Advertisement

Shakthi Scheme: 'ಫ್ರೀ ಬಸ್‌'ನಲ್ಲಿ ಇದೊಂದು ಬದಲಾವಣೆೆಗೆ ಮುಂದಾದ ಸರ್ಕಾರ! ಗ್ಯಾರಂಟಿ ಪರಿಷ್ಕರಣೆ ನಡುವೆ ಮತ್ತೊಂದು ನಿರ್ಧಾರ

ರಾಜ್ಯ ಸರ್ಕಾರ ಗ್ಯಾರಂಟಿ ಸರ್ಜರಿಗೆ ಮುಂದಾಗಿದೆ. ಗೃಹಜ್ಯೋತಿ, ಗೃಹಲಕ್ಷ್ಮಿ ಪರಿಷ್ಕರಣೆಗೆ ಮುಂದಾಗಿದೆ. ಹೀಗಿರುವಾಗಲೇ ಸರ್ಕಾರ ಫ್ರೀ ಬಸ್ ಯೋಜನೆಯಲ್ಲೂ ಸಹ ಮಹತ್ವದ ಬದಲಾವಣೆ ತರಲು ಯೋಜನೆ ರೂಪಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಶಕ್ತಿ ಯೋಜನೆ (Shakti Yojana) ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ (Free Travel) ಕಲ್ಪಿಸುವ ಜನಪ್ರಿಯ ಗ್ಯಾರಂಟಿ ಯೋಜನೆ. ಸದ್ಯ, ರಾಜ್ಯ ಸರ್ಕಾರ ಗ್ಯಾರಂಟಿ ಸರ್ಜರಿಗೆ ಮುಂದಾಗಿದೆ. ಗೃಹಜ್ಯೋತಿ, ಗೃಹಲಕ್ಷ್ಮಿ (Gruhalakshmi) ಪರಿಷ್ಕರಣೆಗೆ ಮುಂದಾಗಿದೆ. ಹೀಗಿರುವಾಗಲೇ ಸರ್ಕಾರ ಫ್ರೀ ಬಸ್ (Free Bus) ಯೋಜನೆಯಲ್ಲೂ ಸಹ ಮಹತ್ವದ ಬದಲಾವಣೆ ತರಲು ಯೋಜನೆ ರೂಪಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆಗೆ ಮುಂದಾದ ಸರ್ಕಾರ

ಇಷ್ಟು ದಿನ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಸಾರಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರಿಗೆ ಸರ್ಕಾರ ಉಚಿತ ಸ್ಮಾರ್ಟ್ ಕಾರ್ಡ್ ಕೊಡಲು ಮುಂದಾಗಿದೆ. ಪುರುಷರ ಸಹ ಸ್ಮಾರ್ಟ್ ಕಾರ್ಡ್ಗೆ ಹಣ ಪಾವತಿಸಿ ಉಪಯೋಗಿಸಬಹುದು ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಮಾಹಿತಿ ನೀಡಿದ್ದಾರೆ.

ʻಶಕ್ತಿʼ ಸ್ಮಾರ್ಟ್ ಕಾರ್ಡ್‌ಗೆ ಅಂತಿಮ ಸಿದ್ಧತೆ ಕುರಿತು ಸಭೆ

ಸರ್ಕಾರದ ಮಹತ್ವಾಕಾಂಕ್ಷೆಯ ʻಶಕ್ತಿʼ ಯೋಜನೆಯಡಿ ಸ್ಮಾರ್ಟ್ ಕಾರ್ಡ್ ವಿತರಣೆಗೆ ಇದರ ಅಂತಿಮ ರೂಪುರೇಷೆ ಬಗ್ಗೆ ಸಿದ್ಧವಾಗಿದ್ದು, ಸುಮಾರು 2 ಕೋಟಿಗೂ ಅಧಿಕ ಮಹಿಳೆಯರ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಈ ಸ್ಮಾರ್ಟ್ ಕಾರ್ಡ್ ವಿತರಣೆಗೆ ವಿಶೇಷ ಉದ್ದೇಶಿತ ವಾಹನ (SPV)ವನ್ನು ರಚಿಸಲಾಗಿದ್ದು, ಇದರಡಿಯೇ ವಿತರಣಾ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಮಾಹಿತಿ ನೀಡಿದ್ದಾರೆ.

ಸ್ಮಾರ್ಟ್ ಕಾರ್ಡ್ನ ರೂಪುರೇಷೆಯನ್ನು ಅಂತಿಮಗೊಳಿಸಲು ವಹಿವಾಟು ಸಲಹೆಗಾರರ ಸಮಿತಿ ನೇಮಕ ಮಾಡಲಾಗಿದ್ದು, ಈ ಸಮಿತಿಯು ಸ್ಮಾರ್ಟ್ ಕಾರ್ಡ್ ಸ್ವರೂಪ, ತಾಂತ್ರಿಕ ನೆರವು ನೀಡಲಿದೆ. ಟೆಂಡರ್ ಪ್ರಕ್ರಿಯೆ ಮತ್ತು ವಿತರಣೆ ಪ್ರಕ್ರಿಯೆಯನ್ನು ಹೇಗೆ ನಡೆಸಬೇಕೆಂಬುದರ ಬಗ್ಗೆ ಸಾರಿಗೆ ನಿಗಮಗಳಿಗೆ ಸಲಹೆಗೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪಿಪಿಪಿ ಮಾದರಿಯಲ್ಲಿ ಸ್ಮಾರ್ಟ್ ಕಾರ್ಡ್

ಸಲಹೆಗಾರರ ಸಮಿತಿಯು ಈ ತಿಂಗಳಾಂತ್ಯದಲ್ಲಿ ವರದಿ ನೀಡಲಿದ್ದು, ಇದರ ಆಧಾರದಲ್ಲಿ ಸ್ಮಾರ್ಟ್ ಕಾರ್ಡ್ ಪ್ರಕ್ರಿಯೆಯನ್ನು ನಡೆಸಲು ಕ್ರಮಕೈಗೊಳ್ಳಲಾಗುವುದು, ಕೋಟ್ಯಂತರ ಸ್ಮಾರ್ಟ್ ಕಾರ್ಡ್ ವಿತರಣೆ ಅಗತ್ಯವಿರುವ ಹಿನ್ನೆಲೆಯಲ್ಲಿ ಟೆಂಡರ್ ಕರೆಯಲಾಗುತ್ತದೆ. ಮಹಿಳೆಯರಿಗೆ ಉಚಿತವಾಗಿ ಸ್ಮಾರ್ಟ್ ಕಾರ್ಡ್ ದೊರೆಯಲಿದೆ. ಪುರುಷರು ಪಾವತಿ ಆಧಾರದಲ್ಲಿ ಸ್ಮಾರ್ಟ್ ಕಾರ್ಡ್ ಖರೀದಿಸಬೇಕಾಗುತ್ತದೆ. ಹೀಗೆ ಮಹಿಳಾ ಮತ್ತು ಪುರುಷ ಪ್ರಯಾಣಿಕರೆಲ್ಲರನ್ನು ಒಟ್ಟುಗೂಡಿಸಿದರೆ, ಸುಮಾರು 2.5 ಕೋಟಿಯಿಂದ 3 ಕೋಟಿ ಕಾರ್ಡ್ಗಳು ಬೇಕಾಗುತ್ತವೆ ಎಂದು ಅಂದಾಜಿಸಲಾಗಿದೆ.

ಪುರುಷ ಪ್ರಯಾಣಿಕರು ಹಣ ಕೊಟ್ಟು ಖರೀದಿಸಬೇಕು

ಇನ್ನು, ಸ್ಮಾರ್ಟ್ ಕಾರ್ಡುಗಳನ್ನು ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ ವಿತರಣೆ ಮಾಡಲಾಗುತ್ತದೆ. ಮಹಿಳೆಯರಿಗೆ ಉಚಿತವಾಗಿ ವಿತರಿಸಲಿದ್ದು, ಇದಕ್ಕೆ ತಗಲುವ ಸಂಸ್ಕರಣ ವೆಚ್ಚವನ್ನು ಸರ್ಕಾರ ಭರಿಸಲಿದೆ. ಆದ್ರೆ, ಪುರುಷ ಪ್ರಯಾಣಿಕರು ಹಣ ಕೊಟ್ಟು ಖರೀದಿಸಬೇಕಾಗುತ್ತದೆ. ಸ್ಮಾರ್ಟ್ ಕಾರ್ಡ್ಗಳ ತಾಂತ್ರಿಕ ನೆರವು ಸೇರಿದಂತೆ ಇನ್ನಿತರ ಸಹಕಾರವನ್ನು ಖಾಸಗಿ ಸಂಸ್ಥೆಯೇ ನಿರ್ವಹಣೆ ಮಾಡಲಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.


Post a Comment

0 Comments