ನವೋದಯ ವಿದ್ಯಾಲಯ ಸಮಿತಿಯಲ್ಲಿ ಅಗತ್ಯ ಪಿಜಿಟಿ, ಟಿಜಿಟಿ ಶಿಕ್ಷಕರು ಹಾಗೂ ಮ್ಯೂಸಿಕ್, ಲೈಬ್ರಿರಿಯನ್ ಎಂಐಎಸ್‌ಸಿ ಹುದ್ದೆಗಳನ್ನು ಭರ್ತಿ ಮಾಡಲು ಇ-ಮೇಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನಿಗಧಿತ ಕೊನೆ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.
ಜವಾಹರ ನವೋದಯ ವಿದ್ಯಾಲಯದಲ್ಲಿ 2023-24ನೇ ಸಾಲಿಗೆ ಅಗತ್ಯ ಇರುವ ಶಿಕ್ಷಕರ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಅಧಿಸೂಚಿಸಲಾಗಿದೆ. ಈ ಹುದ್ದೆಗಳನ್ನು ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳದಲ್ಲಿ ನೇಮಕ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಇ-ಮೇಲ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು, ಹಾರ್ಡ್ ಕಾಪಿ ಸಲ್ಲಿಸುವ ಅಗತ್ಯ ಇರುವುದಿಲ್ಲ. ಹುದ್ದೆಗಳನ್ನು ಟಿಜಿಟಿ, ಪಿಜಿಟಿ, ಎಂಐಎಸ್‌ಸಿ ಕೆಟಗರಿಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ
ಹುದ್ದೆಗಳ ವಿವರ
ಸ್ನಾತಕೋತ್ತರ ಪದವೀಧರ ಶಿಕ್ಷಕರು (PGTs) : 161
ತರಬೇತುದಾರ ಪದವೀಧರ ಶಿಕ್ಷಕರು (TGTs) : 160
ವಿದ್ಯಾರ್ಹತೆ
ಸ್ನಾತಕೋತ್ತರ ಪದವೀಧರ ಶಿಕ್ಷಕರು (PGTs) : ಎಂಎ/ ಎಂಎಸ್ಸಿ ಜತೆಗೆ ಬಿ.ಇಡಿ.
ತರಬೇತುದಾರ ಪದವೀಧರ ಶಿಕ್ಷಕರು (TGTs) : ಬಿಎ/ ಬಿಎಸ್ಸಿ ಜತೆಗೆ ಬಿ.ಇಡಿ.
ಹಿಂದಿ, ಇಂಗ್ಲಿಷ್, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಇತಿಹಾಸ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ಕಾಮರ್ಸ್, ಕಂಪ್ಯೂಟರ್ ಸೈನ್ಸ್ ವಿಷಯಗಳಿಗೆ ಈ ಶಿಕ್ಷಕ ಹುದ್ದೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10-06-2023
ಯಾವ ಹುದ್ದೆಗಳಿಗೆ ಎಷ್ಟು ಸಂಭಾವನೆ ಎಂದು ಕೆಳಗಿನಂತೆ ತಿಳಿಸಲಾಗಿದೆ.
ಪೋಸ್ಟ್ ಗ್ರಾಜುಯೇಟ್ ಟೀಚರ್: Rs.35,750 ಮಾಸಿಕ.
ತರಬೇತುದಾರ ಪದವೀಧರ ಶಿಕ್ಷಕರು: Rs.34,125 ಮಾಸಿಕ.
Misc, ಕೆಟಗರಿ ಶಿಕ್ಷಕರು : Rs.34,125 ಮಾಸಿಕ.
ವಯಸ್ಸಿನ ಅರ್ಹತೆ : ಜುಲೈ 01 ಕ್ಕೆ ಗರಿಷ್ಠ 50 ವರ್ಷ ವಯಸ್ಸು ಮೀರಿರಬಾರದು. ಎನ್‌ವಿಎಸ್ ಮಾಜಿ ಶಿಕ್ಷಕರಿಗೆ ಗರಿಷ್ಠ 62 ವರ್ಷ ವಯಸ್ಸು ಮೀರಿರಬಾರದು.
ಆಯ್ಕೆ ವಿಧಾನ : ಸಂದರ್ಶನ (ಪರ್ಸನಲ್ ಇಂಟೆರ್ಯಾಕ್ಷನ್)
ಸಂದರ್ಶನ ದಿನಾಂಕ: 2023 ಜೂನ್ 19-21 ರವರೆಗೆ.
ಅರ್ಜಿ ಸಲ್ಲಿಸಿದವರು ಸಂದರ್ಶನಕ್ಕೆ ಹಾಜರಾಗುವ ಕುರಿತು ಅಪ್‌ಡೇಟ್ ತಿಳಿಯಲು ಜೂನ್ 15-16 ರಂದು ತಮ್ಮ ಇ-ಮೇಲ್ ಚೆಕ್ ಮಾಡಿಕೊಳ್ಳಬೇಕು
ಅರ್ಜಿ ಸಲ್ಲಿಸಬೇಕಾದ ಇ-ಮೇಲ್ ವಿಳಾಸವನ್ನು ತಿಳಿಯಲು ಕೆಳಗಿನ ಅಧಿಸೂಚನೆ ಓದಿರಿ.
NVS TGTs, PGTs Recruitment 2023-24 Notification
ಅರ್ಜಿ ಸಲ್ಲಿಸಲು ಬೇಕಾದ ದಾಖಲೆ / ಮಾಹಿತಿಗಳು
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
ಪಿಯುಸಿ ಅಂಕಪಟ್ಟಿ
ಪದವಿ / ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ
ಬಿ.ಇಡಿ ಶಿಕ್ಷಣ ಪಾಸ್ ಪ್ರಮಾಣ ಪತ್ರ.
ಸಿಟಿಇಟಿ ಪಾಸ್ ಪ್ರಮಾಣ ಪತ್ರ
ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಹೆಚ್ಚಿನ ಶಿಕ್ಷಣ ಪಡೆದಿದ್ದಲ್ಲಿ ಸರ್ಟಿಫಿಕೇಟ್.
ಇತರೆ ಹೆಚ್ಚಿನ ಶಿಕ್ಷಣ ಪಡೆದಿದ್ದಲ್ಲಿ ದಾಖಲೆ / ಮಾಹಿತಿ ಲಗತ್ತಿಸುವುದು