Congress Government: ಕಾಂಗ್ರೆಸ್ ಸರ್ಕಾರದ ಘೋಷಣೆ, ಈ ಕಾರ್ಡ್ ಇದ್ದರೆ ರೈತರ ಸಾಲ ಮನ್ನಾ

Congress Government: ಕಾಂಗ್ರೆಸ್ ಸರ್ಕಾರದ ಘೋಷಣೆ, ಈ ಕಾರ್ಡ್ ಇದ್ದರೆ ರೈತರ ಸಾಲ ಮನ್ನಾ

 ಕರ್ನಾಟಕದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವು (Congress Government) ಈಗ ಜನರ ನಂಬಿಕೆ ಉಳಿಸಲು ತಮ್ಮ ಗ್ಯಾರೆಂಟಿ (Garentty card) ಯೋಜನೆಗಳಿಗೆ ಮಾನ್ಯತೆ ನೀಡಲು ಮುಂದಾಗಿವೆ ಈ ಮೂಲಕ ಜನರಿಗೆ ಕಾಂಗ್ರೆಸ್ ಸರಕಾರ ಬದಲಾವಣೆಯ ಸರ್ವ ಕಾರ್ಯ ಮಾಡುತ್ತದೆ ಎಂಬ ನಂಬಿಕೆಯೂ ಸಹ ಇನ್ನಷ್ಟು ಬಲವಾಗಿದೆ. ಇದೀಗ ಕಾಂಗ್ರೆಸ್ ರೈತರಿಗೂ ಸಹ ಬಂಪರ್ ಗಿಫ್ಟ್ ನೀಡಲು ಮುಂದಾಗಿದೆ.



ರಾಜ್ಯಾದ್ಯಂತ ಇರುವ ಎಲ್ಲ ಸಹಕಾರಿ ಮತ್ತು ರಾಷ್ಟೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದ ಸಾಲಗಳಿಗೆ ಈ ಕಾರ್ಡ್ ಹೊಂದಿದ್ದವರಿಗೆ ಮನ್ನಾ ಯೋಜನೆ ಜಾರಿಗೆ ತರಲು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ನಿರ್ಧಾರ ಕೈಗೊಂಡಿದ್ದಾರೆ.

 ನೀವು ಕೂಡ ರೈತರಾಗಿದ್ದು ಅಥವಾ ಅಂತಹ ಕುಟುಂಬಕ್ಕೆ ಸೇರಿದವರಾಗಿದ್ದರೆ ಈ ಮಾಹಿತಿ ನಿಮಗೆ ವರದಾನ ಎಂದರು ತಪ್ಪಲ್ಲ. 2023ರ ಬಜೆಟ್ ಪೂರ್ವದಲ್ಲೆ ಈ ತೀರ್ಮಾನಕ್ಕೆ ಸರಕಾರ ಮುಂದಾಗಿದ್ದು ಹೊಸದಾಗಿ ಕೃಷಿ ಮಾಡಬೇಕೆಂದವರಿಗೂ ಕಡಿಮೆ ಬಡ್ಡಿಯಲ್ಲಿ ಸಹ ಸಾಲ ದೊರೆಯುವ ನಿರೀಕ್ಷೆ ಸಹ ಇದೆ ಎನ್ನಬಹುದು.

ಏನು ಮಾಡಬೇಕು?

ಕಿಸಾನ್ ಯೋಜನೆಯ ಕಾರ್ಡ್ (Kisan card) ಹೊಂದಿರುವವರು ಈ ಯೋಜನೆಯ ಫಲಾನುಭವಿಗಳು ಎನ್ನಬಹುದು. ಮೊದಲು ಅರ್ಜಿ ಸಲ್ಲಿಸಬೇಕು ಅದಕ್ಕಾಗಿ ತಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ತೆರಳಿ ಅರ್ಜಿ ಸಲ್ಲಿಸಬೇಕು‌. ಬಳಿಕ ಬ್ಯಾಂಕಿನ ವ್ಯವಸ್ಥಾಪಕರ ಬಳಿ ಮಾತನಾಡಿ ನಿರ್ದಿಷ್ಟ ಮಾಹಿತಿ ಪಡೆಯಬೇಕು. ಪಿಎಂ ಕಿಸಾನ್ ಯೋಜನೆಯ ಎಲ್ಲ ಫಲಾನುಭವಿಗಳಿಗೆ ಈ ಯೋಜನೆ ಉಪಯೋಗವಾಗಲಿದೆ. ಈ ಮೂಲಕ ಕಿಸಾನ್ ಕಾರ್ಡ್ ಹೊಂದಿರುವ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲನೆ ಮಾಡಲು ಸರಕಾರ ಎಲ್ಲ ಬ್ಯಾಂಕುಗಳಿಗೆ ಸುತ್ತೋಲೆ ಹೊರಡಿಸಿದೆ.

ಯಾವೆಲ್ಲ ದಾಖಲಾತಿ ಅಗತ್ಯ?

ಪಡಿತರ ಚೀಟಿ.

ಆಧಾರ್ ಕಾರ್ಡ್

ಮೊಬೈಲ್ ಸಂಖ್ಯೆ, ಐಡಿ ಪ್ರೂಫ್, ಕೆಸಿಸಿ ಐಡಿ

ರಾಜ್ಯದ ನಾಗರೀಕರು ಮತ್ತು ಕೃಷಿ ಭೂಮಿಗೆ ಅಟ್ಯಾಚ್ ಮಾಡಿ ಲಿಂಕ್ ಆದ ಬ್ಯಾಂಕ್ ಪಾಸ್ ಬುಕ್

ಆದಾಯ ಪ್ರಮಾಣ ಪತ್ರ ಮತ್ತು ಭೂಮಿ ದಾಖಲೆಗಳು

ಸಾಲಮನ್ನ ಮಾಡಲು ಅರ್ಜಿ ಭರ್ತಿ ಮಾಡಿದ ನಮೂನೆ

ಸುಮಾರು ಎರಡು ಲಕ್ಷದ ವರೆಗೆ ಸಾಲ‌ಮನ್ನಾ ಆಗಲಿದ್ದು ರಾಜ್ಯದ ಎಲ್ಲ ಫಲಾನುಭವಿಗಳಿಗೆ ಆನ್ ಲೈನ್ ಮೂಲಕ ಈ ಯೋಜನೆಗೆ ಅಗತ್ಯ ದಾಖಲಾತಿ ನೀಡಿ ನಿಮ್ಮ ಸಾಲವನ್ನು ಮನ್ನ ಮಾಡಿಕೊಳ್ಳಬಹುದು. ಮಾರ್ಚ್ 31, 2016ರ ವಳೆಗೆ ಸಾಲ ಪಡೆದ ರೈತರಿಗೆ ಈ ಯೋಜನೆಯ ಫಲ ದೊರಕಲಿದ್ದು 2023ರ ಅಡಿಯಲ್ಲಿ ಅವರ ಸಾಲ‌ ಮನ್ನ ಆಗುತ್ತದೆ ಎಂದು ವಿಚಾರ ತಿಳಿದು ಬಂದಿದೆ


Post a Comment

Previous Post Next Post
CLOSE ADS
CLOSE ADS
×