Free Bus Pass: ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಆರಂಭಕ್ಕೆ ಕ್ಷಣಗನೆ, ಪಾಸ್ ಎಲ್ಲಿ ದೊರೆಯುತ್ತೆ ಗೊತ್ತಾ

Free Bus Pass: ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಆರಂಭಕ್ಕೆ ಕ್ಷಣಗನೆ, ಪಾಸ್ ಎಲ್ಲಿ ದೊರೆಯುತ್ತೆ ಗೊತ್ತಾ

 ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದಿದೆ. ಮತದಾರರ ಇಚ್ಚೆಯಂತೆ‌ಕಾಂಗ್ರೆಸ್ ಬದಲಾವಣೆ ತರಲು ವಿವಿಧ ಯೋಜನೆ ಅನುಷ್ಠಾನ ಮಾಡಿದೆ.



 ಮತದಾರರಿಗೆ ಕೊಟ್ಟ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಅದರಲ್ಲೂ ಐದು ಗ್ಯಾರೆಂಟಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ (Free Bus Pass) ವ್ಯವಸ್ಥೆ ಬಗ್ಗೆ ಹೆಚ್ಚು ಮಾತುಗಳು ಕೇಳಿಬರುತ್ತೀವೆ, 

ಈ ಯೋಜನೆಯ ಬಗ್ಗೆಯು ಗ್ರೀನ್ ಸಿಗ್ನಲ್ ಸಿಕ್ಕಿದು ಯಾವತ್ತಿನಿಂದ ಈ ಯೋಜನೆ ಜಾರಿಗೆ ಬರಲಿದೆ ಎಂಬ ಕ್ಯುರಾಸಿಟಿ ಎಲ್ಲರಲ್ಲೂ ಇದೆ ಎನ್ನಬಹುದು.

ಪ್ರತ್ಯೇಕ ಪಾಸ್:

ಮಹಿಳೆಯಾರಿಗೆ ಮಾತ್ರ ಉಚಿತ ಬಸ್ (Free Bus Pass) ಕಲ್ಪಿಸಲಾಗಿದೆ, ಈ ಯೋಜನೆ ರಾಜ್ಯದ ಮಹಿಳೆಯರಿಗೆ ಮಾತ್ರ ಅನ್ವಯ ವಾಗುತ್ತದೆ, ರಾಜ್ಯದ ಗಡಿಯೊಳಗೆ ಸಂಚರಿಸಲು ಉಚಿತವಾಗಿದೆ. ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಿದರೆ ಮಾತ್ರ ಉಚಿತ, ಇದಕ್ಕಾಗಿ ಪ್ರತ್ಯೇಕ ಬಸ್ ಪಾಸ್ ನೀಡಲಾಗುತ್ತದೆ, ಈಗಾಗಲೇ ಸಾರಿಗೆ ಇಲಾಖೆ ಸಿದ್ಧತೆ ನಡೆಸುತ್ತಿದೆ. ಉಚಿತ ಬಸ್ (Free Bus) ಬಳಸಲು ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕು , ಇನ್ನೂ ದೆಹಲಿಯಲ್ಲಿ ಈಗಾಗಲೇ ಈ ವ್ಯವಸ್ಥೆ ಇದೆ. ಬಿಎಂಟಿಸಿ, ಕೆಎಸ್‌ಆರ್ಟಿಸಿ ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ ಉಚಿತ ಪ್ರಯಾಣ ಮಾಡಬಹುದು

ಗ್ಯಾರಂಟಿ ಕಾರ್ಡ್ ಅನುಷ್ಠಾನ:

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳನ್ನು ಪೂರೈಸುವ ನಿಟ್ಟಿನಲ್ಲಿ ಅನುಮೋದನೆ ಸಿಕ್ಕಿದ್ದು ಉಚಿತ ವಿದ್ಯುತ್, ಗೃಹಲಕ್ಷ್ಮಿ, ಮಹಿಳೆಯರಿಗೆ ಉಚಿತ ಬಸ್ ಪಾಸ್, 10 ಕೆಜಿ ಅಕ್ಕಿ ಹೀಗೆ ಹಲವು ಸೌಲಭ್ಯ ದ ನಿರೀಕ್ಷೆ ಹೆಚ್ಚಾಗಿದೆ. ಕಾಂಗ್ರೆಸ್‌ ಗ್ಯಾರೆಂಟಿ ಕಾರ್ಡ್‌ಗಳ ಅನುಷ್ಠಾನಕ್ಕೆ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಸಚಿವ ಸಂಪುಟ ರಚನೆ ಆದ ನಂತರ ನಿರ್ಧಾರ ತೆಗೆದು ಕೊಳ್ಳಲಿದೆ. 

ಆದರೆ ಈವಾಗಿನಿಂದಲೇ‌ ಜನರು ಕಾಂಗ್ರೆಸ್‌ ಗ್ಯಾರೆಂಟಿ ಕಾರ್ಡ್‌ಗಳ ಅನುಷ್ಠಾನ ಯಾವಾಗಿನಿಂದ ಜಾರಿ ಮಾಡುತ್ತಾರೆ ಎದುರು ನೋಡುತ್ತಿದ್ದಾರೆ. ಈ ಗ್ಯಾರಂಟಿ ಯೋಜನೆಯಿಂದ ಹಲವಾರು ಜನರಿಗೆ ಸಹಾಯ ವಾಗಲಿದ್ದು ಸೌಲಭ್ಯಗಳು ಯಾವ ಮಟ್ಟಿಗೆ ದೊರೆಯುತ್ತದೆ ಕಾದು‌ನೋಡ್ಬೆಕು.


Post a Comment

Previous Post Next Post
CLOSE ADS
CLOSE ADS
×