Post Office Franchise-ಪೋಸ್ಟ್ ಆಫೀಸ್ ಫ್ರಾಂಚೈಸಿ ಪಡೆಯಲು ಅವಕಾಶ! ತಿಂಗಳಿಗೆ 50,000 ಆದಾಯ

ಭಾರತೀಯ ಅಂಚೆ ಇಲಾಖೆಯು(India Post) ಸ್ವಂತ ಉದ್ದಿಮೆಯನ್ನು ಆರಂಭಿಸಲು ಆಸಕ್ತಿಯನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ ಒಂದು ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು ಪೋಸ್ಟ್ ಆಫೀಸ್ ಫ್ರಾಂಚೈಸಿ ಪಡೆಯುವುದರ ಮೂಲಕ ಪ್ರತಿ ತಿಂಗಳು ಆದಾಯವನ್ನು ಗಳಿಸಲು ಅವಕಾಶವನ್ನು ನೀಡಿದೆ.

ಪೋಸ್ಟ್ ಆಫೀಸ್ ಫ್ರಾಂಚೈಸಿ(Post Office Franchise In India) ಅನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ವಿಲೇವಾರಿ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಸ್ತುತ ದಿನದಲ್ಲಿ ನಿರುದ್ಯೋಗ ಸಮಸ್ಯೆಯು ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿದ್ದು ವಿದ್ಯಾವಂತ ಯುವಕ/ಯುವತಿಯರು ತಮ್ಮದೇ ಅದ ಸ್ವಂತ ಉದ್ದಿಮೆಯನ್ನು(India Post Franchise) ಪ್ರಾರಂಭಿಸುವ ಕಡೆ ಗಮನ ಕೊಟ್ಟಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಆದಾಯ ತರಬಲ್ಲ ಉದ್ದಿಮೆಯನ್ನು ಕಟ್ಟಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Post Office Franchise Details-ಅಂಚೆ ಫ್ರ್ಯಾಂಚೈಸ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಭಾರತೀಯ ಅಂಚೆ ಇಲಾಖೆಯಡಿ ಬರುವ "ಪೋಸ್ಟ್ ಆಫೀಸ್" ಗಳು ಬಹುತೇಕ ದೇಶದ ಎಲ್ಲಾ ಭಾಗಗಳಲ್ಲಿ ಇದ್ದು ಈ ಸೇವೆಯನ್ನು ಇನ್ನು ಹೆಚ್ಚಿನ ಜನರಿಗೆ ತಲುಪಿಸಲು ಹಾಗೂ ಸುಲಭ ಮತ್ತು ತ್ವರಿತವಾಗಿ ಅಂಚೆ ಇಲಾಖೆಯ ಸೇವೆಗಳನ್ನು ಜನರಿಗೆ ತಲುಪುವಂತೆ ಮಾಡುವ ಉದ್ದೇಶದಿಂದ ಸರ್ಕಾರವು ಅಂಚೆ ಫ್ರ್ಯಾಂಚೈಸ್ ಯೋಜನೆಯನ್ನು ಜಾರಿಗೆ ತಂದಿದೆ.

Post Office Franchise Eligibility-ಪೋಸ್ಟ್ ಆಫೀಸ್ ಫ್ರಾಂಚೈಸಿ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು.

ಅಭ್ಯರ್ಥಿಯು ಕನಿಷ್ಠ 8ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು.

ಅಭ್ಯರ್ಥಿಗೆ 18 ವರ್ಷ ಭರ್ತಿಯಾಗಿರಬೇಕು.

ಕಚೇರಿಯನ್ನು ಆರಂಭಿಸಲು 100 ಚದರ ಅಡಿ ವಿಸ್ತೀರ್ಣದ ಮಳಿಗೆ/ಕಟ್ಟಡವನ್ನು ಹೊಂದಿರಬೇಕು.

ಯಾವುದೇ ಕ್ರಿಮಿನಲ್ ಪ್ರಕರಣದ ಹಿನ್ನೆಲೆಯನ್ನು ಹೊಂದಿರಬಾರದು.

Post Office Franchise Investment-ಎಷ್ಟು ಹೂಡಿಕೆ ಅವಶ್ಯಕ:

ಅಭ್ಯರ್ಥಿಯು ಪೋಸ್ಟ್ ಆಫೀಸ್ ಫ್ರಾಂಚೈಸಿಯನ್ನು ಆರಂಭಿಸಲು ತಾವು ಆಯ್ಕೆ ಮಾಡುವ ಪ್ರದೇಶ ಮತ್ತು ಸೇವೆಗಳನ್ನು ಅವಲಂಬಿಸಿ ರೂ. 2 ಲಕ್ಷದಿಂದ ರೂ. 10 ಲಕ್ಷದವರೆಗೆ ಆರಂಭಿಕ ಹೂಡಿಕೆ ಮಾಡಬೇಕಾಗುತ್ತದೆ. ಮತ್ತು ಅಂಚೆ ಇಲಾಖೆಯಲ್ಲಿ ರೂ. 5000 ಭದ್ರತಾ ಠೇವಣಿ ಇಡಬೇಕಾಗುತ್ತದೆ ಹಾಗೂ ಅರ್ಜಿ ಶುಲ್ಕ ರೂ 5000 ಪಾವತಿ ಮಾಡಬೇಕು ಎಸ್ಸಿ, ಎಸ್ಟಿ ಮತ್ತು ಮಹಿಳೆಯರಿಗೆ ಈ ಶುಲ್ಕದಿಂದ ವಿನಾಯಿತಿ ಇರುತ್ತದೆ.

Post Office Franchise Income 2025: ಪೋಸ್ಟ್ ಆಫೀಸ್ ಫ್ರಾಂಚೈಸಿ ತೆಗೆದುಕೊಳ್ಳುವುದರಿಂದ ಎಷ್ಟು ಹಣ ಗಳಿಸಬಹುದು?

ಭಾರತೀಯ ಅಂಚೆ ಇಲಾಖೆಯ (India Post) ಫ್ರಾಂಚೈಸಿ ತೆಗೆದುಕೊಳ್ಳುವುದರಿಂದ ಗಳಿಸಬಹುದಾದ ಹಣವು ಫ್ರಾಂಚೈಸಿಯ ಪ್ರಕಾರ, ವಹಿವಾಟಿನ ಪ್ರಮಾಣ, ಮತ್ತು ಸೇವೆಗಳ ಮೇಲೆ ಅವಲಂಬಿತವಾಗಿರುತ್ತದೆ. ಭಾರತೀಯ ಅಂಚೆ ಇಲಾಖೆಯು ಎರಡು ರೀತಿಯ ಫ್ರಾಂಚೈಸಿಗಳನ್ನು ನೀಡುತ್ತದೆ: ಪೋಸ್ಟಲ್ ಏಜೆಂಟ್ ಫ್ರಾಂಚೈಸಿ ಮತ್ತು ಔಟ್‌ರೀಚ್ ಫ್ರಾಂಚೈಸಿ. ಈ ಎರಡೂ ಫ್ರಾಂಚೈಸಿಗಳಲ್ಲಿ ಗಳಿಕೆಯು ಕಮಿಷನ್ ಆಧಾರಿತವಾಗಿದೆ. ಕೆಳಗೆ ವಿವರವಾಗಿ ತಿಳಿಸಲಾಗಿದೆ:

1) ಪೋಸ್ಟಲ್ ಏಜೆಂಟ್ ಫ್ರಾಂಚೈಸಿಸೇವೆಗಳು:

ಸ್ಟಾಂಪ್ ಮತ್ತು ಸ್ಟೇಷನರಿ ಮಾರಾಟ, ಸ್ಪೀಡ್ ಪೋಸ್ಟ್, ರಿಜಿಸ್ಟರ್ಡ್ ಪೋಸ್ಟ್, ಮನಿಆರ್ಡರ್, ಮತ್ತು ಇತರ ಪೋಸ್ಟಲ್ ಸೇವೆಗಳು.

ಕಮಿಷನ್: ಸ್ಟಾಂಪ್ ಮತ್ತು ಸ್ಟೇಷನರಿ: ಮಾರಾಟದ ಮೇಲೆ 5% ಕಮಿಷನ್.

ಸ್ಪೀಡ್ ಪೋಸ್ಟ್/ರಿಜಿಸ್ಟರ್ಡ್ ಪೋಸ್ಟ್: ಪ್ರತಿ ಲೇಖನಕ್ಕೆ ₹3-₹5 ಕಮಿಷನ್.

ಮನಿಆರ್ಡರ್: ಒಟ್ಟು ವಹಿವಾಟಿನ ಮೇಲೆ 3-5% ಕಮಿಷನ್.

ಬಿಲ್ ಪಾವತಿಗಳು: ಪ್ರತಿ ವಹಿವಾಟಿಗೆ ₹2-₹5.

ಗರಿಷ್ಠ ಗಳಿಕೆ: ಗಳಿಕೆಯು ಸ್ಥಳೀಯ ಬೇಡಿಕೆ ಮತ್ತು ಗ್ರಾಹಕರ ಸಂಖ್ಯೆಯ ಮೇಲೆ ಅವಲಂಬಿತವಾಗಿರುತ್ತದೆ. ಸರಾಸರಿಯಾಗಿ, ಒಂದು ಚಿಕ್ಕ ಫ್ರಾಂಚೈಸಿಯಿಂದ ತಿಂಗಳಿಗೆ ₹10,000 ರಿಂದ ₹50,000 ಗಳಿಸಬಹುದು. ಗ್ರಾಮೀಣ ಅಥವಾ ಅರೆ-ನಗರ ಪ್ರದೇಶಗಳಲ್ಲಿ ಇದು ಕಡಿಮೆ ಇರಬಹುದು, ಆದರೆ ದೊ ನಗರ ಪ್ರದೇಶಗಳಲ್ಲಿ ಹೆಚ್ಚಿನ ವಹಿವಾಟಿನಿಂದ ₹50,000 ರಿಂದ ₹1 ಲಕ್ಷದವರೆಗೆ ಗಳಿಸಬಹುದು.

2) ಔಟ್‌ರೀಚ್ ಫ್ರಾಂಚೈಸಿ ಸೇವೆಗಳು:

ಇದು ಗ್ರಾಮೀಣ ಹಾಗೂ ಕಡಿಮೆ ಜನರಿರುವ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಸ್ಟಾಂಪ್ ಮಾರಾಟ, ರಿಜಿಸ್ಟರ್ಡ್ ಪೋಸ್ಟ್, ಮನಿಆರ್ಡರ್, ಮತ್ತು ಕೆಲವೊಮ್ಮೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಸೇವೆಗಳು.

ಕಮಿಷನ್: ಸ್ಟಾಂಪ್ ಮಾರಾಟದ ಮೇಲೆ 5% ಕಮಿಷನ್.

ರಿಜಿಸ್ಟರ್ಡ್ ಪೋಸ್ಟ್/ಸ್ಪೀಡ್ ಪೋಸ್ಟ್‌ಗೆ ಪ್ರತಿ ಲೇಖನಕ್ಕೆ ₹2.50-₹5.

IPPB ವಹಿವಾಟಿಗೆ (ಉದಾಹರಣೆಗೆ, ಖಾತೆ ತೆರೆಯುವಿಕೆ, ಠೇವಣಿಗಳು) ₹10-₹50 ಪ್ರತಿ ವಹಿವಾಟಿಗೆ.

ಗರಿಷ್ಠ ಗಳಿಕೆ: ಗ್ರಾಮೀಣ ಪ್ರದೇಶಗಳಲ್ಲಿ ತಿಂಗಳಿಗೆ ₹5,000 ರಿಂದ ₹20,000 ಗಳಿಸಬಹುದು. IPPB ಸೇವೆಗಳನ್ನು ಸೇರಿಸಿದರೆ ಗಳಿಕೆಯು ₹30,000 ರವರೆಗೆ ಹೆಚ್ಚಾಗಬಹುದು.

How to Apply for Post Office Franchise-ಪೋಸ್ಟ್ ಆಫೀಸ್ ಫ್ರಾಂಚೈಸಿ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

ಪೋಸ್ಟ್ ಆಫೀಸ್ ಫ್ರಾಂಚೈಸಿ ಅನ್ನು ತೆಗೆದುಕೊಳ್ಳಲು ಆಸಕ್ತಿಯನ್ನು ಹೊಂದಿರುವರು ಮೊದಲ ಹಂತದಲ್ಲಿ ಅರ್ಜಿ ನಮೂನೆಯನ್ನು ಅಂಚೆ ಇಲಾಖೆಯ ಜಾಲತಾಣವನ್ನು(www.indiapost.gov.in) ಭೇಟಿ ಮಾಡಿ ಡೌನ್ಲೋಡ್ ಮಾಡಿಕೊಂಡು ಬಳಿಕ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ನಿಮ್ಮ ಜಿಲ್ಲಾ ಅಂಚೆ ಇಲಾಖೆಯ ಕಚೇರಿಗೆ ಅಗತ್ಯ ದಾಖಲೆಗಳ ಸಮೇತ ಸಲ್ಲಿಸಬೇಕು. ಬಳಿಕ ಅಧಿಕಾರಿಗಲು ನಿಮ್ಮ ಅರ್ಜಿಯನ್ನು ಪರಿಶೀಲನೆ ಕೈಗೊಂಡು ನೀವು ಅರ್ಹರಾಗಿದ್ದರೆ ನಿಮಗೆ ಅಂಚೆ ಫ್ರ್ಯಾಂಚೈಸ್ ನೀಡಲಾಗುತ್ತದೆ. ಅಂಚೆ ಇಲಾಖೆಯಿಂದ ಇದರ ಕುರಿತು ತರಬೇತಿಯನ್ನು ಸಹ ಒದಗಿಸಲಾಗುತ್ತದೆ.

How to Apply for Post Office Franchise-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್-Click Here

Previous Post Next Post