ಈಗಾಗಲೇ ಎಲ್ಪಿಜಿ ಗ್ಯಾಸ್ ಸಿಲಿಂಡರ್ (LPG Cylinder) ಬೆಲೆ ದುಬಾರಿ ಆಗಿರುವುದಕ್ಕೆ ಗ್ರಾಹಕರು ಕಳವಳಗೊಂಡಿದ್ದಾರೆ
ಈ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಹೊಸ ನಿಯಮ ಬಿಡುಗಡೆ ಮಾಡಿದ್ದು ಹಣದುಬ್ಬರದ ಸಂದರ್ಭದಲ್ಲಿ ಈ ಹೊಸ ನಿಯಮ ಜನರಿಗೆ ತುಸು ನೆಮ್ಮದಿ ನೀಡಬಹುದು. ಹಣದುಬ್ಬರ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದ್ದು ಜನರಿಗೆ ನಿತ್ಯದ ಜೀವನ ನಡೆಸಲು ಕಷ್ಟವಾಗುತ್ತಿದೆ ಪೆಟ್ರೋಲ್, ಡೀಸೆಲ್ ಅಡುಗೆ ಇಂಧನ ಎಲ್ಲವುಗಳ ಬೆಲೆ ಹಾಗೂ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹಾಗಾಗಿ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಗೆ ಸಬ್ಸಿಡಿ ನೀಡುವುದಾಗಿ ಸರ್ಕಾರ ಘೋಷಿಸಿದೆ.
ಕೇಂದ್ರ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ:
ಎಲ್ಪಿಜಿ ಸಿಲೆಂಡರ್ (LPG Cylinder) ಮೇಲೆ ಹೆಚ್ಚುವರಿ ಸಬ್ಸಿಡಿ ನೀಡಲು ಸರ್ಕಾರ ಪರವಾನಿಗೆ ನೀಡಿದೆ ಎಂದು ಮಾಹಿತಿ ಲಭ್ಯವಾಗಿದೆ ಅಂದರೆ ಸಾವಿರದ ನೂರು ರೂಪಾಯಿಗಳಿಗೆ ಸಿಗುವ ಸಿಲಿಂಡರ್ ಗ್ಯಾಸ್ ಅನ್ನು ಇನ್ನು ಮುಂದೆ 587 ರೂಪಾಯಿಗಳಿಗೆ ಪಡೆದುಕೊಳ್ಳಬಹುದು. ಆದರೆ ಈ ನಿಯಮಗಳು ದೇಶದ ಕೆಲವು ರಾಜ್ಯಗಳಿಗೆ ಮಾತ್ರ ಅನ್ವಯವಾಗಲಿದೆ.
12 ರಾಜ್ಯಗಳಿಗೆ ಸಿಗಲಿದೆ:
ಸದ್ಯ ಹನ್ನೆರಡು ರಾಜ್ಯಗಳಲ್ಲಿ ಗ್ಯಾಸ್ ಸಿಲೆಂಡರ್ ಗೆ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದ ಹಣದುಬ್ಬರ ಸಮಸ್ಯೆಗೆ ಸ್ವಲ್ಪ ಪರಿಹಾರ ಸಿಗಬಹುದು ಎಂದು ಊಹಿಸಲಾಗಿದ್ದು, ಸದ್ಯದಲ್ಲಿಯೇ ದೇಶದ ಎಲ್ಲಾ ರಾಜ್ಯಗಳಿಗೂ ಸಬ್ಸಿಡಿ ಯೋಜನೆ ವಿಸ್ತರಿಸುವ ಸಾಧ್ಯತೆ ಇದೆ.
ಉಚಿತವಾಗಿ ಸಿಗಲಿದೆ ಗ್ಯಾಸ್ ಸಿಲೆಂಡರ್:
ಮೇ 25 ರಿಂದ ಅಂದರೆ ಇಂದಿನಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾಗಲಿದೆ. ಬಿಹಾರ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಖಾನಪುರ, ರಾಜಸ್ಥಾನ, ಮಧ್ಯಪ್ರದೇಶ, ಒಡಿಸ್ಸಾ ಮೊದಲಾದೆಡೆ ಈ ಹೊಸ ನಿಯಮ ಜಾರಿಯಾಗಲಿದ್ದು ಕೇವಲ 587 ರೂ.ಗಳಿಗೆ ಲಭ್ಯವಿದೆ. ಇದರ ಜೊತೆಗೆ ಕೆಲವು ರಾಜ್ಯಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಘೋಷಿಸಲಾಗಿದೆ.
ದೆಹಲಿಯಲ್ಲಿ ಏರಿದ ಗ್ಯಾಸ್ ಸಿಲಿಂಡರ್ ಬೆಲೆ:
ಕೆಲವು ವರದಿಯ ಪ್ರಕಾರ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1,856 ರೂಪಾಯಿಗಳಿಗೆ ತಲುಪಿದೆ. ಸರ್ಕಾರ ಇದೀಗ ಈ ಬೆಲೆ ಇಳಿಕೆಗೆ ಹೊಸ ನಿಯಮ ಜಾರಿಗೆ ತರಲಿದೆ ಎನ್ನುವ ಮಾಹಿತಿ ಇದೆ