ಭೂತಾನ್ ಸೈನಿಕ ಶಕ್ತಿ, ಜಾಗತಿಕ ಅಗ್ನಿಶಾಮಕ ಸೂಚ್ಯಂಕ, ಶಾಂತಿಯುತ ರಾಷ್ಟ್ರ, ಭೂತಾನ್ ವಿಶ್ವದ ಅತ್ಯಂತ ದುರ್ಬಲ ಸೇನೆ ಹೊಂದಿರುವ ದೇಶ - ಗ್ಲೋಬಲ್ ಫೈರ್‌ಪವರ್ 2025.ಜಗತ್ತೀನ ಬಹುತೇಕ ರಾಷ್ಟ್ರಗಳು ಸೇನಾ ಸೂಪರ್ ಪವರ್ (Military super power) ಆಗಲು ಪ್ರಯತ್ನ ನಡೆಸುತ್ತಿವೆ. ಅದಕ್ಕೆ ಅಮೆರಿಕ ತಾ ಮುಂದು ಎಂದರೆ, ರಷ್ಯಾ ನಾ ಮುಂದು ಎನ್ನುತ್ತಿದೆ. ಇವುಗಳ ಮಧ್ಯ ನೆರೆಯ ಚೀನಾ ಸಹ ಕಾಲಿಡಲು ತನ್ನ ನಕಲಿ ಉಪಕರಣಗಳ ಮೂಲಕ ದಾಂಗುಡಿ ಇಡುತ್ತಿದೆ. ಇದರ ನಡುವೆ ಭಾರತ, ಇಸ್ರೇಲ್, ಟರ್ಕಿ, ಜರ್ಮನಿ ಸಹ ಪೈಪೋಟಿಗೆ ಬಿದ್ದು ಜಗತ್ತಿನ ಸೇನಾ ಶಕ್ತಿಶಾಲಿ ರಾಷ್ಟ್ರವಾಗಲು ಮುಂದಾಗಿವೆ. ಇದರ ನಡುವೆ ಜಗತ್ತಿನ ಅತ್ಯಂತ ದುರ್ಬಲ ಸೇನಾ ಶಕ್ತಿಹೊಂದಿರುವ ರಾಷ್ಟ್ರ (Country with a weak military) ಯಾವುದು ಗೊತ್ತಾ..? ಇಲ್ಲಿದೆ ನೋಡಿ ಅದಕ್ಕೆ ಉತ್ತರ:
ಗ್ಲೋಬಲ್ ಫೈರ್‌ಪವರ್ (Global Firepower) ಎಂಬ ಸಂಸ್ಥೆಯು ಪ್ರತಿ ವರ್ಷ ವಿಶ್ವದಾದ್ಯಂತ ಇರುವ ದೇಶಗಳ ಮಿಲಿಟರಿ ಶಕ್ತಿಯನ್ನು ಮೌಲ್ಯಮಾಪನ ಮಾಡಿ ಶ್ರೇಯಾಂಕ ನೀಡುತ್ತದೆ. ಈ ಶ್ರೇಯಾಂಕವು 60ಕ್ಕೂ ಹೆಚ್ಚು ವಿವಿಧ ಅಂಶಗಳನ್ನು ಆಧರಿಸಿದೆ, ಇದರಲ್ಲಿ ಸೈನಿಕರ ಸಂಖ್ಯೆ, ಶಸ್ತ್ರಾಸ್ತ್ರಗಳು, ತಾಂತ್ರಿಕತೆ, ಹಣಕಾಸಿನ ಸಂಪನ್ಮೂಲಗಳು, ಲಾಜಿಸ್ಟಿಕ್ಸ್ ಸಾಮರ್ಥ್ಯ ಮತ್ತು ಭೌಗೋಳಿಕ ಅಂಶಗಳು ಸೇರಿವೆ. 'ಪವರ್‌ಇಂಡೆಕ್ಸ್' (PowerIndex) ಸ್ಕೋರ್ ಮೂಲಕ ಇದನ್ನು ಪ್ರಸ್ತುತಪಡಿಸಲಾಗುತ್ತದೆ, ಇದರಲ್ಲಿ 0.0000 ಸ್ಕೋರ್ ಅತ್ಯಂತ ಪ್ರಬಲವಾದ ಮಿಲಿಟರಿ ಶಕ್ತಿಯನ್ನು ಸೂಚಿಸುತ್ತದೆ ಮತ್ತು ಸ್ಕೋರ್ ಹೆಚ್ಚಾದಂತೆ ಮಿಲಿಟರಿ ಶಕ್ತಿ ದುರ್ಬಲಗೊಳ್ಳುತ್ತದೆ. ಅದರಂತೆ, ಇಡೀ ವೀಶ್ವದಲ್ಲಿ ಅತ್ಯಂತ ದುರ್ಬಲ ಸೇನೆ ಹೊಂದಿರು ರಾಷ್ಟ್ರ ಯಾವುದು ಗೊತ್ತಾ.
ಗ್ಲೋಬಲ್ ಫೈರ್‌ಪವರ್ ಇಂಡೆಕ್ಸ್‌ನ ಇತ್ತೀಚಿನ ವರದಿಗಳ ಪ್ರಕಾರ, ವಿಶ್ವದ ಅತ್ಯಂತ ದುರ್ಬಲ ಸೈನ್ಯವನ್ನು ಹೊಂದಿರುವ ದೇಶವೆಂದರೆ, ಭೂತಾನ್! 2025ರ ಗ್ಲೋಬಲ್ ಫೈರ್‌ಪವರ್ ಇಂಡೆಕ್ಸ್‌ನಲ್ಲಿ ಭೂತಾನ್ 6.3934 ರ ಪವರ್‌ಇಂಡೆಕ್ಸ್ ಸ್ಕೋರ್‌ನೊಂದಿಗೆ ಕೊನೆಯ ಸ್ಥಾನದಲ್ಲಿದೆ ಅದು 145 ದೇಶಗಳ ಪೈಕಿ!
ಜಾಗತಿಕ ಶಕ್ತಿಶಾಲಿ ದೇಶಗಳು ತಮ್ಮ ಸೇನೆಗಳಲ್ಲಿ ಲಕ್ಷಾಂತರ ಸೈನಿಕರು, ಬಹುಸಂಖ್ಯೆ ಯಂತ್ರೋಪಕರಣಗಳು ಮತ್ತು ತಾಂತ್ರಿಕ ನೆರವಿನಿಂದ ತಮ್ಮ ಮಿಲಿಟರಿ ಶಕ್ತಿಯನ್ನು ವಿಸ್ತಾರಗೊಳಿಸುತ್ತಿರುವ ಸಂದರ್ಭದಲ್ಲಿ, ಭೂತಾನ್ ಮಾತ್ರ ಅತ್ಯಂತ ಸೀಮಿತ ಮತ್ತು ಆಂತರಿಕ ಭದ್ರತೆಗಾಗಿ ಅಗತ್ಯವಿರುವಷ್ಟು ಮಾತ್ರ ಸೈನಿಕ ಪಡೆ ಇಟ್ಟುಕೊಂಡಿದೆ. ಇದಕ್ಕೆ ಕೆಲವು ಪ್ರಮುಖ ಕಾರಣಗಳು ಇಲ್ಲಿದೆ: