Gruha Jyothi Yojana: ಗ್ರಹಜ್ಯೋತಿಗೆ ಮೊದಲ ದಿನದಿಂದ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹೊಸ ಸೂಚನೆ! ವಿದ್ಯುತ್ ಇಲಾಖೆ ಘೋಷಣೆ

Gruha Jyothi Yojana: ಗ್ರಹಜ್ಯೋತಿಗೆ ಮೊದಲ ದಿನದಿಂದ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹೊಸ ಸೂಚನೆ! ವಿದ್ಯುತ್ ಇಲಾಖೆ ಘೋಷಣೆ

ಈಗಾಗಲೇ ಕಾಂಗ್ರೆಸ್ ಸರ್ಕಾರದ 5 ಪ್ರಮುಖ ಯೋಜನೆಗಳು ಅನುಷ್ಠಾನಕ್ಕೆ ಬರುವ ನಿಟ್ಟಿನಲ್ಲಿ ಸಾಕಷ್ಟು ಪ್ರಾಮಾಣಿಕ ಪ್ರಯತ್ನಗಳನ್ನು ರಾಜ್ಯ ಸರ್ಕಾರ (State Government) ಹಾಗೂ ಅದಕ್ಕೆ ಸಂಬಂಧಪಟ್ಟಂತಹ ಎಲ್ಲಾ ಸಂಸ್ಥೆಗಳು ಕೂಡ ನಡೆಸುತ್ತಿವೆ. ಈಗಾಗಲೇ ರಾಜ್ಯದ್ಯಂತ ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಬಸ್ ಪ್ರಯಾಣ ಸಾಂಗವಾಗಿ ನಡೆಯುತ್ತಿದೆ ಹಾಗೂ ಈ ತಿಂಗಳಿನಿಂದ ಅನ್ನ ಭಾಗ್ಯ ಯೋಜನೆ ಕೂಡ ಅನುಷ್ಠಾನಕ್ಕೆ ಬರುವಂತಹ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಇದರ ನಡುವಲ್ಲಿ ಈಗ ಎಲ್ಲರೂ ಮಾತನಾಡುತ್ತಿರುವಂತಹ ವಿಚಾರ ಗ್ರಹ ಜ್ಯೋತಿ ಯೋಜನೆ ಅಂದ್ರೆ 200 ಯೂನಿಟ್ ವರೆಗೂ ಉಚಿತವಾಗಿ ಸಿಗುವಂತಹ ವಿದ್ಯುತ್ ಯೋಜನೆ ಬಗ್ಗೆ. ಬನ್ನಿ ಇದರ ಕುರಿತಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಈಗ ಬಂದಿರುವ ಸುದ್ದಿಗಳ ಪ್ರಕಾರ ತಿಳಿದುಕೊಳ್ಳೋಣ.



ಈಗಾಗಲೇ ಸರ್ಕಾರ ಸೇವಾ ಸಿಂಧು ಪೋರ್ಟಲ್ (Seva Sindhu Portal) ಮೂಲಕ ಗ್ರಹ ಜ್ಯೋತಿ ಯೋಜನೆ (Gruha Jyothi Yojana) ಅಡಿಯಲ್ಲಿ ರಿಜಿಸ್ಟರ್ ಮಾಡಿಕೊಳ್ಳುವಂತೆ ಜನಸಾಮಾನ್ಯರಲ್ಲಿ ಕೇಳಿಕೊಂಡಿದ್ದು ಇದು ಕೇವಲ ಗ್ರಹ ಬಳಕೆಗಾಗಿ ಮಾತ್ರ ಯಾವುದೇ ಕಮರ್ಷಿಯಲ್ ಕಟ್ಟಡಗಳಿಗೆ ಉಚಿತ ಯೋಜನೆಯನ್ನು ನೀಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಹೀಗಾಗಿ ಆದಷ್ಟು ಬೇಗ ಗ್ರಹ ಬಳಕೆಯ ಕೆಲಸಕ್ಕೆ ಉಚಿತ ವಿದ್ಯುತ್ ಯೋಜನೆಯನ್ನು ಪಡೆದುಕೊಳ್ಳಲು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ ಎಂಬುದಾಗಿ ಸರ್ಕಾರ ಹೇಳಿಕೊಂಡಿದೆ. ಈಗಾಗಲೇ ಕೋಟ್ಯಾಂತರ ಜನ ಗ್ರಹ ಜ್ಯೋತಿ ವಿದ್ಯುತ್ ಯೋಜನೆ ಅಡಿಯಲ್ಲಿ ರಿಜಿಸ್ಟರ್ ಕೂಡ ಮಾಡಿಕೊಂಡಿದ್ದಾರೆ.

ಗ್ರಹ ಜ್ಯೋತಿ ವಿದ್ಯುತ್ ಯೋಜನೆಯನ್ನು (Gruha Jyothi Yojana) ಪಡೆದುಕೊಳ್ಳುವವರು ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಅನ್ನು ಮುಂದಿನ ಮೂರು ತಿಂಗಳುಗಳ ಒಳಗಾಗಿ ಕಟ್ಟಲೇಬೇಕು ಇಲ್ಲವಾದಲ್ಲಿ ಗ್ರಹ ಜ್ಯೋತಿ ವಿದ್ಯುತ್ ಯೋಜನೆ ಕಡಿತಗೊಳ್ಳುತ್ತದೆ. ಇನ್ನು ಈ ತಿಂಗಳಲ್ಲಿ ನೀವು ಸೇವಾ ಸಿಂಧು ಪೋರ್ಟಲ್ ನಲ್ಲಿ ರಿಜಿಸ್ಟರ್ ಮಾಡಿಕೊಂಡರೆ ನಿಮಗೆ ಉಚಿತ ವಿದ್ಯುತ್ ಯೋಜನೆ ಮುಂದಿನ ತಿಂಗಳಿನಿಂದ ಪ್ರಾರಂಭವಾಗುತ್ತದೆ ಹಾಗೂ ಅದು ನಿಮಗೆ ಅದರ ನಂತರದ ತಿಂಗಳಿನ ವಿದ್ಯುತ್ ಬಿಲ್ ನಲ್ಲಿ ಕಾಣಿಸುತ್ತದೆ. ಆದರೆ ಇದಕ್ಕೂ ಮುಂಚೆ ವಿದ್ಯುತ್ ನಿಗಮ ಈಗ ಪ್ರಮುಖವಾದ ಎಚ್ಚರಿಕೆಯನ್ನು ಗ್ರಾಹಕರಿಗೆ ನೀಡಿದೆ.

ಸೇವಾ ಸಿಂಧು ಪೋರ್ಟಲ್ ನಲ್ಲಿ ಹೆಚ್ಚಾದ ರಿಜಿಸ್ಟರ್ ಆಗುವಿಕೆಯ ಕಾರಣದಿಂದಾಗಿ ಸರ್ವರ್ ಕ್ರಾಶ್ ಆಗುತ್ತಿದೆ. ಇದೇ ಕಾರಣಕ್ಕಾಗಿ ಪ್ರತಿ ಬಾರಿ ಹೋಗಿ ನೀವು ಸರ್ವರ್ ನಲ್ಲಿ ನಿಮ್ಮ ಅರ್ಜಿ ಸ್ವೀಕೃತಿ ಆಗಿದೆಯೇ ಇಲ್ಲವೇ ಎಂಬುದನ್ನು ಹೋಗಿ ಚೆಕ್ ಮಾಡುತ್ತಲೇ ಇರಬೇಕು ಯಾಕೆಂದರೆ ಕೆಲವೊಮ್ಮೆ ನೀವು ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸಲ್ಲಿಕೆ ಆಗಿರುತ್ತದೆ ಎಂಬುದಾಗಿ ಭಾವಿಸಿ, ಸುಮ್ಮನಾಗಿ ಬಿಡುತ್ತೀರಿ. ಸರ್ವರ್ ಸಮಸ್ಯೆಯಿಂದಾಗಿ ಕೆಲವೊಮ್ಮೆ ಅರ್ಜಿ ರಿಜೆಕ್ಟ್ ಆದರೂ ಕೂಡ ಆಗಬಹುದು. ಹೀಗಾಗಿ ನಿಮ್ಮ ಹಾಗೂ ವಿದ್ಯುತ್ ನಿಗಮಗಳ ನಡುವಿನ ಗೊಂದಲವನ್ನು ದೂರ ಮಾಡಲು ಈ ರೀತಿ ಚೆಕ್ ಮಾಡಿ ಹಾಗೂ ಒಮ್ಮೆ ಪೂರ್ತಿಯಾಗಿ ರಿಜಿಸ್ಟರ್ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಂಡ ನಂತರವಷ್ಟೇ ನೀವು ಆರಾಮದಾಯಕವಾಗಿ ಗ್ರಹ ಜ್ಯೋತಿ ವಿದ್ಯುತ್ ಯೋಜನೆಯನ್ನು ಆನಂದಿಸಬಹುದಾಗಿದೆ.

Post a Comment

Previous Post Next Post
CLOSE ADS
CLOSE ADS
×