ಬೆಳಗಾವಿ ಜಿಲ್ಲೆಯಲ್ಲಿ PMKSY PDMC ಯೋಜನೆ ಅಡಿ ಹನಿ, ತುಂತುರು ನೀರಾವರಿಗೆ 5 ಹೆಕ್ಟೇರ್ ವರೆಗೆ ಗರಿಷ್ಠ 90 ಪ್ರತಿಶತ ಸಬ್ಸಿಡಿ, ಎಲ್ಲಾ ವರ್ಗದ ರೈತರಿಗೆ, ಮುಂಗಡ ನೋಂದಣಿ ಕಡ್ಡಾಯ.
ಕೃಷಿಯಲ್ಲಿ ನೀರಿನ ಸದ್ಬಳಕೆ ಮಾಡಿಕೊಂಡು ಅಧಿಕ ಇಳುವರಿ (Highest Yield) ಪಡೆಯಲು ಬಯಸುವ ರೈತರಿಗೆ (Farmers) ತೋಟಗಾರಿಕೆ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದೆ. 2026-27ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ಅಡಿಯ “ಪ್ರತಿ ಹನಿಗೆ ಅಧಿಕ ಬೆಳೆ” (Per Drop More Crop - PDMC) ಯೋಜನೆಯಡಿ ಹನಿ ಹಾಗೂ ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ ಬಂಪರ್ ಸಹಾಯಧನ (ಸಬ್ಸಿಡಿ) ಘೋಷಿಸಲಾಗಿದೆ.
ನೀರಿನ ಕೊರತೆ ನೀಗಲು ಸರ್ಕಾರ ಮುಂದಾಗಿದೆ
ನೀರಿನ ಕೊರತೆ ನೀಗಿಸಿ, ಬೆಳೆ ಇಳುವರಿ ಹೆಚ್ಚಿಸುವ (Water Use Efficiency) ಉದ್ದೇಶದಿಂದ ಸರ್ಕಾರ ಈ ಯೋಜನೆ ಜಾರಿಗೊಳಿಸಿದ್ದು, ಬೆಳಗಾವಿ ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಯೋಜನೆಯ ಸಂಪೂರ್ಣ ವಿವರ, ಸಹಾಯಧನದ ಪ್ರಮಾಣ ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇಲ್ಲಿದೆ.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಎಲ್ಲಾ ವರ್ಗದ ರೈತರು (ಸಾಮಾನ್ಯ, ಪ.ಜಾ/ಪ.ಪಂ, ಸಣ್ಣ ಮತ್ತು ಅತಿ ಸಣ್ಣ ರೈತರು) ಈ ಸೌಲಭ್ಯ ಪಡೆಯಬಹುದು. ಹೊರತುಪಡಿಸಿದ ಬೆಳೆಗಳು: ಕಾಫಿ, ಟೀ, ರಬ್ಬರ್ ಹಾಗೂ ಅಡಿಕೆ ಬೆಳೆಗಳಿಗೆ ಈ ಯೋಜನೆಯಡಿ ಸಹಾಯಧನ ಲಭ್ಯವಿರುವುದಿಲ್ಲ.
ಮರು-ಅರ್ಜಿಗೆ ಅವಕಾಶ: ಈ ಹಿಂದೆ ಸೂಕ್ಷ್ಮ ನೀರಾವರಿ ಯೋಜನೆಯಡಿ ಸಹಾಯಧನ ಪಡೆದು 7 ವರ್ಷಗಳು ಪೂರೈಸಿದ್ದರೆ, ಹೊಸದಾಗಿ ಘಟಕ ಅಳವಡಿಸಿಕೊಳ್ಳಲು ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದು.
ಸಹಾಯಧನದ ವಿವರ: ಯಾರಿಗೆ ಎಷ್ಟು ಸಬ್ಸಿಡಿ?
ಹನಿ ಮತ್ತು ತುಂತುರು ನೀರಾವರಿ ಅಳವಡಿಕೆಗೆ ಪ್ರತಿ ರೈತರಿಗೆ ಗರಿಷ್ಠ 5 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುತ್ತದೆ. (ತರಕಾರಿ ಹಾಗೂ ಹೂವಿನ ಬೆಳೆಗಳಿಗೆ ಗರಿಷ್ಠ ಮಿತಿ 2 ಹೆಕ್ಟೇರ್).
| ಜಮೀನಿನ ವಿಸ್ತೀರ್ಣ | ಸಹಾಯಧನದ ಪ್ರಮಾಣ | ಅನ್ವಯಿಸುವ ವರ್ಗ |
| ಮೊದಲ 2 ಹೆಕ್ಟೇರ್ ವರೆಗೆ | 90% | ಎಲ್ಲಾ ವರ್ಗದ ರೈತರಿಗೆ |
| 2 ರಿಂದ 5 ಹೆಕ್ಟೇರ್ ವರೆಗೆ | 45% | ಎಲ್ಲಾ ವರ್ಗದ ರೈತರಿಗೆ |
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?
ಮುಂಗಡ ನೋಂದಣಿ ಕಡ್ಡಾಯ: ಹನಿ ಅಥವಾ ತುಂತುರು ನೀರಾವರಿ ಘಟಕವನ್ನು ಅಳವಡಿಸುವ ಮೊದಲು ರೈತರು ಕಡ್ಡಾಯವಾಗಿ ತಾಲ್ಲೂಕು ತೋಟಗಾರಿಕೆ ಕಚೇರಿಯಲ್ಲಿ ಹೆಸರು ನೋಂದಾಯಿಸಿ 'ಕಾರ್ಯಾದೇಶ' (Work Order) ಪಡೆಯಬೇಕು. ಅರ್ಜಿ ಸಲ್ಲಿಕೆ: ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಂಬಂಧಿಸಿದ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ಜಿಪಂ) ಕಚೇರಿಗೆ ಸಲ್ಲಿಸಬೇಕು. ಅನುಮೋದನೆ ಮತ್ತು ಬಿಡುಗಡೆ: ಅಧಿಕಾರಿಗಳಿಂದ ಅನುಮೋದನೆ ಪಡೆದ ನಂತರ, ಅಧಿಕೃತ ಏಜೆನ್ಸಿ/ಕಂಪನಿಗಳಿಂದ ಘಟಕ ಅಳವಡಿಸಬೇಕು. ಬಳಿಕ ಅಧಿಕಾರಿಗಳ ಸ್ಥಳ ಪರಿಶೀಲನೆ ನಡೆಸಿ ನೇರವಾಗಿ ರೈತರ ಖಾತೆಗೆ ಸಹಾಯಧನ ಬಿಡುಗಡೆ ಮಾಡಲಾಗುತ್ತದೆ. ಯೋಜನೆಯ ಪ್ರಯೋಜನ ಪಡೆಯಲು ಇಚ್ಛಿಸುವ ರೈತರು ಕೂಡಲೇ ತಮ್ಮ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಿ ಕಾರ್ಯಾದೇಶ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.
0 Comments