ಒಂದು ವೇಳೆ ನೀವು UPI ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಹಣದ ವ್ಯವಹಾರವನ್ನು ಮಾಡುತ್ತಿದ್ದರೆ ಖಂಡಿತವಾಗಿ RBI ಪರಿಚಯಿಸಿರುವಂತಹ ಈ ಹೊಸ ನಿಯಮ ನಿಮಗೆ ಸಾಕಷ್ಟು ನೆಮ್ಮದಿಯನ್ನು ತಂದುಕೊಡಲಿದೆ.
ಹಾಗಿದ್ದರೆ ರಿಸರ್ವ್ ಬ್ಯಾಂಕ್ ಇಂಡಿಯಾ ತನ್ನ ಗ್ರಾಹಕರಿಗೆ ನೀಡಿರುವಂತಹ ಶುಭಸುದ್ದಿಯಾದರೂ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಒಂದು ವೇಳೆ ನೀವು UPI ಅಥವಾ Credit Card ಮೂಲಕ 20,000 ಗಿಂತಲೂ ಅಧಿಕ ಟ್ರಾನ್ಸಾಕ್ಷನ್ ಮಾಡುತ್ತಿದ್ದರೆ ಅದರ ಮೇಲೆ ಯಾವುದೇ ಶುಲ್ಕವನ್ನು ಕಟ್ಟಬೇಕಾದ ಅಗತ್ಯವಿಲ್ಲ ಎಂಬುದಾಗಿ ಆರ್‌ಬಿಐ ತಿಳಿಸುತ್ತದೆ. ಹೌದು ತನ್ನ ಎಲ್ಲಾ ಬ್ಯಾಂಕುಗಳಿಗೂ ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಂದು ವೇಳೆ ಯಾವುದೇ ಕಷ್ಟಮರ್ ತನ್ನ ಕ್ರೆಡಿಟ್ ಕಾರ್ಡ್ ಗೆ ಯುಪಿಐ ಅನ್ನು ಆಡ್ ಮಾಡುತ್ತಾನೆ ಎಂದರೆ,
ಅದರಿಂದ ಟ್ರಾನ್ಸಾಕ್ಷನ್ ಮಾಡುವಂತಹ 20,000 ಅಥವಾ ಅದಕ್ಕಿಂತ ಕಡಿಮೆಯ ಯಾವುದೇ ಟ್ರಾನ್ಸಾಕ್ಷನ್ ಗಳಿಗೂ ಕೂಡ ಅತಿರಿಕ್ತ ಶುಲ್ಕವನ್ನು ಪಾವತಿಸುವ ಯಾವುದೇ ಅಗತ್ಯವಿಲ್ಲ ಎಂಬುದಾಗಿ ತಾಕೀತು ಮಾಡಿದೆ. ಇದು ಯುಪಿಐ ಹಾಗೂ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಸಂತೋಷ ಪಡುವ ಸುದ್ದಿಯಾಗಿದೆ ಎಂದರೆ ತಪ್ಪಾಗಲಾರದು.
ಸದ್ಯಕ್ಕೆ ಈ ನಿಯಮಗಳನ್ನು ಜಾರಿ ತರಬೇಕು ಎನ್ನುವುದಾಗಿ RBI ತನ್ನ ಬ್ಯಾಂಕುಗಳಿಗೆ ಇದೇ ಅಕ್ಟೋಬರ್ ನಾಲ್ಕರಂದು ಸುತ್ತೋಲೆಯನ್ನು ಹೊರಡಿಸಲಿದೆ ಎಂಬುದಾಗಿ ಎಲ್ಲ ಮೂಲಗಳಿಂದ ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ನಲ್ಲಿ ಯುಪಿಐ ಅನ್ನು ಸೇರಿಸುವಂತಹ ಪ್ರಕ್ರಿಯೆ ಎಲ್ಲರಿಗೂ ಕೂಡ ತಲುಪಬೇಕು ಎನ್ನುವ ಕಾರಣಕ್ಕಾಗಿ ಕೂಡ ಇಂತಹ ಯೋಜನೆಗಳಿಗೆ ಇನ್ನಷ್ಟು ಪ್ರೋತ್ಸಾಹವನ್ನು ನೀಡಲಾಗುತ್ತಿದೆ ಎಂಬುದಾಗಿ ಕೂಡ ಬ್ಯಾಂಕ್ ಮೂಲ ತಿಳಿಸಿದೆ. RBI ನ ಈ ಹೊಸ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.