ರಾಜ್ಯದಿಂದ ಸ್ಥಳೀಯ ಹಂತದವರೆಗೆ ನಾಲ್ಕು ಹಂತದ ಸಮಿತಿಗಳ ರಚನೆ.ಸಮಿತಿಗಳ ಕಾರ್ಯಾವಧಿ, ಸಭೆಗಳ ನಿಯಮಗಳ ರೂಪರೇಖೆ ಸಿದ್ಧ.ಮಹಿಳಾ ಪಡಿತರದಾರರಿಗೆ ನ್ಯಾಯಬೆಲೆ ಅಂಗಡಿಗಳ ಸಮಿತಿಯಲ್ಲಿ ಪ್ರಾತಿನಿಧ್ಯ ಕಡ್ಡಾಯ
ಅನ್ನಭಾಗ್ಯ (Anna Bhagya Scheme) ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಮತ್ತು ಈ ಯೋಜನೆಯ ನೈಜ ಪ್ರಯೋಜನಗಳು ಪಡಿತರದಾರರಿಗೆ ತಲುಪಿಸಬೇಕೆಂಬ ಉದ್ದೇಶದಿಂದ, ಕರ್ನಾಟಕ ಸರ್ಕಾರ (Karnataka Government) ನಾಲ್ಕು ಹಂತದ ಜಾಗೃತಿ ಸಮಿತಿಗಳನ್ನು ರಚಿಸಿದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ (K.H. Muniyappa) ಮಾಹಿತಿ ನೀಡಿದರು.
ಈ ಸಮಿತಿಗಳಲ್ಲಿಂದು ರಾಜ್ಯಮಟ್ಟದ ಸಮಿತಿಯು ಈಗಾಗಲೇ ರಚನೆಯಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮಿತಿಗಳು ತ್ವರಿತವಾಗಿ ರೂಪಿತವಾಗುತ್ತಿವೆ.
ಅನ್ನಭಾಗ್ಯ ಯೋಜನೆ, ರೇಷನ್ ಕಾರ್ಡ್ ಹಾಗೂ ನ್ಯಾಯಬೆಲೆ ಅಂಗಡಿ ಕುರಿತು ಬಿಗ್ ಅಪ್ಡೇಟ್
ನ್ಯಾಯಬೆಲೆ ಅಂಗಡಿಗಳ (ration shops) ಹಂತದ ಸಮಿತಿಗಳನ್ನು ಹೊಸದಾಗಿ ಪುನರ್‌ರಚನೆ ಮಾಡಲಾಗಿದೆ. ಈ ಸಮಿತಿಗಳ ಅಧಿಕಾರ ವ್ಯಾಪ್ತಿ, ಕಾರ್ಯವಿಧಾನಗಳನ್ನು ನಿಗದಿಪಡಿಸಲು ಅಗತ್ಯ ನಿಯಮಗಳು ಕೂಡ ಸಿದ್ಧಪಡಿಸಲಾಗಿದೆ.
ರಾಜ್ಯಮಟ್ಟದ ಸಮಿತಿಗೆ ಸಚಿವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ವಿಶೇಷವೆಂದರೆ, ನ್ಯಾಯಬೆಲೆ ಅಂಗಡಿಗಳ ಹಂತದ ಸಮಿತಿಗಳಲ್ಲಿ ಕಡಿಮೆ ಆದಾಯದ ಮೂರು ಮಹಿಳಾ ಪಡಿತರ ಚೀಟಿದಾರರಿಗೆ ಪ್ರಾತಿನಿಧ್ಯ ಕಡ್ಡಾಯಗೊಳಿಸಲಾಗಿದೆ.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮಿತಿಗಳ ಅವಧಿ ಎರಡು ವರ್ಷವಾಗಿದ್ದು, ಮೂರು ತಿಂಗಳಿಗೆ ಒಮ್ಮೆ ಸಭೆ ಕಡ್ಡಾಯ. ಆದರೆ ರಾಜ್ಯಾದ್ಯಂತ ಇರುವ 20,483 ನ್ಯಾಯಬೆಲೆ ಅಂಗಡಿಗಳ ಸಮಿತಿಗಳಿಗೆ ಕಾಲಮಿತಿ ಇಲ್ಲ. ಈ ಸಮಿತಿಗಳು ಪ್ರತಿದಿನ ಚಟುವಟಿಕೆ ನಡೆಸಲಿದ್ದು, ಪ್ರತಿ ತಿಂಗಳು 7ನೇ ತಾರೀಖು ಸಭೆ ನಡೆಸುವಂತೆ ಸೂಚನೆ ನೀಡಲಾಗಿದೆ.
ರಾಜ್ಯಮಟ್ಟದ ಸಮಿತಿಯಲ್ಲಿ ಹಲವು ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಪ್ರಮುಖರನ್ನು ನೇಮಕ ಮಾಡಲಾಗಿದೆ. ಜೊತೆಗೆ, ಆಹಾರ ಇಲಾಖೆ (Food Department) ಕಾರ್ಯದರ್ಶಿ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಸಮಿತಿಗಳಿಂದ ಪಡಿತರ ಯೋಜನೆಗಳು ಹೆಚ್ಚು ಪರಿಣಾಮಕಾರಿಯಾಗಬಹುದು ಎಂಬ ನಿರೀಕ್ಷೆಯಿದೆ.