ಪ್ರತಿ ತಿಂಗಳು 10,000 ರೂಪಾಯಿ ಉಳಿತಾಯ ಮಾಡುವುದು ಹೇಗೆ? ಇಲ್ಲಿದೆ 4 ಸುಲಭ ಮಾರ್ಗ

ನೀವು ಎಷ್ಟೇ ಪ್ರಯತ್ನ ಪಟ್ಟರೂ ಪ್ರತಿ ತಿಂಗಳ ಕೊನೆಗೆ ಬ್ಯಾಂಕ್ ಅಕೌಂಟ್ ಫುಲ್ ಖಾಲಿಯಾಗಿಬಿಡುತ್ತೇ? ಒಂದೇ ಒಂದು ರೂಪಾಯಿ ಉಳಿತಾಯ ಮಾಡಲು ಆಗುತ್ತಿಲ್ಲ ಎಂದು ಯೋಚನೆಗೆ ಒಳಗಾಗಿದ್ದೀರಾ? ಹೌದು ಈ ರೀತಿಯಲ್ಲಿ ಅನೇಕ ಜನರು ಸ್ಯಾಲರಿ ಆದ ಕೆಲವೇ ದಿನಗಳಲ್ಲಿ ಸಂಪೂರ್ಣ ಹಣ ಖಾಲಿ ಮಾಡಿಕೊಂಡು ಬರಿಗೈನಲ್ಲಿ ಉಳಿಯುವ ಉದಾಹರಣೆ ಸಾಕಷ್ಟಿರುತ್ತದೆ. ಆದ್ರೆ ಕೆಲವು ಪ್ರಯತ್ನಗಳಿಂದ ಪ್ರತಿ ತಿಂಗಳು ಇಂತಿಷ್ಟು ಎಂದು ಹಣವನ್ನು ಉಳಿತಾಯ ಮಾಡಬಹುದು.ಪ್ರತಿ ತಿಂಗಳು 10,000 ರೂಪಾಯಿ ಉಳಿತಾಯ ಮಾಡುವುದು. ಈ ಮಾತು ಕೇಳಲು ಹಲವರಿಗೆ ಕಷ್ಟ ಎನಿಸಬಹುದು. ಏಕೆಂದರೆ ತಿಂಗಳ ಕಮಿಟ್‌ಮೆಂಟ್‌ನಲ್ಲಿ ಒಂದು ಸಾವಿರ ರೂಪಾಯಿ ಉಳಿತಾಯ ಮಾಡೋದೇ ಜಾಸ್ತಿ ಎನ್ನುವರ ವಾದ ಹಲವರದ್ದಾಗಿರುತ್ತದೆ. ಹೀಗಿರುವಾಗ ನೀವು ಪ್ರತಿ ತಿಂಗಳು 10,000 ರೂಪಾಯಿ ಉಳಿತಾಯ ಮಾಡುವುದು ಸುಲಭದ ಮಾತಲ್ಲ ಎನ್ನಬಹುದು. ಆದ್ರೆ ನೀವು ನಿಮ್ಮ ದೈನಂದಿನ ಚಟುವಟಿಕೆ, ಖರ್ಚು ಮಾಡುವ ರೀತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ 10,000 ಉಳಿತಾಯ ಮಾಡಬಹುದು.

1) ಆನ್‌ಲೈನ್ ಫುಡ್ ಆರ್ಡರ್ ಮಾಡುವುದನ್ನು ನಿಲ್ಲಿಸಿ, ಮನೆಯಿಂದಲೇ ಖಾದ್ಯಗಳನ್ನ ತಯಾರಿಸಿ

ಇತ್ತೀಚಿನ ದಿನಗಳಲ್ಲಿ ಎಲ್ಲವೂ ಆನ್‌ಲೈನ್ ಆರ್ಡರ್‌ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಅದ್ರಲ್ಲೂ ಫುಡ್ ಆರ್ಡರ್‌ ಅಂತು ಹಲವರ ದೈನಂದಿನ ಜೀವನದಲ್ಲಿ ಒಂದು ಭಾಗವಾಗಿಬಿಟ್ಟಿದೆ. ಆದ್ರೆ ಈ ರೀತಿಯಲ್ಲಿ ಸತತವಾಗಿ ಆನ್‌ಲೈನ್ ಫುಡ್ ಆರ್ಡರ್ ಮಾಡುವುದರಿಂದ ನಿಮ್ಮ ಜೇಬಿನ ಮೇಲೆ ಆಳವಾಗಿ ಪರಿಣಾಮ ಬೀರುವುದಷ್ಟೇ ಅಲ್ಲದೆ, ನಿಮ್ಮ ಆರೋಗ್ಯವು ಕೈ ಕೊಡಬಹುದು. ಹೀಗಾಗಿ ವಾರದಲ್ಲಿ ಐದು ದಿನಗಳ ಕಾಲ ಮನೆಯಲ್ಲೇ ಅಡುಗೆ ಮಾಡಿಕೊಂಡು, ಆನ್‌ಲೈನ್ ಫುಡ್ ಆರ್ಡರ್‌ ಸೀಮಿತಗೊಳಿಸಿದ್ರೆ, ನೀವು ತಿಂಗಳಿನಲ್ಲಿ 2,000 ರಿಂದ 3,000 ರೂಪಾಯಿ ಉಳಿತಾಯ ಮಾಡಬಹುದು.

2) ನೀವು ಹೆಚ್ಚು ಬಳಸದೇ ಇರುವ ಸಬ್‌ಸ್ಕ್ರಿಪ್ಷನ್‌ ತೆಗೆದು ಹಾಕಿ

ನೀವು ಹೆಚ್ಚು ಬಳಸದೇ ಇರುವ ಒಟಿಟಿ ಪ್ಲಾಟ್‌ಫಾರ್ಮ್‌ನಿಂದ ಹಿಡಿದು, ಪ್ರಿಮಿಯಂ ಆಪ್‌ಗಳು, ತಿಂಗಳಿಗೆ ಕೆಲವೇ ದಿನ ಹೋಗುವ ಜಿಮ್ ಮೆಂಬರ್‌ಶಿಪ್‌ ಸೇರಿದಂತೆ ವಿವಿಧ ರೀತಿಯಲ್ಲಿ ಹಣ ಸಂದಾಯವಾಗುವ ಹೆಚ್ಚು ಬಳಸದ ವೆಚ್ಚಗಳನ್ನು ತಗ್ಗಿಸಿದ್ರೆ ನೀವು ಪ್ರತಿ ತಿಂಗಳು 1,000 ರೂಪಾಯಿಗಿಂತ ಹೆಚ್ಚಿನ ಉಳಿತಾಯ ಮಾಡಬಹುದು. ಇದ್ರಿಂದ ನಿಮ್ಮ ಲೈಫ್‌ಸ್ಟೈಲ್‌ ಮೇಲೆ ಹೆಚ್ಚಿನ ಯಾವುದೇ ಪರಿಣಾಮ ಬೀರದು.

3) ಸ್ಮಾರ್ಟ್ ಆಗಿ ಓಡಾಡಿ, ದುಬಾರಿಯಿಂದ ದೂರವಿರಿ

ನೀವು ಒಂಟಿಯಾಗಿ ಪ್ರತಿ ದಿನ ಕ್ಯಾಬ್ ಬುಕ್ ಮಾಡಿಕೊಂಡು/ ಆಟೋ ಬುಕ್ ಮಾಡಿಕೊಂಡು ಕಚೇರಿಗೆ ತೆರಳುತ್ತಿದ್ರೆ, ಕೂಡಲೇ ಅದಕ್ಕೆ ಬ್ರೇಕ್ ಹಾಕಿ. ಅದ್ರ ಬದಲು ಸಾರ್ವಜನಿಕ ಸಾರಿಗೆಗಳನ್ನು ಬಳಕೆ ಮಾಡುವ ಮೂಲಕ ಕೂಡ ಹೆಚ್ಚಿನ ಹಣ ಉಳಿತಾಯ ಮಾಡಬಹುದು. ಮೆಟ್ರೋ, ಬಸ್‌ಗಳು ಅಥವಾ ಕಾರ್‌ಪೂಲ್ಸ್‌ಗಳ ಬಳಕೆ ಮಾಡುವುದರಿಂದ ನೀವು ಪ್ರತಿ ತಿಂಗಳು 3,000 ರೂಪಾಯಿವರೆಗೆ ವೆಚ್ಚವನ್ನು ತಗ್ಗಿಸಬಹುದು.

4) ಆಟೋಮೇಟ್‌ ಸೇವಿಂಗ್ಸ್‌ ಮೊರೆ ಹೋಗಿ ಮತ್ತು ಅನಾವಶ್ಯಕ ಖರೀದಿ ತಗ್ಗಿಸಿ

ಪ್ರತಿ ತಿಂಗಳು ನಿಮಗೆ ಬರುವ ವೇತನದಿಂದ ಆಟೋಮೇಟಿವ್ ಆಗಿ SIP ಅಥವಾ ಇತರೆ ಡೆಪಾಸಿಟ್‌ಗಳಿಗೆ ಹಣ ಹೋಗುವಂತೆ ಮಾಡಿ. ಇದ್ರ ಜೊತೆಗೆ ಹೆಚ್ಚು ಅವಶ್ಯಕವಲ್ಲದ ಖರೀದಿಯನ್ನು ತಗ್ಗಿಸಿ. ಇದ್ರ ಜೊತೆಗೆ ನಿಮಗೆ ಅತ್ಯಾವಶ್ಯಕಾಗಿ ಬೇಕಾದ ಸಂದರ್ಭದಲ್ಲಿ ತಕ್ಷಣಕ್ಕೆ ಮಾತ್ರ ಬಳಕೆಯಾಗುವ ವಸ್ತುಗಳ ಖರೀದಿಯನ್ನು ಸಹ ಕಡಿಮೆ ಮಾಡಿ. ಈ ರೀತಿಯಾಗಿ ಮಾಡುವುದರಿಂದ ನೀವು ಸತತವಾಗಿ ಸುಮಾರು 3,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಉಳಿತಾಯ ಮಾಡಬಹುದು.


Previous Post Next Post