ಗೃಹಲಕ್ಷ್ಮಿ ಯೋಜನೆ 20ನೇ ಕಂತಿನ ಬಾಕಿ ಹಣವನ್ನು (Pending Payment Released) ರಾಜ್ಯ ಸರ್ಕಾರ ಇಂದು ಬಿಡುಗಡೆ ಮಾಡಿದೆ. ಖಾತೆಗೆ ಹಣ ಜಮೆಯಾಗಿರುವ ವಿವರ ಸೇರಿದಂತೆ ಬಾಕಿ ಕಂತುಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಗೃಹಲಕ್ಷ್ಮಿ ಯೋಜನೆ ಬಾಕಿ ಹಣ ಪಾವತಿಗೆ ಮುಂದಾಗಿರುವ ರಾಜ್ಯ ಸರ್ಕಾರ ಈತನಕ ಬಾಕಿ ಉಳಿದಿರುವ ಒಂದೊಂದೇ ಕಂತಿನ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದೆ. ಇದೀಗ 20ನೇ ಕಂತಿನ ₹2000 ಮೊತ್ತವನ್ನು ಇಂದು (ಜೂನ್ 7) ಫಲಾನುಭವಿ ಮಹಿಳೆಯರ ಖಾತೆಗೆ ಜಮೆ ಮಾಡಲು ಪ್ರಾರಂಭಿಸಿದೆ.
20ನೇ ಕಂತಿನ ಹಣ ಪಾವತಿಯಲ್ಲಿ ತಾಂತ್ರಿಕ ತೊಂದರೆಯಿಂದ ತಡವಾಗಿತ್ತು. ಇಂದು 2000 ಹಣವನ್ನು ಜಮೆ ಮಾಡಲಾಗಿದೆ. ಡಿಬಿಟಿ ಪ್ರಕ್ರಿಯೆ ಮೂಲಕ ಹಣ ವರ್ಗಾವಣೆವಾಗುತ್ತಿರುವ ಕಾರಣ, ಕೆಲವರಿಗೆ ಸ್ವಲ್ಪ ತಡವಾಗಿ ಹಣ ಬರುವ ಸಾಧ್ಯತೆ ಇದೆ. ಖಾತೆ ಪರಿಶೀಲಿಸಿ ಹಣ ಬಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.ಇದೆ ತರಹದ ನೇಮಕಾತಿ,ವಿದ್ಯಾರ್ಥಿವೇತನ,ಕೇಂದ್ರ/ರಾಜ್ಯ ಯೋಜನೆಗಳಿಗಾಗಿ ನಮ್ಮ ಟೆಲಿಗ್ರಾಮ ಚಾನಲ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬಾಕಿ ಕಂತಿನ ಹಣ ಹಂತ ಹಂತವಾಗಿ ಜಮೆ
2024ರ ಡಿಸೆಂಬರ್’ನಿಂದ ಗೃಹಲಕ್ಷ್ಮಿ ಯೋಜನೆಯ ಹಲವು ಕಂತುಗಳು ಬಾಕಿ ಉಳಿದಿದ್ದವು. ಈ ಪೈಕಿ 2024ರ ಡಿಸೆಂಬರ್’ನಲ್ಲಿ ಬರಬೇಕಾಗಿದ್ದ 17ನೇ ಕಂತಿನ ಹಣವನ್ನು ಮಾರ್ಚ್ 11, 2025ಕ್ಕೆ ಜಮಾ ಮಾಡಲಾಗಿದೆ. ಜನವರಿ 2025ರ 18ನೇ ಕಂತು ಮಾರ್ಚ್ 30ರಂದು ಜಮಾ ಆಗಿದೆ.
ಇನ್ನು ಫೆಬ್ರವರಿಯಲ್ಲಿ ಬರಬೇಕಾಗಿದ್ದ 19ನೇ ಕಂತಿನ ಹಣವನ್ನು ಮೇ 19ರಂದು ಜಮೆ ಮಾಡಲಾಗಿದೆ. ಅದೇ ರೀತಿ ಇದೀಗ ಮಾರ್ಚ್ ತಿಂಗಳು ಸಂದಾಯವಾಗಬೇಕಿದ್ದ 20ನೇ ಕಂತಿನ ಹಣವನ್ನು ಇಂದು ಜೂನ್ 07ರಂದು ಬಿಡುಗಡೆ ಮಾಡಲಾಗಿದೆ. ಏಪ್ರಿಲ್-ಮೇ ತಿಂಗಳು ಕಂತಿನ ಹಣ ಬರಬೇಕಿದೆ.
ಗೃಹಲಕ್ಷ್ಮಿ ಯೋಜನೆ 20ನೇ ಕಂತಿನ ಬಾಕಿ ಹಣವನ್ನು ರಾಜ್ಯ ಸರ್ಕಾರ ಇಂದು ಬಿಡುಗಡೆ ಮಾಡಿದೆ. ಬಾಕಿ ಕಂತುಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
20ನೇ ಕಂತಿನ ಹಣ ಖಾತೆ ಯಾವಾಗ ಜಮೆಯಾಗುತ್ತದೆ?
ರಾಜ್ಯ ಸರ್ಕಾರ DBT (Direct Benefit Transfer) ವ್ಯವಸ್ಥೆಯ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸುತ್ತಿದೆ. ಹಣ ಬಿಡುಗಡೆ ಆದ ಕೂಡಲೇ ಅದು ತಕ್ಷಣ ಖಾತೆಗೆ ಬರುವುದಿಲ್ಲ. DBT ಪ್ರಕ್ರಿಯೆ ಪೂರ್ಣಗೊಳ್ಳಲು 2-4 ದಿನಗಳಷ್ಟು ಸಮಯ ಹಿಡಿಯಬಹುದು.
ಹೀಗಾಗಿ ಫಲಾನುಭವಿ ಮಹಿಳೆಯರು ತಮ್ಮ ಖಾತೆಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿರುವುದು ಉತ್ತಮ. ಖಾತೆಗೆ ಹಣ ಬಂದಿಲ್ಲವೆAದು ಗಾಬರಿಯಾಗಬೇಡಿ – ಕೆಲವರ ಖಾತೆಗೆ ತಡವಾಗಿ ಬರಬಹುದು.
ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆಯಾ? ಹೀಗೆ ಚೆಕ್ ಮಾಡಿ
ಹಂತ 1: ನಿಮ್ಮ ಪೋನಿನಲ್ಲಿ ಗೂಗಲ್ ಪ್ಲೇ ಸ್ಟೋರ್’ಗೆ ಹೋಗಿ, DBT Karnataka App ಡೌಟಿಜಿಲೋಡ್ ಮಾಡಿಕೊಳ್ಳಿ.
ಹಂತ 2: ಫಲಾನುಭವಿಯ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ
ಹಂತ 3: ಆಗ ನಿಮ್ಮ ಆಧಾರ್ ಸಂಖ್ಯೆಯನ್ನು ಕೇಳುತ್ತದೆ. ಅದನ್ನು ನಮೂದಿಸಿ, ಗೆಟ್ ಓಟಿಪಿ ನೀಡಿ, ಓಟಿಪಿ ಬಂದ ನಂತರ ವೆರಿಫೈ ಓಟಿಪಿಯ ಮೇಲೆ ಕ್ಲಿಕ್ ಮಾಡಿ.
ಹಂತ 4: ನಂತರ ಇಲ್ಲಿ ನೀವು ಪಾಸ್‌ವರ್ಡ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ, Confirm mPIN ಹಾಕಿ, Submit ಮೇಲೆ ಕ್ಲಿಕ್ ಮಾಡಿ
ಹಂತ 4: ಈಗ ಹೋಂ ಪೇಜ್’ನಲ್ಲಿ Payment status ಮೇಲೆ ಕ್ಲಿಕ್ ಮಾಡಿ, ಗೃಹಲಕ್ಷ್ಮಿ ಯೋಜನೆಯ ಡಿಬಿಟಿ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು. ಪಕ್ಕದಲ್ಲಿರುವ Seeding status of Adhaar in bank account ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಆಧಾರ್ ಸೀಡಿಂಗ್ ಸ್ಟೇಟಸ್ ಅನ್ನು ಮತ್ತು ಯಾವ ಬ್ಯಾಂಕಿಗೆ ಸೀಡಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು
ಹಂತ 5: ಇಲ್ಲಿ ನಿಮಗೆ ಸರ್ಕಾರದಿಂದ ಜಮಾ ಆಗಿರುವ ಗೃಹಲಕ್ಷ್ಮೀ ಯೋಜನೆಯ ಹಣ ವರ್ಗಾವಣೆ ಆಗಿರುವ ಮಾಹಿತಿ ತಿಳಿಯಲಿದೆ.