ಕೃತಕ ಬುದ್ಧಿಮತ್ತೆ (AI) ಈಗಾಗಲೇ ತನ್ನ ಗುರುತನ್ನು ಅಲ್ಲಿ ಇಲ್ಲಿ ಬಿಡುತ್ತಿದೆ. AI ತಂತ್ರಜ್ಞಾನವನ್ನು ಕಲಿಯಲು ಈಗಿನ ಯುವ ಪೀಳಿಗೆ ಸಹ ಮನಸ್ಸು ಮಾಡುತ್ತಿದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಹೊಸ ಪ್ಲ್ಯಾನ್ ಮಾಡಿಕೊಂಡಿದೆ. ಗ್ರಾಮೀಣ ಉದ್ಯಮಿಗಳಿಗೆ ಎಐ (AI) ಉಚಿತ ತರಬೇತಿ ನೀಡಲು ನಿರ್ಧರಿಸಿದೆ. ಸಾಮಾನ್ಯ ಸೇವಾ ಕೇಂದ್ರದ 16 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಶ್ಣವ್ ಈ ಘೋಷಣೆ ಮಾಡಿದ್ದಾರೆ.
ಸಾಮಾನ್ಯ ಸೇವಾ ಕೇಂದ್ರದ 16 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸರ್ಕಾರ ಎಐ ಮಿಷನ್ ಅಡಿಯಲ್ಲಿ ಕನಿಷ್ಠ 10 ಲಕ್ಷ ಜನರಿಗೆ ತರಬೇತಿ ನಿಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಮಟ್ಟದ ಉದ್ಯಮಿ (ವಿಎಲ್‌ಇ)ಗಳಿಗೆ ಇದರ ಲಾಭ ಪಡೆಯಬಹುದು. ಸುಮಾರು 5.5 ಲಕ್ಷ ವಿಎಲ್‌ಇ ಈ ಯೋಜನೆ ಮೂಲಕ ಎಐ ತರಬೇತಿ ಪಡೆಯಬಹುದಾಗಿದೆ. ಇನ್ನು ವಿಎಲ್‌ಇಗಳು ಎದುರಿಸುತ್ತಿರುವ ಸಮಸ್ಯೆ ನಿವಾರಿಸಲು ಏಕೀಕೃತ ಸಮಗ್ರ ಸೇವಾ ವೇದಿಕೆ ಸಿದ್ಧ ಪಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
Govt to Offer Free AI Training to 1 Million Rural Entrepreneurs Boost Digital India
ಸರ್ಕಾರ ತನ್ನ ದೊಡ್ಡ ದೊಡ್ಡ ನಿಲುವುಗಳಿಂದ ದೇಶದಲ್ಲಿ ಕ್ರಾಂತಿ ಮಾಡುವ ಪ್ಲ್ಯಾನ್ ಮಾಡಿಕೊಂಡಿದೆ. ಎಐ ತರಬೇತಿಯನ್ನು ಗ್ರಾಮೀಣ ಮಟ್ಟದ ಉದ್ಯಮಿಗಳಿಗೆ ನೀಡುವ ಸರ್ಕಾರದ ಯೋಚನೆ ಡಿಜಿಟಲ್ ಸಬಲೀಕರಣವನ್ನು ಉತ್ತೇಜಿಸುತ್ತದೆ. ಈ ಮೂಲಕ ಗ್ರಾಮೀಣ ಮಟ್ಟದ ಉದ್ಯಮದಲ್ಲೂ ಸುಧಾರಣ ಕಾಣಬಹುದಾಗಿದೆ. ಡಿಜಿಟಲ್ ಇಂಡಿಯಾ ಮಿಷನ್ ಬಲಪಡಿಸುವ ನಿಟ್ಟಿನಲ್ಲಿ ಈ ಯೋಜನೆ ದೊಡ್ಡ ಪ್ರಯತ್ನವಾಗುತ್ತಿದೆ. ಈ ಮೂಲಕ ಭಾರತದಂತಹ ದೇಶಗಳ ಹಳ್ಳಿಗಳಿಗೂ ಎಐ ತಲಪುತ್ತದೆ. ಮುಂದಿನ ದಿನಮಾನ ಎಐನಿಂದ ಕೂಡಿರಲಿದೆ. ಹೀಗಾಗಿ ಜನರು ಎಐ ಜೊತೆಗೆ ಹೆಚ್ಚಾಗಿ ಬೆರೆತಲ್ಲಿ, ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳಬಹುದು. ಈ ಯೋಜನೆಗಳು ಗ್ರಾಮೀಣ ಭಾಗದ ಜನರಿಗೆ ಉಪಯುಕ್ತವಾಗುತ್ತವೆ.
ಬಜೆಟ್‌ನಲ್ಲಿ ಹಣ
ದೇಶದಲ್ಲಿ ಎಐ ಅನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ವಿಶೇಷವಾಗಿ IndiaAI ಮಿಷನ್ ಆರಂಭಿಸಿದೆ. ಇದಕ್ಕಾಗಿ 10,371.92 ಕೋಟಿ ರೂ.ಗಳನ್ನು ಎತ್ತಿಡಲಾಗಿದೆ. ಈ ಮೂಲಕ ತಂತ್ರಜ್ಞಾನ ಬಲಪಡಿಸುವುದು, ತನ್ನದೇ ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸುವುದು, ಯುವಕರಿಗೆ ಎಐ ಶಿಕ್ಷಣವನ್ನು ನೀಡುವುದು ಇದರ ಉದ್ದೇಶವಾಗಿದೆ. ಈ ಯೋಜನೆಯ ಮೂಲಕ ಸ್ವಾವಲಂಬಿಯನ್ನಾಗಿ ಮಾಡಲು ದೊಡ್ಡ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ಕೇಂದ್ರ ಇನ್ನು ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರಲು ಯೋಜನೆ ರೂಪಿಸಿಕೊಂಡಿದ್ದು, ಈ ಯೋಜನೆಗಳು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿವೆ.