ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಬಾರದು ಎಂದು ಎಷ್ಟೇ ಹೇಳಿದರು ಎಲ್ಲಾದರೂ ಹೋಗುವಾಗ, ಹೋಟೆಲ್ಗಳಲ್ಲಿ, ರೆಸ್ಟೋರೆಂಟ್ ಗಳಲ್ಲಿ ಅಥವಾ ಬಸ್, ಟ್ರೈನ್ ಗಳಲ್ಲಿ ನೀರು ಬೇಕೆಂದರೆ ಪ್ಲಾಸ್ಟಿಕ್ ಬಾಟಲಿಯ ನೀರನ್ನು ಅವಲಂಬಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಪ್ಲಾಸ್ಟಿಕ್ ಅನ್ನುವುದು ಕರಗದೆ ಇರುವ ವಸ್ತು ಇದು ಭೂಮಿಯಲ್ಲಿ ಸಹಸ್ರ ವರ್ಷಗಳವರೆಗೂ ಹಾಗೆ ಇರಬಹುದು ಇದರಲ್ಲಿ ಕರಗದೆ ಇರುವಂತಹ ದೊಡ್ಡ ಪ್ರಮಾಣದ ಖನಿಜ ಅನಿಲಗಳು ಇರುತ್ತವೆ.
2021 ರಲ್ಲಿ ಭಾರತದಲ್ಲಿ ಬಾಟಲಿ ನೀರಿನ ಮಾರುಕಟ್ಟೆ 20,000 ಕೋಟಿ ರೂಪಾಯಿಗಳಷ್ಟು ಆಗಿತ್ತು, ಅನೇಕ ದೇಶ ಹಾಗೂ ಅಂತರಾಷ್ಟ್ರೀಯ ಬಾಟಲಿ ನೀರಿನ ಬ್ರಾಂಡ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಸಾಮಾನ್ಯವಾಗಿ ನೀರಿನ ಒಂದು ಬಾಟಲಿಯ ಬೆಲೆ 20 ರೂಪಾಯಿಗಳಿಗೆ ಲಭ್ಯವಿದೆ. ದೇಶದಲ್ಲಿ ನೀರಿನ ಬಾಟಲಿ ಖರೀದಿಸಿ ನೀರು ಕುಡಿಯುವವರ ಸಂಖ್ಯೆಯು ಜಾಸ್ತಿಯಾಗಿದೆ. 20 ರೂಪಾಯಿ ಆದರೇನು ಒಂದು ಲೀಟರ್ ನೀರು ಸಿಗುತ್ತೆ ಅಂತ ಬಾಟಲಿ ನೀರನ್ನೇ ಬಳಸುತ್ತಾರೆ. ನಾವು ಮನೆಯಲ್ಲಿ ಬಳಸುವ ನೀರಿಗಿಂತಲೂ ಬಾಟಲಿ ನೀರು ಹೆಚ್ಚು ದುಬಾರಿಯಾಗಿರುತ್ತದೆ. ಹಾಗಾದ್ರೆ ನಾವು ಎಷ್ಟು ಹೆಚ್ಚಿನ ಹಣವನ್ನು ಕೊಟ್ಟು ಬಾಟಲಿ ನೀರನ್ನು ಕುಡಿಯುತ್ತೇವೆ ಗೊತ್ತಾ.
ಪ್ಲಾಸ್ಟಿಕ್ ಬಾಟಲಿ ತಯಾರಿಸಲು ಎಷ್ಟು ಹಣ ಬೇಕು:
ಬಾಟಲಿಗೆ ನೀರು ತುಂಬಿಸಿ ಮಾರಾಟ ಮಾಡುವುದು ದೊಡ್ಡ ಉದ್ದಿಮೆ ಆಗಿಬಿಟ್ಟಿದೆ ಆದರೆ ಇದನ್ನು ನಾವು ಒಂದು ಲೀಟರ್ಗೆ ಇಪ್ಪತ್ತು ರೂಪಾಯಿ ಕೊಟ್ಟು ಖರೀದಿ ಮಾಡಿದರೆ ಅದರ ನಿಜವಾದ ವೆಚ್ಚ ಎಷ್ಟಿರುತ್ತೆ ಗೊತ್ತಾ. ಪ್ಲಾಸ್ಟಿಕ್ ಬಾಟಲಿಯ ಬೆಲೆ ಸುಮಾರು 80 ಪೈಸೆ. ಅದರಲ್ಲಿ ಒಂದು ಲೀಟರ್ ನೀರು ತುಂಬಿಸಿದರೆ 1.2 ರೂಪಾಯಿ ಆಗುತ್ತದೆ. ಇನ್ನು ಈ ಬಾಟಲಿಗೆ ಇತರ ವೆಚ್ಚಗಳು ಸೇರಿ 3.40 ರೂ.ಗಳು ಆಗುತ್ತವೆ. ಇದಕ್ಕೆ ಹೆಚ್ಚುವರಿ ಒಂದು ರೂಪಾಯಿಗಳ ಪ್ಯಾಕಿಂಗ್ ಹಾಗೂ ಬ್ರಾಂಡಿಂಗ್ಗಾಗಿ ಸೇರಿಸಬಹುದು. ಅಲ್ಲಿಗೆ ಒಂದು ಬಾಟಲಿ ನೀರಿನ ಬೆಲೆ 6.40ರೂ. ಗಳು. ಆದರೆ ನಾವು ಈ 6.40 ರೂಪಾಯಿಗಳ ನೀರಿನ ಬಾಟಲಿಯನ್ನು 20 ರೂಪಾಯಿಗಳನ್ನು ಕೊಟ್ಟು ಖರೀದಿ ಮಾಡುತ್ತೇವೆ. ಮೂರು ಪಟ್ಟು ಹೆಚ್ಚು ಹಣವನ್ನು ಪಾವತಿಸಿ ಒಂದು ಪ್ಲಾಸ್ಟಿಕ್ ಬಾಟಲಿಯನ್ನು ಖರೀದಿ ಮಾಡುತ್ತೇವೆ.
ಬಾಟಲ್ ನೀರು ಆರೋಗ್ಯಕ್ಕೆ ಎಷ್ಟು ಒಳ್ಳೆಯದು?
ಇನ್ನು ಬಾಟಲಿಗಳು ಸೀಲ್ ಮಾಡಲಾಗಿದ್ದರು ಕೂಡ ಅದರಲ್ಲಿ ಇರುವ ನೀರಿನ ಗುಣಮಟ್ಟದ ಬಗ್ಗೆ ಆಗಾಗ ಪ್ರಶ್ನೆ ಹೇಳುತ್ತಲೇ ಇರುತ್ತದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಸಾಕಷ್ಟು ಬ್ರಾಂಡ್ ಗಳ ನೀರನ್ನು ಕುಡಿಯಲು ಯೋಗ್ಯವಲ್ಲ ಎಂದು ಸಂಶೋಧನೆಗಳು ಹೇಳಿವೆ. ಈ ನೀರು ಅಷ್ಟು ಗುಣಮಟ್ಟದಲ್ಲಿ ಇರುವುದಿಲ್ಲ ಜೊತೆಗೆ ನಾವು ಆ ನೀರನ್ನು ಕುಡಿಯುವುದರಿಂದ ಮೈಕ್ರೋ ಪ್ಲಾಸ್ಟಿಕ್ ಕಣಗಳು ಕೂಡ ನಮ್ಮ ದೇಹಕ್ಕೆ ಸೇರುತ್ತವೆ. ಒಟ್ಟಿನಲ್ಲಿ ಹೇಳುವುದಾದರೆ ತಯಾರು ಮಾಡುವ ವೆಚ್ಚಕ್ಕಿಂತ 3 ಪಟ್ಟು ಅಧಿಕ ಬೆಲೆಯನ್ನು ಕೊಟ್ಟು ಕಲುಷಿತ ನೀರನ್ನು ಕುಡಿದು ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ ಎನ್ನಬಹುದು.