ಪ್ರಸ್ತುತ ಡಿಜಿಟಲ್ ಯುಗದಲ್ಲಿ ಯಾರ ಕೈಯಲ್ಲಿ ನೋಡಿದರು ಸ್ಮಾರ್ಟ್ ಪೋನ್ ಅನ್ನು(Free Smartphone Repair Training) ನಾವು ಕಾಣಬಹುದು ಈ ನಿಟ್ಟಿನಲ್ಲಿ ಮೊಬೈಲ್ ಪೋನ್ ರಿಪೇರಿ ಕ್ಷೇತ್ರವು ದಿನದಿಂದ ದಿನಕ್ಕೆ ಏರುಗತ್ತಿಯಲ್ಲಿ ಸಾಗುತ್ತಿದ್ದು ಇದಕೆ ಪೂರಕವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ(Canara Bank Rural Training Institute) ಉಚಿತ ಸೇಲ್ ಪೋನ್ ರಿಪೇರಿ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ತರಬೇತಿಯು ಸಂಪೂರ್ಣ ಉಚಿತವಾಗಿದ್ದು ನಿರುದ್ಯೋಗಿ ಯುವಕರು ಇದರ ಪ್ರಯೋಜನವನ್ನು(Smartphone Repair Business Ideas) ಪಡೆದುಕೊಳ್ಳಬಹುದು ಸಂಸ್ಥೆಯಿಂದ ಉಚಿತ ತರಬೇತಿ ಕುರಿತು ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದ್ದು ಇದರ ಸಂಪೂರ್ಣ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ಈ ಅಂಕಣದಲ್ಲಿ ಉಚಿತ ತರಬೇತಿಯನ್ನು(Mobile Repair Training) ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳೇನು? ಸೇಲ್ ಪೋನ್ ರಿಪೇರಿ ತರಬೇತಿ ಪಡೆಯುವುದರಿಂದ ಯಾವೆಲ್ಲ ಪ್ರಯೋಜನಗಳಿವೆ? ಈ ಕ್ಷೇತ್ರದಲ್ಲಿ ಸ್ವಂತ ಉದ್ಯೋಗವನ್ನು ಆರಂಭಿಸಲು ಇರುವ ಅವಕಾಶಗಳೇನು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.
Smartphone Repair Course in Karnataka-ಉಚಿತ ಸೇಲ್ ಪೋನ್ ರಿಪೇರಿ ತರಬೇತಿ ಯಾರೆಲ್ಲ ಭಾಗವಹಿಸಬಹುದು?
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ಉಚಿತ ಸೇಲ್ ಪೋನ್ ರಿಪೇರಿ ತರಬೇತಿಯನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ತರಬೇತಿಯನ್ನು ಪಡೆಯಲು ಬಯಸುವ ಅಭ್ಯರ್ಥಿಗಳು 18 ರಿಂದ 35 ವರ್ಷ ವಯಸ್ಸಿನವರಾಗಿರಬೇಕು.
ಬಿಪಿಎಲ್ ಕಾರ್ಡ ಹೊಂದಿರುವವರಿಗೆ ಮೊದಲ್ ಆದ್ಯತೆ ಇರುತ್ತದೆ ಎಂದು ಅಧಿಕೃತ ಪ್ರಕಟಣಯಲ್ಲಿ ತಿಳಿಸಲಾಗಿದೆ.
ಅರ್ಜಿದಾರ ಅಭ್ಯರ್ಥಿಗೆ ತರಬೇತಿಯನ್ನು ಪಡೆದುಕೊಂಡ ಬಳಿಕ ಸ್ವಂತ ಉದ್ಯೋಗವನ್ನು ಆರಂಭಿಸಲು ಆಸಕ್ತಿಯನ್ನು ಹೊಂದಿರಬೇಕು.
Free Smartphone Repair Training Duration-ತರಬೇತಿ ಅವಧಿ ಎಷ್ಟು ದಿನ?:
ಉಚಿತ ಸೇಲ್ ಪೋನ್ ರಿಪೇರಿ ತರಬೇತಿಯು 05 ಆಗಸ್ಟ್ 2025 ರಿಂದ ಪ್ರಾರಂಭವಾಗಿ ಒಟ್ಟು 30 ದಿನ ನಡೆಯಲಿದೆ.
Free Smartphone Repair Training-ಉಚಿತ ವಸತಿ-ಊಟ ಸಹಿತಿ ತರಬೇತಿ:
ಉಚಿತ ಸೇಲ್ ಪೋನ್ ರಿಪೇರಿ ತರಬೇತಿಯನ್ನು ಪಡೆಯಲು ಆಯ್ಕೆಯಾಗುವ ಎಲ್ಲಾ ಅಭ್ಯರ್ಥಿಗಳಿಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿಯೇ ತರಬೇತಿ ಅವಧಿಯಲ್ಲಿ ಉಳಿದುಕೊಳ್ಳಲು ಉಚಿತ ವಸತಿ ಮತ್ತು ಊಟ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Government Certificate Training-ಪ್ರಮಾಣ ಪತ್ರ ಪಡೆಯಬಹುದೇ?
ಹೌದು, ತರಬೇತಿಯನ್ನು ಪೂರ್ಣಗೊಳಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದಿಂದ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಅಧಿಕೃತವಾಗಿ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಸ್ವಂತ ಉದ್ಯೋಗವನ್ನು ಆರಂಭಿಸಲು ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಈ ಪ್ರಮಾಣ ಪತ್ರ ನೆರವಾಗುತ್ತದೆ.
How To Apply-ಅರ್ಜಿ ಸಲ್ಲಿಸುವುದು ಹೇಗೆ?
ಉಚಿತ ಸೇಲ್ ಪೋನ್ ರಿಪೇರಿ ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಈ ಮೊಬೈಲ್ ಸಂಖ್ಯೆಗೆ 9505894247/ 8970476050/ 9591514754/ 9686248369, ಕರೆ ಮಾಡಬೇಕು. ಬಳಿಕ ದಿನಾಂಕ : 05 ಆಗಸ್ಟ್ 2025 ಮಂಗಳವಾರ ಬೆಳಗ್ಗೆ 11.00 ಘಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ (ಅಂಚೆ), ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಡೆಯುವ ನೇರ ಸಂದರ್ಶನಕ್ಕೆ ವಿದ್ಯಾರ್ಹತೆಗಳೊಂದಿಗೆ ಮತ್ತು ವಿಳಾಸ ದಾಖಲಾತಿಗಳೊಂದಿಗೆ ಹಾಜರಾಗಬೇಕು.
Mobile Repair Skills Training-ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಕುರಿತು ಮಾಹಿತಿಯನ್ನು ತಿಳಿಸಲಾಗುತ್ತದೆ?
ತರಬೇತಿಯಲ್ಲಿ ಸ್ಮಾರ್ಟ್‌ಫೋನ್‌ಗಳ ರಿಪೇರಿ, ಡಿಸ್‌ಅಸೆಂಬಲ್ ಮತ್ತು ಅಸೆಂಬಲ್ ಮಾಡುವುದು, ಸಾಫ್ಟ್‌ವೇರ್ ಸಮಸ್ಯೆಗಳ ಸರಿಪಡಿಸುವಿಕೆ, ಮತ್ತು ಭಾಗಗಳ ಬದಲಾವಣೆಯಂತಹ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ.
Mobile Shop Business-ತರಬೇತಿ ಪಡೆಯುವುದರ ಪ್ರಯೋಜನಗಳು:
ಇಂದು ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್‌ಫೋನ್ ಇರುವುದರಿಂದ, ಇದರ ರಿಪೇರಿ ಸೇವೆಗೆ ಒಂದು ದೊಡ್ಡ ಮಾರುಕಟ್ಟೆ ಇದೆ. ಈ ತರಬೇತಿಯ ಮೂಲಕ, ಯುವಕರು ತಾಂತ್ರಿಕ ಜ್ಞಾನವನ್ನು ಪಡೆಯಬಹುದು ಮತ್ತು ತಮ್ಮ ಸ್ವಂತ ರಿಪೇರಿ ಶಾಪ್‌ಗಳನ್ನು ಆರಂಭಿಸಬಹುದು. ಇದು ಕಡಿಮೆ ಆರಂಭಿಕ ಖರ್ಚಿನೊಂದಿಗೆ ಉತ್ತಮ ಆದಾಯ ಒದಗಿಸುವ ಸಾಧ್ಯತೆಯನ್ನು ಹೊಂದಿದೆ.ರಿಪೇರಿ ಕೇಂದ್ರವನ್ನು ಜೊತೆಗೆ ಐಟಂಗಳ ಮಾರಾಟ (ಅಕ್ಸೆಸರಿಗಳು, ಚಾರ್ಜರ್‌ಗಳು) ಆರಂಭಿಸುವ ಮೂಲಕ ಆದಾಯವನ್ನು ಗಳಿಸಬಹುದು.