Reliance Foundation Scholarship : ರಿಲಯನ್ಸ್ ಫೌಂಡೇಶನ್ ನಿಂದ 5,000 ವಿದ್ಯಾರ್ಥಿಗಳಿಗೆ ತಲಾ 2 ಲಕ್ಷ ವಿದ್ಯಾರ್ಥಿವೇತನ

Reliance Foundation Scholarship : ರಿಲಯನ್ಸ್ ಫೌಂಡೇಶನ್ ನಿಂದ 5,000 ವಿದ್ಯಾರ್ಥಿಗಳಿಗೆ ತಲಾ 2 ಲಕ್ಷ ವಿದ್ಯಾರ್ಥಿವೇತನ

 2022-23ನೇ ಸಾಲಿನಲ್ಲಿ 4,984 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಸುಮಾರು 40,000 ವಿದ್ಯಾರ್ಥಿಗಳ ಅರ್ಜಿಸಲ್ಲಿಸಿದ್ದು, ಇದರಲ್ಲಿ 5,000 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ 51% ಹುಡುಗಿಯರೇ ಇರುವುದು ವಿಶೇಷ ಎಂದು ಮಾಹಿತಿ ನೀಡಿದ್ದಾರೆ.



2022-23ನೇ ಸಾಲಿನ ರಿಲಯನ್ಸ್ ಫೌಂಡೇಶನ್ ಪದವಿಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಈ ವಿದ್ಯಾರ್ಥಿವೇತನಕ್ಕೆ 27 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 5 ಸಾವಿರ ವಿದ್ಯಾರ್ಥಿಗಳನ್ನ ಆಯ್ಕೆ ಮಾಡಲಾಗಿದೆ.

ಪ್ರಥಮ ವರ್ಷದ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳನ್ನ ಆಯ್ಕೆ ಮಾಡಲಾಗಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿ ರೂ.2 ಲಕ್ಷ ವರೆಗೆ ಸ್ಕಾಲರ್‌ಶಿಫ್‌ನ್ನು ನೀಡಲಾಗುತ್ತದೆ. ಈ ಕುರಿತು ಮಾಹಿತಿ ನೀಡಿರುವ ರಿಲಯನ್ಸ್ ಫೌಂಡೇಶನ್ ಸಿಇಒ ಶ್ರೀ ಜಗನ್ನಾಥ ಕುಮಾರ್, “ಉತ್ತಮ ಶಿಕ್ಷಣವನ್ನು ಪಡೆಯುವ ಯುವ ಜನರ ಕನಸಿಗೆ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನವು ರೆಕ್ಕೆಗಳನ್ನು ನೀಡಲಿದೆ ಎಂದು ಆಶಿಸುತ್ತವೆ. 

ವಿವಿಧ ಅಧ್ಯಯನ ವಿಭಾಗಗಳಿಂದ, ಭಾರತದ ಬಹುತೇಕ ಎಲ್ಲಾ ರಾಜ್ಯಗಳಿಂದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಮತ್ತು ಹುಡುಗಿಯರು ಮತ್ತು ಹುಡುಗರನ್ನು ಸಮಾನವಾಗಿ ಪ್ರತಿನಿಧಿಸುತ್ತಿದ್ದಾರೆ. ಆಯ್ಕೆಯಾದ ಪ್ರತಿಯೊಬ್ಬರನ್ನು ನಾವು ಅಭಿನಂದಿಸುತ್ತೇವೆ ಮತ್ತು ಅವರು ಭಾರತದ ಪ್ರಗತಿಗೆ ಕೊಡುಗೆ ನೀಡುವುದರೊಂದಿಗೆ ಅವರು ತಮಗಾಗಿ ಬಲವಾದ ಭವಿಷ್ಯವನ್ನು ನಿರ್ಮಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ” ಎಂದಿದ್ದಾರೆ.

ರಿಲಯನ್ಸ್ ಫೌಂಡೇಶನ್ ಪದವಿ ವಿದ್ಯಾರ್ಥಿವೇತನವನ್ನು ಯಾವುದೇ ಅಧ್ಯಯನದ ಸ್ಟ್ರೀಮ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಮೆರಿಟ್-ಕಮ್-ಮೀನ್ಸ್ ಆಧಾರದ ಮೇಲೆ ನೀಡಲಾಗುತ್ತದೆ. ಈ ವರ್ಷಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಎಂಜಿನಿಯರಿಂಗ್/ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯ, ವಾಣಿಜ್ಯ, ಕಲೆ, ವ್ಯಾಪಾರ/ನಿರ್ವಹಣೆ, ಕಂಪ್ಯೂಟರ್ ಅಪ್ಲಿಕೇಶನ್‌ಗಳು, ಕಾನೂನು, ಶಿಕ್ಷಣ, ಆತಿಥ್ಯ, ವಾಸ್ತುಶಿಲ್ಪ ಮತ್ತು ಇತರ ವೃತ್ತಿಪರ ಪದವಿ ಅಧ್ಯಯನ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದು.

2022-23ನೇ ಸಾಲಿನಲ್ಲಿ 4,984 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಸುಮಾರು 40,000 ವಿದ್ಯಾರ್ಥಿಗಳ ಅರ್ಜಿಸಲ್ಲಿಸಿದ್ದು, ಇದರಲ್ಲಿ 5,000 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ 51% ಹುಡುಗಿಯರೇ ಇರುವುದು ವಿಶೇಷ ಎಂದು ಮಾಹಿತಿ ನೀಡಿದ್ದಾರೆ

ಈ ಆಯ್ಕೆ ಪ್ರಕ್ರಿಯೆಯಲ್ಲಿ ಸಾಮರ್ಥ್ಯ ಪರೀಕ್ಷೆ, 12 ನೇ ತರಗತಿ ಅಂಕಗಳು ಮತ್ತು ಇತರ ಅರ್ಹತಾ ಮಾನದಂಡಗಳು ಒಳಗೊಂಡಿದೆ. 99 ವಿಶೇಷಚೇತನ ವಿದ್ಯಾರ್ಥಿಗಳನ್ನು ವಿದ್ಯಾರ್ಥಿವೇತನಕ್ಕಾಗಿ ಆಯ್ಕೆ ಮಾಡಲಾಗಿದೆ.


ರಿಲಯನ್ಸ್ ಫೌಂಡೇಶನ್ ಮುಂದಿನ 10 ವರ್ಷಗಳಲ್ಲಿ 50,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವುದಾಗಿ ಘೋಷಿಸಿತ್ತು. ರಿಲಯನ್ಸ್ ಫೌಂಡೇಶನ್ ಪದವಿಪೂರ್ವ ವಿದ್ಯಾರ್ಥಿವೇತನಕ್ಕೆ ಡಿಸೆಂಬರ್ ನಿಂದ ಫೆಬ್ರವರಿ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಫಲಿತಾಂಶವನ್ನು ತಿಳಿಯಲು www.reliancefoundation.org ಗೆ ಭೇಟಿ ನೀಡಬಹುದು.

2022-23ಕ್ಕೆ ಆಯ್ಕೆಯಾದ ರಿಲಯನ್ಸ್ ಫೌಂಡೇಶನ್ ಸ್ನಾಕಕ್ಕೋತ್ತರ ವಿದ್ಯಾರ್ಥಿವೇತನ ಆಯ್ಕೆ ಪಟ್ಟಿಯನ್ನು ಜುಲೈನಲ್ಲಿ ಪ್ರಕಟಿಸಲಾಗುವುದು. ರಿಲಯನ್ಸ್ ಫೌಂಡೇಶನ್ ಪದವಿ ವಿದ್ಯಾರ್ಥಿವೇತನದ (2023-24) ಅರ್ಜಿಗಳನ್ನು ಮುಂಬರುವ ತಿಂಗಳುಗಳಲ್ಲಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದೆ

Post a Comment

Previous Post Next Post
CLOSE ADS
CLOSE ADS
×