Tour Package: ಮುಂಗಾರು ಮಳೆ ಜೋರಾಗಿದ್ದು, ಪ್ರವಾಸಿ ತಾಣಗಳು ಕೈ ಬೀಸಿ ಕರೆಯುತ್ತೀವೆ. ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಜಲಪಾತಗಳು, ಧಾರ್ಮಿಕ ಸ್ಥಳಗಳಿಗೆ ಕರ್ನಾಟಕ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ. ಇತ್ತೀಚೆಗೆ ಹಾವೇರಿ, ಹುಬ್ಬಳ್ಳಿಯಿಂದ ಜೋಗ ಜಲಪಾತಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಈ ಜಿಲ್ಲೆಯಿಂದ ಸಿಗಂಧೂರು ಚೌಡೇಶ್ವರಿ ದೇಗುಲಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಲಾಂಚ್ ಮೂಲಕ ಅಲ್ಲದೇ ಹೊಸ ಸೇತುವೆ ಮೂಲಕ ಮೊದಲ ಬಾರಿಗೆ ಸಂಚರಿಸುವ ಅವಕಾಶ ನಿಮ್ಮದಾಗಲಿದೆ. ಅತೀ ಕಡಿಮೆ ದರದಲ್ಲಿ ಪ್ರವಾಸ ಮಾಡಬಹುದಾಗಿದೆ.
ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಇತ್ತೀಚೆಗೆ ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರಿನಿಂದ ಜೋಗಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಇದೀಗ ಹಾವೇರಿ ಮತ್ತು ರಾಣೇಬೆನ್ನೂರ ಬಸ್ ನಿಲ್ದಾಣದಿಂದ ಪ್ರತಿ ಭಾನುವಾರ ಸಿಗಂದೂರ ಶ್ರೀ ಚೌಡೇಶ್ವರಿ ದೇವಿ ದರ್ಶನ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ವಿಭಾಗೀಯ ಘಟಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೇ ಜುಲೈ 20 ಭಾನುವಾರದಿಂದ ಈ ಪ್ರವಾಸಾ ಸಾರಿಗೆ ಸೇವೆ ಆರಂಭವಾಗಲಿದೆ. ಹಾವೇರಿ ಬಸ್ ನಿಲ್ದಾಣದಿಂದ ಬೆಳಗ್ಗೆ 7.30 ಕ್ಕೆ ಬಸ್ ಹೊರಟು 11.30ಕ್ಕೆ ಸಿಗಂದೂರು ಚೌಡೇಶ್ವರಿ ತಲುಪಲಿದೆ. ಮರಳಿ 15.30 (3.30)ಕ್ಕೆ ಅಲ್ಲಿಂದ ಹೊರಟು ರಾತ್ರಿ 19.30 (07.30) ಗಂಟೆಗೆ ಹಾವೇರಿ ನಿಲ್ದಾಣಕ್ಕೆ ಬರಲಿದೆ. ಈ ಪ್ರವಾಸಕ್ಕೆ ಒಬ್ಬರಿಗೆ 455 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ 7760 91925/ 77609 69286 ಗೆ ಸಂಪರ್ಕಿಸಬಹುದು.