ಕೊನೆಗೂ ಕಾಮಿಡಿ ಶೋ ನಿಲಿಸುವುದಕ್ಕೆ ಕಾರಣ ಏನೆಂದು ಹಂಚಿಕೊಂಡು ಸೃಜನ್ ಲೋಕೇಶ್. ಮಜಾ ಟಾಕೀಸ್ ಮತ್ತೆ ಬರುತ್ತಂತೆ.
ಲೋಕೇಶ್ ಪ್ರೊಡಕ್ಷನ್ ಮೂಲಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಫ್ಯಾಮಿಲಿ ಗ್ಯಾಂಗ್‌ಸ್ಟರ್ ಗೇಮ್ ರಿಯಾಲಿಟಿ ಶೋ ಆರಂಭವಾಗುತ್ತಿದೆ. ಸೃಜನ್ ಲೋಕೇಶ್ ನೇತೃತ್ವದಲ್ಲಿ ಮೂಡಿ ಬರುತ್ತಿರುವ ಈ ಶೋನಲ್ಲಿ ವಾಹಿನಿಯ ಪ್ರತಿಯೊಂದು ಸೀರಿಯಲ್ ಒಂದೊಂದು ತಂಡವಾಗಿ ಸ್ಪರ್ಧಿಸಲಿದ್ದಾರೆ. ಮಜಾ ಪಕ್ಕಾ ಗ್ಯಾರಂಟಿ...ಆದರೆ ಮಜಾ ಟಾಕೀಸ್ ಬಗ್ಗೆ ಪ್ರಶ್ನೆ ಮಾಡುತ್ತಿದ್ದವರಿಗೆ ಇಲ್ಲಿದೆ ಉತ್ತರ....
'ಮಜಾ ಟಾಕೀಸ್ ಆರಂಭಿಸಿದ್ದು ಕೇವಲ 32 ಎಪಿಸೋಡ್‌ಗಳಿಗೆ, ಕೊನೆಯಲ್ಲಿ 32ರಿಂದ 600 ಎಪಿಸೋಡ್‌ಗಳು ಆಯ್ತು ಅಲ್ಲಿವರೆಗೂ ಏನೂ ಪ್ಲ್ಯಾನ್ ಮಾಡಿರಲಿಲ್ಲ. 6 ವರ್ಷಗಳ ಕಾಲ ಮಜಾ ಟಾಕೀಸ್ ಮಾಡಿಕೊಂಡು ಇರುವಾಗ ಬೇರೆ ರೀತಿ ಶೋಗಳ ಪ್ಲ್ಯಾನಿಂಗ್ ಬರಲಿಲ್ಲ ಏಕೆಂದರೆ ಜನರು ಅದನ್ನೇ ಹೆಚ್ಚಿಗೆ ಇಷ್ಟ ಪಡಲು ಆರಂಭಿಸಿದ್ದರು. ಸ್ವಲ್ಪ ಬ್ರೇಕ್ ತೆಗೆದುಕೊಂಡು ಆರಂಭ ಮಾಡಿದೆ ಆನಂತರ ಕೊರೋನಾ ಬಂತು ಮತ್ತೊಮ್ಮೆ ಬ್ರೇಕ್ ಆಯ್ತು. ರಾಜಾ ರಾಣಿ ಹೊಸ ರೀತಿಯ ರಿಯಾಲಿಟಿ ಶೋ ಅದಲ್ಲಿಂದ ಹೊಸಬ್ಬರು ಆಗಮಿಸಿದರು ಅದಾದ ಮೇಲೆ ನನ್ನಮ್ಮ ಸೂಪರ್ ಸ್ಟಾರ್ ಮತ್ತು ಗಿಚ್ಚಿ ಗಿಲಿಗಿಲಿ ನಡೆಯಿತ್ತು ಇಷ್ಟು ಜವಾಬ್ದಾರಿಗಳನನ್ನು ಮುಗಿಸಿದ ಮೇಲೆ ನಾಲ್ಕು ತಿಂಗಳು ಬ್ರೇಕ್ ತೆಗೆದುಕೊಂಡು ಫ್ಯಾಮಿಲಿ ಗ್ಯಾಂಗ್‌ಸ್ಟರ್ ಶುರು ಮಾಡುತ್ತಿರುವುದು ಇದೊಂದು ಬ್ಯುಟಿಫುಲ್ ಚಾಲೆಂಜ್' ಎಂದು ಸೃಜನ್ ಯುಟ್ಯೂಬ್ ಚಾನೆಲ್‌ವೊಂದರಲ್ಲಿ ಮಾತನಾಡಿದ್ದಾರೆ.
ನಮಗೆ ಜವಾಬ್ದಾರಿಗಳನ್ನು ನೀಡಿದಾಗ ಅದನ್ನು ಕರೆಕ್ಟ್ ಮಾಡುವುದು ಅಷ್ಟೇ ನಮ್ಮ ಕರ್ತವ್ಯ. ಜಡ್ಜ್ ಸ್ಥಾನ ಸ್ವೀಕರಿಸಿದಾಗಲೂ ಕಾಮಿಡಿ ಮಾಡುತ್ತಿದ್ದೆ ಒಂದು ರೀತಿಯಲ್ಲಿ ಇಡೀ ಶೋನಲ್ಲಿ ಸೇರಿಕೊಳ್ಳುತ್ತಿದ್ದೆ. ನಿರೂಪಣೆ ಒಂದು ರೀತಿ ಆದರೆ ಜಡ್ಜ್ ಸ್ಥಾನ ಹಾಗಲ್ಲ...ಒಂದು ವಾರ ಶ್ರಮದಿಂದ ಕೆಲಸ ಮಾಡಿರುತ್ತಾರೆ ಅವರನ್ನು ಜಡ್ಜ್ ಮಾಡುವುದು ಕಷ್ಟ ಆದರೆ ನನ್ನ ಶೋನಲ್ಲಿ ಎಲ್ಲವೂ ಲೈಫ್ ಅಗಿ ಸ್ವೀಕರಿಸುವ ಸ್ಪರ್ಧಿ ಇದ್ದ ಕಾರಣ ಕೂಲ್ ಆಗಿ ನಡೆಯಿತ್ತು ನನಗೆ ಖುಷಿ ಕೊಡುವುದು ಆಂಕರಿಂಗ್ ಕೆಲಸ ಅದು ನನ್ನ ವೃತ್ತಿ ಜೀವನದ ಪ್ಲಸ್ ಪಾಯಿಂಟ್ ಆಗಿರುತ್ತದೆ ಎಂದು ಸೃಜನ್ ಹೇಳಿದ್ದಾರೆ.
ಕೇವಲ ಎರಡು ಕ್ಯಾಮೆರಾಗಳನ್ನು ಬಳಸಿಕೊಂಡು ಸಣ್ಣದೊಂದು ರೂಮ್‌ನಲ್ಲಿ ಆರಂಭಿಸಿದ್ದು ಆಡು ಆಟ ಆಡು ಶೋ ಆನಂತರ ವೀಕ್ಷಕರ ಆಯ್ಕೆ ಪ್ರಕಾರ. ನಾನು ಆರಂಭಿಸಿದಾಗ ಇದ್ದ ತಂತ್ರಜ್ಞಕ್ಕೂ ಈಗ ಇರುವ ತಂತ್ರಜ್ಞಕ್ಕೂ ತುಂಬಾ ವ್ಯತ್ಯಾಸವಿದೆ. ಸಣ್ಣ ಶೆಡ್‌ನಲ್ಲಿ ಕೆಲಸ ಮಾಡಿದ ವ್ಯಕ್ತಿ ಈಗ ಇಷ್ಟು ದೊಡ್ಡ ಸೆಟ್‌ನಲ್ಲಿ ಇರುವುದಕ್ಕೆ ಖುಷಿ ಇದೆ ಜೊತೆಗೆ ಇಂಡಸ್ಟ್ರಿ ಬೆಳೆಯುತ್ತಿದೆ. ಪ್ರತಿಯೊಂದು ಶೋನೂ ಹೊಸ ಶೋ ಹೊಸ ವಿಚಾರ ಕಲಿಯುತ್ತಿರುವೆ ಎಂದು ಕೆಲಸ ಮಾಡಬೇಕು ಎಂದಿದ್ದಾರೆ ಸೃಜನ್.
ಮಜಾ ಟಾಕೀಸ್‌ನ ಮತ್ತೆ ಆರಂಭಿಸುತ್ತೀನಿ 200% ಆರಂಭಿಸುತ್ತೀನಿ ಬಿಡುವಂತ ಶೋ ಅದಲ್ಲ. ನಾನಾ ಕಾರಣಗಳಿಂದ ಶೋನ ಅಲ್ಲಿಗೆ ನಿಲ್ಲಿಸಬೇಕಿತ್ತು ಕೋವಿಡ್ ಕೂಡ ದೊಡ್ಡ ಕಾರಣವಾಗಿತ್ತು ಅದಲ್ಲದೆ ಸಿನಿಮಾ ಕೆಲಸಗಳು ನಡೆಯುತ್ತಿರಲಿಲ್ಲ ಸಿನಿಮಾ ರಿಲೀಸ್ ಆಗುತ್ತಿರಲಿಲ್ಲ ಸರ್ಕಾರ ಕೂಡ ಹೊಸ ನಿಯಮಗಳನ್ನು ತರುತ್ತಿತ್ತು ಒಳಗೆ ಚಿತ್ರೀಕರಣ ಮಾಡುವಂತೆ ಇರಲಿಲ್ಲ ಲಿಮಿಟೆಡ್ ವ್ಯಕ್ತಿಗಳ ಜೊತೆ ಸದಾ ಮಾಸ್ಕ್ ಹಾಕಿಕೊಂಡು ಕೆಲಸ ಮಾಡುವುದು ಕಷ್ಟ ಹೊರಗಡೆ ಬರುವುದಕ್ಕೆ ಕಲಾವಿದರು ಹೆದರಿಕೊಳ್ಳುತ್ತಿದ್ದರು. ಕೋವಿಡ್ ಅಂದ್ರೆ ಏನು ಅಂತಾನೇ ನಮಗೆ ಗೊತ್ತಿಲ್ಲ ಇಡೀ ದೇಶವೇ ನೆಲ್ಲುವಂತ ಪರಿಸ್ಥಿತಿಗೆ ತಂದಿತ್ತು. ಕೊರೋನಾ ದಾಟಿ ಮುಂದೆ ಬಂದಿದ್ದೀವಿ ತುಂಬಾ ಸಿನಿಮಾ ರಿಲೀಸ್ ಆಗುತ್ತಿದೆ ನಮ್ಮ ಚಿತ್ರರಂಗ ನೆಮ್ಮದಿಯಾಗಿದೆ. ಮುಖ್ಯವಾಗಿ ಸಿನಿಮಾ ಇಂಡಸ್ಟ್ರಿಗೆ ಪ್ರಚಾರ ಮಾಡಲು ಸಹಾಯ ಮಾಡುತ್ತಿದೆ ಅಂದ್ರೆ ಖುಷಿ ವಿಚಾರವೇ 450 ರಿಂದ 600 ಸಿನಿಮಾ ತಂಡಗಳಿಂದ ಒಂದು ರೂಪಾಯಿಯೂ ಪಡೆಯದೆ ಪ್ರಚಾರ ಮಾಡಿದ್ದೀವಿ. ಸಾಮಾನ್ಯವಾಗಿ ಪ್ರಚಾರಕ್ಕೆ ತುಂಬಾ ಹಣ ಖರ್ಚು ಆಗುತ್ತದೆ ಆದರೆ ಮಜಾ ಟಾಕೀಸ್ ಮೂಲಕ ಸಹಾಯ ಆಗಿದೆ ಪ್ರಚಾರ ಸಿಕ್ಕಿದೆ ಅಂದ್ರೆ ಅದಕ್ಕಿಂತ ಹೆಮ್ಮೆ ಏನು ಬೇಕು? ಎಂದು ಸೃಜನ್ ಹೇಳಿದ್ದಾರೆ.