BPL AAY Ration Card : ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನವರು ಆಯ್ಕೆಯಾದ ಬೆನ್ನಲ್ಲೇ, ನಮ್ಮ ಕರ್ನಾಟಕ ರಾಜ್ಯದ ಜನಸಾಮಾನ್ಯರ ನಿರೀಕ್ಷೆಗಳು ಹಾಗು ಆಶ್ವಾಸನೆಗಳು ಹೆಚ್ಚಾಗಿದೆ, ಇದೀಗ ಎಲ್ಲಾ ಬಿಪಿಎಲ್, ಎಪಿಎಲ್ ಹಾಗು ಅಂತ್ಯೋದಯ ರೇಷನ್ ಕಾರ್ಡ್ ದಾರರಿಗೆ ಈಗಾಗಲೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯಲ್ಲಿ 10 ಕೆಜಿ ಅಕ್ಕಿಯನ್ನ ವಿತರಣೆಗೆ ಈ ಕೂಡಲೇ ತಾತ್ವಿಕ ಒಪ್ಪಿಗೆ ಕೂಡ ಕೊಡುವುದರ ಮೂಲಕ ಪ್ರಸಕ್ತ ಈ ತಿಂಗಳಿನಿಂದಲೇ ಪ್ರತೀ ರೇಷನ್ ಕಾರ್ಡ್ ನ ಸದಸ್ಯನಿಗೆ 10 ಕೆಜಿ ಅಕ್ಕಿಯನ್ನ ವಿತರಣೆ ಮಾಡುವುದಕ್ಕೆ ಆದೇಶ ಹೊರಡಿಸಲಾಗಿದೆ.
ಅಕ್ಕಿಯ ಜೊತೆಗೆ ಸಕ್ಕರೆ, ಉಪ್ಪು ಗೋಧಿ, ಬೇಳೆಕಾಳು ಹಾಗು ಸೀಮೆ ಎಣ್ಣೆ ವಿತರಣೆ ಮಾಡುವುದರ ಕುರಿತು ಬ್ರೇಕಿಂಗ್ ಮಾಹಿತಿ ಲಭ್ಯವಾಗಿದೆ.
ಹೌದು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನ ಪಡೆದುಕೊಳ್ಳಲು ಇದೀಗ ಬಿಪಿಎಲ್ ರೇಷನ್ ಕಾರ್ಡ್ ಕಡ್ಡಾಯ ಮಾಡಲಾಗಿದ್ದು, ಹಾಗು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನ ಪಡೆಯಲು ಕೂಡ ಬಿಪಿಎಲ್ ಹಾಗು ಅಂತ್ಯೋದಯ ರೇಷನ್ ಕಾರ್ಡ್ ಗಳು ಪ್ರಮುಖವಾದ ದಾಖಲೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘವು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಧೀಕೃತವಾಗಿ ಪತ್ರವನ್ನ ಬರೆದಿದ್ದು, ರೇಷನ್ ವಿತರಣೆ ಮಾಡುವ ಸಂದರ್ಭದಲ್ಲಿ ಅಕ್ಕಿ ಜೊತೆಗೆ ಇತರೆ ಸಾಮಗ್ರಿಗಳು ಸಕ್ಕರೆ, ಉಪ್ಪು, ಗೋಧಿ ಬೇಳೆಕಾಳು ಹಾಗು ಸೀಮೆ ಎಣ್ಣೆ ವಿತರಣೆ ಮಾಡುವಂತೆ ಇದೀಗ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘವು ಮುಖ್ಯಮಂತ್ರಿಯವರಿಗೆ ಮನವಿ ಪತ್ರವನ್ನ ಸಲ್ಲಿಸಿದೆ
ಈ ಹಿಂದಿನ ನಾಲ್ಕು ವರ್ಷದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವೆಲ್ಲಾ ಆಹಾರ ಸಾಮಗ್ರಿಗಳನ್ನ ವಿತರಣೆ ಮಾಡಲಾಗುತ್ತಿತ್ತೋ, ಅದನ್ನ ಮತ್ತೆ ವಿತರಣೆ ಮಾಡುವಂತೆ ಇದೀಗ ಮನಸಿವಿ ಪತ್ರ ಸಲ್ಲಿಸಲಾಗಿದೆ. ಈ ಮನವಿ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಗೆ ಸ್ಪಂದಿಸುತ್ತಾರೆ ಎಂದು ಕಾದುನೋಡಬೇಕಿದೆ. ಹೀಗಾಗಿ ಅದಷ್ಟಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಕೂಡ ಶೇರ್ ಮಾಡಿ.