ಹಸು-ಎಮ್ಮೆ ಖರೀದಿಗೆ ಸಾಲ ಸೌಲಭ್ಯ, ಪಶುಪಾಲನಾ ಯೋಜನೆ 2025ಕ್ಕೆ ಅರ್ಜಿ ಸಲ್ಲಿಸಿ

ಗ್ರಾಮೀಣ ಜನತೆಗೆ ಹಸು ಎಮ್ಮೆ ಪೋಷಣೆಗೂ ನೆರವು.ಬ್ಯಾಂಕುಗಳಿಂದ 85% ವರೆಗೆ ಹಣಕಾಸು ಸಹಾಯ.ಸಬ್ಸಿಡಿ ಸಹಿತ ಅರ್ಜಿ ಸಲ್ಲಿಸಲು ಸಾದ್ಯತೆ.

ಗ್ರಾಮೀಣ ಭಾರತದ (Rural India) ದೈನಂದಿನ ಆರ್ಥಿಕತೆಯಲ್ಲಿ ಹಸು-ಎಮ್ಮೆ ಪೋಷಣೆ ಮಹತ್ವದ ಪಾತ್ರ ವಹಿಸುತ್ತಿದೆ. ಈ ಹಿನ್ನಲೆಯಲ್ಲಿ, ಕೇಂದ್ರ ಸರ್ಕಾರವು 2025ರ ಪಶುಪಾಲನಾ ಸಾಲ (Pashupalan Loan 2025) ಯೋಜನೆಯ ಮೂಲಕ ರೈತರಿಗೆ ಹಾಗೂ ಯುವಕರಿಗೆ ಆರ್ಥಿಕ ನೆರವು ನೀಡುತ್ತಿದೆ.

ಈ ಯೋಜನೆಯ ಮೂಲಕ ಹಸು, ಎಮ್ಮೆ ಖರೀದಿ, ಹವಾಮಾನ ನಿರೋಧಕ ಕೊಟ್ಟಿಗೆ ನಿರ್ಮಾಣ ಮತ್ತು ಹಾಲು ಉತ್ಪಾದನೆ ಘಟಕ ಸ್ಥಾಪನೆಗೆ ಸಾಲ (Bank Loan) ಸಿಗುತ್ತದೆ.

ಹಸು-ಎಮ್ಮೆ ಖರೀದಿಗೆ ಸಾಲ ಸೌಲಭ್ಯ, ಪಶುಪಾಲನಾ ಯೋಜನೆ 2025ಕ್ಕೆ ಅರ್ಜಿ ಸಲ್ಲಿಸಿ

ಈ ಸಾಲವನ್ನು ರಾಷ್ಟ್ರೀಯ (Nationalized Banks), ಸಹಕಾರಿ (Cooperative Banks) ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಂದ ಪಡೆಯಬಹುದು.

ಪ್ರಮುಖವಾಗಿ, NABARDನ ಸಹಕಾರವೂ ಈ ಯೋಜನೆಗೆ ಲಭ್ಯವಿದ್ದು, ವಿವಿಧ ವರ್ಗಗಳಿಗೆ ಭಿನ್ನವಾದ ಪ್ರಮಾಣದಲ್ಲಿ ಸಬ್ಸಿಡಿ ಒದಗಿಸಲಾಗುತ್ತಿದೆ.

ಯೋಜನೆಯ ಉದ್ದೇಶ ಹಾಲು ಉತ್ಪಾದನೆ ಹೆಚ್ಚಿಸುವುದು, ರೈತರಿಗೆ ಪಾರಂಪರಿಕ ಆಧಾರದ ಜೊತೆಗೆ ಆಧುನಿಕ ಆದಾಯ ಮೂಲ ಒದಗಿಸುವುದು ಮತ್ತು ಗ್ರಾಮೀಣ ಉದ್ಯೋಗವನ್ನು ಉತ್ತೇಜಿಸುವುದು.

18 ರಿಂದ 65 ವರ್ಷದೊಳಗಿನ ಭಾರತೀಯ ನಾಗರಿಕರು ಈ ಸಾಲಕ್ಕೆ ಅರ್ಜಿ ಹಾಕಬಹುದು. ಆದರೆ, ಪಶುಪಾಲನೆ ಕುರಿತು ಪರಿಚಯ ಅಥವಾ ಅನುಭವ ಹಾಗೂ ಜಾನುವಾರುಗಳಿಗಾಗಿ ಸ್ಥಳ ಇರಬೇಕು.

ಅರ್ಜಿಗೆ ಅಗತ್ಯವಿರುವ ದಾಖಲೆಗಳು 

ಆದಾರ್ ಕಾರ್ಡ್, 

ಪಾನ್ ಕಾರ್ಡ್, 

ವಿಳಾಸದ ದಾಖಲೆ (Address Proof), 

ಪಾಸ್‌ಪೋರ್ಟ್ ಫೋಟೋ, 

ಬ್ಯಾಂಕ್ ಪಾಸ್‌ಬುಕ್, ಇತ್ಯಾದಿ.

ಸಾಲದ ಪ್ರಮಾಣ:

2 ಹಸು ಅಥವಾ ಎಮ್ಮೆ ಖರೀದಿಗೆ ₹1.5 – ₹3 ಲಕ್ಷ

ಸಣ್ಣ ಹಾಲು ಘಟಕಕ್ಕೆ ₹7 – ₹10 ಲಕ್ಷ

ದೊಡ್ಡ ಘಟಕ (20+ ಜಾನುವಾರು)ಗಳಿಗೆ ₹15 – ₹25 ಲಕ್ಷ

ಹೆಚ್ಚು ಅನುಕೂಲ ಪಡೆಯಲು SC/ST ಹಾಗೂ ಮಹಿಳೆಯರಿಗೆ ಶೇ. 33.33ರಷ್ಟು ವರೆಗೆ ಸಬ್ಸಿಡಿ ಲಭ್ಯವಿದೆ. ಸಾಮಾನ್ಯ ವರ್ಗದವರಿಗೆ ಶೇ. 25ರಷ್ಟು ಸಬ್ಸಿಡಿ NABARD ಮೂಲಕ ದೊರೆಯುತ್ತದೆ. 6 ತಿಂಗಳ ನಂತರ ಮರುಪಾವತಿ ಪ್ರಾರಂಭವಾಗಿ, 5 ರಿಂದ 7 ವರ್ಷಗಳ ಒಳಗೆ ಸಂಪೂರ್ಣ ಮರುಪಾವತಿಸಬೇಕಾಗುತ್ತದೆ.

ಅರ್ಜಿ ಪ್ರಕ್ರಿಯೆ ಸಹ ಸುಲಭವಾಗಿದೆ: ನಿಮ್ಮ ಸಮೀಪದ ಬ್ಯಾಂಕ್‌ನ್ನು ಭೇಟಿಯಾಗಿ “Dairy Loan” ಅರ್ಜಿ ಪಡೆದು, ಅಗತ್ಯ ದಾಖಲಾತಿಗಳನ್ನು ಹೊಂದಿಸಿ ಸಲ್ಲಿಸಬಹುದು. ಕೆಲ ರಾಜ್ಯಗಳಲ್ಲಿ ಪಶುಪಾಲನಾ ಇಲಾಖೆ ಅಥವಾ ರಾಜ್ಯದ ಪೋರ್ಟಲ್‌ಗಳ ಮೂಲಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾದ್ಯತೆ ಇದೆ.

ವೈಯಕ್ತಿಕವಾಗಿ ಮಾತ್ರವಲ್ಲ, ಸ್ವಸಹಾಯ ಸಂಘಗಳು (SHG), ಡೈರಿ ಸಹಕಾರ ಸಂಘಗಳು ಹಾಗೂ ಯುವ ಉದ್ಯಮಿಗಳು ಸಹ ಈ ಯೋಜನೆಯ ಲಾಭ ಪಡೆಯಬಹುದು.

ಹೀಗೆ ನೋಡಿದರೆ, ಪಶುಪಾಲನಾ ಸಾಲ 2025 ಯೋಜನೆ ಗ್ರಾಮೀಣ ಮಹಿಳೆಯರಿಗೂ ನಿಜವಾದ ಆರ್ಥಿಕ ಭದ್ರತೆ ನೀಡುವಂತಿದೆ. ಉತ್ತಮ ಯೋಜನೆಯೊಂದಿಗೆ, ಪಶುಪಾಲನೆ ಕಲಿತರೆ, ಈ ಯೋಜನೆಯಿಂದ ಯಶಸ್ಸು ಕಂಡ ನಿಜವಾದ ಉದಾಹರಣೆಗಳು ಈಗಾಗಲೇ ವಿವಿಧ ರಾಜ್ಯಗಳಲ್ಲಿ ಇದ್ದು, ಸಾವಿರಾರು ಜನರು ಸ್ವಾವಲಂಬಿಗಳಾಗಿದ್ದಾರೆ.


Previous Post Next Post