Kuri Sakanike Training-ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಪಡೆಯಲು ಅರ್ಜಿ ಆಹ್ವಾನ

Kuri Sakanike Training-ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಪಡೆಯಲು ಅರ್ಜಿ ಆಹ್ವಾನ

ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು(Sheep And Goat Farming) ಆರಂಭಿಸಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಕೆನರಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಕೇಂದ್ರದಿಂದ ಉಚಿತವಾಗಿ ತರಬೇತಿಯನ್ನು ಪಡೆಯಲು ಅವಕಾಶವಿದ್ದು ಇಂದಿನ ಈ ಲೇಖನದಲ್ಲಿ ಈ ಕುರಿತು ಸಂಪೂರ್ಣ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕೃಷಿಯ ಜೊತೆಗೆ ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು(Uchita Kuri Sakanike Tarabeti)ಮಾಡಿಕೊಂಡು ಸುಸ್ಥಿರ ಜೀವನವನ್ನು ರೈತರು ನಡೆಸಲು ಅವಕಾಶವಿದ್ದು ಈ ಕ್ಷೇತ್ರವು ರೈತರಿಗೆ ಉಪ ಆದಾಯವನ್ನು ರೂಪಿಸಿಕೊಳ್ಳಲು ನೆರವಾಗುತ್ತದೆ. ಯಾವುದೇ ನೂತನ ಸ್ವಂತ ಉದ್ದಿಮೆಯನ್ನು ಆರಂಭಿಸುವ ಮುನ್ನ ಈಗಾಗಲೇ ಆ ಕ್ಷೇತ್ರದಲ್ಲಿ ಅನುಭವ ಹೊಂದಿರುವ ವ್ಯಕ್ತಿಗಳಿಂದ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿಯನ್ನು ಪಡೆದುಕೊಳ್ಳುವುದು ಅತ್ಯವಶ್ಯಕ.

ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಸ್ವ-ಉದ್ಯೋಗ ತರಬೇತಿ ಕೇಂದ್ರಗಳಿಂದ ಮತ್ತು ಪಶುಸಂಗೋಪನೆ ಇಲಾಖೆಯಿಂದ ಕಾಲ ಕಾಲಕ್ಕೆ ಉಚಿತವಾಗಿ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯನ್ನು ಆಯೋಜನೆ ಮಾಡಲಾಗುತ್ತದೆ. ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ (ತಾ) ಹಸಿಗಾಳ (ಅಂ) ಸೊಣ್ಣಹಳ್ಳಿಪುರ ಗ್ರಾಮದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಹಾಗೂ ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಆರಂಭಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಬ್ಸಿಡಿ ಯೋಜನೆಗಳ(Sheep And Goat Farming Subsidy Schemes)ವಿವರವನ್ನು ಸಹ ಈ ಕೆಳಗೆ ಹಂಚಿಕೊಳ್ಳಲಾಗಿದೆ.

Free Sheep And Goat Farming-ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ:

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ದಿನಾಂಕ: 11/08/2025 ರಿಂದ 13 ದಿನಗಳ ಕಾಲ ನಿರುದ್ಯೋಗಿ ಪುರುಷರು ಹಾಗೂ ಮಹಿಳೆಯರಿಗೆ ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರವನ್ನು ಏರ್ಪಡಿಸಿದೆ.

ಸ್ವಯಂ ಉದ್ಯೋಗಿಗಳಾಗಲು ಬಯಸುವ 18 ರಿಂದ 45 ವರ್ಷ ವಯಸ್ಸಿನ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ನಿರುದ್ಯೋಗಿ ಪುರುಷರು ಹಾಗೂ ಮಹಿಳೆಯರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಶಿಬಿರದ ಸಮಯದಲ್ಲಿ ತರಬೇತಿ, ಊಟ ಹಾಗೂ ವಸತಿ ಸೌಕರ್ಯಗಳು ಉಚಿತವಾಗಿ ಶಿಬಿರಾರ್ಥಿಗಳಿಗೆ ಕಲ್ಪಿಸಲಾಗುವುದು. ಗ್ರಾಮೀಣ ಭಾಗದ ಬಿಪಿಎಲ್ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು. ಅಭ್ಯರ್ಥಿಗಳು ಸ್ಥಳೀಯ ಭಾಷೆ ಬಲ್ಲವರಾಗಿದ್ದು, ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ತರಬೇತಿ ನಂತರ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ.

How To Apply-ತರಬೇತಿಯಲ್ಲಿ ಭಾಗವಹಿಸುವುದು ಹೇಗೆ?

ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯನ್ನು ಪಡೆಯಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಣಿಯನ್ನು ಮಾಡಿಸಿ ತರಬೇತಿಯಲ್ಲಿ ಭಾಗವಹಿಸುವ ಈ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ: 9505894247, 9591514154, 8970446644 

Training Center Address-ತರಬೇತಿ ಕೇಂದ್ರದ ವಿಳಾಸ:

ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ (ತಾ) ಹಸಿಗಾಳ (ಅಂ) ಸೊಣ್ಣಹಳ್ಳಿಪುರ ಗ್ರಾಮದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ಆಯೋಜನೆ ಮಾಡಲಾಗಿದೆ. 

Kuri Sakanike Subsidy Yojana-ಕುರಿ ಮತ್ತು ಮೇಕೆ ಸಾಕಾಣಿಕೆಗೆ ಸಬ್ಸಿಡಿ ಯೋಜನೆಗಳು:

ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಆರಂಭಿಸಲು ಆಸಕ್ತರಿರುವ ರೈತರಿಗೆ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಬ್ಸಿಡಿ ಮತ್ತು ಸಾಲ ಸೌಲಭ್ಯಗಳು ಲಭ್ಯವಿವೆ. ಈ ಯೋಜನೆಗಳು ರೈತರಿಗೆ ಆರ್ಥಿಕ ನೆರವು ನೀಡಿ, ಕುರಿ ಸಾಕಾಣಿಕೆಯನ್ನು ಲಾಭದಾಯಕವಾಗಿ ಮಾಡಲು ಸಹಾಯ ಮಾಡುತ್ತವೆ. ಕೆಳಗೆ ಕೆಲವು ಪ್ರಮುಖ ಯೋಜನೆ ಅಡಿ ಸಬ್ಸಿಡಿಯನ್ನು ಪಡೆಯಲು ಅವಕಾಶವಿರುತ್ತದೆ.

1) ರಾಷ್ಟ್ರೀಯ ಜಾನುವಾರು ಮಿಷನ್ (NLM Scheme)ವಿವರ:

ರಾಷ್ಟ್ರೀಯ ಜಾನುವಾರು ಮಿಷನ್ (NLM) ಯೋಜನೆಯಡಿ ಕುರಿ ಸಾಕಾಣಿಕೆಗೆ ಆರ್ಥಿಕ ನೆರವು ಒದಗಿಸಲಾಗುತ್ತದೆ.

ಸಬ್ಸಿಡಿ: ರೂ. 25 ಲಕ್ಷದವರೆಗೆ ಯೋಜನೆ ವೆಚ್ಚದ ಶೇ. 50% ಸಬ್ಸಿಡಿ ಲಭ್ಯವಿದೆ.

ಅರ್ಹತೆ: ಕುರಿ ಸಾಕಾಣಿಕೆ ಆರಂಭಿಸಲು ಆಸಕ್ತರಾದ ರೈತರು ಅರ್ಜಿ ಸಲ್ಲಿಸಬಹುದು.

2) ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ(Amrutha Swabimani Kurigahi Yojane)

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಈ ಯೋಜನೆಯು ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಸಹಾಯಧನ ಮತ್ತು ಸಾಲ ಸೌಲಭ್ಯ ಒದಗಿಸುತ್ತದೆ.

ಸಬ್ಸಿಡಿ: ಪ್ರತಿ ಘಟಕಕ್ಕೆ (20 ಕುರಿ + 1 ಮೇಕೆ) ಒಟ್ಟು ರೂ. 1.75 ಲಕ್ಷ ವೆಚ್ಚ.

ರಾಜ್ಯ ಸರ್ಕಾರ ರೂ. 43,750 ಸಹಾಯಧನ ನೀಡುತ್ತದೆ. ಫಲಾನುಭವಿಗಳು ರೂ. 43,750 ವಂತಿಕೆಯಾಗಿ ನೀಡಬೇಕು.

ರೂ. 87,500 ಸಾಲ ರಾಜ್ಯ ಹಣಕಾಸು ಸಂಸ್ಥೆಯಿಂದ ಶೇ. 9.26 ಬಡ್ಡಿದರದಲ್ಲಿ ಲಭ್ಯ.

ಅರ್ಹತೆ: ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಾಗಿರಬೇಕು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದವರು ಅರ್ಜಿ ಸಲ್ಲಿಸಬಹುದು.

3) ಕುರಿ ಸಾಕಾಣಿಕೆ ಶೆಡ್ ನಿರ್ಮಾಣಕ್ಕೆ ಸಬ್ಸಿಡಿ(Narega Yojane):

ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿಗಳ ಮೂಲಕ ಕುರಿ ಸಾಕಾಣಿಕೆ ಶೆಡ್ ನಿರ್ಮಾಣಕ್ಕೆ ಸಬ್ಸಿಡಿ ಒದಗಿಸಲಾಗುತ್ತದೆ.

4) ಸಹಕಾರ ಸಂಘಗಳ ಮೂಲಕ ಸಬ್ಸಿಡಿ(Kuri Sakanike):

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಸಹಕಾರ ಸಂಘಗಳ ಮೂಲಕ ಕುರಿ ಖರೀದಿ, ಆಹಾರ, ಮತ್ತು ಇತರ ಸೌಕರ್ಯಗಳಿಗೆ ಸಬ್ಸಿಡಿ ನೀಡುತ್ತದೆ.

ಸಬ್ಸಿಡಿ: ಪ್ರತಿ ಯೂನಿಟ್‌ಗೆ (25 ಕುರಿ/ಮೇಕೆ) ಯೋಜನೆ ವೆಚ್ಚದ ಶೇ. 50% ಸಬ್ಸಿಡಿ, ಗರಿಷ್ಠ ರೂ. 1 ಲಕ್ಷ ಮಿತಿಯೊಂದಿಗೆ.

ಅರ್ಹತೆ: ಸಹಕಾರ ಸಂಘಗಳ ಸದಸ್ಯರಾಗಿರಬೇಕು.

5) ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಯೋಜನೆ(Ambedkar Nigama Yojana)

ಪರಿಶಿಷ್ಟ ಜಾತಿಯ ರೈತರಿಗೆ ಕುರಿ ಸಾಕಾಣಿಕೆಗೆ ಸಾಲ ಮತ್ತು ಸಹಾಯಧನ.

ಸಬ್ಸಿಡಿ: ರೂ. 50,000 ಘಟಕ ವೆಚ್ಚದಲ್ಲಿ ಶೇ. 50% (ರೂ. 25,000) ಸಹಾಯಧನ ಮತ್ತು ರೂ. 25,000 ಸಾಲ (4% ಬಡ್ಡಿದರದಲ್ಲಿ).

ಅರ್ಹತೆ: 21-50 ವರ್ಷ ವಯಸ್ಸಿನ ಪರಿಶಿಷ್ಟ ಜಾತಿಯ ರೈತರು, ಇದುವರೆಗೆ ನಿಗಮದಿಂದ ಸೌಲಭ್ಯ ಪಡೆದಿರದವರು.

6) ಉಚಿತ ಟೆಂಟ್ ಮತ್ತು ಪರಿಕರ ವಿತರಣೆ:

ವಲಸೆ ಕುರಿಗಾರರಿಗೆ ಉಚಿತ ಟೆಂಟ್ ಮತ್ತು ಇತರ ಸಾಮಗ್ರಿಗಳನ್ನು ಒದಗಿಸುವ ಯೋಜನೆ.

ಸಬ್ಸಿಡಿ: ಟೆಂಟ್ ಮತ್ತು ಪರಿಕರಗಳು ಉಚಿತವಾಗಿ ಲಭ್ಯ.

ಅರ್ಹತೆ: ನೋಂದಾಯಿತ ಕುರಿ ಉತ್ಪಾದಕರ ಸಹಕಾರ ಸಂಘದ ಸದಸ್ಯರು.

Post a Comment

Previous Post Next Post

Top Post Ad

CLOSE ADS
CLOSE ADS
×