ಜೂನ್ 14ರವರೆಗೆ ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಪರಿಷ್ಕರಿಸಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಅವಕಾಶ ಕಲ್ಪಿಸಿದೆ.
10 ವರ್ಷಕ್ಕಿಂತ ಹಳೆಯದಾದ ಆಧಾರ್ ಕಾರ್ಡ್‌ನಲ್ಲಿನ ಫೋಟೋ ಮತ್ತು ಇತರ ಮಾಹಿತಿಯನ್ನು ಅಪ್‌ಡೇಟ್ ಮಾಡಲು ಈ ಸೌಲಭ್ಯವನ್ನು ನೀಡಲಾಗಿದೆ. ಈ ಮೂಲಕ ತಮ್ಮ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಗಳನ್ನು ನವೀಕರಿಸಲು ಸ್ವತಃ ಯುಐಡಿಎಐ ಪ್ರೋತ್ಸಾಹ ನೀಡುತ್ತಿದೆ.
ಬೆಂಗಳೂರು: ಜೂನ್ 14ರವರೆಗೆ ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಪರಿಷ್ಕರಿಸಲು (ಅಪ್‌ಡೇಟ್) ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಅವಕಾಶ ಕಲ್ಪಿಸಿದೆ
10 ವರ್ಷಕ್ಕಿಂತ ಹಳೆಯದಾದ ಆಧಾರ್ ಕಾರ್ಡ್‌ನಲ್ಲಿ ತಮ್ಮ ಫೋಟೋ ಮತ್ತು ಇತರ ಮಾಹಿತಿಯನ್ನು ಅಪ್‌ಡೇಟ್ ಮಾಡಲು 'ಯುಐಡಿಎಐ' ಈ ಸೌಲಭ್ಯವನ್ನು ನೀಡಿದೆ. ಈ ಮೂಲಕ ತಮ್ಮ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಗಳನ್ನು ನವೀಕರಿಸಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಪ್ರೋತ್ಸಾಹವನ್ನು ನೀಡುತ್ತಿದೆ.
ಜೂ. 14ರ ತನಕ ಯಾವುದೇ ಶುಲ್ಕವಿಲ್ಲದೇ ಸಾರ್ವಜನಿಕರು ಆಧಾರ್‌ನಲ್ಲಿ ತಮ್ಮ ಹೆಸರು, ಲಿಂಗ, ಫೋಟೋ, ಮೊಬೈಲ್ ಸಂಖ್ಯೆಯಂತಹ ಯಾವುದೇ ಮಾಹಿತಿಯನ್ನು ಅಪ್‌ಡೇಟ್ ಮಾಡಬಹುದು. ಮೊದಲು ಈ ಸೇವೆಗೆ 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗಿತ್ತು.
ಆಧಾರ್ ಕೇಂದ್ರದಲ್ಲಿ ಶುಲ್ಕ ಮುಂದುವರಿಕೆ:
ಆಧಾರ್ ಅನ್ನು ಉಚಿತವಾಗಿ ಅಪ್‌ಡೇಟ್ ಮಾಡಲು https://myaadhaar.uidai.gov.in/ ಪೋರ್ಟಲ್‌ಗೆ ಭೇಟಿ ನೀಡಬೇಕು. ನೀವು ಆಧಾರ್ ಕೇಂದ್ರಕ್ಕೆ ಹೋಗಿ ಮಾಹಿತಿಯನ್ನು ಅಪ್‌ಡೇಟ್ ಮಾಡಲು ಬಯಸಿದರೇ, ಮೊದಲಿನಂತೆಯೇ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಸ್ಪಷ್ಟೀಕರಣ ನೀಡಿದೆ.
ಜೂನ್ 14ರ ನಂತರ ಆಧಾರ್ ತಿದ್ದುಪಡಿ ಸುಲಭವಲ್ಲ
ಆಧಾರ್ ಪರಿಷ್ಕರಣೆ ಮಾಡಿಸುವುದು ಜೂನ್ 14ರ ನಂತರ ಕಠಿಣವಾಗಲಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೀಡಿರುವ ಮಾಹಿತಿ ಪ್ರಕಾರ, ಹೆಸರು ಹಾಗೂ ಹುಟ್ಟಿದ ದಿನ ಬದಲಾವಣೆ ಸುಲಭ ಸಾಧ್ಯವಿಲ್ಲ. ಆಧಾರ್ ದುರ್ಬಳಕೆ ತಡೆಯೋದು ಇದರ ಉದ್ದೇಶವಾಗಿದ್ದರೂ ಪರಿಷ್ಕರಣೆ ಮಾಡಿಸುವ ಮಂದಿಗೆ ಇದು ಕಗ್ಗಂಟಾಗಲಿದೆ.
ಆಧಾರ್ ಅಪ್ಡೇಟ್ ಮಾಡಲು ಬೇಕಿರುವ ದಾಖಲೆಗಳ ಕುರಿತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಜ.26ರಂದೇ ಹೊಸ ಆದೇಶ ಮಾಡಿದ್ದರೂ, ಇದುವರೆಗೂ ಆಧಾರ್ ಸಾಫ್ಟ್‌ವೇರ್ ಮಾತ್ರ ಅಪ್ಡೇಟ್ ಆಗಿರಲಿಲ್ಲ. ಈ ವಿಚಾರದಲ್ಲಿ ಸಾಫ್ಟ್‌ವೇರ್ ಹಿಂದಿನ ದಾಖಲೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿತ್ತು. ಆದರೆ ಆಧಾರ್ ಸಾಫ್ಟ್‌ವೇರ್ ಅಪ್ಡೇಟ್ ಆಗಿರುವುದರಿಂದ ಇನ್ನು ಮುಂದೆ ಸಮಸ್ಯೆ ತಲೆದೋರಲಿದೆ.
ಹೊಸದಾಗಿ ಆಧಾರ್ ಅಪ್ಡೇಟ್ ಮಾಡಲು ಬೇಕಿರುವ ದಾಖಲೆಗಳನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಪ್ರಕಟಿಸಿದೆ. ಇದರ ಪ್ರಕಾರ ಹೆಸರು ಹಾಗೂ ಜನ್ಮದಿನದ ಬದಲಾವಣೆಗೆ ಬೇಕಾದ ದಾಖಲೆಗಳ ಸಂಖ್ಯೆಗಳನ್ನು ಕಡಿತಗೊಳಿಸಲಾಗಿದೆ. ಜನನ ದಿನದ ಬದಲಾವಣೆಗೆ 6 ದಾಖಲೆಗಳಲ್ಲಿ ಒಂದನ್ನು ಮಾತ್ರ ಪರಿಗಣಿಸಲು ಯುಐಡಿಎಐ ನಿರ್ಧರಿಸಿದೆ.
ಇನ್ನು ಮುಂದೆ ಪಾಸ್‌ಪೋರ್ಟ್, ಸರಕಾರಿ ನೌಕರರ ದಾಖಲೆ, ಪಿಂಚಣಿ ಕುರಿತಾದ ದಾಖಲೆ, ಶೈಕ್ಷಣಿಕ ಪ್ರಮಾಣ ಪತ್ರ, ಲಿಂಗತ್ವ ಅಲ್ಪಸಂಖ್ಯಾತರ ಪ್ರಮಾಣ ಪತ್ರ ಹಾಗೂ ಜನನ ಪ್ರಮಾಣ ಪತ್ರವನ್ನು ಆಧಾರ್ ಹುಟ್ಟಿದ ದಿನದ ಬದಲಾವಣೆಗೆ ಯುಐಡಿಎಐ ಪರಿಗಣಿಸಲಿದೆ. ಇದರಲ್ಲಿ ಯಾವುದಾದರೂ ಒಂದು ದಾಖಲೆ ಇಲ್ಲದಿದ್ದರೂ ಅವರು ಜನನ ಪ್ರಮಾಣ ಪತ್ರ ಮಾಡಿಸಿಕೊಳ್ಳಬೇಕಾದ ಸ್ಥಿತಿ ಉದ್ದವವಾಗಲಿದೆ.