Bele Vime Status-ನಿಮ್ಮ ಮೊಬೈಲ್ ನಂಬರ್ ಬಳಸಿ ಬೆಳೆ ವಿಮೆ ಅರ್ಜಿ ಸ್ಥಿತಿ ತಿಳಿಯಿರಿ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY)ಅಡಿಯಲ್ಲಿ ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು(Bele Vime)ಮಾಡಿಸಿರುವ ರೈತರು ಮನೆಯಲ್ಲೇ ಕುಳಿತು ಕೇವಲ ಒಂದೆರಡು ಕ್ಲಿಕ್ ನಲ್ಲಿ ನಿಮ್ಮ ಬೆಳೆ ವಿಮೆ ಅರ್ಜಿ ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯನ್ನು ತಿಳಿಸಲು ಅವಕಾಶವಿದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ.

ರೈತರು ಬೆಳೆದ ಬೆಳೆಯು ಅಕಾಲಿಕ ಮಳೆ, ಮಳೆಯ ಕೊರತೆ, ಅತಿವೃಷ್ಟಿ, ಬರ, ಚಂಡಮಾರುತದಂತಹ ಪ್ರಾಕೃತಿಕ ವಿಕೋಪಗಳಿಂದ ಬೆಳೆ ಹಾನಿಯಾದರೆ(Bele Hani Parihara) ಇಂತಹ ಸಂದರ್ಭದಲ್ಲಿ ಆರ್ಥಿಕವಾಗಿ ನೆರವು ನೀಡಲು ನಮ್ಮ ದೇಶಾದ್ಯಂತ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದ್ದು ಈ ಯೋಜನೆಯ ಅರ್ಜಿ ವಿಲೇವಾರಿಯಲ್ಲಿ ಪಾರದರ್ಶಕತೆಯನ್ನು ತರಲು www.samrakshane.karnataka.gov.in ತಂತ್ರಾಂಶವನ್ನು ಅಭಿವೃದ್ದಿಪಡಿಸಲಾಗಿದ್ದು ರೈತರು ಈ ಜಾಲತಾಣವನ್ನು ಭೇಟಿ ಮಾಡಿ ಸಂಪೂರ್ಣ ಮಾಹಿತಿಯನ್ನು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.

ಬೆಳೆ ಹಾನಿಯಾದ ಸಮಯದಲ್ಲಿ ಫಸಲ್ ಬೀಮಾ ಯೋಜನೆಯಡಿ(Fasal Bhima Yojane)ನೀಡುವ ಪರಿಹಾರವು ರೈತರಿಗೆ ಒಂದು ದೊಡ್ಡ ಆಸರೆಯಾಗಿದ್ದು ಅರ್ಜಿ ಪ್ರಾರಂಭಿಕ ಹಂತದಿಂದ ಪರಿಹಾರ ಪಾವತಿ ಹಂತದ ವರೆಗೂ ಎಲ್ಲಾ ಮಾಹಿತಿಯನ್ನು ಸಂರಕ್ಷಣೆ ಪೋರ್ಟಲ್ ಭೇಟಿ ಮಾಡಿ ಮಾಹಿತಿ ತಿಳಿದುಕೊಳ್ಳಲು ಅವಕಾಶವಿದ್ದು ಇನ್ನು ಸಹ ಅನೇಕ ರೈತರಿಗೆ ಈ ಮಾಹಿತಿ ಸಮರ್ಪಕವಾಗಿ ತಿಳಿದಿರುವುದಿಲ್ಲ.

ಈ ಲೇಖನದಲ್ಲಿ ರೈತರು ಮೊಬೈಲ್ ಮೂಲಕವೇ ಸುಲಭ ಮತ್ತು ಸರಳ ವಿಧಾನವನ್ನು ಅನುಸರಿಸಿ ಬೆಳೆ ವಿಮೆ ಅರ್ಜಿ ಸ್ಥಿತಿ(Crop Insurance Status), ಹಿಂದಿನ 7 ವರ್ಷದ ಬೆಳೆ ವಿಮೆ ಪರಿಹಾರ ಹಣ ಜಮಾ ವಿವರ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿಯನ್ನು ಹೇಗೆ ಚೆಕ್ ಮಾಡುವುದು ಹಾಗೂ ಸಂರಕ್ಷಣೆ ಪೋರ್ಟಲ್ ಬಳಕೆ ಬಗ್ಗೆ ಅಗತ್ಯ ವಿವರವನ್ನು ಹಂಚಿಕೊಳ್ಳಲಾಗಿದೆ.

Crop Insurance Status Check On Mobile-ಮೊಬೈಲ್ ನಂಬರ್ ಬಳಸಿ ಬೆಳೆ ವಿಮೆ ಅರ್ಜಿ ಸ್ಥಿತಿ ತಿಳಿಯುವುದು ಹೇಗೆ?

ಕೃಷಿಕರು ರಾಜ್ಯ ಸರಕಾರದ ಅಧಿಕೃತ ಸಂರಕ್ಷಣೆ ಪೋರ್ಟಲ್(Samrakshane Portal)ಅನ್ನು ಪ್ರವೇಶ ಮಾಡಿ ಈ ಕೆಳಗಿನ ಹಂತಗಳನ್ನು ಅನುಸರಿಸಿ ತಮ್ಮ ಬೆಳೆ ವಿಮೆ ಅರ್ಜಿ ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯನ್ನು ಮೊಬೈಲ್ ನಂಬರ್ ಹಾಕಿ ಒಂದೆರಡು ಕ್ಲಿಕ್ ನಲ್ಲಿ ಚೆಕ್ ಮಾಡಬಹುದು.

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ "Crop Insurance Status Check On Mobile" ಮಾಡಿ ಬೆಳೆ ವಿಮೆ ಯೋಜನೆ ಅರ್ಜಿ ವಿಲೇವಾರಿಯ ಅಧಿಕೃತ www.samrakshane.karnataka.gov.in ವೆಬ್ ಪೋರ್ಟಲ್ ಅನ್ನು ಪ್ರವೇಶ ಮಾಡಬೇಕು.

Step-2: ಬಳಿಕ ಈ ಪೇಜ್ ನಲ್ಲಿ ಬೆಳೆ ವಿಮೆ ಮಾಡಿಸಿದ ವರ್ಷ/Year ಮತ್ತು ಋತು/Season ಆಯ್ಕೆ ಮಾಡಿಕೊಂಡು ಮುಂದೆ/Go ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ಇಲ್ಲಿ ಕೆಳಗೆ "Farmers" ಕಾಲಂ ನಲ್ಲಿ ಕಾಣುವ "Check Status" ಆಯ್ಕೆಯ ಮೇಲೆ ಕ್ಲಿಕ್ ಮಾಡಿ "Mobile No" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಕೆಳಗಿರುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ "Search All Season" ಬಟನ್ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಯವರೆಗೆ ನೀವು ಅರ್ಜಿ ಸಲ್ಲಿಸಿರುವ ವರ್ಷವಾರು ಎಲ್ಲಾ ಬೆಳೆ ವಿಮೆ ಅರ್ಜಿಯ ವಿವರವನ್ನು ತೋರಿಸುತ್ತದೆ.

Step-4: ಇಲ್ಲಿ ಬೆಳೆ ವಿಮೆ ಅರ್ಜಿಯ ಸಂಖ್ಯೆ ಋತು,ಅರ್ಜಿದಾರರ ಹೆಸರು,ಅರ್ಜಿಯ ಸ್ಥಿತಿ,ಅರ್ಜಿ ಸಲ್ಲಿಸಿದ ದಿನಾಂಕದ ವಿವರವನ್ನು ನೋಡಬಹುದು. ಇಲ್ಲಿ ಅರ್ಜಿಯ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ ಬೆಳೆ ವಿಮೆ ಪರಿಹಾರದ ಹಣ ಜಮಾ ವಿವರವನ್ನು ಸಹ ಪಡೆಯಬಹುದು.

ವಿಶೇಷ ಸೂಚನೆ: ಇಲ್ಲಿ ಮೊಬೈಲ್ ನಂಬರ್ ಅನ್ನು ಪ್ರಥಮ ಹಂತದಲ್ಲಿ ನಮೂದಿಸುವಾಗ ಅರ್ಜಿ ಸಲ್ಲಿಸುವಾಗ ನೀಡಿರುವ ಮೊಬೈಲ್ ನಂಬರ್ ಹಾಕಿದರೆ ಮಾಡಿ ಬೆಳೆ ವಿಮೆ ಅರ್ಜಿ ಸ್ಥಿತಿ ತೋರಿಸುತ್ತದೆ.

Crop Insurance Status Check On Survey Number-ಮೊಬೈಲ್ ನಂಬರ್ ಹಾಕಿದಾಗ ತೋರಿಸದಿದ್ದರೆ ಹೀಗೆ ಮಾಡಿ:

ಒಂದೊಮ್ಮೆ ಮೇಲಿನ ವಿಧಾನವನ್ನು ಅನುಸರಿಸಿ ಮೊಬೈಲ್ ನಂಬರ್ ಹಾಕಿ ಬೆಳೆ ವಿಮೆ ಅರ್ಜಿ ಸ್ಥಿತಿ ಚೆಕ್ ಮಾಡಿದಾಗ ವಿವರ ತೋರಿಸದೇ ಇದ್ದರೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂರಕ್ಷಣೆ ಜಾಲತಾಣವನ್ನು ಪ್ರವೇಶ ಮಾಡಿ ಬಳಿಕ ಇಲ್ಲಿ ಕೆಳಗೆ ಕಾಣಿಸುವ "Farmers" ಕಾಲಂ ನಲ್ಲಿ "Crop Insurance Details On Survey No" ಬಟನ್ ಮೇಲೆ ಕ್ಲಿಕ್ ಮಾಡಿ ಬಳಿಕ ನಿಮ್ಮ ಜಿಲ್ಲೆ/ತಾಲೂಕು/ಹೋಬಳಿ/ಗ್ರಾಮ ಮತ್ತು ಸರ್ವೆ ನಂಬರ್ ಅನ್ನು ಹಾಕಿ "Search" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದಾದ ಬಳಿಕ ಇಲ್ಲಿ ಎಡಬದಿಯಲ್ಲಿ ಕಾಣುವ ಸರ್ವೆ ನಂಬರ್ ಗಳ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬೆಳೆ ವಿಮೆ ಅರ್ಜಿಯ ವಿವರ ಅಂದರೆ ಬೆಳೆ ವಿಮೆ ಅರ್ಜಿಯ ಸ್ವೀಕೃತಿ ಸಂಖ್ಯೆ ದೊರೆಯುತ್ತದೆ ಇದನ್ನು ಒಂದು ಕಡೆ ನಮೂದಿಸಿಕೊಂಡು ಮೇಲೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಮೊಬೈಲ್ ನಂಬರ್ ಬದಲಿಗೆ ಬೆಳೆ ವಿಮೆ ಅರ್ಜಿಯ ಸಂಖ್ಯೆಯನ್ನು ಹಾಕಿ ಬೆಳೆ ವಿಮೆ ಅರ್ಜಿಯ ಸ್ಥಿತಿ ಮತ್ತು ಬೆಳೆ ಪರಿಹಾರದ ಹಣ ಜಮಾ ವಿವರವನ್ನು ಪಡೆದುಕೊಳ್ಳಬಹುದು.

Samrakshane Portal-ಸಂರಕ್ಷಣೆ(Samrakshane)ಪೋರ್ಟಲ್ ನಲ್ಲಿ ಯಾವೆಲ್ಲ ಮಾಹಿತಿಯನ್ನು ತಿಳಿಯಬಹುದು?

ಬೆಳೆ ವಿಮೆ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ರಾಜ್ಯ ಸರಕಾರದ samrakshane ತಂತ್ರಾಂಶದಲ್ಲಿ ಪಡೆಯಲು ಅವಕಾಶವಿದ್ದು ಇವುಗಳ ಪಟ್ಟಿ ಈ ಕೆಳಗಿನಂತಿದೆ.

ಬೆಳೆ ವಿಮೆ ಯೋಜನೆಯ Bele Vime Website ಅಧಿಕೃತ ಸಂರಕ್ಷಣೆ ಜಾಲತಾಣವನ್ನು ಪ್ರವೇಶ ಮಾಡಿ "Farmers" ಕಾಲಂ ನಲ್ಲಿ ಕಾಣುವ "Premium Calculator" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಬೆಳೆ ಮತ್ತು ವಿಸ್ತೀರ್ಣವಾರು ಎಷ್ಟು ಬೆಳೆ ವಿಮೆ ಪ್ರಿಮಿಯಂ ಅನ್ನು ಪಾವತಿ ಮಾಡಬೇಕು ಎನ್ನುವ ಮಾಹಿತಿಯನ್ನು ಪಡೆಯಬಹುದು.

"Crop You Can Insure" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಬಹುದು ಎನ್ನುವ ಮಾಹಿಯನ್ನು ತಿಳಿದುಕೊಳ್ಳಬಹುದು.

"Know Your Insurance Co" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಯ ವಿಮಾ ಕಂಪನಿಯ ವಿವರವನ್ನು ಪಡೆಯಬಹುದು.

ಕೊನೆಯಲ್ಲಿ ಕಾಣುವ "View Cut Off Dates" ಬಟನ್ ಮೇಲೆ ಕ್ಲಿಕ್ ಮಾಡಿ ವಿಮೆ ಮಾಡಿಸಲು ಕೊನೆಯ ದಿನಾಂಕದ ಮಾಹಿತಿಯನ್ನು ಪಡೆಯಬಹುದು.

Previous Post Next Post