Advertisement

SSLC ನಂತರ ಸಿಪೆಟ್ನಲ್ಲಿ ಕೋರ್ಸ್ ಮಾಡಿದರೆ ಉದ್ಯೋಗದಲ್ಲಿ ಹೆಚ್ಚಿನ ಅವಕಾಶ: ಪ್ರವೇಶ ಹೇಗೆ?

ಮೈಸೂರು : ಈಗಾಗಲೇ ಎಸ್ಎಸ್ಎಲ್ಸಿ ಫಲಿತಾಂಶ ಬಂದಿದೆ. ಈ ಸಂದರ್ಭದಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ಮುಂದೇನು ಮಾಡಬೇಕು ಎಂಬ ಚಿಂತೆಯಲ್ಲಿ ಇರುತ್ತಾರೆ. ಇಂತಹವರಿಗೆ ಒಂದು ಮಾಹಿತಿ ನೀಡುವ ಕೆಲಸವನ್ನು ಈಟಿವಿ ಭಾರತ್ ಮಾಡಿದೆ.

ಎಸ್ಎಸ್ಎಲ್ಸಿ ಪಾಸ್ ಆದ ವಿದ್ಯಾರ್ಥಿಗಳು ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿರುವ ಸಿಪೆಟ್ ಅಂದರೆ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ 3 ವರ್ಷ ಡಿಪ್ಲೊಮಾ ಕೋರ್ಸ್ಗಳನ್ನು ಮಾಡಿದರೆ ಕೈಗಾರಿಕಾ ಪ್ರದೇಶಗಳಲ್ಲಿ ಹಾಗೂ ವಿದೇಶಗಳಲ್ಲಿ ಕೆಲಸ ಪಡೆಯವುದು ಪಕ್ಕಾ.

ಸಿಪೆಟ್ನ ಸಹಾಯಕ ನಿರ್ದೇಶಕರಾದ ಡಾ. ಶ್ರೀಕಾಂತ್ ಅವರ ಪ್ರತಿಕ್ರಿಯೆ 

ಹಾಗಾದರೆ, ಸಿಪೆಟ್ನಲ್ಲಿರುವ ಡಿಪ್ಲೊಮಾ ಕೋರ್ಸ್ಗಳಿಗೆ ಪ್ರವೇಶ ಹೇಗೆ? ಇಲ್ಲಿ ಯಾವ - ಯಾವ ಕೋರ್ಸ್ಗಳು ಇವೆ? ಯಾವ ರೀತಿ ಶುಲ್ಕ ಇದೆ? ಇಲ್ಲಿ ಎಷ್ಟು ಸೀಟ್ಗಳಿವೆ? ಇಲ್ಲಿ ಯಾವ ರೀತಿ ತರಬೇತಿ ನೀಡಲಾಗುತ್ತದೆ? ಉದ್ಯೋಗಾವಕಾಶಗಳು ಹೇಗೆ? ಎಂಬ ಬಗ್ಗೆ ಸಿಪೆಟ್ನ ಸಹಾಯಕ ನಿರ್ದೇಶಕರಾದ ಡಾ. ಶ್ರೀಕಾಂತ್ ಅವರು ವಿವರಿಸಿದ್ದಾರೆ.

ಮೌಲ್ಡ್ ಹಾಗೂ ಡೈಟೂಲ್ಸ್ 

ಸಿಪೆಟ್ನ ಸಹಾಯಕ ನಿರ್ದೇಶಕ ಡಾ. ಶ್ರೀಕಾಂತ್ ಅವರು ಹೇಳಿದ್ದೇನು?:1991ರಲ್ಲಿ ಸೆಂಟರ್ ಅಂಡ್ ಪೆಟ್ರೋ ಕೆಮಿಕಲ್ ಟೆಕ್ನಾಲಜಿ ಪ್ರಾರಂಭವಾಯಿತು. ಇಲ್ಲಿ ಪ್ಲಾಸ್ಟಿಕ್ ಬಗ್ಗೆ ಯಾವ ತರ ತರಬೇತಿ ತೆಗೆದುಕೊಳ್ಳಬಹುದು, ಸ್ಕಿಲ್ ಇಂಡಿಯಾದಲ್ಲಿ ಯಾವ ರೀತಿ ತರಬೇತಿ ತೆಗೆದುಕೊಳ್ಳಬಹುದು ಎಂಬ ಬಗ್ಗೆ ತರಬೇತಿ ಕೊಡುತ್ತೇವೆ ಎಂದಿದ್ದಾರೆ.

ಇದರಲ್ಲಿ ಮುಖ್ಯವಾಗಿ ಎರಡು ಡಿಪ್ಲೊಮಾ ಕೋರ್ಸ್ಗಳು ಇವೆ. ನಮ್ಮ ಮೈಸೂರಿನಲ್ಲಿ ಎರಡು ಕೋರ್ಸ್ಗಳು ಇವೆ. ಡಿಪ್ಲೊಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (DPT), (DPMT ಹಾಗೂ DPT) ಇದು ಮೂರು ವರ್ಷದ ಪ್ರೋಗ್ರಾಂ ಆಗಿರುತ್ತದೆ. ಈ ಕೋರ್ಸ್ ಕಂಪ್ಲೀಟ್ ಮಾಡಿದವರಿಗೆ ನಮ್ಮಲ್ಲಿ ಶೇ 100ರಷ್ಟು ಕೆಲಸ ಸಿಗುತ್ತದೆ. ಎಲ್ಲಾ ಕಡೆನೂ ಪ್ಲಾಸ್ಟಿಕ್ ಇಂಡಸ್ಟ್ರಿ ಜಾಸ್ತಿ ಹೋಗುತ್ತಿದೆ. ಪ್ಲಾಸ್ಟಿಕ್ ಬಳಕೆ ಜಾಸ್ತಿ ಆಗ್ತಿದೆ. ಬಳಕೆ ಪ್ರಮಾಣ ಜಾಸ್ತಿ ಆಗಿದೆ. ಇದರಿಂದ ಉದ್ಯೋಗ ಅವಕಾಶ ಕೂಡ ಜಾಸ್ತಿ ಆಗಿದೆ. ಸ್ಕಿಲ್ ತುಂಬಾನೆ ಬೇಕಾಗಿರುವುದರಿಂದಾಗಿ SSLC ಆಗಿರುವ ವಿದ್ಯಾರ್ಥಿಗಳು ಈ ಕೋರ್ಸ್ ತಗೋಬಹುದು ಎಂದು ಹೇಳಿದ್ದಾರೆ.

ಎಸ್ಎಸ್ಎಲ್ಸಿ ಪಾಸ್ ಆಗಿರಬೇಕು ಹಾಗೂ ಆಲ್ ಇಂಡಿಯನ್ ಎಂಟ್ರೆನ್ಸ್ ಅಂತ ಒಂದು ಪರೀಕ್ಷೆ ಇರುತ್ತೆ, ಮೈಸೂರಿನ ಕಂಪ್ಯೂಟರ್ ಸೆಂಟರ್ಗಳಲ್ಲಿ ಪರೀಕ್ಷೆ ಮಾಡುತ್ತೇವೆ. ಜೂನ್ 7 ರಂದು ಪರೀಕ್ಷೆ ಇದೆ. ಆ ಪರೀಕ್ಷೆ ಪಾಸ್ ಆದವರಿಗೆ ಕೋರ್ಸ್ ಕೊಡುತ್ತೇವೆ ಎಂದಿದ್ದಾರೆ.

ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿರುವುದು 

ಅರ್ಜಿ ಸಲ್ಲಿಸುವುದು ಹೇಗೆ?:ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು, ಸಂಪರ್ಕ ಮಾಡಿದರೆ ಅಡ್ಮಿಷನ್ ಕೂಡ ಮಾಡ್ತೀವಿ. ಕೋರ್ಸ್ನಲ್ಲಿ 60 ಸೀಟ್ಗಳು ಇರುತ್ತವೆ. ಇದು ಮೂರು ವರ್ಷದ ಕೋರ್ಸ್ ಆಗಿರುತ್ತದೆ. ನಮ್ಮಲ್ಲಿ ಎರಡು ಕೋರ್ಸ್ಗಳು ಇವೆ. ಅದರಲ್ಲಿ ಎರಡೂವರೆ ವರ್ಷ ಕೋರ್ಸ್ ಇರುತ್ತದೆ. 6 ತಿಂಗಳ ಕಾಲ ಇಂಟರ್ನ್ಶಿಪ್ ಕೋರ್ಸ್ ಇರುತ್ತೆ. ಇಂಟರ್ನ್ಶಿಪ್ ಅಲ್ಲೇನೆ ಸ್ಟೈಫಂಡ್ ಸಿಗುತ್ತೆ, ಪ್ರಾರಂಭದಲ್ಲಿಯೇ 20 ರಿಂದ 22 ಸಾವಿರ ರೂಪಾಯಿ ಹುಡುಗರಿಗೆ ಸಿಗುತ್ತದೆ ಎಂದು ತಿಳಿಸಿದ್ದಾರೆ.

ಸಿಪೆಟ್ ಸಂಸ್ಥೆಯಲ್ಲಿನ ಯಂತ್ರಗಳು 

ಲ್ಯಾಟರಲ್ ಎಂಟ್ರಿನೂ ಸಹ ಇದೆ. PUC, SCIENCE, ITI ಮಾಡಿದವರಿಗೆ ಡೈರೆಕ್ಟ್ ಅಡ್ಮಿಷನ್ ಕೊಡುತ್ತೇವೆ. ನಮ್ಮನ್ನ ಕಾಂಟ್ಯಾಕ್ಟ್ ಮಾಡಿದವರಿಗೆ ಡೈರೆಕ್ಟ್ ಅಡ್ಮಿಷನ್ ಮಾಡಿಕೊಳ್ತೀವಿ. ಪಿಯುಸಿ ಮಾಡಿದವರಿಗೆ ಎರಡು ವರ್ಷದಲ್ಲಿ ಒಂದು ವರ್ಷ ಕಡಿಮೆ ಆಗುತ್ತೆ, ಅವರಿಗೆ ಎರಡು ವರ್ಷ ಇರುತ್ತೆ ಎಂದಿದ್ದಾರೆ.

ಪಿಯುಸಿ ಅಲ್ಲಿ science ಆಗಿರಬೇಕು, ಇಲ್ಲವೇ ITI ಆಗಿರಬೇಕು. ನಮ್ಮಲ್ಲಿ ಮುಖ್ಯವಾಗಿ ನಾಲ್ಕು ಡಿಪಾರ್ಟ್ಮೆಂಟ್ಗಳು ಇವೆ. ಒಂದು ಪ್ರೊಸೆಸಿಂಗ್ ಡಿಪಾರ್ಟ್ಮೆಂಟ್ ಇದೆ. ಪ್ಲಾಸ್ಟಿಕ್ ಡ್ರೈ ಮಾಡೋಕೆ ಒಂದು ರೂಮ್ ಇದೆ. ಇನ್ನೊಂದು ಡಿಸೈನ್ ಡಿಪಾರ್ಟ್ಮೆಂಟ್ ಇದೆ. ಆ ಟೂಲ್ ಅನ್ನು ಯಾವ ತರ ಮಾಡಬೇಕು, ಯಾವ ತರಹ ಡ್ರಾಯಿಂಗ್ ಮಾಡ್ಕೊಬೇಕು, ಆಟೋ ಕೆಡಲ್ ಹೇಗೆ ಮಾಡಬೇಕು ಅದನ್ನೆಲ್ಲ ನಾವು ಡಿಸೈನ್ ಡಿಪಾರ್ಟ್ಮೆಂಟ್ ಅಲ್ಲಿ ಮಾಡ್ತೀವಿ ಎಂದು ತಿಳಿಸಿದ್ದಾರೆ.

ಸಿಪೆಟ್ ಸಂಸ್ಥೆ 

ನಾಲ್ಕನೇ ಡಿಪಾರ್ಟ್ಮೆಂಟ್ ಟೆಸ್ಟಿಂಗ್ ಡಿಪಾರ್ಟ್ಮೆಂಟ್ ಅಂತ, ಅಲ್ಲಿ ಯಾವುದೇ ಮೆಟಿರಿಯಲ್ನ ಸ್ಟ್ರೇಂಥ್ ಆಗಲಿ, ಒಳ್ಳೆಯ ಮೆಟಿರಿಯಲ್ ಯಾವುದಿದೆ, ಅದರ ಕಂಪ್ಲೀಟ್ ಟೆಸ್ಟ್ ಮಾಡುತ್ತೇವೆ. ಈ ನಮ್ಮ ಕಾಲೇಜಿನಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳು ಇಬ್ಬರೂ ಅರ್ಹರಾಗಿರುತ್ತಾರೆ ಎಂದಿದ್ದಾರೆ.

ಇಂಡಸ್ಟ್ರಿಗಳು ಜಾಸ್ತಿ ಆಗುತ್ತಿವೆ. ಮೈಸೂರಿನಲ್ಲಿ ಮುಂಚೆ 4 ರಿಂದ 5 ಇಂಡಸ್ಟ್ರಿಗಳು ಮಾತ್ರ ಇದ್ದವು. ಈಗ 20 ರಿಂದ 25 ಇಂಡಸ್ಟ್ರಿಗಳು ಆಗಿವೆ. ಪ್ಲಾಸ್ಟಿಕ್ಗಳಿಗೆ ಪೂರಕವಾದ ಇಂಡಸ್ಟ್ರಿಗಳು ಬಂದಿವೆ. ನಮ್ಮಲ್ಲಿ ಇರುವ ಟಿವಿಎಸ್, ಏಷಿಯನ್ ಪೇಯಿಂಟ್ಸ್ ಫ್ಯಾಕ್ಟರಿಗಳಿಗೆ ಪ್ಲಾಸ್ಟಿಕ್ ಪ್ರಾಡಕ್ಟ್ ಅಗತ್ಯವಿರುತ್ತದೆ. ಅದಕ್ಕೋಸ್ಕರ ಇಂಡಸ್ಟ್ರಿಗಳು ಶುರುವಾಗಿವೆ. ಹೀಗಾಗಿ, ಅಲ್ಲಿಗೆ ನಮ್ಮ ಹುಡುಗರನ್ನೇ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸಾಕಷ್ಟು ಅವಕಾಶ ಇದೆ. ಇದನ್ನು ಮಾಡಿದ ತಕ್ಷಣವೇ ಜಾಬ್ ಸಿಗುತ್ತದೆ. ಅದೂ ಪ್ರಾರಂಭದಲ್ಲಿ 20 ರಿಂದ 25 ಸಾವಿರದವರೆಗೆ ಸಿಗುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಇದರಿಂದ ಅನುಕೂಲವಾಗಲಿದೆ. ನಮ್ಮಲ್ಲಿ ಸಾಕಷ್ಟು ಪ್ರಾಕ್ಟಿಕಲ್ ಕ್ಲಾಸ್ ಜಾಸ್ತಿ ಇರುತ್ತೆ, ಇಲ್ಲಿ ಎಲ್ಲವನ್ನೂ ಪ್ರಾಕ್ಟಿಕಲ್ ಆಗಿ ನೋಡಿ ತಿಳಿದುಕೊಳ್ಳುತ್ತಾರೆ. ಅದರಿಂದ ಅವರಿಗೆ ಇಲ್ಲಿ ಸ್ಕಿಲ್ ಎಂಬುದು ಜಾಸ್ತಿ ಬರುತ್ತದೆ. ಇದರಿಂದ ಅವರಿಗೆ ಕೆಲಸ ಮಾಡುವುದು ಸುಲಭವಾಗಲಿದೆ.

ಸಿಪೆಟ್ನ ಪ್ರವೇಶದ್ವಾರ 

ತುಂಬಾ ಚೆನ್ನಾಗಿ ಕಲಿತುಕೊಳ್ಳುವುದರಿಂದ ಒಂದು ಒಳ್ಳೆಯ ಕೆಲಸನೂ ಸಿಗುತ್ತೆ. ಇದು ಸೆಂಟ್ರಲ್ ಗವರ್ನಮೆಂಟ್ ಅಂಡರ್ ಟೇಕಿಂಗ್ ಆಗಿದೆ. ministry of petro chemical ಅಡಿ ಬರುತ್ತದೆ. ಕರ್ನಾಟಕದಲ್ಲಿ ಎರಡು ಇದೆ. ಬೆಂಗಳೂರು RND ಸೆಂಟರ್ ಇದೆ. ಅಲ್ಲಿ ಟ್ರೈನಿಂಗ್ ಕೊಡುವುದಿಲ್ಲ. ಮೈಸೂರಿನಲ್ಲಿ ಮಾತ್ರ ಟ್ರೈನಿಂಗ್ ಕೊಡುತ್ತೇವೆ ಎಂದಿದ್ದಾರೆ.

ಇದನ್ನು ಮುಗಿಸಿದ ನಂತರ ಹೈಯರ್ ಎಜುಕೇಶನ್ ಕಡೆಗೂ ಕೂಡಾ ಹೋಗಬಹುದು. B.Tec, M.tec ಕೋರ್ಸ್ಗಳ ಕಡೆಗೂ ಹೋಗಬಹುದು. ಪಾಲಿಮರ್ ಸೈನ್ಸ್ ಪಾಲಿಟೆಕ್ನಿಕ್ ಕೋರ್ಸ್ಗಳಿಗೂ ಹೋಗಬಹುದು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಬಹುದು. ಇದನ್ನು ಮಾಡಿಕೊಂಡು ಹೋದವರಿಗೆ ಅಲ್ಲಿ ಅವರಿಗೆ ಲ್ಯಾಟರಲ್ ಎಂಟ್ರಿ ಕೊಡುತ್ತಾರೆ ಎಂದು ತಿಳಿಸಿದ್ದಾರೆ.

ಪ್ಲಾಸ್ಟಿಕ್ನಿಂದ ತಯಾರಿಸಿರುವ ಮುಚ್ಚಳಗಳು 

ಇಡೀ ಕರ್ನಾಟಕದಲ್ಲಿ ಇದು ಒಂದೇ ಇರುವುದರಿಂದಾಗಿ, ಎಲ್ಲ ಕಡೆನೂ ಬೇರೆ ಬೇರೆ ಪ್ಲಾಸ್ಟಿಕ್ ಕಂಪನಿಗಳನ್ನು ಓಪನ್ ಮಾಡಿರುವುದರಿಂದಾಗಿ ISI ಪ್ರಾಡಕ್ಟ್ ಮಾಡುವಾಗ ಅವರು ಓದಿರುವ ಕ್ಯಾಂಡಿಡೇಟ್ಗಳನ್ನೇ ಇಟ್ಟುಕೊಂಡಿರಬೇಕಾಗುತ್ತದೆ. ಅದರಿಂದ ನಮ್ಮಲ್ಲಿ ಓದಿದರೆ 100% ಕೆಲಸ ಸಿಕ್ಕೇ ಸಿಗುತ್ತದೆ. ಸುಮಾರು ಜನ ನಮ್ಮಲ್ಲೇ ಓದಿ ಹೋಗಿ ಇಂಡಸ್ಟ್ರಿಗಳನ್ನು ಓಪನ್ ಮಾಡಿದ್ದಾರೆ. ಅವರದೇ ಸ್ವಂತ ಸ್ವಂತ ಇಂಡಸ್ಟ್ರಿಗಳಿವೆ. ಎಲ್ಲರೂ ಒಳ್ಳೊಳ್ಳೆ ಸ್ಥಾನದಲ್ಲಿದ್ದಾರೆ. ಕೆಲವರು ವಿದೇಶದಲ್ಲಿದ್ದಾರೆ. ಸ್ವಂತ ಕಂಪನಿಗಳೂ ಇವೆ. ಅವರು ಎಲ್ಲ ನಮ್ಮಲ್ಲಿಯೇ ಬೇಡಿಕೆ ಇಟ್ಟಿದ್ದಾರೆ. ನಿಮ್ಮಲ್ಲಿ ಯಾರಾದರೂ ಒಳ್ಳೆ ಕ್ಯಾಂಡಿಡೇಟ್ ಇದ್ರೆ ಕಳುಹಿಸಿ ಎಂದು ಹೇಳುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಸಿಪೆಟ್ ಬಗ್ಗೆ ಮತ್ತಷ್ಟು ಮಾಹಿತಿ :

ಉದ್ಯೋಗಾವಕಾಶ ಹೇಗಿದೆ? : 

ಈ ಕೋರ್ಸ್ಗಳಿಗೆ ತುಂಬಾ ಬೇಡಿಕೆ ಇದೆ. ಏಕೆಂದರೆ ಕೃಷಿ, ಮೆಡಿಕಲ್, ಎಲೆಕ್ಟ್ರಾನಿಕ್ಸ್ ಸೇರಿದಂತೆ ವಿವಿಧ ರಂಗಗಳಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಆಟೋಮೊಬೈಲ್ ರಂಗದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಇದರಿಂದ ತಯಾರಿಕೆ ಪ್ರಕ್ರಿಯೆ ವೇಗವಾಗಿ ಆಗುತ್ತದೆ ಮತ್ತು ವೆಚ್ಚ ಕಡಿಮೆ ಇರುತ್ತದೆ. ಹೀಗಾಗಿ, ಪ್ಲಾಸ್ಟಿಕ್ ಟೆಕ್ನಾಲಜಿ ಅಗಾಧವಾಗಿ ಬೆಳೆದಿದೆ. ಈ ಕೋರ್ಸ್ಗಳಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯುತ್ತಾರೆ. ಜೊತೆಗೆ ತಾವೇ ಕೈಗಾರಿಕೆ ನಡೆಸುವ ಮಟ್ಟಿಗೆ ಬೆಳೆಯುತ್ತಾರೆ ಎಂದಿದ್ದಾರೆ.

ಕೋರ್ಸ್ಗಳಿಗೆ ಶುಲ್ಕ ಎಷ್ಟು?: 

3 ವರ್ಷದ ಡಿಪ್ಲೋಮಾ ಕೋರ್ಸ್ಗಳಲ್ಲಿ ಸೆಮಿಸ್ಟರ್ ಸಿಸ್ಟಮ್ ಇರುತ್ತದೆ. ಒಂದು ಸೆಮಿಸ್ಟರ್ಗೆ ಪರೀಕ್ಷಾ ಶುಲ್ಕ ಸೇರಿ 22,500 ದಿಂದ 25,000 ಸಾವಿರ ರೂ. ಇರುತ್ತದೆ. ಒಂದು ವರ್ಷಕ್ಕೆ 40 ರಿಂದ 45 ಸಾವಿರ ಶುಲ್ಕ ಇರುತ್ತದೆ. ಎಸ್ಸಿ, ಎಸ್ಟಿ ಹಾಗೂ ಒಬಿಸಿ ವಿದ್ಯಾರ್ಥಿಗಳಿಗೆ ಶುಲ್ಕ ಮರು ಪಾವತಿಯಾಗುತ್ತದೆ. 6ನೇ ಸೆಮಿಸ್ಟರ್ನಲ್ಲಿ ವಿದ್ಯಾರ್ಥಿಗಳನ್ನು ತರಬೇತಿಗೆ ಕಳುಹಿಸುತ್ತೇವೆ. ಆಗ ಅವರಿಗೆ 15,000 ರೂ. ಸ್ಟೈಫಂಡ್ ಇರುತ್ತದೆ ಎಂದು ತಿಳಿಸಿದ್ದಾರೆ.

ಪ್ಲಾಸ್ಟಿಕ್ ಮರುಬಳಕೆ ತರಬೇತಿ : ಪ್ಲಾಸ್ಟಿಕ್‌ ಮಾನವ ಜೀವನದ ಅವಿಭಾಜ್ಯ ನಿರ್ವಹಣೆಯಾಗಿದೆ. ಪ್ಲಾಸ್ಟಿಕ್‌ ಇಲ್ಲದೇ ಜೀವನ ಸಾಧ್ಯವಿಲ್ಲ ಎನ್ನುವಂತಾಗಿದೆ. ಲೋಹದ ಬೆಲೆ ಮತ್ತು ಕೊರತೆ ಹೆಚ್ಚಿದಂತೆಲ್ಲ ಪ್ರತಿ ಕ್ಷೇತ್ರದಲ್ಲೂ ಪ್ಲಾಸ್ಟಿಕ್ನ ಬಳಕೆ ದಿನೇ ದಿನೇ ಅಧಿಕಗೊಳ್ಳುತ್ತಿದೆ. ಉತ್ತಮ ಗುಣಮಟ್ಟದ ಪ್ಲಾಸ್ಟಿಕ್‌ ಬಳಕೆಯಿಂದ ತೊಂದರೆಗಳಿಲ್ಲ. ಆಟೋ ಮೊಬೈಲ್‌, ಕೃಷಿ, ಆರೋಗ್ಯ, ಶಿಕ್ಷಣ, ಸಾರಿಗೆ, ವಿದ್ಯುನ್ಮಾನ ಮುಂತಾದ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಕಾಣುತ್ತಿದ್ದೇವೆ. ಹಾಗಾಗಿ ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಿಂದಲೇ ಈ ಕೋರ್ಸ್ಗಳು ನಡೆಯುತ್ತಿವೆ.

ಮೈಸೂರಿನಲ್ಲಿರುವ ಕೇಂದ್ರಿಯ ಪೆಟ್ರೋಕೆಮಿಕಲ್ಸ್‌ ಇಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆಯು ಇಂತಹ ಅನೇಕ ಕೋರ್ಸ್ಗಳ ಮೂಲಕ ತರಬೇತಿ ನೀಡುವ ಮೂಲಕ ಯುವಕ, ಯುವತಿಯರಲ್ಲಿ ವೃತ್ತಿ ಕೌಶಲ್ಯ ಹೆಚ್ಚಿಸಿ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶ ಹೊಂದಿದೆ.

ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಉದ್ಯೋಗ ಕೊಡಿಸುತ್ತೇವೆ. ಸಿಪೆಟ್‌ ಸಂಸ್ಥೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿ ಕಾರ್ಯನಿರ್ವಹಿಸುತ್ತಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು www.cipet.gov.in ಪಡೆಯಬಹುದು ಎಂದಿದ್ದಾರೆ.

ಪಾಲಿಮರ್ಸ್ ಅಥವಾ ಪ್ಲಾಸ್ಟಿಕ್‌ ಕೈಗಾರಿಕೆ ಕುರಿತು ಕೋರ್ಸ್ಗಳನ್ನು ಹೊಂದಿರುವ ರಾಜ್ಯದ ಏಕೈಕ ಸಂಸ್ಥೆ ಇದಾಗಿದೆ. ಅಲ್ಲದೇ, ದೇಶದ 40 ಸಂಸ್ಥೆಗಳ ಪೈಕಿ ಇದು ಒಂದಾಗಿದೆ ಅನ್ನೋದು ಹೆಮ್ಮೆಯ ವಿಷಯ.


Post a Comment

0 Comments