ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ; 7, 10ನೇ ತರಗತಿ ಪಾಸಾದವರಿಗೂ ಅವಕಾಶ

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ; 7, 10ನೇ ತರಗತಿ ಪಾಸಾದವರಿಗೂ ಅವಕಾಶ

Union Bank of India Recruitment 2025: ಬ್ಯಾಂಕ್‌ನಲ್ಲೇ ಕೆಲಸ ಮಾಡಬಯಸುವವರಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ದೊಡ್ಡ ಘೋಷಣೆ ಮಾಡಿದೆ. ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದ್ರೆ ಯಾವೆಲ್ಲ ಹುದ್ದೆಗಳು ಖಾಲಿಯಿವೆ? ಯಾರೆಲ್ಲಾ ಅರ್ಜಿ ಸಲ್ಲಿಕೆ ಮಾಡಲು ಅರ್ಹರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಯಾವೆಲ್ಲಾ ಹುದ್ದೆಗಳಿಗೆ ಅರ್ಜಿ ಆಹ್ವಾನ?

* ಬ್ಯಾಂಕ್ ಆಫೀಸ್ ಅಸಿಸ್ಟೆಂಟ್

* ಅಟೆಂಡರ್

* ಗಾರ್ಡನರ್ ಮತ್ತು ಸಿಬ್ಬಂದಿ ವಿವಿಧ ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ

ಈಗಾಗಲೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಜಕೆ ಪ್ರಕ್ರಿಯೆ ಪ್ರಾರಂಭ ಆಗಿದ್ದು, ಜುಲೈ 2, 2025 ಕೊನೆ ದಿನಾಂಕ ಆಗಿದೆ. 7ನೇ ತರಗತಿಯಿಂದ ಹಿಡಿದು ಸ್ನಾತಕೋತ್ತರ ಪದವಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಆದರೆ, ಅಭ್ಯಾರ್ಥಿಗಳು 7 ಅಥವಾ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿರಲೇಬೇಕಾಗುತ್ತದೆ.

ಅಭ್ಯರ್ಥಿಗಳ ಕನಿಷ್ಠ ವಯಸ್ಸು 22 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳು ಆಗಿರಬೇಕು. ಆದಾಗ್ಯೂ, ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಹುದ್ದೆಗಳಿಗೆ ಅನುಗುಣವಾಗಿ ಅರ್ಹತೆಗಳನ್ನು ಸಹ ನಿಗದಿಪಡಿ ಮಾಡಲಾಗಿದೆ.

ಹುದ್ದೆ ಹಾಗೂ ವಿದ್ಯಾಭ್ಯಾಸ

* ಕಚೇರಿ ಸಹಾಯಕ ಹುದ್ದೆ - ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು ಹಾಗೂ ಕಂಪ್ಯೂಟರ್ ಮತ್ತು ಮೂಲ ಲೆಕ್ಕಪತ್ರ ನಿರ್ವಹಣೆಯ ಜ್ಞಾನ ಅಗತ್ಯ

* ಅಟೆಂಡೆಂಟ್ ಹುದ್ದೆ - 10ನೇ ತರಗತಿ ಉತ್ತೀರ್ಣರಾಗಿರಬೇಕು

* ತೋಟಗಾರ ಹುದ್ದೆ - 7ನೇ ತರಗತಿ ಉತ್ತೀರ್ಣರಾಗಿರಬೇಕು

ನೇಮಕಾತಿ ಪ್ರಕ್ರಿಯೆ ಪೂರ್ಣವಾರ ಬಳಿಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಹ ಉತ್ತಮ ಸಂಬಳ ಸಿಗಲಿದೆ. ಕಚೇರಿ ಸಹಾಯಕರಿಗೆ 20,000 ರೂಪಾಯಿ, ಸಹಾಯಕರು 14,000 ರೂಪಾಯಿ ಮತ್ತು ತೋಟಗಾರರಿಗೆ ಮಾಸಿಕ 12,000 ರೂಪಾಯಿ ವೇತನ ಸಿಗಲಿದೆ ಎಂದು ತಿಳಿಸಿದೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸಂಪೂರ್ಣವಾಗಿ ಆಫ್‌ಲೈನ್‌ನಲ್ಲಿ ಇರಲಿದೆ. ಅಭ್ಯರ್ಥಿಗಳು ಯೂನಿಯನ್ ಬ್ಯಾಂಕ್‌ನನ ಅಧಿಕೃತ ವೆಬ್‌ಸೈಟ್ unionbankofindia.co.in ಗೇ ಭೇಟಿ ನೀಡಿ ಅರ್ಜಿ ನಮೂನೆಯನ್ನ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು, ಫಾರ್ಮ್ ಅನ್ನು ಕೇಳಲಾದ ದಾಖಲೆಗಳೊಂದಿಗೆ ಸರಿಯಾಗಿ ಭರ್ತಿ ಮಾಡಿ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ ಎಂದು ತಿಳಿಸಿದೆ.

Post a Comment

Previous Post Next Post

Top Post Ad

CLOSE ADS
CLOSE ADS
×