ಸಮಸ್ಯೆಗಳನ್ನು ದೂರ ಮಾಡಲು ವಿದ್ಯಾರ್ಥಿ ಸ್ನೇಹಿ 3 ಪರೀಕ್ಷೆಗಳು.ಫಲಿತಾಂಶ ನಿರೀಕ್ಷೆಗೆ ತಕ್ಕಂತೆ ಬರದಿದ್ದರೇ ಮತ್ತೆ ಎಕ್ಸಾಂಗೆ ಚಾನ್ಸ್.ಪರೀಕ್ಷೆಯಲ್ಲಿ ಇತರೆ 5 ವಿಷಯಗಳಂತೆ ಕನ್ನಡಕ್ಕೂ 100 ಅಂಕಗಳು
ಈ ಹಿಂದೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಫೇಲಾದ್ರೆ ಸುಮಾರು 1 ವರ್ಷ ಕಾಯಬೇಕಿತ್ತು. ಈಗ ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ಪರೀಕ್ಷಾ ನಿಯಮಗಳು ಕೂಡ ಚೇಂಜ್ ಆಗಿವೆ. ಈಗಾಗಲೇ KARNATAKA SCHOOL EXAMINATION AND ASSESSMENT BOARD ಅಂದ್ರೆ ಕರ್ನಾಟಕ ಶಾಲಾ ಪರಿಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವಿದ್ಯಾರ್ಥಿ ಸ್ನೇಹ ವ್ಯವಸ್ಥೆ ಜಾರಿ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈಗಾಗಲೇ ಎಸ್ಎಸ್ಎಲ್ಸಿ ರಿಸಲ್ಟ್ ಬಂದಾಗಿದೆ. ಈ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದ್ರೆ ಅಥವಾ ಫೇಲಾದ್ರೆ ಭಯ ಪಡೋ ಅಗತ್ಯ ಇಲ್ಲ. ಒಮ್ಮೆ ಫೇಲಾದ್ರೆ ಮತ್ತೆ ಎರಡು ಬಾರಿ ಎಕ್ಸಾಂ ಬರೆಯೋಕೆ ಅವಕಾಶ ಇದೆ. ಮೂರು ಬಾರಿ ಎಕ್ಸಾಂ ಬರೆಯೋಕೆ ಅವಕಾಶ ಮಾಡಿಕೊಟ್ಟಿರೋ ಹಿಂದಿನ ಉದ್ದೇಶ ಮಕ್ಕಳಿಗೆ ಒಳ್ಳೆ ಸ್ಕೋರ್ ಬರಬೇಕು ಎಂಬುದು.
ಈ ಹಿಂದೆ ಎಲ್ಲಾ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಫೇಲಾದ್ರೆ ರೀಎಕ್ಸಾಂ ಬರೆಯೋಕೆ ಒಂದು ವರ್ಷ ಕಾಯಬೇಕಿತ್ತು. ಎಷ್ಟೋ ಮಂದಿ ಒಂದು ವರ್ಷ ಆದ್ಮೇಲೆ ಫೇಲಾದ್ರೆ ಅವರ ಭವಿಷ್ಯವೇ ಅರ್ಧಕ್ಕೆ ನಿಂತು ಹೋಗುತ್ತಿತ್ತು. ಎಸ್ಎಸ್ಎಲ್ಸಿ ರಿಸಲ್ಟ್ ಬಂದ ನಂತರ 4 ತಿಂಗಳಾದ ಮೇಲೆ ಸಪ್ಲಿಮೆಂಟರಿ ಪರೀಕ್ಷೆ ಇರ್ತಿತ್ತು. ಇನ್ನು ಈ ಸಪ್ಲಿಮೆಂಟರಿ ಫೇಲಾದ್ರೆ ಒಂದು ವರ್ಷ ಅಂತೂ ಕಾಯಲೇಬೇಕಿತ್ತು. ಇದರಿಂದ ಹಲವಾರು ವಿದ್ಯಾರ್ಥಿಗಳಿಗೆ ಅನಾನುಕೂಲ ಇರುತ್ತಿತ್ತು.
ವಿದ್ಯಾರ್ಥಿ ಸ್ನೇಹಿ 3 ಪರೀಕ್ಷೆಗಳು
ಇನ್ನೂ ಕೆಲವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಒಂದು ವರ್ಷದ ನಂತರ ಮತ್ತೆ ಮುಖ್ಯ ಪರೀಕ್ಷೆಗಳನ್ನು ಬರೆದಿರುವ ಉದಾರಣೆಗಳು ಇವೆ. ಈ ರೀತಿಯ ಎಲ್ಲ ಸಮಸ್ಯೆಗಳನ್ನು ದೂರ ಮಾಡಲು ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯ ನಿರ್ಣಯ ಮಂಡಳಿ ವಿದ್ಯಾರ್ಥಿ ಸ್ನೇಹಿ 3 ಪರೀಕ್ಷೆಗಳ ವ್ಯವಸ್ಥೆ ಮಾಡಿ ಭಾರೀ ಮೆಚ್ಚುಗೆ ಪಡೆದಿದೆ.
ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ ಬರೀಬೇಕು ಅನ್ನೋ ಕಾರಣಕ್ಕೆ ಈ ರೂಲ್ಸ್ ಜಾರಿಗೆ ತರಲಾಗಿದೆ. ಮೇ ಹಾಗೂ ಜೂನ್ನಲ್ಲಿ ಎರಡು ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಆಯೋಜಿಸಲಾಗುತ್ತದೆ. ಇದರಿಂದ ಅಂಕಗಳೇನಾದರೂ ಕಡಿಮೆ ಬಂದಿದ್ರೆ ಇನ್ನೆರಡು ಪರೀಕ್ಷೆಗಳು ಅಟೆಂಡ್ ಮಾಡಬಹುದು. ಒಟ್ಟಾರೆಯಾಗಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು 3 ಬಾರಿ ಪರೀಕ್ಷೆ ಬರೆಯುತ್ತಾರೆ. ರಿಸಲ್ಟ್ ಏನಾದರೂ ಅವರ ನಿರೀಕ್ಷೆಗೆ ತಕ್ಕಂತೆ ಬರದಿದ್ದರೆ ಇನ್ನುಳಿದ 2 ಪರೀಕ್ಷೆಗಳನ್ನು ಬಳಸಿಕೊಳ್ಳಬಹುದು. ಫೇಲಾದ್ರೂ ಕೂಡ ಎರಡೂ ಪರೀಕ್ಷೆಗಳನ್ನು ಎದುರಿಸಲು ಅವಕಾಶವಿದೆ. ಇಷ್ಟೇ ಅಲ್ಲ ಸರ್ಕಾರ ಎಸ್‌ಎಸ್‌ಎಲ್‌ಸಿಯಲ್ಲಿ ನಡೆಯುವ 3 ಪರೀಕ್ಷೆಗಳಲ್ಲಿ ಫೇಲ್ ಆಗೋ ವಿದ್ಯಾರ್ಥಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದೆ.
ಸರ್ಕಾರ ನೀಡಿದ ಸಿಹಿಸುದ್ದಿ ಏನು?
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಬಂದಿದ್ದು, ಹೇಳಿ ಕೊಳ್ಳುವಂತಹ ಸುಧಾರಣೆ ಕಂಡಿಲ್ಲ. ವೆಬ್ ಕಾಸ್ಟಿಂಗ್ ಸಿಸಿಟಿವಿ ವ್ಯವಸ್ಥೆ ಹೀಗೆ ನಾನಾ ಕಾರಣ ಶಿಕ್ಷಣ ಇಲಾಖೆ ಕೊಟ್ಟರೂ ಶೇಕಡಾವಾರು ಫಲಿತಾಂಶದಲ್ಲಿ ಹೇಳಿಕೊಳ್ಳುವಂತಹ ಪ್ರಗತಿ ಸಾಧಿಸಿಲ್ಲ. ಎಸ್ಎಸ್ಎಲ್ಸಿ ಅಲ್ಲಿ 62.34 ವಾರ್ಷಿಕ ಫಲಿತಾಂಶ ಕಂಡು ಬಂದಿದೆ. ಫಲಿತಾಂಶ ಹೆಚ್ಚಿಸಿ ಕೊಳ್ಳಲು ಪರೀಕ್ಷಾ ಪಾಸಿಂಗ್ ಪರ್ಸಂಟೇಜ್ ಇಳಿಕೆಗೆ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಎಸ್ಎಸ್ಎಲ್ಸಿ ಪಾಸಿಂಗ್ ಮಾರ್ಕ್ಸ್ ಇನ್ಮುಂದೆ ಕೇವಲ 33 ಆಗಿದೆ. ಈ ಹಿಂದೆ ಪಾಸ್ ಆಗಲು 35 ಮಾರ್ಕ್ಸ್ ಬೇಕಿತ್ತು.
ಇನ್ಮುಂದೆ ವಿದ್ಯಾರ್ಥಿಗಳು ಆಂತರಿಕ ಅಂಕಗಳೂ ಸೇರಿ ಒಟ್ಟಾರೆ ಶೇ 33 ಅಂಕ ಪಡೆದರೂ ತೇರ್ಗಡೆಯಾಗುತ್ತಾರೆ. ಪ್ರತಿ ವಿಷಯಕ್ಕೂ 20 ಆಂತರಿಕ ಅಂಕಗಳಿದ್ದು, 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಎರಡೂ ಸೇರಿ 100ಕ್ಕೆ ಕನಿಷ್ಠ 33 ಅಂಕ ಪಡೆದವರು ಉತ್ತೀರ್ಣರಾಗುತ್ತಾರೆ.
ಕನ್ನಡ ಸೇರಿದಂತೆ ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷಾ ಪರೀಕ್ಷೆಯ ಅಂಕವನ್ನು 125ರ ಬದಲು 100ಕ್ಕೆ ಸೀಮಿತಗೊಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ಧರಿಸಿದೆ. ಮುಂದಿನ ವರ್ಷ ನಡೆಯಲಿರೋ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇತರೆ 5 ವಿಷಯಗಳಂತೆ ಕನ್ನಡಕ್ಕೂ 100 ಅಂಕ ಇರುತ್ತದೆ. ಒಟ್ಟಾರೆ ಅಂಕಗಳು 600 ಇರುತ್ತವೆ. ಇದುವರೆಗೂ 625 ಅಂಕಗಳು ಇದ್ದವು. ಪ್ರತಿ ವಿಷಯದಲ್ಲೂ 20 ಅಂಕ ಆಂತರಿಕ ಮೌಲ್ಯಮಾಪನ ಹಾಗೂ 80 ಅಂಕ ಲಿಖಿತ ಪರೀಕ್ಷೆ ಒಳಗೊಂಡಿರುತ್ತದೆ. ಅಂತರಿಕ ಮೌಲ್ಯಮಾಪನದಲ್ಲಿ ವಿದ್ಯಾರ್ಥಿ, ಕನಿಷ್ಠ 15 ಅಂಕ ಪಡೆದರೇ, ಇನ್ನೂಳಿದಂತೆ ಲಿಖಿತ ಪರೀಕ್ಷೆಯಲ್ಲಿ 80 ಅಂಕಗಳಿಗೆ ಪರೀಕ್ಷೆ ಬರೆದು 18 ಅಂಕ ಪಡೆದರೂ ಸಾಕು, ಆರಾಮಾಗಿ ಪಾಸಾಗಿಬಿಡಬಹುದು.