Nano Urea-ನಾನ್ಯೋ ಯೂರಿಯಾವನ್ನು ವಿವಿಧ ಬೆಳೆಗಳಲ್ಲಿ ಬಳಕೆ ಮಾಡುವುದು ಹೇಗೆ

Nano Urea-ನಾನ್ಯೋ ಯೂರಿಯಾವನ್ನು ವಿವಿಧ ಬೆಳೆಗಳಲ್ಲಿ ಬಳಕೆ ಮಾಡುವುದು ಹೇಗೆ

ಇಫ್ಕೋ ಕಂಪನಿಯ ನ್ಯಾನೋ ಯೂರಿಯಾವನ್ನು(nano urea fertilizer) ಬಹುತೇಕ ರಾಜ್ಯದ ಎಲ್ಲಾ ಭಾಗಗಳಲ್ಲಿ ಯೂರಿಯ ಚೀಲವನ್ನು(IFFCO) ಖರೀದಿ ಮಾಡುವ ಸಮಯದಲ್ಲಿ ಕಡ್ಡಾಯವಾಗಿ ರೈತರಿಗೆ ನೀಡಲಾಗುತ್ತಿದ್ದು ಈ ನಾನ್ಯೋ ಯೂರಿಯಾವನ್ನು ಯಾವೆಲ್ಲ ಬೆಳೆಗಳಿಗೆ ಹಾಗೂ ಯಾವೆಲ್ಲ ಹಂತಗಳಲ್ಲಿ ಬಳಕೆ ಮಾಡಬಹುದು? ಎನ್ನುವ ಸಂಪೂರ್ಣ ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ರಸಗೊಬ್ಬರದ ವೆಚ್ಚವನ್ನು ಕಡಿತಗೊಳಿಸಲು, ಪೋಷಕಾಂಶಗಳ ಸಮರ್ಥ ಬಳಕೆ ಹಾಗೂ ಮಣ್ಣು,ನೀರು ಮತ್ತು ಜೀವ ರಾಶಿಗಳಿಗೆ ಪೂರಕ ವಾತಾವರಣವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಇಫ್ಕೋ ಕಂಪನಿಯು ಪ್ರಸ್ತುತ ದಿನಗಳಲ್ಲಿ ನ್ಯಾನೋ ಯೂರಿಯಾವನ್ನು ಬಳಕೆ ಮಾಡುವಂತೆ ರೈತರಿಗೆ ಹೆಚ್ಚು ಉತೇಜನವನ್ನು ನೀಡುತ್ತಿದೆ.

ಈ ಅಂಕಣದಲ್ಲಿ ವಿವಿಧ ಬೆಳೆಗಳಲ್ಲಿ ನ್ಯಾನೋ ಯೂರಿಯಾವನ್ನು ಬಳಕೆ ಮಾಡುವ ವಿಧಾನ ಹೇಗೆ?ನ್ಯಾನೋ ಯೂರಿಯಾವನ್ನು ರೈತರ ಬಳಕೆ ಮಾಡುವುದರಿಂದ ಅಗುವ ಪ್ರಯೋಜನಗಳೇನು?ನ್ಯಾನೋ ಯೂರಿಯಾದ ಗುಣಲಕ್ಷಣಗಳು ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Nano Urea Benefits-ನ್ಯಾನೋ ಯೂರಿಯಾವನ್ನು ರೈತರ ಬಳಕೆ ಮಾಡುವುದರಿಂದ ಅಗುವ ಪ್ರಯೋಜನಗಳು:

ಚಿಕ್ಕ ಗಾತ್ರದ ಕಣಗಳನ್ನು ಹೊಂದಿರುವ ನ್ಯಾನೋ ಯೂರಿಯಾ (20-50nm) ಬಳಸುವುದರಿಂದ ಬೆಳೆಗೆ ಶೇಕಡಾ 80 ರಷ್ಟು ಉಪಯೋಗವಾಗುತ್ತದೆ.

ಇದು ಗಿಡಕ್ಕೆ ಬೇಕಾಗಿರುವ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸುತ್ತದೆ. ಇದರಿಂದ ಉತ್ತಮ ಗಿಡದ ಬೆಳವಣಿಗೆ ಮತ್ತು ಬೇರು ಬೆಳವಣಿಗೆಯಾಗುತ್ತದೆ.

ಇದು ಸಸ್ಯಗಳೊಳಗಿನ ಸಾರಜನಕ ಮತ್ತು ಇತರ ಪೋಷಕಾಂಶಗಳನ್ನು ತೆಗೆದುಕೊಳ್ಳುವ ಮತ್ತು ಸಂಯೋಜಿಸುವ ಮಾರ್ಗಗಳನ್ನು ಪ್ರಚೋದಿಸುತ್ತದೆ.

ಕಟಾವು ಮಾಡಿದ ಬೆಳೆಗಳಲ್ಲಿ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ.

ಇದು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಿ, ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುತ್ತದೆ.

ನ್ಯಾನೋ ಯೂರಿಯಾ ಬಳಕೆಯಿಂದ ಸಾಮಾನ್ಯವಾಗಿ ಯೂರಿಯಾ ಬಳಕೆಯನ್ನು ಶೇಕಡಾ 50 ರಷ್ಟು ಕಡಿಮೆ ಮಾಡಬಹುದು

ರೈತರು ಇದನ್ನು ಸುಲಭವಾಗಿ ಶೇಖರಿಸಿ, ಸಾಗಾಣಿಕೆ ಮಾಡಬಹುದು.

ಇದು ಮಣ್ಣು, ಗಾಳಿ ಮತ್ತು ನೀರಿನ ಗುಣಮಟ್ಟವನ್ನು ಕಾಪಾಡುವುದರಲ್ಲಿ ಸಹಕರಿಸುತ್ತದೆ.

Nano Urea Details-ನ್ಯಾನೋ ಯೂರಿಯಾದ ಗುಣಲಕ್ಷಣಗಳು:

ಇದು ನೀರಿನಲ್ಲಿ ಸಮವಾಗಿ ಹರಡಿದ ಶೇಕಡಾ 4 ರಷ್ಟು ಒಟ್ಟು ಸಾರಜನಕವನ್ನು ಹೊಂದಿರುತ್ತದೆ

ನ್ಯಾನೊ ಸಾರಜನಕ ಕಣದ ಗಾತ್ರವು 20 ರಿಂದ 50 ನ್ಯಾನೋ ಮೀಟರ್ ವರೆಗೆ ಇರುತ್ತದೆ.

ನ್ಯಾನೊ ಯೂರಿಯಾದಲ್ಲಿನ ಸಾರಜನಕವು ಸಸ್ಯದೊಳಗೆ ಹೈಡೋಲಿಸಿಸ್ ಆಗಿ ಅಮೋನಿಯಾಕಲ್ ಮತ್ತು ನೈಟ್ರೇಟ್ ರೂಪದಲ್ಲಿ ಪರಿವರ್ತನೆಗೊಳ್ಳುತ್ತದೆ.

ವಿವಿಧ ಬೆಳೆಗಳಲ್ಲಿ ನ್ಯಾನೋ ಯೂರಿಯಾವನ್ನು ಬಳಕೆ ಮಾಡುವ ವಿಧಾನ:

ಬೆಳೆ 1ನೇ ಸಿಂಪಡಣೆ 2ನೇ ಸಿಂಪಡಣೆ 3ನೇ ಸಿಂಪಡಣೆ

ಧಾನ್ಯಗಳು/ದ್ವಿದಳ ಧಾನ್ಯಗಳು / ಎಣ್ಣೆಕಾಳುಗಳು ಮೊಳಕೆಯೊಡೆದ 30-35 ದಿನಗಳ ನಂತರ ಅಥವಾ ನಾಟಿ ಮಾಡಿದ 20-25 ದಿನಗಳ ನಂತರ. ಮೊಳಕೆಯೊಡೆದ 50-60 ದಿನಗಳ ನಂತರ ಅಥವಾ ನಾಟಿ ಮಾಡಿದ 40-50 ದಿನಗಳ ನಂತರ ಹೆಚ್ಚಿನ ಪ್ರಮಾಣದ ಸಾರಜನಕ ಅಗತ್ಯವಿರುವ ಬೆಳೆಳಲ್ಲಿ ಸಿಂಪರಣೆ ಮಾಡಬಹುದು.

ತರಕಾರಿಗಳು ಮೊಳಕೆಯೊಡೆದ 30-35 ದಿನಗಳ ನಂತರ ಅಥವಾ ನಾಟಿ ಮಾಡಿದ 20-25 ದಿನಗಳ ನಂತರ ಮೊಳಕೆಯೊಡೆದ 50-60 ದಿನಗಳ ನಂತರ ಅಥವಾ ನಾಟಿ ಮಾಡಿದ 40-50 ದಿನಗಳ ನಂತರ ಹೆಚ್ಚು ಕಾಯಿ ಕೊಯ್ಲಿ ಅಗತ್ಯವಿರುವ ಬೆಳೆಗಳಲ್ಲಿ ಪ್ರತಿ ಪಿಕಿಂಗ್ ನಂತರ ಸಿಂಪರಣೆ ಮಾಡಿ

ಆಲೂಗಡ್ಡೆ ಗಡ್ಡೆ ಮೊಳಕೆಯೊಡೆದ 30-35 ದಿನಗಳ ನಂತರ ಗಡ್ಡೆಯ ಅಭಿವೃದ್ಧಿಯ ಸಮಯದಲ್ಲಿ (ಮೊಳಕೆಯ ನಂತರ 45-55 ದಿನಗಳು) ಸಾರಜನಕ ಅಗತ್ಯವನ್ನು ಅವಲಂಬಿಸಿ ಸಿಂಪರಣೆ ಮಾಡಿ

ಹತ್ತಿ ಮೊಳಕೆಯೊಡೆದ 30-35 ದಿನಗಳ ನಂತರ ಮೊಳಕೆಯೊಡೆದ 50-60 ದಿನಗಳ ನಂತರ ಸಾರಜನಕ ಅಗತ್ಯವನ್ನು ಅವಲಂಬಿಸಿ ಸಿಂಪರಣೆ ಮಾಡಿ

ಕಬ್ಬು ಮೊಳಕೆಯೊಡೆದ 30-35 ದಿನಗಳ ನಂತರ ಮೊಳಕೆಯೊಡೆದ 65-70 ದಿನಗಳ ನಂತರ ಮೊಳಕೆಯೊಡೆದ 90 ದಿನಗಳ ನಂತರ

ಹಣ್ಣುಗಳು ಮತ್ತು ಹೂಬಿಡುವ ಬೆಳೆಗಳು ಬೆಳೆ ಸಾರಜನಕದ ಅಗತ್ಯವನ್ನು ಅವಲಂಬಿಸಿ 2-3 ಸಿಂಪರಣೆಗಳನ್ನು - ಹೂಬಿಡುವ ಹಂತಕ್ಕೆ ಮೊದಲು, ಹಣ್ಣಿನ ರಚನೆಯ ಆರಂಭಿಕ ಹಂತ ಮತ್ತು ಹಣ್ಣಿನ ಬೆಳವಣಿಗೆಯ ಹಂತದಲ್ಲಿ

ಕಾಫಿ/ಚಹಾ/ನೆಡುತೋಪು ಬೆಳೆಗಳು 2-3 ತಿಂಗಳ ಮಧ್ಯಂತರದಲ್ಲಿ ಬೆಳೆಗೆ ಸಾರಜನಕದ ಅವಶ್ಯಕತೆಯಂತೆ; ಯೂರಿಯಾದ ಸ್ಥಳದಲ್ಲಿ, ನ್ಯಾನೊ ಯೂರಿಯಾವನ್ನು ಸಿಂಪಡಿಸಿ (ಕಾಫಿ/ಚಹಾದಲ್ಲಿ ಪ್ರತಿ ಕಟಾವಿನ ನಂತರ)

Nano Urea-ನ್ಯಾನೋ ಯೂರಿಯಾವನ್ನು ಎಲ್ಲಿ ಖರೀದಿ ಮಾಡಬಹುದು?

ನ್ಯಾನೋ ಯೂರಿಯಾವನ್ನು ವಿವಿಧ ಬೆಳೆಗಳಿಗೆ ಬಳಕೆ ಮಾಡಲು ರೈತರು ತಮ್ಮ ಹತ್ತಿರದ ಸೂಸೈಟಿ ಅಥವಾ ಆಗ್ರೋ ಶಾಪ್ ಅನ್ನು ನೇರವಾಗಿ ಭೇಟಿ ಮಾಡಿ ನ್ಯಾನೋ ಯೂರಿಯಾವನ್ನು ಖರೀದಿ ಮಾಡಬಹುದು.

More Information-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು:

IFFCO Helpline-ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ಸಹಾಯವಾಣಿ ಸಂಖ್ಯೆ-1800 103 1967

IFFCO Website-ಅಧಿಕೃತ ವೆಬ್ಸೈಟ್- https://www.iffco.in/en, https://www.iffco.in/kn/iffco-e-bazar



Post a Comment

Previous Post Next Post

Top Post Ad

CLOSE ADS
CLOSE ADS
×