದ್ದರೆ ಹಣ ಸಿಗುವುದಿಲ್ಲ. ಇದೇ ಕಾರಣಕ್ಕೆ ಬಹಳ ಮಂದಿಗೆ 12 ಮತ್ತು 13ನೇ ಕಂತಿನ ಹಣ ಕೈತಪ್ಪಿತ್ತು. ಈಗಲೂ ಅನೇಕರಿಗೆ 14ನೇ ಕಂತಿನ ಹಣ ಲಭ್ಯ ಇಲ್ಲ.

ಪಿಎಂ ಕಿಸಾನ್ ಯೋಜನೆಯಲ್ಲಿ ಈವರೆಗೂ ನೊಂದಾಯಿಸಿದಿದ್ದವರಿಗೂ ಹೊಸದಾಗಿ ಪ್ರವೇಶ ಮಾಡಲು ಅವಕಾಶ ಇದೆ. ಇತ್ತೀಚೆಗೆ ಹೊಸದಾಗಿ ನೊಂದಾಯಿಸಿಕೊಂಡವರಿಗೆ ಹಣ ಬಂದಿಲ್ಲದೇ ಇದ್ದರೆ ಅಂಥವರು ತಮ್ಮ ಬೆನಿಫಿಷಿಯರಿ ಸ್ಟೇಟಸ್ ಅನ್ನು ಪರಿಶೀಲಿಸಬಹುದು

ಪಿಎಂ ಕಿಸಾನ್ ಯೋಜನೆಯ ಬೆನಿಫಿಷಿಯರಿ ಸ್ಟೇಟಸ್ ಪರಿಶೀಲಿಸಿ

ಒಂದು ವೇಳೆ ಅರ್ಹ ಫಲಾನುಭವಿಗಳು ಸ್ವಯಂ ಆಗಿ ಯೋಜನೆಗೆ ನೊಂದಾಯಿಸಿದ್ದರೆ ಅವರು ಪಿಎಂ ಕಿಸಾನ್ ವೆಬ್​ಸೈಟ್​ಗೆ ಹೋಗಿ ಅಲ್ಲಿ ಫಾರ್ಮರ್ಸ್ ಕಾರ್ನರ್ ಅಡಿಯಲ್ಲಿ ‘ಸ್ಟೇಟಸ್ ಆಫ್ ಸೆಲ್ಫ್ ರಿಜಿಸ್ಟರ್ಡ್ ಫಾರ್ಮರ್’ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಆಧಾರ್ ನಂಬರ್ ಹಾಕಿ ಸರ್ಚ್ ಮಾಡಿದರೆ ಸ್ಟೇಟಸ್ ವಿವರ ಲಭ್ಯ ಆಗುತ್ತದೆ.

ಹಾಗೆಯೇ, ಪಿಎಂ ಕಿಸಾನ್ ವೆಬ್​ಸೈಟ್​ನಲ್ಲಿ ಅದೇ ಫಾರ್ಮರ್ಸ್ ಕಾರ್ನರ್ ಸೆಕ್ಷನ್​ನಲ್ಲಿ ‘ನೋ ಯುವರ್ ಸ್ಟೇಟಸ್’ ಮೇಲೆ ಕ್ಲಿಕ್ ಮಾಡಿ, ಆ ಮೂಲಕ ನಿಮ್ಮ ಹಣದ ಸ್ಥಿತಿಗತಿ ತಿಳಿಯಬಹುದು. ಇಲ್ಲಿ ಯೋಜನೆಯ ನಿಮ್ಮ ರಿಜಿಸ್ಟ್ರೇಶನ್ ನಂಬರ್ ಹಾಕಿ ಸರ್ಚ್ ಮಾಡಬಹುದು. ರಿಜಿಸ್ಟ್ರೇಶನ್ ನಂಬರ್ ಮರೆತುಹೋಗಿದ್ದರೆ ‘ನೋ ಯುವರ್ ರಿಜಿಸ್ಟ್ರೇಶನ್ ನಂಬರ್’ ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ ಆಧಾರ್ ನಂಬರ್ ಹಾಕಿ ಶೋಧಿಸಿದರೆ ರಿಜಿಸ್ಟ್ರೇಶನ್ ನಂಬರ್ ವಿವರ ಸಿಗುತ್ತದೆ.

ಪಿಎಂ ಕಿಸಾನ್ ವೆಬ್​ಸೈಟ್​ನಲ್ಲಿ ಫಲಾನುಭವಿಗಳ ಪಟ್ಟಿ

ಪಿಎಂ ಕಿಸಾನ್ ವೆಬ್​ಸೈಟ್​ನಲ್ಲಿ ಫಲಾನುಭವಿಗಳ ಪಟ್ಟಿಯನ್ನೂ ನೋಡಬಹುದು. ಬೆನಿಫಿಷಿಯರಿ ಲಿಸ್ಟ್ ಅನ್ನು ಕ್ಲಿಕ್ ಮಾಡಿ, ರಾಜ್ಯ, ಜಿಲ್ಲೆ, ತಾಲೂಕು, ಊರು ಇತ್ಯಾದಿ ಆಯ್ದುಕೊಂಡರೆ ಆ ಊರಿನ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯಾ ಪರಿಶೀಲಿಸಿ.



Post a Comment

Previous Post Next Post

Top Post Ad

CLOSE ADS
CLOSE ADS
×