ನಿಮ್ಮ ಮಗುವಿನ ಆಧಾರ್ ಕಾರ್ಡ್ ಅಪ್‌ಡೇಟ್‌ ಮಾಡದಿದ್ರೆ, ನಿಷ್ಕ್ರಿಯಗೊಳ್ಳಬಹುದು! ಕಾರಣ ಏನು? ಪರಿಹಾರ ಇಲ್ಲಿದೆ

Aadhaar Card Update : ಪೋಷಕರು ತಮ್ಮ ಮಗುವಿನ ಬೆಳವಣಿಗೆ ಬಳಿಕ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್‌ ಮಾಡುವುದು ಕಡ್ಡಾಯವಾಗಿದೆ. ಏಕೆಂದರೆ ನಿಮ್ಮ ಮಗು ದೊಡ್ಡದಾದ ಬಳಿಕ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಆಗಿರದಿದ್ರೆ, ಅದನ್ನು ನಿಷ್ಕ್ರಿಯಗೊಳಿಸಬಹುದು! ಹೌದು, UIDAIನ ನಿಯಮದ ಪ್ರಕಾರ ಯಾವುದೇ ಮಗು 7 ವರ್ಷ ದಾಟಿದ ಬಳಿಕ ಆಧಾರ್ ಕಾರ್ಡ್‌ ಇನ್ನೂ ಅಪ್‌ಡೇಟ್ ಆಗಿಲ್ಲದಿದ್ರೆ UIDAI ಅದನ್ನು ಬ್ಲಾಕ್ ಮಾಡುವ ಸ್ವಾತಂತ್ರ್ಯವಿದೆ. ಅಷ್ಟಕ್ಕೂ ಒಮ್ಮೆ ಆಧಾರ್ ಕಾರ್ಡ್ ಮಾಡಿಸಿದ ಮೇಲೆ ಅಪ್‌ಡೇಟ್‌ ಏಕೆ? ಕಾರಣಗಳನ್ನು ಈ ಲೇಖನದಲ್ಲಿ ತಿಳಿಯಿರಿ




ಆಧಾರ್ ಕಾರ್ಡ್, ಬ್ಯಾಂಕ್‌ನಲ್ಲಿ ಅಕೌಂಟ್ ಓಪನ್ ಮಾಡೋದ್ರಿಂದ ಹಿಡಿದು ಸರ್ಕಾರದ ಉಚಿತ ಯೋಜನೆಗಳು ಸೇರಿದಂತೆ ಹಲವು ವಿಚಾರಗಳಿಗೆ ಕಡ್ಡಾಯವಾಗಿ ಬೇಕಿರುವ ಪ್ರಮುಖ ದಾಖಲೆಯಾಗಿದೆ. ಸರ್ಕಾರಿ ಯೋಜನೆಗಳ ಲಾಭ, ಮಕ್ಕಳ ಶಾಲಾ ಪ್ರವೇಶ ಎಲ್ಲದಕ್ಕೂ ಆಧಾರ್ ಸಂಖ್ಯೆ ಅತ್ಯಗತ್ಯ. ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್ , ಫಿಂಗರ್ ಪ್ರಿಂಟ್ ಸೇರಿ ಹಲವು ಮಾಹಿತಿ ಇರುತ್ತದೆ. ಹೀಗಿರುವಾಗ ಭಾರತದ ಪ್ರತಿಯೊಬ್ಬ ಪ್ರಜೆಯು ಆಧಾರ್ ಕಾರ್ಡ್ ಹೊಂದುವುದು ಹಾಗೂ ಹಲವು ವರ್ಷಗಳಾದ ಬಳಿಕ ಅಪ್‌ಡೇಟ್ ಮಾಡುವುದು ಸಹ ಬಹಳ ಮುಖ್ಯ.

ಇದೇ ರೀತಿಯಲ್ಲಿ ಪೋಷಕರು ತಮ್ಮ ಆಧಾರ್ ಕಾರ್ಡ್ ಅಷ್ಟೇ ಅಲ್ಲ, ತಮ್ಮ ಮಗುವಿನ ಆಧಾರ್ ಕಾರ್ಡ್ ಅನ್ನು ಸಹ ಅಪ್‌ಡೇಟ್‌ ಮಾಡಬೇಕಾಗುತ್ತದೆ. ಮಗುವಿನ ವಯಸ್ಸು ಐದು ವರ್ಷಗಳು ದಾಟಿದ್ರೆ ನೀವು ಮಗುವಿನ ಫಿಂಗರ್‌ಪ್ರಿಂಟ್‌, ಫೋಟೋವನ್ನು ಬದಲಾಯಿಸಬೇಕು. ಇಲ್ಲದಿದ್ರೆ ಆ ಆಧಾರ್‌ ಕಾರ್ಡ್ ನಿಷ್ಕ್ರಿಯಗೊಳಿಸಬಹುದು! ಹಾಗಿದ್ರೆ ಮಗುವಿಗೆ ಎಷ್ಟು ವರ್ಷ ವಯಸ್ಸಿನವರಗೆ ಇದು ಉಚಿತವಾಗಿರುತ್ತದೆ ಎಂಬುದನ್ನು ಮುಂದೆ ತಿಳಿಯಿರಿ.

ಮಗುವಿಗೆ ಈಗಾಗಲೇ 5 ವರ್ಷ ದಾಟಿದ್ರೆ ಕೂಡಲೇ ಅಪ್‌ಡೇಟ್ ಮಾಡಿ

ನಿಮ್ಮ ಮಗುವಿಗೆ ಈಗಾಗಲೇ ಐದು ವರ್ಷವಾಗಿದ್ರೆ, ಅವರ ಆಧಾರ್‌ ಕಾರ್ಡ್‌ನ ಬಯೋಮೆಟ್ರಿಕ್ ವಿವರಗಳನ್ನು ಅಪ್‌ಡೇಟ್ ಮಾಡುವುದು ಅವಶ್ಯಕವಾಗಿದೆ. ಬಯೋಮೆಟ್ರಿಕ್ ಅಂದ್ರೆ ಫಿಂಗರ್‌ಪ್ರಿಂಟ್, ಕಣ್ಣಿನ ಸ್ಕ್ಯಾನಿಂಗ್ ಮತ್ತು ಫೋಟೊ ಅಪ್‌ಡೇಟ್‌ ಆಗಿದೆ.

7 ವರ್ಷದ ಬಳಿಕ ಆಧಾರ್ ಕಾರ್ಡ್ ಬ್ಲಾಕ್ ಮಾಡಬಹುದು

UIDAI ಅಂದ್ರೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ನಿಯಮದ ಪ್ರಕಾರ ಮಗುವಿಗೆ ಏಳು ವರ್ಷದ ನಂತರವು ಬಯೋಮೆಟ್ರಿಕ್‌ ಅಪ್‌ಡೇಟ್ ಮಾಡಿರದಿದ್ರೆ ಆ ಮಗುವಿನ ಆಧಾರ್ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಬಹುದು. ಹೀಗಾಗಿ ಮಗುವಿನಗೆ ಐದು ವರ್ಷ ವಯಸ್ಸಾದಗಲೇ ಅದರ ಫಿಂಗರ್ ಪ್ರಿಂಟ್‌, ಐರಿಸ್ ಹಾಗೂ ಫೋಟೋವನ್ನು ಅಪ್‌ಡೇಟ್ ಮಾಡಬೇಕು. ಮಗುವಿಗೆ 5 ವರ್ಷದಿಂದ 7 ವರ್ಷದವರೆಗೆ ಆಧಾರ್‌ ಕಾರ್ಡ್ ಅಪ್‌ಡೇಟ್ ಉಚಿತವಾಗಿದೆ.

ಒಂದು ವೇಳೆ ಮಗುವಿಗೆ ಈಗಾಗಲೇ 7 ವರ್ಷ ಆಗಿದ್ದೇ ಆದಲ್ಲಿ, ಬಯೋಮೆಟ್ರಿಕ್‌ಗಳನ್ನ ಅಪ್‌ಡೇಟ್ ಮಾಡದಿದ್ರೆ, 100 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇನ್ನು ಮಗುವಿನ 7 ವರ್ಷದ ಬಳಿಕ ಆಧಾರ್ ಕಾರ್ಡ್ ಅಪ್‌ಡೇಟ್ ಬಳಿಕ 15ನೇ ವಯಸ್ಸಿನಲ್ಲಿ ಬಯೋಮೆಟ್ರಿಕ್ ಅಪ್‌ಡೇಟ್‌ ಮತ್ತೆ ಮಾಡಬೇಕು.

ಬಯೋಮೆಟ್ರಿಕ್ ಅಪ್‌ಡೇಟ್‌ ಏಕೆ?

ಯಾವುದೇ ಮಗುವಿನ ಬಯೋಮೆಟ್ರಿಕ್ ಅಪ್‌ಡೇಟ್ ಅನ್ನು ಸಮಯಕ್ಕೆ ಸರಿಯಾಗಿ ಮಾಡದಿದ್ರೆ ಯುಐಡಿಎಐ ನಿಮ್ಮ ಮಗುವಿನ ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸುವ ಅಧಿಕಾರ ಹೊಂದಿದೆ.

ಅಪ್‌ಡೇಟ್ ಆಗಿರದ ಆಧಾರ್ ಇಲ್ಲದೆಯೇ, ನೀವು ಮಗುವಿಗೆ ಶಾಲಾ ಪ್ರವೇಶ, ಪರೀಕ್ಷಾ ನೋಂದಣಿ, ವಿದ್ಯಾರ್ಥಿವೇತನ, ಸಬ್ಸಿಡಿ ಅಥವಾ DBTನಂತಹ ಯಾವುದೇ ಸರ್ಕಾರಿ ಸೌಲಭ್ಯಗಳ ಪ್ರಯೋಜವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಹೀಗಾಗಿ ಪ್ರತಿಯೊಂದು ಸರ್ಕಾರಿ ಯೋಜನೆಗೆ ಮಾನ್ಯತೆ ಪಡೆಯಲು ಅಪ್‌ಡೇಟ್ ಆಗಿರುವ ಆಧಾರ್ ಕಾರ್ಡ್ ಅಗತ್ಯವಾಗಿದೆ. ಇದ್ರಿಂದಾಗಿ ನೀವು ಅಂತಹ ಯಾವುದೇ ತೊಂದರೆಯನ್ನ ತಪ್ಪಿಸಲು ಸಮಯಕ್ಕೆ ಸರಿಯಾಗಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಮುಖ್ಯ.

ಆಧಾರ್ ಕಾರ್ಡ್ ಎಲ್ಲಿ ಮತ್ತು ಹೇಗೆ ಅಪ್‌ಡೇಟ್ ಮಾಡುವುದು?


ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರ ಅಥವಾ ಅಧಿಕೃತ ಆಧಾರ್ ದಾಖಲಾತಿ ಕೇಂದ್ರಕ್ಕೆ ಹೋಗಿ.

ಮಗುವಿನ ಆಧಾರ್ ಕಾರ್ಡ್ ಮತ್ತು ಪೋಷಕರ ಐಡಿ ಡಾಕ್ಯುಕೆಂಟ್‌ ನಿಮ್ಮೊಂದಿಗೆ ಇಟ್ಟುಕೊಳ್ಳಿ

ಮಗುವಿನ ವಯಸ್ಸು 5 ರಿಂದ 7ರೊಳಗಿದ್ದರೆ ಉಚಿತವಾಗಿ ಅಪ್‌ಡೇಟ್ ಮಾಡಿ, ನಂತರ 100 ರೂಪಾಯಿ ಶುಲ್ಕ!


Previous Post Next Post