ಪೊಲೀಸ್ ಇಲಾಖೆಯ 1500 ಹುದ್ದೆಗಳಿಗೆ ಮುಂದಿನವಾರ ಅಧಿಸೂಚನೆ

ಪೊಲೀಸ್ ಇಲಾಖೆಯ 1500 ಹುದ್ದೆಗಳಿಗೆ ಮುಂದಿನವಾರ ಅಧಿಸೂಚನೆ

 Karnataka Police Jobs 2023: ಮುಂದಿನವಾರವೇ ಸಾವಿರದ ಐನೂರು ಪೊಲೀಸ್‌ ಹುದ್ದೆಗಳಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಗೃಹ ಸಚಿವರು ಹೇಳಿದ್ದಾರೆ. ಆದರೆ ಈ ಹುದ್ದೆಗಳು ಯಾವುವು ಎಂದು ತಿಳಿಸಲಾಗಿಲ್ಲ. ಪ್ರಸ್ತುತ ಯಾವೆಲ್ಲ ಪೊಲೀಸ್ ಇಲಾಖೆ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ, ಪರೀಕ್ಷೆ ಯಾವಾಗ ಎಂಬ ಮಾಹಿತಿಗಳನ್ನು ಇಲ್ಲಿ ತಿಳಿಸಲಾಗಿದೆ



ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ 15 ಸಾವಿರ ಪೊಲೀಸ್ ಸಿಬ್ಬಂದಿ ಪೋಸ್ಟ್‌ಗಳು ಖಾಲಿ ಇವೆ. ಇವುಗಳ ಪೈಕಿ ಮುಂದಿನವಾರ 1500 ಹುದ್ದೆಗಳಿಗೆ ನೋಟಿಫಿಕೇಶನ್‌ ಹೊರಡಿಸಲಾಗುವುದು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ

ನಿನ್ನೆ ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಯನ್ನು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಂಡಿದ್ದಾರೆ

ರಾಜ್ಯದಲ್ಲಿ 11 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ ಮಾಡಿ, ಇದರೊಂದಿಗೆ 2454 ಹೊಸ ಹುದ್ದೆಗಳನ್ನು ಸಹ ಸೃಜಿಸಲು ಸರ್ಕಾರದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ

ಗೃಹ ಸಚಿವ ಜಿ ಪರಮೇಶ್ವರ್ ರವರು ಇತ್ತೀಚೆಗಷ್ಟೆ 15,000 ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು, ಇದಕ್ಕೆ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ. ಅದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದರು. ಇದೀಗ ಈ ಹುದ್ದೆಗಳನ್ನು ಹಂತ ಹಂತವಾಗಿ ನೇಮಕ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಸದ್ಯದಲ್ಲೇ 3500 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗುವುದು ಎಂದು ಹೇಳಿದ್ದಾರೆ.

ಗೃಹ ಸಚಿವರು ಹೇಳಿರುವ 1500 ಪೊಲೀಸ್‌ ಸಿಬ್ಬಂದಿಗಳ ಪೈಕಿ ಯಾವ್ಯಾವ ಹುದ್ದೆಗಳಿಗೆ ಅರ್ಜಿ ಕರೆಯಲಾಗುತ್ತದೆ ಎಂದು ಅಧಿಸೂಚನೆ ಹೊರಡಿಸಿದ ನಂತರವಷ್ಟೇ ತಿಳಿಯಬೇಕಿದೆ.


420 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಪರೀಕ್ಷೆ


2022-23ನೇ ಸಾಲಿನ ಕಲ್ಯಾಣ ಕರ್ನಾಟಕದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ -420 (ಸಿಎಆರ್ / ಡಿಎಆರ್) ಹುದ್ದೆಗಳಿಗೆ ಲಿಖಿತ ಪರೀಕ್ಷೆ ದಿನಾಂಕವನ್ನು ಇತ್ತೀಚೆಗೆ ನಿಗಧಿ ಮಾಡಿದೆ. ಜುಲೈ 16 ರಂದು ಪರೀಕ್ಷೆ ನಡೆಸುವುದಾಗಿ ತಿಳಿಸಲಾಗಿದೆ.

ಇನ್ನು ರಾಜ್ಯ ಪೊಲೀಸ್ ಇಲಾಖೆಯು 2022 ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಅಧಿಸೂಚಿಸಿದ್ದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಜುಲೈ 02, 09, 16, 23, 2023 ರಂದು ಲಿಖಿತ ಪರೀಕ್ಷೆ ನಡೆಸಲು ಸಂಭಾವ್ಯ ದಿನಾಂಕಗಳೆಂದು ಕರ್ನಾಟಕ ಡಿಜಿಪಿ (ನೇಮಕಾತಿ ವಿಭಾಗ) ರವರು ತಿಳಿಸಿದ್ದರು.

ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗೆ ವಿದ್ಯಾರ್ಹತೆ : ದ್ವಿತೀಯ ಪಿಯುಸಿ / 12ನೇ ತರಗತಿ ಪಾಸ್.

ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗೆ ವಿದ್ಯಾರ್ಹತೆ : ಯಾವುದೇ ಪದವಿ ಪಾಸ್.

ಆಯ್ಕೆ ವಿಧಾನ : ಲಿಖಿತ ಪರೀಕ್ಷೆ / ಸಹಿಷ್ಣುತೆ ಪರೀಕ್ಷೆ / ದೈಹಿಕ ಸಾಮರ್ಥ್ಯ ಪರೀಕ್ಷೆ / ವೈದ್ಯಕೀಯ ಪರೀಕ್ಷೆ / ಮೂಲ ದಾಖಲೆಗಳ ಪರಿಶೀಲನೆ.

ಪಿಎಸ್‌ಐ, ಕಾನ್ಸ್‌ಟೇಬಲ್ ಹುದ್ದೆಗಳಿಗೆ ಇತರೆ ಅರ್ಹತೆಗಳೇನು, ಅರ್ಜಿ ಶುಲ್ಕ ಎಷ್ಟು ಎಂಬ ಸವಿವರ ಮಾಹಿತಿಗಳನ್ನು ಅಧಿಸೂಚನೆ ಹೊರಡಿಸಿದ ನಂತರ ತಿಳಿಸಲಾಗುವುದು.


Post a Comment

Previous Post Next Post
CLOSE ADS
CLOSE ADS
×