Advertisement

Gruhalakshmi Scheme: ನಿಮ್ಮ ಊರಿನಲ್ಲೇ 2000 ಗೃಹಲಕ್ಷ್ಮಿ ಹಣಕ್ಕೆ ಹೊಸ ಅರ್ಜಿ ಸಲ್ಲಿಸಬಹುದು! ಮಹಿಳೆಯರ ಸಹಾಯಕ್ಕೆ ಬರ್ತಿದ್ದಾರೆ ಇವರು

ಯೋಜನೆ ಪರಿಷ್ಕರಣೆ ಕಾರ್ಯ ಕೂಡ ಭರದಿಂದ ಸಾಗಿದ್ದು, ಇದೀಗ ಕೊನೇ ಹಂತದ ತಯಾರಿ ಮಾಡಿಕೊಳ್ಳುತ್ತಿದೆ. ಅನಸ್ಥರಕ್ಷರು ಹಾಗೂ ಹೊಸ ಅರ್ಜಿ ಸಲ್ಲಿಸುವವರ ಸಹಾಯಕ್ಕೆ ಬರಲಿದ್ದಾರೆ ಇವರು.

ಗೃಹಲಕ್ಷ್ಮಿ (Gruhalakshmi) ಯೋಜನೆಯಲ್ಲಿ ಭಾರೀ ಅಕ್ರಮ ನಡೆದಿದೆ ಎನ್ನಲಾಗ್ತಿದ್ದು, ಸಾವಿರಾರು ರೂಪಾಯಿ ಅನರ್ಹರ ಪಾಲಾಗ್ತಿದೆ. ಈ ದುರುಪಯೋಗ ತಡೆಗೆ ರಾಜ್ಯ ಸರ್ಕಾರ (State Government) ಮುಂದಾಗಿದ್ದು, ಮತ್ತೊಮ್ಮೆ ಎಲ್ಲಾ ಫಲಾನುಭವಿಗಳು ಹೊಸದಾಗಿ ಅರ್ಜಿ ಸಲ್ಲಿಸುವ ಅನಿವಾರ್ಯತೆ ಇದೆ. ಈಗಾಗಲೇ ಮಾರ್ಗಸೂಚಿ ಸಿದ್ಧಪಡಿಸುತ್ತಿದ್ದು, 2-3 ದಿನದಲ್ಲಿ ಅಂತಿಮಗೊಳಿಸಲಿದೆ ಹೊಸ ಅರ್ಜಿ ಕುರಿತು ಮಹತ್ವದ ಘೋಷಣೆ ಹೊರಬೀಳಲಿದೆ. ಗೃಹಲಕ್ಷ್ಮಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ ಅನ್ನೋ ಗೊಂದಲಕ್ಕೆ ತೆರೆಬೀಳಲಿದೆ

ಗೃಹಲಕ್ಷ್ಮಿ ಹಣಕ್ಕೆ ಹೊಸ ಅರ್ಜಿ ಯಾವಾಗ?

ಮೃತಪಟ್ಟವರು ಹಾಗೂ ಐಟಿ/ಜಿಎಸ್‌ಟಿ ಪಾವತಿದಾರರಿಗೂ ಗೃಹಲಕ್ಷ್ಮಿ ಹಣ ಹೋಗ್ತಿದ್ದು, ಈ ವಿಚಾರವನ್ನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಯೋಜನೆ ಪರಿಷ್ಕರಣೆ ಕಾರ್ಯ ಕೂಡ ಭರದಿಂದ ಸಾಗಿದ್ದು, ಇದೀಗ ಕೊನೇ ಹಂತದ ತಯಾರಿ ಮಾಡಿಕೊಳ್ಳುತ್ತಿದೆ. ಶೀಘ್ರದಲ್ಲೇ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತೆ.

ಅನಕ್ಷರಸ್ಥರಿಗೆ ಅಂಗನವಾಡಿ ಸಿಬ್ಬಂದಿ ಸಹಾಯ

ಅನಕ್ಷಸ್ಥರು ಸೇರಿ ಅರ್ಜಿ ಸಲ್ಲಿಸಲು ಬಾರದವರಿಗೆ ಸಹಾಯ ಮಾಡಲೆಂದು ಅಂಗನವಾಡಿ ಸಿಬ್ಬಂದಿಯನ್ನ ಬಳಸಿಕೊಳ್ಳಲು ಮಹಿಳಾ ಹಾಗೂ ಮಕ್ಕಳ ಇಲಾಖೆ ಮುಂದಾಗಿದೆ. ಈ ಬಾರಿ ಅರ್ಹರಿಗೆ ಮಾತ್ರ ಸೌಲಭ್ಯ ದೊರಕಿಸಿಕೊಂಡಲು ಪರಿಷ್ಕರಣೆ ನಡೆಸಲಾಗ್ತಿದೆ ಎಂದು ಕನ್ನಡ ಪ್ರಭ ವರದಿ ಮಾಡಿದೆ.

ಹೊಸ ಅರ್ಜಿ ಸಲ್ಲಿಕೆ ಹೇಗೆ?

* ಅಂಗನವಾಡಿ ಸಿಬ್ಬಂದಿಯ ಮೊಬೈಲ್‌ನಲ್ಲಿ ಗೃಹಲಕ್ಷ್ಮಿ ಆ್ಯಪ್ ಇನ್‌ಸ್ಟಾಲ್ ಆಗಿರಲಿದೆ

* ಈ ಆ್ಯಪ್‌ನ ಮೂಲಕ ಅನಕ್ಷರಸ್ಥರು, ಬಡವರು ಅರ್ಜಿ ಸಲ್ಲಿಸಬಹುದು

* ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್‌ನಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ.

* ಸೇವಾ ಕೇಂದ್ರಗಳಲ್ಲಿ ಕೂಡ ಅರ್ಜಿ ಸಲ್ಲಿಸಬಹುದು

*ಅರ್ಜಿ ಸ್ವೀಕಾರ ವೇಳೆ ಬಯೋಮೆಟ್ರಿಕ್, ಫೇಸ್ ರೆಕಗ್ರೇಷನ್ ಸಂಗ್ರಹ

* ರಾಜ್ಯದಲ್ಲಿನ ಬ್ಯಾಂಕ್ ಖಾತೆ ವಿವರ ನೀಡಬೇಕು

* ಬಿಪಿಎಲ್, ಎಪಿಎಲ್ ಕಾರ್ಡುದಾರರು ಅರ್ಹ

* ಐಟಿ/ಜಿಎಸ್‌ಟಿ ಪಾವತಿದಾರರು ಯೋಜನೆಗೆ ಅರ್ಹರಾಗಿರುವುದಿಲ್ಲ.

'ಗೃಹಲಕ್ಷ್ಮಿ'ಯಲ್ಲಿ ಭಾರೀ ಅಕ್ರಮ

ಗೃಹಲಕ್ಷ್ಮೀ ಯೋಜನೆಯಲ್ಲಾದ ಲೋಪದ ಕುರಿತು ಸಿಎಜಿ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಸಿಎಜಿ ಡೇಟಾ ಅನಾಲಿಕ್ಸ್ ವಿಭಾಗ ನಡೆಸಿದ ಆಡಿಟ್ನಲ್ಲಿ ಲೋಪ ಪತ್ತೆಯಾಗಿದೆ ಎಂಬ ವಿಚಾರ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಒಂದೇ ಅಕೌಂಟ್ ಸಾವಿರಾರು ಫಲಾನುಭವಿಗಳು!

ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ಸರ್ಕಾರ ಮುಂದಾಗಿದೆ. ಇದರ ನಡುವೆ ಲೋಪ ದೋಷಗಳ ಬಗ್ಗೆ ಸಿಎಜಿ ವರದಿ ಕೊಟ್ಟ ಮಾಹಿತಿ ಬೆಚ್ಚಿಬೀಳಿಸುವಂತಿದೆ. ಒಂದೇ ಅಕೌಂಟ್ನಲ್ಲಿ ಸಾವಿರಾರು ಫಲಾನುಭವಿಗಳ ಹೆಸರು ಇರುವ ವಿಚಾರ ಬಯಲಾಗಿದೆ. ಈಗಾಗಲೇ ಗೃಹಲಕ್ಷ್ಮೀ ಯೋಜನೆಯಲ್ಲಿ 75 ಸಾವಿರ ಕೋಟಿ ವಿತರಣೆ ಮಾಡಲಾಗಿದೆ. ಇದೀಗ CAG ವರದಿಯಲ್ಲಿ ಗೃಹಲಕ್ಷ್ಮೀ ಯೋಜನೆಯ ಲೋಪ ಉಲ್ಲೇಖವಾಗಿದೆ.

ಒಂದೇ ಬ್ಯಾಂಕ್ನಲ್ಲಿ 19,020 ಅಕೌಂಟ್!

ಸಿಎಜಿ ಡೇಟಾ ಅನಾಲಿಕ್ಸ್ ವಿಭಾಗ ನಡೆಸಿದ ಆಡಿಟ್ನಲ್ಲಿ ಗೃಹಲಕ್ಷ್ಮಿ ಹೆಸರಲ್ಲಿ ನಡೆಯುತ್ತಿರೋ ದೊಡ್ಡ ಲೋಪ ಪತ್ತೆಯಾಗಿದೆ. ಒಂದೇ ಬ್ಯಾಂಕ್ ಖಾತೆಗೆ ಹಲವು ಫಲಾನುಭವಿಗಳು ಅಕೌಂಟ್ ಇದ್ದು, ಸಿಎಜಿ ವರದಿ ಪ್ರಕಾರ 19,020 ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆ ಇದೆಯಂತೆ.

Post a Comment

0 Comments