Uchita Holige Yantra- ಉಚಿತ ಹೊಲಿಗೆ ಯಂತ್ರ ಅರ್ಜಿ ಸಲ್ಲಿಕೆಗೆ ಎರಡೇ ದಿನ ಬಾಕಿ | ಕೂಡಲೇ ಅರ್ಜಿ ಹಾಕಿ

Uchita Holige Yantra- ಉಚಿತ ಹೊಲಿಗೆ ಯಂತ್ರ ಅರ್ಜಿ ಸಲ್ಲಿಕೆಗೆ ಎರಡೇ ದಿನ ಬಾಕಿ | ಕೂಡಲೇ ಅರ್ಜಿ ಹಾಕಿ

ಮಹಿಳೆಯರ ಆರ್ಥಿಕ ಸಬಲತೆಗಾಗಿ ಕರ್ನಾಟಕ ರಾಜ್ಯ ಸರ್ಕಾರ ಉತ್ತಮ ಅವಕಾಶ ನೀಡಿದ್ದು; ದಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಉಚಿತ ಹೊಲಿಗೆ ಯಂತ್ರ ವಿತರಣಾ ಯೋಜನೆ ಜಾರಿಗೊಳಿಸಿದೆ.ಸ್ವಯಂ ಉದ್ಯೋಗ ಸ್ಥಾಪಿಸಲು ಹಾಗೂ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಅರ್ಜಿ ಸಲ್ಲಿಸಲು ಈಗ ಕೇವಲ ಎರಡೇ ದಿನ ಬಾಕಿ ಉಳಿದಿದ್ದು; ಆಸಕ್ತ ಮತ್ತು ಅರ್ಹ ಮಹಿಳೆಯರು ತಕ್ಷಣ ಆನ್‌ಲೈನ್ ಅರ್ಜಿ ಸಲ್ಲಿಸಿ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಯೋಜನೆಯ ಪ್ರಮುಖ ಲಕ್ಷಣಗಳು

ಸಂಪೂರ್ಣ ಉಚಿತ ಹೊಲಿಗೆ ಯಂತ್ರ ವಿತರಣೆ

ಸರ್ಕಾರದಿಂದ ನೇರವಾಗಿ ಆಯ್ಕೆ ಮತ್ತು ವಿತರಣಾ ವ್ಯವಸ್ಥೆ

ಉದ್ಯೋಗಕ್ಕೆ ಉಪಯುಕ್ತ ಹೊಲಿಗೆ ಯಂತ್ರ

ಗ್ರಾಮ ಹಾಗೂ ಪಟ್ಟಣ ಪ್ರದೇಶದ ಮಹಿಳೆಯರಿಗೆ ಅವಕಾಶ

ಅರ್ಜಿ ಸಲ್ಲಿಸಲು ಅರ್ಹತೆಗಳು

ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯರು ಈ ಕೆಳಗಿನ ಅರ್ಹತೆಗಳನ್ನು ಪೂರೈಸಬೇಕು:

ಜಾತಿ ಪ್ರವರ್ಗ: ಹಿಂದುಳಿದ ವರ್ಗಗಳ ಪ್ರವರ್ಗ–1, 2ಎ, 3ಎ, 3ಬಿ

ಆದಾಯ ಮಿತಿ: ಗ್ರಾಮಾಂತರ ಪ್ರದೇಶದವರಿಗೆ ವಾರ್ಷಿಕ ಆದಾಯ ₹98,000 ಹಾಗೂ ನಗರ ಪ್ರದೇಶದವರಿಗೆ ವಾರ್ಷಿಕ ಆದಾಯ ₹1,20,000ಕ್ಕಿಂತ ಹೆಚ್ಚು ಆಗಬಾರದು

ವಯಸ್ಸು: ಕನಿಷ್ಠ 18 ವರ್ಷ ಹಾಗೂ ಗರಿಷ್ಠ 55 ವರ್ಷ

ಗಮನಿಸಬೇಕಾದ ಮುಖ್ಯಾಂಶ: ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯಗಳು, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಮರಾಠ ಮತ್ತು ಉಪಸಮುದಾಯಗಳಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.

ಉಚಿತ ಹೊಲಿಗೆ ಯಂತ್ರ ಯೋಜನೆಯಡಿ ಅರ್ಜಿ ಸಲ್ಲಿಸಲು ಕೇವಲ ಎರಡೇ ದಿನ ಬಾಕಿ ಉಳಿದಿದೆ. ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳು

ಆಧಾರ್ ಕಾರ್ಡ್

ಜಾತಿ ಹಾಗೂ ಆದಾಯ ಪ್ರಮಾಣ ಪತ್ರ

ಪಾಸ್‌ಪೋರ್ಟ್ ಅಳತೆಯ ಫೋಟೋ

ಬ್ಯಾಂಕ್ ಪಾಸ್‌ಬುಕ್ ಪ್ರತಿ

ಅರ್ಜಿ ಸಲ್ಲಿಸುವ ವಿಧಾನ

ಅರ್ಹ ಮಹಿಳೆಯರು ಸರ್ಕಾರದ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ವೆಬ್‌ಸೈಟ್’ನಲ್ಲಿ ಹೊಲಿಗೆ ಯಂತ್ರ ಯೋಜನೆ ಆಯ್ಕೆ ಮಾಡಿ, ಅಗತ್ಯ ಮಾಹಿತಿಯನ್ನು ತುಂಬಿ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಿ.

ಅಥವಾ ಹತ್ತಿರದ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಗ್ರಾಮಒನ್ ಕೇಂದ್ರ, ಕರ್ನಾಟಕಒನ್ ಕೇಂದ್ರ, ಬೆಂಗಳೂರುಒನ್ ಕೇಂದ್ರಕ್ಕೆ ಭೇಟಿ ನೀಡಿದರೆ ಅಲ್ಲಿಯ ಸಿಬ್ಬಂದಿ ನಿಮಗೆ ಅರ್ಜಿ ಸಲ್ಲಿಸಲು ನೆರವಾಗುತ್ತಾರೆ.

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ:

30-06-2025

ಇನ್ನೂ ಕೇವಲ ಎರಡೇ ದಿನ ಮಾತ್ರ ಬಾಕಿ ಇದೆ. ಅರ್ಹ ಅಭ್ಯರ್ಥಿಗಳು ತಕ್ಷಣ ಅರ್ಜಿ ಸಲ್ಲಿಸಿ, ಸರ್ಕಾರದ ಈ ಯೋಜನೆಯ ಲಾಭ ಪಡೆಯಿರಿ. ಅರ್ಜಿ ಸಲ್ಲಿಸಿದ ಮೇಲೆ ಆಯ್ಕೆ ಆದವರಿಗೆ ಸಮಾರಂಭದ ಮೂಲಕ ಹೊಲಿಗೆ ಯಂತ್ರವನ್ನು ವಿತರಣೆ ಮಾಡಲಾಗುತ್ತದೆ.

ಸದರಿ ಉಚಿತ ಹೊಲಿಗೆ ಯಂತ್ರ ವಿತರಣಾ ಯೋಜನೆ ಹಿಂದುಳಿದ ವರ್ಗಗಳ ಮಹಿಳೆಯರಿಗೆ ತಮ್ಮ ಜೀವನವನ್ನು ಸುಧಾರಿಸಲು, ಸ್ವಯಂ ಉದ್ಯೋಗವನ್ನು ಸ್ಥಾಪಿಸಲು ಮಹತ್ವದ ಅವಕಾಶವಾಗಿದೆ. ತಕ್ಷಣ ಅರ್ಜಿ ಸಲ್ಲಿಸಿ, ಯೋಜನೆಯ ಪ್ರಯೋಜನ ಪಡೆಯಿರಿ…

Post a Comment

Previous Post Next Post

Top Post Ad

CLOSE ADS
CLOSE ADS
×