Advertisement

ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಯಾವುದೂ ಅಲ್ಲ : ಭಾರತೀಯ ಪೌರತ್ವ ಸಾಬೀತಿಗೆ ಮತ್ತಿನ್ಯಾವುದು - ಇವೇ ಆ ದಾಖಲೆಗಳು!

How to Prove to Indian Citizenship ? ಸರ್ಕಾರವು ಪಾಸ್‌ಪೋರ್ಟ್ ಸೇವೆಗಳಲ್ಲಿ ಗಮನಾರ್ಹ ಸುಧಾರಣೆಗಳನ್ನು ತಂದಿದೆ, ಆದರೆ ಇದು ಭಾರತೀಯ ಪೌರತ್ವವನ್ನು ಸಾಬೀತು ಮಾಡುವ ದಾಖಲೆಯಲ್ಲ. ಆಧಾರ್, ಪ್ಯಾನ್, ವೋಟರ್ ಕಾರ್ಡ್ ಇದ್ದರೂ, ಅದನ್ನು ಸೀಮಿತ ಸೇವೆಗಾಗಿ ಮಾತ್ರ ಪರಿಗಣಿಸಲ್ಪಡುವ ದಾಖಲೆ. ಹಾಗಾದರೆ, ಭಾರತೀಯರು ಎಂದು ರುಜುವಾತು ಮಾಡಲು ಯಾವ ದಾಖಲೆ ನಮ್ಮಲ್ಲಿ ಇರಬೇಕಾಗುತ್ತದೆ?

ಪಾಸ್‌ಪೋರ್ಟ್ ಪೌರತ್ವದ ದಾಖಲೆ ಅಲ್ಲ: ಹಾಗಾದ್ರೆ, ಪ್ಯಾನ್, ಆಧಾರ್ ? ಸಾಬೀತು ಪಡಿಸುವ ದಾಖಲೆ ಯಾವುದು?ಪೌರತ್ವದ ಗೊಂದಲಕ್ಕೆ ಇಲ್ಲಿದೆ ಉತ್ತರ : ನಿಮ್ಮ ಬಳಿ ಈ ದಾಖಲೆ ಇದ್ದರೆ ಮಾತ್ರ ನೀವು ಭಾರತೀಯರು.ಪಾಸ್‌ಪೋರ್ಟ್ ಪೌರತ್ವದ ದಾಖಲೆಯಲ್ಲ ಎನ್ನುತ್ತಿದೆ ಕಾನೂನು : ಹಾಗಿದ್ದರೆ ಭಾರತೀಯ ಪ್ರಜೆಯಾಗಲು ಏನು ಮಾಡಬೇಕು?

ಭಾರತೀಯ ಪೌರತ್ವದ ದಾಖಲೆಗಳು

ಕೆಲವು ದಿನಗಳ ಹಿಂದೆ, ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ಬಿಡುಗಡೆ ಮಾಡಿದ ಹೇಳಿಕೆಯೊಂದು, ರಾಷ್ಟ್ರ ಮಟ್ಟದಲ್ಲಿ ಚರ್ಚೆಯ ವಿಷಯವಾಗಿತ್ತು. ಪಾಸ್‌ಪೋರ್ಟ್ ಎನ್ನುವುದು ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಬಳಸುವ ಪ್ರಯಾಣದ ದಾಖಲೆ (Travel document) ಮಾತ್ರ ಎಂದು ಸಚಿವಾಲಯ ಹೇಳಿತ್ತು. ಹಾಗಾದರೆ, ಭಾರತೀಯ ಪೌರತ್ವವನ್ನು ಸಾಬೀತು ಮಾಡಲು ಯಾವ ದಾಖಲೆ ನಮ್ಮಲ್ಲಿ ಇರಬೇಕು?

ಭಾರತೀಯ ಪ್ರಜೆ ಎನ್ನುವುದಕ್ಕೆ ಪಾಸ್‌ಪೋರ್ಟ್ ಕಾನೂನುಬದ್ದವಾದ ದಾಖಲೆ ಅಲ್ಲದಿದ್ದರೆ, ಪೌರತ್ವ ಸಾಬೀತಿಗೆ ಯಾವ ಪುರಾವೆ ಬೇಕು ಎನ್ನುವ ಪ್ರಶ್ನೆ ಎದುರಾಗುವುದು ಸಹಜ. ಯಾಕೆಂದರೆ, ಪಾಸ್‌ಪೋರ್ಟ್ ಪೌರತ್ವ ಸಾಬೀತು ಪಡಿಸುವ ಅಂತಿಮ ದಾಖಲೆಯಲ್ಲ ಎಂದು ಎಂಇಎ ಸ್ಪಷ್ಟನೆ ನೀಡಿದ ನಂತರ, ಪ್ಯಾನ್ ಕಾರ್ಡ್, ಆಧಾರ್, ವೋಟರ್ ಐಡಿ ಇದ್ದರೆ ಸಾಕೇ ಎನ್ನುವ ಪ್ರಶ್ನೆ ಎದುರಾಗುವುದು ಹೌದು.

ಭಾರತದ ಪೌರತ್ವದ ಕಾಯ್ದೆ ಯಾವ ಅಂಶವನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ?

ಭಾರತದ ಸಂವಿಧಾನದ ವಿಧಿ 5 - 10 ಮತ್ತು ’ಪೌರತ್ವ ಕಾಯ್ದೆ 1955ರಲ್ಲಿ ( Indian Citizenship Act), ಯಾರು ಭಾರತದ ನಾಗರಿಕರು, ಅದಕ್ಕೆ ಬೇಕಾದ ದಾಖಲೆ ಏನು ಎನ್ನುವುದರ ಬಗ್ಗೆ ಸ್ಪಷ್ಟವಾದ ವ್ಯಾಖ್ಯಾನ ಇದರಲ್ಲಿದೆ. ಒಂದು ಕಾರ್ಡ್, ಅದು ಪಾಸ್‌ಪೋರ್ಟ್ ಆಗಿರಬಹುದು, ಪ್ಯಾನ್ ಆಧಾರ್ ಅಥವಾ ವೋಟರ್ ಐಡಿ ಕಾರ್ಡ್ ಅಥವಾ ಸರ್ಕಾರದ ಯಾವುದೇ ದಾಖಲೆಗಳು ನಿರ್ದಿಷ್ಟ ಕೆಲಸಕ್ಕೆ ಸೀಮಿತವಾದ ದಾಖಲೆಗೆಳೇ ಹೊರತು, ಪೌರತ್ವದ ದಾಖಲೆಯಲ್ಲ ಎನ್ನುವುದು ಕಾಯ್ದೆಯಲ್ಲಿ ಉಲ್ಲೇಖವಾಗಿದೆ.

ಅಂದರೆ, ಪಾಸ್‌ಪೋರ್ಟ್ ಎನ್ನುವುದು ಪ್ರಯಾಣಕ್ಕೆ, ಪ್ಯಾನ್ ಎನ್ನುವುದು ತೆರಿಗೆ, ವೋಟರ್ ಐಡಿ ಎನ್ನುವುದು ಚುನಾವಣೆಗೆ ಸಂದರ್ಭದಲ್ಲಿ ಬಳಸುವ ದಾಖಲೆ ಮಾತ್ರ ಎಂದು ಪರಿಗಣಿಸಲಾಗುತ್ತದೆ. ಇದನ್ನು ಅಂತಿಮವಾಗಿ, ಪೌರತ್ವದ ದಾಖಲೆ ಎಂದೇ ಪರಿಗಣಿಸಲಾಗುವುದಿಲ್ಲ ಎನ್ನುವುದು ಕಾಯ್ದೆಯ ಸಾರಾಂಶ.

ಪಾಸ್‌ಪೋರ್ಟ್ ಯಾಕೆ ಅಧಿಕೃತ ದಾಖಲೆಯಲ್ಲ ಎನ್ನುವುದಕ್ಕೆ ಕಾನೂನು ಏನು ಹೇಳುತ್ತೆ?

ಭಾರತದ ಪೌರತ್ವ ಎನ್ನುವುದು ಒಬ್ಬ ವ್ಯಕ್ತಿಯ ಜನ್ಮ, ವಂಶವೃಕ್ಷ, ಹಿಂದಿನ ನೋಂದಣಿ ಅಥವಾ ವಂಶವೃಕ್ಷದ ಆಧಾರದ ಮೇಲೆ ಲಭ್ಯವಿರುವ ಈಗಿನ ದಾಖಲೆಗಳನ್ನು, ಭಾರತೀಯ ಪೌರತ್ವಕ್ಕೆ ದಾಖಲೆ ಎಂದು ಪರಿಗಣಿಸಬಹುದು ಎನ್ನುವುದು ಕಾನೂನಿನಲ್ಲಿ ಉಲ್ಲೇಖವಾಗಿದೆ.

ಪಾಸ್‌ಪೋರ್ಟ್ ಪೌರತ್ವದ ಅಂತಿಮ ದಾಖಲೆಯಲ್ಲ ಎನ್ನುವುದಕ್ಕೆ ವಿದೇಶಾಂಗ ಇಲಾಖೆ (ಕಾನೂನಿನ ಚೌಕಟ್ಟಿನಲ್ಲಿ) ಕೊಡುವ ಕಾರಣ ಒಂದು. ಅದು, ಪಾಸ್‌ಪೋರ್ಟ್ ಕಾಯ್ದೆ 1967ರ ಪ್ರಕಾರ, ವಿಶೇಷ ಸಂದರ್ಭಗಳಲ್ಲಿ, ಭಾರತೀಯ ನಾಗರಿಕರಲ್ಲದ ವ್ಯಕ್ತಿಗಳಿಗೂ, ಪಾಸ್‌ಪೋರ್ಟ್ ನೀಡುವ ಅಧಿಕಾರವನ್ನು ಹೊಂದಿರುತ್ತದೆ. ಇದಕ್ಕೆ ಉದಾಹರಣೆಯೆಂದರೆ, 1962ರ ಅಬ್ದುಲ್ ಖಾದರ್ ಕೇಸ್, 2005ರ ಸರ್ಬಾನಂದ ಸೋನೋವಾಲ್ ಕೇಸ್’ಅನ್ನು ಉಲ್ಲೇಖಿಸಲಾಗಿದೆ. ಹಾಗಾಗಿ, ಪೌರತ್ವಕ್ಕೆ ಇದನ್ನು ಅಧಿಕೃತ ದಾಖಲೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎನ್ನುವುದು ಕಾನೂನಿನಲ್ಲಿರುವ ಕ್ರಮವಾಗಿದೆ. ಅಮೆರಿಕ, ಬ್ರಿಟನ್’ನಂತಹ ಪ್ರಜಾಪ್ರಭುತ್ವ ದೇಶಗಳಲ್ಲೂ ಇದೇ ರೀತಿಯ ಕ್ರಮವನ್ನು ಪಾಲಿಸಲಾಗುತ್ತದೆ.

ಹಾಗಾದರೆ, ಆಧಾರ್, ಪ್ಯಾನ್, ವೋಟರ್ ಐಡಿ ಯಾವ ದಾಖಲೆ?

ಭಾರತ ಸರ್ಕಾರ, ಸಾರ್ವಜನಿಕರು ದಿನನಿತ್ಯ ಬಳಸುವ ಯಾವುದೇ ಕಾರ್ಡ್’ಗಳು ಪೌರತ್ವದ ದಾಖಲೆ ಎಂದು ಖಾತರಿ ಪಡಿಸುವುದಿಲ್ಲ.

ಆಧಾರ್ ಕಾರ್ಡ್ (Aadhaar Crad) : ಇದು ಕೇವಲ ಭಾರತದಲ್ಲಿ ವಾಸಿಸುತ್ತಿರುವವರ ಗುರುತು ಮತ್ತು ವಿಳಾಸದ ಪುರಾವೆಯಾಗಿದೆ. ಭಾರತದಲ್ಲಿ ಕನಿಷ್ಠ 182 ದಿನಗಳ ಕಾಲ ವಾಸವಿರುವ ಯಾವುದೇ ವಿದೇಶಿ ಪ್ರಜೆಗೂ ಆಧಾರ್ ಸಿಗಬಹುದು. ಆಧಾರ್ ಕಾರ್ಡಿನ ಮೇಲೆಯೇ ಇದು ಪೌರತ್ವದ ದಾಖಲೆಯಲ್ಲ ಎಂದು ಬರೆದಿರುತ್ತದೆ.

ಮತದಾರರ ಗುರುತಿನ ಚೀಟಿ (Voter ID) : ಇದು ಚುನಾವಣೆಯಲ್ಲಿ ಮತದಾನ ಮಾಡಲು ಇರುವ ಗುರುತಿನ ಚೀಟಿಯಾಗಿದೆ. ಇದು, ಭಾಗಶಃ ಪೌರತ್ವವನ್ನು ಬಿಂಬಿಸುತ್ತಿದೆಯಾದರೂ, ಇದನ್ನು ಪಡೆಯಲು ನೀಡಲಾದ ಮೂಲ ದಾಖಲೆಗಳನ್ನು ಆಧರಿಸಿ, ಪೌರತ್ವದ ನಿರ್ಧಾರವಾಗುತ್ತದೆ.

ಪ್ಯಾನ್ ಕಾರ್ಡ್ (PAN) : ಇದು ಕೇವಲ ಆದಾಯ ತೆರಿಗೆ ಇಲಾಖೆಗೆ ಸಂಬಂಧಿಸಿದಂತೆ ನಡೆಸುವ ವಹಿವಾಟಿಗೆ ನೀಡುವ ಕಾರ್ಡ್ ಆಗಿದೆ. ಇದನ್ನು ವಿದೇಶಿ ಪ್ರಜೆಗಳಿಗೂ ವಿತರಿಸಲಾಗುತ್ತದೆ.

ಹಾಗಾದರೆ, ಭಾರತದಲ್ಲಿ ಪೌರತ್ವವನ್ನು ಸಾಬೀತು ಪಡಿಸುವುದು ಹೇಗೆ?

ದೇಶದಲ್ಲಿ ಎಲ್ಲರಿಗೂ ಅನ್ವಯವಾಗುವಂತೆಹ ಸಾರ್ವತಿಕ ಪೌರತ್ವ ಕಾರ್ಡ್ ನೀಡುವ ಪದ್ದತಿಯಿಲ್ಲ. ಭಾರತದ ಪೌರತ್ವವನ್ನು ಪಡೆಯಲು ಬಯಸುವ ವಿದೇಶಿ ಪ್ರಜೆಗಳಿಗೆ ಮಾತ್ರ ಪೌರತ್ವ ಪ್ರಮಾಣಪತ್ರ (Certificate of Citinzenship) ನೀಡಲಾಗುತ್ತದೆ. ಈ ಕೆಳಗಿನ ದಾಖಲೆಗಳು, ಪೌರತ್ವವನ್ನು ಸಾಬೀತು ಪಡಿಸಲು ಬೇಕಾಗುತ್ತದೆ.

ಜನನ ಪ್ರಮಾಣಪತ್ರವನ್ನು (Birth Certificate) ಪರಿಗಣಿಸಲಾಗುತ್ತದೆ. ಇದರಲ್ಲಿ, ಭಾರತದಲ್ಲಿ ಯಾವಾಗ, ಎಲ್ಲಿ, ಯಾವ ಸಮಯದಲ್ಲಿ ಮತ್ತು ಪೋಷಕರ ಮಾಹಿತಿಯನ್ನು ಇದು ಹೊಂದಿರುತ್ತದೆ. ಜೊತೆಗೆ, ಪೋಷಕರ ಇಂದಿನ ಸ್ಥಿತಗತಿ ಏನಿದೆ ಎನ್ನುವುದೂ ಇದರಲ್ಲಿ ಗೊತ್ತಾಗಲಿದೆ.

ವಂಶಾವಳಿಯ (Family Tree) ದಾಖಲೆಗಳನ್ನೂ ಪರಿಗಣಿಸಲಾಗುತ್ತದೆ. ಪೋಷಕರ ಅಥವಾ ಅಜ್ಜಂದಿರ ಶಾಲಾ ಪ್ರಮಾಣಪತ್ರಗಳೂ, ಭೂಮಿಯ ಕಂದಾಯಕ್ಕೆ ಸಂಬಂಧಿಸಿದ ದಾಖಲೆಗಳು, ಹಳೆಯ ಸರ್ಕಾರೀ ದಾಖಲೆಗಳನ್ನೂ ಪರಿಗಣಿಸಲಾಗುತ್ತದೆ.

ಹಿಂದಿನ ದಾಖಲೆಗಳು ಅಂದರೆ, ಹಳೆಯ ಜನ್ಮ ದಾಖಲೆಗಳು, ನಿವಾಸದ ಪುರಾವೆಗಳು ಅಥವಾ 1951 ಅಥವಾ ಹಳೆಯ ವರ್ಷಗಳ ಚುನಾವಣಾ ಮತದಾರರ ಪಟ್ಟಿಗಳ (Electoral Rolls) ದಾಖಲೆಗಳನ್ನೂ ಪರಿಗಣಿಸಲಾಗುತ್ತದೆ.

Post a Comment

0 Comments