ಗೋಲ್ಡ್ ಲೋನ್ ಧಮಾಕ, ಈ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ ಘೋಷಣೆ! ಮುಗಿಬಿದ್ದ ಜನ

ಗೋಲ್ಡ್ ಲೋನ್ ಧಮಾಕ, ಈ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ ಘೋಷಣೆ! ಮುಗಿಬಿದ್ದ ಜನ

ಚಿನ್ನದ ಆಧಾರದ ಮೇಲೆ ಯಾವುದೇ ಸಿಬಿಲ್ ಸ್ಕೋರ್ ಇಲ್ಲದೆಯೂ ಸಾಲ ಸಾಧ್ಯ.ಕೆಲ ಬ್ಯಾಂಕುಗಳು 7.90%ರಿಂದ ಆರಂಭವಾಗುವ ಬಡ್ಡಿದರದಲ್ಲಿ ನೀಡುತ್ತಿವೆ

ಸಾಲದ ಅವಧಿ, ಬ್ಯಾಂಕ್ ಪ್ರಕಾರ ಬಡ್ಡಿದರ ಬದಲಾಗುತ್ತದೆ

Gold Loan : ಸಾಮಾನ್ಯವಾಗಿ ತುರ್ತು ಅವಶ್ಯಕತೆಗಳು ಬಂದಾಗ ಜನರು ನೆನೆಸಿಕೊಳ್ಳುವ ಮೊದಲ ಪರಿಹಾರವೆಂದರೆ ಬ್ಯಾಂಕ್‌ ಲೋನ್ (bank loan). ಆದರೆ ಎಲ್ಲರಿಗೂ ಪರ್ಸನಲ್ ಅಥವಾ ಹೋಮ್ ಲೋನ್‌ (personal loan, home loan) ಸಿಗೋದು ಸುಲಭವಲ್ಲ.

ಸಿಬಿಲ್ ಸ್ಕೋರ್ (CIBIL score) ಕಡಿಮೆ ಇದ್ದರೆ ಬ್ಯಾಂಕ್‌ಗಳು ಸಾಲ ನಿರಾಕರಿಸುತ್ತವೆ. ಆದರೆ ಬಂಗಾರದ ಲೋನ್‌ (gold loan) ಈ ನಿಯಮಕ್ಕೆ ಒಳಪಟ್ಟಿಲ್ಲ. ಬಂಗಾರದ ಮೌಲ್ಯದ ಪ್ರಕಾರ 65% ರಿಂದ 75% ರವರೆಗೆ ಸಾಲ ಸಿಗುತ್ತದೆ.

ಗೋಲ್ಡ್ ಲೋನ್ ಧಮಾಕ, ಈ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ! ಮುಗಿಬಿದ್ದ ಜನ

ಕಳೆದ ಕೆಲವು ತಿಂಗಳಿನಲ್ಲಿ ಹಲವು ಪ್ರಮುಖ ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಬಂಗಾರದ ಸಾಲ ನೀಡುತ್ತಿರುವ ಬಗ್ಗೆ ಮಾಹಿತಿಗಳು ಬಹಿರಂಗವಾಗಿವೆ.

ಉದಾಹರಣೆಗೆ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 7.90% ರಿಂದ 8.90%ರ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ.

ಅದೇ ರೀತಿ ಬ್ಯಾಂಕ್ ಆಫ್ ಮಹಾರಾಷ್ಟ್ರ 8.30%ರಿಂದ ಆರಂಭವಾಗುವ ಬಡ್ಡಿದರ ಹೊಂದಿದ್ದು, ನೀವು ತೆಗೆದುಕೊಳ್ಳುವ ಲೋನ್ ಮೊತ್ತ ಮತ್ತು ಅವಧಿಗೆ ಅನುಗುಣವಾಗಿ ಬಡ್ಡಿದರ ಬದಲಾಗುತ್ತದೆ. ಫೆಡರಲ್ ಬ್ಯಾಂಕ್‌ನಲ್ಲಿ ಈ ರೇಟು 8.50%ರಿಂದ ಆರಂಭವಾಗುತ್ತದೆ.

ಯೂಕೋ ಬ್ಯಾಂಕ್ 8.75% ರಿಂದ 9.15% ವರೆಗೆ ಬಡ್ಡಿದರ ವಿಧಿಸುತ್ತಿದ್ದು, ಕೆನರಾ ಬ್ಯಾಂಕ್ ನಲ್ಲಿ ಕೂಡ 8.75% ದರದಿಂದ ಪ್ರಾರಂಭವಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಗ್ರಾಹಕರಿಗೆ ವಾರ್ಷಿಕ 9% ಬಡ್ಡಿದರದಲ್ಲಿ ಲೋನ್ ನೀಡುತ್ತಿದೆ.

ಆಕ್ಸಿಸ್ ಬ್ಯಾಂಕ್ 8.75% ರಿಂದ 17% ವರೆಗೆ ಬಡ್ಡಿದರ ಹೊಂದಿದ್ದು, ಐಸಿಐಸಿಐ ಬ್ಯಾಂಕ್‌ (ICICI Bank) 9.15% ರಿಂದ 18% ವರೆಗೆ ಬಡ್ಡಿ ವಿಧಿಸುತ್ತಿದೆ. ಹೆಚ್ ಡಿಎಫ್‌ಸಿ (HDFC Bank) ಕೂಡ 9.30% ರಿಂದ 17.86% ವರೆಗೆ ಬಂಗಾರದ ಸಾಲವನ್ನು ಒದಗಿಸುತ್ತದೆ.

ಬ್ಯಾಂಕ್ ಆಫ್ ಬರೋಡಾ 9.40%, ಕೊಟಕ್ ಮಹೀಂದ್ರಾ ಬ್ಯಾಂಕ್ 10.56%, ಕರ್ನಾಟಕ ಬ್ಯಾಂಕ್ (Karnataka Bank) 10.68% ಬಡ್ಡಿದರದಲ್ಲಿ ಸಾಲ ನೀಡುತ್ತವೆ. ಇನ್ನು ಇಂಡಸ್‌ಇಂಡ್ ಬ್ಯಾಂಕ್ 10.83% ರಿಂದ 16.28% ವರೆಗೆ ಬಡ್ಡಿದರ ವಿಧಿಸುತ್ತದೆ.

ಪ್ರತಿ ಬ್ಯಾಂಕಿಗೂ ಪ್ರೊಸೆಸಿಂಗ್ ಫೀಸು (processing fee) ಭಿನ್ನವಾಗಿದ್ದು, ಸಾಮಾನ್ಯವಾಗಿ 0.50% ರಿಂದ 1% ವರೆಗೆ ಇರುತ್ತದೆ. ಸಾಲದ ಅವಧಿ 3 ತಿಂಗಳುಗಳಿಂದ 4 ವರ್ಷಗಳವರೆಗೆ ಆಯ್ಕೆ ಮಾಡಬಹುದು.

ಬಂಗಾರದ ಲೋನ್ ಎಂಬುದು ತ್ವರಿತ, ಕಡಿಮೆ ತೊಂದರೆಯ ಸಾಲ ಮಾರ್ಗವಾಗಿದ್ದು, ತುರ್ತು ಹಣಕಾಸು ತೊಂದರೆಗಳಲ್ಲಿ ಅತ್ಯುತ್ತಮ ಆಯ್ಕೆ ಆಗಿದೆ.


Post a Comment

Previous Post Next Post

Top Post Ad

CLOSE ADS
CLOSE ADS
×